Skip to main content

mobile money

ಬರೆದಿದ್ದುMay 24, 2015
noಅನಿಸಿಕೆ

ಎಂದಿಗೂ ಚಲಾವಣೆ ಆಗದ MM ಅಥವಾ ಮನಿ ಮಿಷನ್
xxxx-xxx-xxx-xxx
'ಮನಿ ಮಿಷನ್' ಎಂಬ ಸಾಧನವು ಒಂದು ಕಾಲ್ಪನಿಕ ಸಾಧನ.
ಇದು ಕೆಲಸ ಮಾಡುವಲ್ಲಿ ಯಾವ ಅಪಾಯವನ್ನೂ ಎದುರಿಸದು. ಹಾಳಾದರೂ ಹ್ಯಾಂಗಾದರೂ ವೈರಸ್ ಅಟ್ಯಾಕ್ ಆದರೂ ಅಧಿಕೃತ ದಾಖಲೆಗಳು ನಾಶ ಆಗದಂತೆ ಮಾಡಲು ಇರುವ ಏಕೈಕ ಉಪಾಯ ಎಂದರೆ ಪ್ರತಿ ರಿಸಲ್ಟ್ ನ ಪ್ರಿಂಟೌಟ್.(ಇನ್ಪುಟ್+ ಪ್ರೋಸೆಸ್=ರಿಸಲ್ಟ್).
ಹಾಗೂ ಪ್ರತೀ ಆರ್ಡರ್ ಗೂ ಪಾಸ್ವರ್ಡ್ ಬಳಕೆ.
MM ಎಂದರೇನು? ಮತ್ತು ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ?.
MM ಎಂದರೆ ಅದೊಂದು ಮೊಬಯಿಲ್ ರೀತಿಯ ಸಾಧನ.
ಇದರಲಿ 0ಯಿಂದ 9ರ ತನಕ ಅಂಕೆಗಳು ಮತ್ತು A, B, C, D, E, F ಎಂಬ ಆಂಗ್ಲ ಅಕ್ಷರಗಳು ಇರುತ್ತವೆ.
ಸಿಮ್ ನಂಬರ್ ಆಯಾ ವ್ಯಕ್ತಿಗಳ ಆಧಾರ್ ನಂಬರ್.
ನೆಟ್ವರ್ಕ್ ಆರ್ ಬಿ ಐ ಆಧಾರಿತ.
ಸಂಪರ್ಕ ಉಪಗ್ರಹ ಆಧಾರಿತ.
ಕೆಲಸ ಹೇಗೆ?
ನೀವು ನಿಮ್ಮಲ್ಲಿರುವ ಪೇಪರ್ ಮನಿಯನ್ನು ಇ'ಮನಿ ಆಗಿಸಬೇಕಾದರೆ ನೀವು ಹತ್ತಿರದ ಆರ್ಬಿಐ ಇ'ಬ್ಯಾಂಕಿಗೆ ಹೋಗಬೇಕು.
ಅಲ್ಲಿ ನಿಮ್ಮ ನಗದು M ಕೊಟ್ಟು ಅಷ್ಟೇ ಬೆಲೆಯ m ಪಡೆದುಕೊಳ್ಳುತ್ತೀರಿ.
ಇನ್ನು ಮುಂದಿನ ಎಲ್ಲ ವ್ಯವಹಾರಗಳಿಗೂ ಇ'ಮನಿ ಬಳಸುತ್ತೀರಿ.
ಇಲ್ಲಿ ಪ್ರತಿಯೊಬ್ಬರಲ್ಲಿಯೂ MM ಇರಬೇಕಾದುದು ಅನಿವಾರ್ಯ.
330 ರುಪಾಯಿಯ ಒಂದು ಪ್ಯಾಕ್ ಸಿಮೆಂಟು ಕೊಂಡುಕೊಳ್ಳಬೇಕಿದ್ರೆ ಆಗ
ನಿಮ್ಮ MM ಓಪನ್ ಮಾಡಿ
ಪಾಸ್ವರ್ಡ್ ಬಳಸಿ ಇನ್ ಬಾಕ್ಸ್ ಪ್ರವೇಶಿಸುತ್ತೀರಿ.
ಈಗ ನಿಮ್ಮ ಬ್ಯಾಲೆನ್ಸ್ m.
ನೀವೀಗ F ಆಯ್ಕೆಯ ಮೂಲಕ ಅಂಗಡಿಯಾತನ MM ನಂಬರ್ ಟೈಪಿಸಿ 330 ಎಂದು ನಮೂದಿಸಿ ಓಕೆ ಮಾಡ್ತೀರಿ.
F ಅಂದರೇನು? Forward ಅಂತ.
ಇದು ನಿಮ್ಮ ಡಿವೈಸ್ ನಿಂದ ಸ್ಯಾಟ್ಲೈಟ್ ಮೂಲಕ ಆರ್ಬಿಐ ಕನೆಕ್ಷನ್ ಪಡೆದು ಪ್ರೊಸೆಸ್ ಆಗಿ. ಅಂಗಡಿಯಾತನ ಡಿವೈಸ್ಗೆ 330 ರುಪಾಯಿ ಜಮಾ ಆಗುತ್ತದೆ. ಅದೇ ಕ್ಷಣ ಪ್ರೊಟೆಕ್ಷನ್ಗಾಗಿ ನಿಮ್ಮ ಡಿವೈಸ್ನಿಂದ ಒಂದು ಪೇಪರ್ ಔಟ್ಪುಟ್ ಬರುತ್ತದೆ.

