Skip to main content

ನಾಗ ನೆರಳು (ಭಾಗ 4)

ಬರೆದಿದ್ದುMay 22, 2015
noಅನಿಸಿಕೆ

ನಾಗ ನೆರಳು ಭಾಗ-4
"ಕುಂಟಾ, ನಾಳೆಯಿಂದಾನೆ ನಾವು ಗ್ರಾಮೀಣ ಮಟ್ಟದಲ್ಲಿ ಪಕ್ಷ ಬಲಪಡಿಸೋ ಕಾರ್ಯ ಶುರು
ಮಾಡ್ಬೇಕು. ಯಾವ ಯಾವ ಗ್ರಾಮ ಅಂತ ಹೇಳ್ತೇನೆ ಬರೆದಿಟ್ಟು ಕೋ"
ಕುಂಟ ಕಿಸಿಕ್ಕೆಂದು ನಕ್ಕ.
"ಯಾಕಯ್ಯ ನಗ್ತಿದೀಯಾ? ಮೊನ್ನೆ 'ಬಾಲ್' ಕಟ್ಟಿ ಕೋಳಿ ಬಿಟ್ಟಾಗಲೂ ನಗುತ್ತಿದ್ದೆ. ನೀ
ಹೀಗೆ ನಗೋದು ನೊಡಿದ್ರೆ ನಂಗೆ ಡೌಟ್ ಬರತ್ತೆ"
"ನನ್ ಮೇಲೆ ಡೌಟ್ ಮಾಡ್ಬೇಡಿ ಸರ್. ನಿಮ್ ಎದುರು ಓಟಿಗೆ ನಿಲ್ಲೋ ತಾಕತ್ತು ನನಗಿದೆಯೆ?
ನಾನು ನಕ್ಕಿದ್ದು ಅದಕ್ಕಲ್ಲ ಸರ್. ನೀವು ಕೋಳಿಗೆ 'ಬಾಲ್' ಸುತ್ತುವಾಗ, 'ಮುಲ್ಲೆ'
ಸವರಿ ಅದನ್ನು ಅಂಕದ ಕಲಕ್ಕೆ ಬಿಟ್ಟಾಗ, ಜನ ಅದೇನೋ ನೀವು ಘನ ಸಾಧನೆ ಮಾಡ್ತಿದೀರಿ
ಅನ್ನೋ ರೀತಿ ನೊಡ್ತ ಇದ್ರಲ್ಲಾ!!
ನೀವು ಸುತ್ತಿದ ಮುಂಡಾಸನ್ನು ನೋಡಿ ಜನ ಎಷ್ಟು ಖುಷಿ ಪಟ್ಟರು!!?
ಆ ಮುಂಡಾಸಿನೊಂದಿಗೆ ನಿಮ್ ಜೊತೆ ಎಷ್ಟ್ ಜನ ಫೋಟೋ ತಗಿಸ್ಕೊಂಡ್ರು?
ಇಸ್ಪೀಟು ಕಲಸುವಾಗಲಂತೂ ಜನ ಕಣ್ಣು ಬಾಯಿ ಬಿಟ್ಕೊಂಡು ನೋಡ್ತಾ ಇದ್ರಲ್ಲಾ!
ನನಗೊಂದು ಅನುಮಾನ ಏನಪ್ಪಾಂದ್ರೆ ನಿಮ್ ಜೊತೆ ಫೋಟೋ ತೆಗೆಸಕ್ಕೆ ನೂಕುನುಗ್ಗಲು ನಡೆಸಿದ
ಜನ, ನಾಳೆ ಒಬ್ಭ ಆರ್ಡಿನರಿ ಕೋಳಿ ಅಂಕದ ಮನುಷ್ಯನ ಜತೆ, ಅಥವಾ ನಿಮ್ಮಂತೇ ಮುಂಡಾಸು
ಕಟ್ಟಿ ಗದ್ದೆ ಉಳುವ ರೈತನ ಜೊತೆ ಫೋಟೊ ತೆಗೆಸಲು ಸಿದ್ಧರಿದಾರ್ಯೆ?
ನೀವು ಬಾಲ್ ಕಟ್ಟೋದನ್ನು ಇಸ್ಪೀಟು ಕಲಸೋ ನಿಮ್ ಕಲೆಗಾರಿಕೆಯನ್ನು ನಿಬ್ಬೆರಗಾಗಿ
ನೋಡ್ದವರಿಗೆ, ನಿಮ್ ಪೂರ್ವಜನ್ಮದ ಕಥೆ ಗೊತ್ತಿದೆಯೆ?"
" ಪೂರ್ವ ಜನ್ಮ! ಅದ್ಯಾವುದೊ ಕುಂಟ?"
" ಅದೇ ಸರ್; ರಾಜಕೀಯಕ್ಕೆ ಬರೋ ಮೊದಲು ನೀವೂ ನಾನೂ ಇಬ್ರೂ ಇದ್ದಿದ್ದೆಲ್ಲಿ? ಕೋಳಿ
ಅಂಕ ಮತ್ತು ಇಸ್ಪೀಟಾಟದಲ್ಲಿ ತಾನೆ ? ನಿಮ್ಮ ತಂದೆ ತೀರಿಕೊಂಡದ್ದೆಲ್ಲಿ? ಅಂಕದ
ಕಲದಲ್ಲಿ ತಾನೆ? ಬಾಲ್ ಕಟ್ಟೋದು ಇಸ್ಪೀಟು ಕಲಸೋದು ನೀವು ಮಾಡೋ ದೊಡ್ಡ ಸಾಧನೆನಾ? ಅದು
ನಿಮ್ಮ ರಕ್ತದಲ್ಲೆ ಅಂಟಿದ ನಂಟಲ್ಲವೇ? ಆದ್ರೂ ಜನ ಈ ರೀತಿ ಆಶ್ಚರ್ಯ ಪಡೊದು ನೋಡಿದ್ರೇ
ನಾಳೆ ನಮ್ ದೇಶ ಖಾಸಗಿಯವರಿಗೆ ಸೇಲ್ ಆದ್ರೂ ಇವರು ಆಶ್ಚರ್ಯ ಪಡುತ್ತಲೇ
ತೃಪ್ತರಾಗ್ತಾರೆ ಅನ್ಸುತ್ತೆ.."
Continue

