Skip to main content

ನಾಗ ನೆರಳು (ಭಾಗ 6)

ಬರೆದಿದ್ದುMay 22, 2015
noಅನಿಸಿಕೆ

ನಾಗ ನೆರಳು ಭಾಗ 6
ಅವರು ತಿರುಗಾಟ ಮುಗಿಸಿ ಬರುವಾಗ ರಾತ್ರಿ ಯ ಆಟವು ಮುಗಿದು ಮರುದಿನದ ಮುಂಜಾವಿನ
ಮೂರುಘಂಟೆ. ಆ ಸಮಯ ಇದ್ದಕ್ಕಿದ್ದಂತೆ ನುಂಗಪ್ಪನವರ ಜೀಪ್ ಭಯಾನಕ ಶಬ್ಧದೊಂದಿಗೆ
ಸ್ಫೋಟಿಸಿತು. ಮನಮೋಹನಾದಿಗಳ ದೇಹ ಗಾಳಿಯಲ್ಲಿ ಹಾರಾಡಿ, ಸಿಡಿದು ಚಿಂದಿ
ಚಿತ್ರಾನ್ನವಾಯಿತು.
ಕಾಲ್ಗಿಚ್ಚಿನಂತೆ ಸುದ್ಧಿ ಹರಡಿತು. ಕೊರಗಪ್ಪನವರು ಧಾವಿಸಿ
ಬಂದರು.
ಅತ್ತರು. ರಂಪಾಟ ಮಾಡಿದರು. ತನ್ನ ಮಗನಂತಾ ಮನಮೋಹನ ಇಲ್ಲದ ಮೇಲೆ 'ಈ ರಾಜಕೀಯ
ನನಗೇಕೆ?' ಎಂದು ಸನ್ಯಾಸ ಸ್ವೀಕಾರಕ್ಕೆ ಮುಂದಾದರು.
ಯಾರೋ ಸಮಾಧಾನ ಪಡಿಸಿ ಅವರನ್ನು ಖುರ್ಚಿ ಮೇಲೆ ಕೂರಿಸಿದರು. ಅಂಬ್ಯುಲೆನ್ಸ್ ಗೆ ಫೋನ್
ಮಾಡಿದರು. ಆದರೆ ಕೊರಗಪ್ಪನವರು ಅಂಬ್ಯುಲೆನ್ಸ್ ಹತ್ತದೇ ರೋಧಿಸುತ್ತಲೇ ಬಡಬಡಿಸಿದರು.
ಜನ ತಮ್ಮ ಕಣ್ಣೊದ್ದೆ ಮಾಡಿಕೊಂಡರು.
'ಈ ಅಮಾಯಕ ತರುಣರ ಮರಣಕ್ಕೆ ಕಾರಣರಾದವರನ್ನು ಹಿಡಿದು ಗಲ್ಲಿಗೆ ಹಾಕೋ ತನಕ ನಾನು ವಿಶ್ರಮಿಸಲಾರೆ'
ಎಂದು ಶಪಥ ಹಾಕಿದರು ಕೊರಗಣ್ಣ,
ಸ್ವಾರಿ! ಶ್ರೀಯುತ ಕೊರಗಪ್ಪನವರು..
ಜನ ಮತ್ತೊಮ್ಮೆ ಕರಗಿದರು.
ಜೀಪು ನುಂಗಪ್ಪನವರದು. ಸೋ ಕೊಲೆಗಾರನಾದ ನುಂಗಪ್ಪನನ್ನು ಜನ ಕ್ಷಮಿಸಲಾರರು.
ನುಂಗಪ್ಪನವರ ಬಂಗಲೆಗೆ ಪೋಲೀಸರ ಆಗಮನವಾಯಿತು.
ನುಂಗಪ್ಪ ಪೊಲೀಸರ ಅತಿಥಿಯಾದರು. ಅವರು ಮತ್ತೊಮ್ಮೆ ತಮ್ಮ ಮೂಗಿನ
ಮೇಲಿಟ್ಟುಕೊಳ್ಳಲೆಂದು ತಮ್ಮ ಬೆರಳನ್ನು ಎತ್ತಿದರು!! ಬೆರಳು ಬೇಡಿಯ ಭಾರಕ್ಕೆ ಹಾಗೇ
ಕುಸಿಯಿತು..
ಇದ್ದವರಿಬ್ಬರು. ಕೊಂದವರಾರು? ಈ ಗುಟ್ಟು ಕುಂಟನಿಗೂ ತಿಳಿದಿಲ್ಲ.
¤ಜಯರಾಮ್ ನವಗ್ರಾಮ. ನವಗ್ರಾಮ ಸೈಟ್ ಬೋಂಟ್ರಗುಡ್ಡೆ ಅರಳ ಪೋಸ್ಟ್ ಅಂಡ್ ವಿಲೇಜ್.
ಬಂಟ್ವಾಳ ತಾಲೂಕು.
574211
ಫೋನ್:7760360542