ಈಗ ನಿಮ್ಮ ಬ್ಯಾಲೆನ್ಸ್ m-330.
ನಿಮ್ಮ ಡಿವೈಸ್ಗೆ ನಾನು 500 ರುಪಾಯಿ ಕಲಿಸುತ್ತೇನೆ. ಆಗ ನೀವು ಆ ಹಣವನ್ನು ಅನೇಕ ರೀತಿಯಲ್ಲಿ ಸ್ವೀಕರಿಸಬಹುದು.
A ಅಂದರೆ ಅಕ್ಸಪ್ಟ್ ಮಾಡಬಹುದು. ಆ ರೀತಿ ಸ್ವೀಕರಿಸಿದ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ B ಸೆಲೆಕ್ಷನ್ ಮೂಲಕ D ಡಿಪಾಸಿಟ್ ಮಾಡಬಹುದು. ಅಥವಾ C ಮೂಲಕ ಕ್ಯಾನ್ಸಲ್ ಮಾಡಬಹುದು.
ಕಲಿಸಿದ ವ್ಯಕ್ತಿ ಅಪರಿಚಿತನಾಗಿದ್ದು ನಿಮ್ಗೆ ಈ ದುಡ್ಡಿನ ಬಗ್ಗೆ ಅನುಮಾನ ಇದ್ದಲ್ಲಿ E ಮೂಲಕ ಇನ್ಕೈರಿಗೆ ಅಪ್ಪಣೆ ಮಾಡಬಹುದು.
ಆದರೆ ಇಲ್ಲಿ ಇರುವ ಒಂದೇ ಒಂದು ಸಮಸ್ಯೆ ಏನೆಂದರೆ ಈ ರೀತಿಯ ಮೊಬೈಲ್ ಕರೆನ್ಸಿ ಯಾವ ಕಾಲಕ್ಕು ಚಲಾವಣೆಗೆ ಬರದು.
ಬಂದರೆ! ಇಲ್ಲಿ ಬ್ರಷ್ಟಾಚಾರ ಎಂಬ ಶಬ್ಧ ಮಾಯವಾಗುತ್ತದೆ. ಪೆಟ್ರೋಲ್ ಡೀಸೆಲ್ನ ಬೇಡಿಕೆ ತಗ್ಗುತ್ತದೆ. ಬ್ಯಾಂಕ್ನಲ್ಲಿ ನೂಕು ನುಗ್ಗಲು ಕಡಿಮೆ ಆಗುತ್ತದೆ. ಕಳ್ಳ ನೋಟು ಚಲಾವಣೆ ಆಗಲ್ಲ. ಏಕೆಂದರೆ ಇ ಮನಿಯಲ್ಲಿ ಯಾರೂ ಫೇಕ್ ಮಾಡಲಾರರು. ಚಿಲ್ಲರೆ ಅಭಾವ ಇರುವುದಿಲ್ಲ. ಸುಪಾರಿ ಪಡೆದು ನಡೆಸುವ ಕೊಲೆ, ಮತ್ತು ದುಡ್ಡಿಗಾಗಿ ನಡೆವ ರಾಬರಿ ಇರುವುದಿಲ್ಲ. MM ಹೊಂದಿರುವ ಪ್ರತಿಯೊಬ್ಬ ವ್ಯಕ್ತಿ ಯಾವ ಹೊತ್ತಲ್ಲಿ ಎಲ್ಲಿ ಇರುತ್ತಾನೆ ಎಂಬ ಕರಾರುವಕ್ ಮಾಹಿತಿ ಆತ ಖರ್ಚು ಮಾಡುವ ಇ ಮನಿ ಆಧಾರದಲ್ಲಿ ನಮಗೆ ಸಿಗುತ್ತದೆ. ಹಾಗಾಗಿ ರೇಪ್ ಮರ್ಡರ್ ಕಳ್ಳ ಸಾಗಣೆ ಮಾಡುವವರು ಕಡಿಮೆ ಆಗ್ತಾರೆ. ದುಡ್ಡಿಗಾಗಿ ಚಪ್ಪಾಳೆ ಶಿಲ್ಲೆ ಎಲ್ಲ ನಿಂತು ಬಿಟ್ಟು ಪಕ್ಕಾ ಶುದ್ಧ ಸಚ್ಚಾರಿತ್ರ್ಯವಂತ ಪ್ರಜಾವರ್ಗ ಸೃಷ್ಟಿ ಆಗುವುದು. ಆದರೆ ಇಷ್ಟೆಲ್ಲ ಅಭಿವೃದ್ಧಿ ನಮಗೆ ಅಗತ್ಯ ಇಲ್ಲ.
ಇದರಿಂದ ಬಾಧಕವೂ ಇದ್ದೀತು ಆದರೆ ಅದರ ಚಿಂತನೆ ನಾನಂತೂ ಮಾಡಿಲ್ಲ.
ದಕ್ಕದ ವಸ್ತುವಿನ ಬಾಧಕದ ಚಿಂತನೆ ಅಗತ್ಯವಿಲ್ಲ ಅಲ್ಲವೇ?

