Skip to main content

ನಾಗ ನೆರಳು(ಭಾಗ 2)

ಬರೆದಿದ್ದುMay 22, 2015
noಅನಿಸಿಕೆ

ನಾಗ ನೆರಳು -ಭಾಗ2
"ಇವತ್ತು ಎಲ್ಲಿ ಪ್ರೋಗ್ರಾಮ್ ನೋಡು"
ಪಿಎ ಕುಂಟ ಡೈರಿ ತೆಗೆದ.
"ಸರ್ ಇವತ್ತು ಕಾಯಲ್ ಗುಡ್ಡೆಯ ಒಳಭಾಗದ ಬೊಟ್ಟು ಬಾಕ್ಯಾರ್ನಲ್ಲಿ"
"ಸರಿ,. ಎಷ್ಟು ಗಂಟೆಗೆ ಆರಂಭ ಆಗುತ್ತದೆ?"
"ಸರ್, ಅದು ಎರಡು ಗಂಟೆಗೆ ಆರಂಭ, ಆದರೆ ಭಾಷಣ ಆಗದೆ 'ಬಾಲ್' ಕಟ್ಟುವ ಹಾಗಿಲ್ಲ.
ಹಾಗಾಗಿ ನಾವು ಬೇಗನೇ ಹೋಗ್ಬೇಕೂ"
"ಸರಿ, ಸರಿ., ಫೋನ್ ಮಾಡಿ ಎಷ್ಟು ಜೋಡಿ ಕಟ್ಟುತ್ತಾರೆ ಕೇಳು"
"ಕೇಳಿದ್ದೇನೆ ಸರ್, ಅಲ್ಲಿ ಸುಮಾರು ನೂರು ಜೋಡಿ ಬರುವ ಅಂದಾಜು ಇದೆ. ಐದು ದಿನಗಳ ಕಾಲ
ನಿರಂತರ ನಡೆಯಲಿದೆ..
ಅದೂ ಅಲ್ಲದೇ..." ಶಾಸಕರ ಮುಖ ನೋಡಿದ ಕುಂಟ.
"ಏನದು??"...
"ತಮ್ಮ ದಯೆಯಿಂದ ಅಲ್ಲಿಗೆ ಪೋಲಿಸರು ಹೋಗೋದಿಲ್ಲ. ಹಾಗಾಗಿ 'ಅಂಕದ ಕಲ' 'ಜುಗಾರಿ ಕಲ'
ಎಲ್ಲ ವಿಶೇಷ 'ಕಳೆ-ಕಾರ್ಣಿಕ'ದಿಂದ ಕಂಗೊಳಿಸಲಿದೆ"
xxx=xxx=
ಸರಿಯಾಗಿ ಹನ್ನೆರಡು ಗಂಟೆಗೆ ಶಾಸಕರು ಸ್ಥಳಕ್ಕೆ ಆಗಮಿಸಿದರು.
'ಕೊರಗಪ್ಪಣ್ಣ ಜಿಂದಾಬಾದ್'
'ಕೋಳಿ ಪ್ರಿಯನಿಗೆ ಜೈ ಜೈ ಜೈi'
ಜುಗಾರಿ ಪೋಷಕನಿಗೆ ಜೈi'
ಎಂಬ ಘೋಷಗಳು ಮೊಳಗುತ್ತಿರಲು ಶಾಸಕರು ನಗು ನಗುತ್ತಾ ತಮ್ಮ ವಾಹನದಿಂದ ಇಳಿದರು. ಅವರ
ಜತೆಗೆ ಬಿಳಿ ಪಂಚೆ. ಕೆಂಪು ಮುಂಡಾಸುಗಳಿಂದ ಶುಷೋಭಿತರಾದ ನಾಲ್ವರು ಕಟ್ಟುಮಸ್ತಾದ
ಯುವಕರೂ ಇಳಿದರು. ಸಾಮು ಮಾಡಿದ ದೇಹ! ಉಬ್ಬಿದ ಎದೆ! ಕಂಕುಳಲ್ಲಿ ಒಂದೊಂದು ಕೋಳಿ!!
ಚರ್ಕಿ
ಸೇಲಂ
ಇ ರೋಡ್
ಹಾಗೂ ನಾಟಿ 'ಕಡ್ಲೆ'
ಜನರೆಲ್ಲಾ ತಮ್ಮ ನೆಚ್ಚಿನ ನಾಯಕನೆಡೆಗೆ ದಿಟ್ಟಿ ನೆಟ್ಟಿರಲು ಅವರ ಹಿಂದಿನಿಂದ
ಕಯ್ಯಲ್ಲಿ 'ಬಾಲ್' ಕಟ್ಟು ಹಿಡಿದುಕೊಂಡು ಜನರೆಲ್ಲಾ ತನ್ನನ್ನೇ ನೋಡುತ್ತಿರುವರೆಂಬ
ಭ್ರಮೆಯೊಡನೆ ತನ್ನ ಒಣಕಲು ಎದೆಯನ್ನು ಇನ್ನಷ್ಟು ಮುಂದಕ್ಕೆ ಉಬ್ಬಿಸಿ ತನ್ನದೇ ಆದ ಹೊಸ
ನಡಿಗೆಯೊಡನೆ ನಡೆದು ಹೋದ ಪಿಎ ಕುಂಟ. ದೀಪ ಬೆಳಗಿಸುತ್ತಾ ಈ ವರ್ಷದ ಗ್ರಾಮದ ಅಂಕದ
ಕಲವನ್ನು ಉದ್ಘಾಟಿಸಿದ ಶಾಸಕರು,
ತಮ್ಮ ಭಾಷಣ ಆರಂಭಿಸಿಯೇ ಬಿಟ್ಟರು..!
"ಬಂಧುಗಳೇ, ಕೋಳಿ ಅಂಕ ಈ ಜಿಲ್ಲೆಯ ಜನಪ್ರಿಯ ಕ್ರೀಡೆ. ಆದರೆ ಪೋಷಕರ ಕೊರತೆಯಿಂದ