ಲೇಖಕರು

JAYARAM NAVAGRAMA

ಮ್ಯಾಂವ್sss

ನಾನು ಮೂಡಬಿದ್ರಿ ಸಮೀಪದ ಪುಚ್ಚಮೊಗರಿನಲ್ಲಿ 1966 ರಿಂದ 1968 ಈ ಇಸವಿಯ ಮಧ್ಯೆ ಜನಿಸಿರುವ ಬಗ್ಗೆ ದಟ್ಟ ವದಂತಿ ಇದೆ!
ನನ್ನ ತಂದೆ ಮತ್ತು ತಾಯಿ ಇಬ್ಬರೂ ಬಿಲ್ಲವರು.
ನನಗೆ ಈಗ ಸುಮಾರು 48 ವರ್ಷ ಆಗಿರಬಹುದು.
ಒಂದನೇ ತರಗತಿಯಿಂದ 7ನೇ ತರಗತಿ ತನಕ ನಮ್ಮ ಪುಚ್ಚಮೊಗರು ಗ್ರಾಮದ ನಿತ್ಯಾನಂದ ಎಯ್ಡೆಡ್ ಎಲಿಮೆಂಟರಿ ಶಾಲೆ
8 ಮತ್ತು 9ನೇ ತರಗತಿಯನ್ನು ಸರಕಾರಿ ಪ್ರೌಢಶಾಲೆ ಕೊನ್ನೆಪದವು. ಇಲ್ಲಿ ಕಲಿತೆನು.
ನಾನು ಎಂಟನೇ ತರಗತಿಯಲ್ಲಿರುವಾಗ ಶ್ರೀಮತಿ ಇಂದಿರಾ ಗಾಂಧಿಯವರ ಕೊಲೆ ಆಯಿತು. ಆಗ ಚಿತ್ರದುರ್ಗದ ಸುಜಾತ ಟೀಚರ್ ಬಾಯ್ತುಂಬಾ ಅತ್ತಿದ್ದರು.
ಹತ್ತು ವರುಷಗಳ ಕೆಳಗೆ ನನ್ನ ಊರನ್ನು ತ್ಯಜಿಸಿ
ಸತಿಸುತರ ಪ್ರೀತ್ಯರ್ಥಂ ನವಗ್ರಾಮಾಗಮನ ಮಾಡಿ
ನಾಯಿಯಂತೆ ವರ್ಕ್ ಮಾಡುತ್ತಾ ಜಾಯಿಂಟ್ ಪೆಯಿನ್ ಬ್ಯಾಕ್ ಪೆಯಿನ್ ಸ್ಕಿನ್ ಪ್ರಾಬ್ಲೆಮ್ ಇತ್ಯಾದಿ ಪ್ರಶಸ್ತಿ ಪಡೆಯುತ್ತಾ
ಫೇಸ್ಬುಕ್ ವಿಸ್ಮಯನಗರಿ ಗಳಲ್ಲಿ ಮಿಂಚುತ್ತಾ ಅಥವಾ ಹಾಗೆಂದು ಭ್ರಮಿಸುತ್ತಾ!
ಶ್ರೀಯುತ ಮೋಧೀಜಿಯವರ ಆಡಳಿತ ವೈಖರಿ ಏನೆಂದು ಅರಿಯಲಾರದೆ ಅರ್ಥೈಸಲಾರದೆ ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಟ್ಟುಕೊಂಡು ...
ತುಂಬಾ ದಿನದಿಂದ ಆಲೋಚಿಸುತ್ತಾ ಇರುವ ಕನ್ನಡದ ಕಂದ ನಾನು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.