ಲೇಖಕರು

JAYARAM NAVAGRAMA

ಮ್ಯಾಂವ್sss

ನಾನು ಮೂಡಬಿದ್ರಿ ಸಮೀಪದ ಪುಚ್ಚಮೊಗರಿನಲ್ಲಿ 1966 ರಿಂದ 1968 ಈ ಇಸವಿಯ ಮಧ್ಯೆ ಜನಿಸಿರುವ ಬಗ್ಗೆ ದಟ್ಟ ವದಂತಿ ಇದೆ!
ನನ್ನ ತಂದೆ ಮತ್ತು ತಾಯಿ ಇಬ್ಬರೂ ಬಿಲ್ಲವರು.
ನನಗೆ ಈಗ ಸುಮಾರು 48 ವರ್ಷ ಆಗಿರಬಹುದು.
ಒಂದನೇ ತರಗತಿಯಿಂದ 7ನೇ ತರಗತಿ ತನಕ ನಮ್ಮ ಪುಚ್ಚಮೊಗರು ಗ್ರಾಮದ ನಿತ್ಯಾನಂದ ಎಯ್ಡೆಡ್ ಎಲಿಮೆಂಟರಿ ಶಾಲೆ
8 ಮತ್ತು 9ನೇ ತರಗತಿಯನ್ನು ಸರಕಾರಿ ಪ್ರೌಢಶಾಲೆ ಕೊನ್ನೆಪದವು. ಇಲ್ಲಿ ಕಲಿತೆನು.
ನಾನು ಎಂಟನೇ ತರಗತಿಯಲ್ಲಿರುವಾಗ ಶ್ರೀಮತಿ ಇಂದಿರಾ ಗಾಂಧಿಯವರ ಕೊಲೆ ಆಯಿತು. ಆಗ ಚಿತ್ರದುರ್ಗದ ಸುಜಾತ ಟೀಚರ್ ಬಾಯ್ತುಂಬಾ ಅತ್ತಿದ್ದರು.
ಹತ್ತು ವರುಷಗಳ ಕೆಳಗೆ ನನ್ನ ಊರನ್ನು ತ್ಯಜಿಸಿ
ಸತಿಸುತರ ಪ್ರೀತ್ಯರ್ಥಂ ನವಗ್ರಾಮಾಗಮನ ಮಾಡಿ
ನಾಯಿಯಂತೆ ವರ್ಕ್ ಮಾಡುತ್ತಾ ಜಾಯಿಂಟ್ ಪೆಯಿನ್ ಬ್ಯಾಕ್ ಪೆಯಿನ್ ಸ್ಕಿನ್ ಪ್ರಾಬ್ಲೆಮ್ ಇತ್ಯಾದಿ ಪ್ರಶಸ್ತಿ ಪಡೆಯುತ್ತಾ
ಫೇಸ್ಬುಕ್ ವಿಸ್ಮಯನಗರಿ ಗಳಲ್ಲಿ ಮಿಂಚುತ್ತಾ ಅಥವಾ ಹಾಗೆಂದು ಭ್ರಮಿಸುತ್ತಾ!
ಶ್ರೀಯುತ ಮೋಧೀಜಿಯವರ ಆಡಳಿತ ವೈಖರಿ ಏನೆಂದು ಅರಿಯಲಾರದೆ ಅರ್ಥೈಸಲಾರದೆ ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಟ್ಟುಕೊಂಡು ...
ತುಂಬಾ ದಿನದಿಂದ ಆಲೋಚಿಸುತ್ತಾ ಇರುವ ಕನ್ನಡದ ಕಂದ ನಾನು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.