ಲೇಖಕರು

JAYARAM NAVAGRAMA

ಮ್ಯಾಂವ್sss

ನಾನು ಮೂಡಬಿದ್ರಿ ಸಮೀಪದ ಪುಚ್ಚಮೊಗರಿನಲ್ಲಿ 1966 ರಿಂದ 1968 ಈ ಇಸವಿಯ ಮಧ್ಯೆ ಜನಿಸಿರುವ ಬಗ್ಗೆ ದಟ್ಟ ವದಂತಿ ಇದೆ!
ನನ್ನ ತಂದೆ ಮತ್ತು ತಾಯಿ ಇಬ್ಬರೂ ಬಿಲ್ಲವರು.
ನನಗೆ ಈಗ ಸುಮಾರು 48 ವರ್ಷ ಆಗಿರಬಹುದು.
ಒಂದನೇ ತರಗತಿಯಿಂದ 7ನೇ ತರಗತಿ ತನಕ ನಮ್ಮ ಪುಚ್ಚಮೊಗರು ಗ್ರಾಮದ ನಿತ್ಯಾನಂದ ಎಯ್ಡೆಡ್ ಎಲಿಮೆಂಟರಿ ಶಾಲೆ
8 ಮತ್ತು 9ನೇ ತರಗತಿಯನ್ನು ಸರಕಾರಿ ಪ್ರೌಢಶಾಲೆ ಕೊನ್ನೆಪದವು. ಇಲ್ಲಿ ಕಲಿತೆನು.
ನಾನು ಎಂಟನೇ ತರಗತಿಯಲ್ಲಿರುವಾಗ ಶ್ರೀಮತಿ ಇಂದಿರಾ ಗಾಂಧಿಯವರ ಕೊಲೆ ಆಯಿತು. ಆಗ ಚಿತ್ರದುರ್ಗದ ಸುಜಾತ ಟೀಚರ್ ಬಾಯ್ತುಂಬಾ ಅತ್ತಿದ್ದರು.
ಹತ್ತು ವರುಷಗಳ ಕೆಳಗೆ ನನ್ನ ಊರನ್ನು ತ್ಯಜಿಸಿ
ಸತಿಸುತರ ಪ್ರೀತ್ಯರ್ಥಂ ನವಗ್ರಾಮಾಗಮನ ಮಾಡಿ
ನಾಯಿಯಂತೆ ವರ್ಕ್ ಮಾಡುತ್ತಾ ಜಾಯಿಂಟ್ ಪೆಯಿನ್ ಬ್ಯಾಕ್ ಪೆಯಿನ್ ಸ್ಕಿನ್ ಪ್ರಾಬ್ಲೆಮ್ ಇತ್ಯಾದಿ ಪ್ರಶಸ್ತಿ ಪಡೆಯುತ್ತಾ
ಫೇಸ್ಬುಕ್ ವಿಸ್ಮಯನಗರಿ ಗಳಲ್ಲಿ ಮಿಂಚುತ್ತಾ ಅಥವಾ ಹಾಗೆಂದು ಭ್ರಮಿಸುತ್ತಾ!
ಶ್ರೀಯುತ ಮೋಧೀಜಿಯವರ ಆಡಳಿತ ವೈಖರಿ ಏನೆಂದು ಅರಿಯಲಾರದೆ ಅರ್ಥೈಸಲಾರದೆ ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಟ್ಟುಕೊಂಡು ...
ತುಂಬಾ ದಿನದಿಂದ ಆಲೋಚಿಸುತ್ತಾ ಇರುವ ಕನ್ನಡದ ಕಂದ ನಾನು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.