ವಿನಾಶದ ಅಂಚಿಗೆ ತಲುಪುತ್ತಿದೆ. ಯುವ ಜನಾಂಗ ಅದರತ್ತ ಗಮನ ಹರಿಸದೇ ಉಢಾಫೆ
ಮಾಡುತ್ತಿರುವುದು ಅತ್ಯಂತ ದುಃಖದ ವಿಚಾರವಾಗಿದೆ, ಅದಲ್ಲದೆ ಅನೇಕರ ಕಣ್ಣು ಅದರ ಮೇಲೆ
ಇದೆ..
ಹಾಗಾದರೆ ಬಡವರು ಮನರಂಜನೆಗೆ ಏನು ಮಾಡಬೇಕು?
ಬಡವರಿಗು ಉಲ್ಲಾಸ ಸಂತೋಷ ಬೇಡವೇ? ಬೆಂಗ್ಲೂರು ಮೈಸೂರಿನಂತಾ ರೇಸ್ ಕೋರ್ಸಿಗೆ ಹೋಗಿ,
ಹಣ ಕಟ್ಟೀ, ಜೂಜಾಡುವಷ್ಟು ಸಾಮರ್ಥ್ಯ ನಮ್ಮ ಬಡವರಿಗೆ ಇದೆಯೇ?'' ಬಡವರ ಕಷ್ಟವನ್ನು ಈ
ರೀತಿ ಬಣ್ಣಿಸುತ್ತಾ ಕೊರಗಪ್ಪನವರು ಗದ್ಗದಿತರಾದರು!
"...ಹಾಗಾದರೆ ನಮ್ಮ ಊರ ಬಡವರ ಗತಿ ಏನು?
ದುಡಿದದ್ದೆಲ್ಲಾ
'ಹೆಂಡತಿ, ಮಕ್ಕಳು, ಸಂಸಾರ ಅಂತ ಸುರಿದು ಮುದುಡಿ ಮಲಗಬೇಕೇ?
ಇದೆಂತಾ ಜೀವನಾ?
ಅದಕ್ಕೇ ನಾನು ಈ ನೂತನ ಯೋಜನೆ ಕೈಗೊಂಡಿರುವುದು.
ಅಷ್ಟೇ ಅಲ್ಲ, ಕೋಳಿ ಅಂಕವನ್ನು 'ಮನರಂಜನಾ ಕ್ರೀಡೆ' ಎಂದು ಮಾನ್ಯ ಮಾಡಿ, ಅದನ್ನು
ಹದಿನೆಂಟನೇ ಪರಿಚ್ಛೇದದಲ್ಲಿ ಸೇರಿಸಲು ಕೇಂದ್ರದ ಮೇಲೆ ಒತ್ತಾಯವನ್ನೂ
ಹೇರಲಿದ್ಧೇನೆ..."
ಕಿವಿ ತೂತಾಗುವಂತಾ ಕರತಾಡನ! ಶಾಸಕರು ಒಂದು ಕ್ಷಣ ಸಭೆಯತ್ತ ನೋಡಿದರು. ಈ
ಕಾರ್ಯಕ್ರಮಕ್ಕೆ ಪತ್ರಿಕೆ ಟೀವಿ ಮಾಧ್ಯಮಗಳು ಬರದೇ ಇದ್ದ ಕಾರಣ ಶಾಸಕರ ಪರಿಚ್ಛೇದದ
ಬಗೆಗಿನ ಮುಗ್ಧತೆ ಹೊರ ಜಗತ್ತಿಗೆ ತಿಳಿಯುವ ಸಂಭವ ಇಲ್ಲ.!
"ಜುಗಾರಿಗೆ ಕ್ರಿಕೆಟ್ ನಂತಾ ಮೈದಾನ ಬೇಡ. ಕೋಟ್ಯಾಂತರ ಖರ್ಚು ಇಲ್ಲ
ಕೇವಲ ಬಡವರ ಕ್ರೀಡೆ ಅನ್ನುವ ಒಂದೇ ಕಾರಣಕ್ಕೆ ಅದಕ್ಕೆ ನಿಷೇಧ ಹೇರುವುದು ಎಂತಾ ಮೂರ್ಖತನ?
ನಮ್ಮ ಗಂಡು ಕಲೆ ನಮ್ಮೊಂದಿಗೇ ಮಣ್ಣಾಗಬೇಕೇ? ನಮ್ಮ ಮುಂದಿನ ಪೀಳಿಗೆ ಇದನ್ನೆಲ್ಲ ಪಾಠ
ಪುಸ್ತಕದಲ್ಲಿ ಓದಿ,
''....ಹೀಗೂ ಇತ್ತೇ??!!"
ಎಂದು TV9 ಸ್ಟೈಲ್ನಲ್ಲಿ ಮೂಗಿನ ಮೇಲೆ ಬೆರಳಿಡಬೇಕೇ?
ಅಂತಾ ದುರವಸ್ಥೆ ನಮ್ಮ ಮಕ್ಕಳಿಗೆ ಬಾರದಿರಲಿ..." ಶಾಸಕರ ಭಾಷಣದ ಮಧ್ಯೆಯೇ ತೂರಿ ಬಂತು ಜೈಕಾರ!
''ಜುಗಾರಿ ಪ್ರಿಯನಿಗೇ ಜೈi''
''ಕೋರ್ದಟ್ಟ ಪೋಷಕರಿಗೆ ಜಿಂದಾಬಾದ್!!''
ಇಡೀ ಬಾಕ್ಯಾರು ಚಪ್ಪಾಳೆ ಮತ್ತು ಜಯಘೋಷಗಳಿಂದ ಕಂಪಿಸಿದಂತಾದಾಗ ಶಾಸಕರು ಹೆಮ್ಮೆಯಿಂದ
ತಮ್ಮ ಆಸನದಲ್ಲಿ ವಿರಾಜಮಾನರಾದರು..
CUNTINUE

ಲೇಖಕರು

JAYARAM NAVAGRAMA

ಮ್ಯಾಂವ್sss

ನಾನು ಮೂಡಬಿದ್ರಿ ಸಮೀಪದ ಪುಚ್ಚಮೊಗರಿನಲ್ಲಿ 1966 ರಿಂದ 1968 ಈ ಇಸವಿಯ ಮಧ್ಯೆ ಜನಿಸಿರುವ ಬಗ್ಗೆ ದಟ್ಟ ವದಂತಿ ಇದೆ!
ನನ್ನ ತಂದೆ ಮತ್ತು ತಾಯಿ ಇಬ್ಬರೂ ಬಿಲ್ಲವರು.
ನನಗೆ ಈಗ ಸುಮಾರು 48 ವರ್ಷ ಆಗಿರಬಹುದು.
ಒಂದನೇ ತರಗತಿಯಿಂದ 7ನೇ ತರಗತಿ ತನಕ ನಮ್ಮ ಪುಚ್ಚಮೊಗರು ಗ್ರಾಮದ ನಿತ್ಯಾನಂದ ಎಯ್ಡೆಡ್ ಎಲಿಮೆಂಟರಿ ಶಾಲೆ
8 ಮತ್ತು 9ನೇ ತರಗತಿಯನ್ನು ಸರಕಾರಿ ಪ್ರೌಢಶಾಲೆ ಕೊನ್ನೆಪದವು. ಇಲ್ಲಿ ಕಲಿತೆನು.
ನಾನು ಎಂಟನೇ ತರಗತಿಯಲ್ಲಿರುವಾಗ ಶ್ರೀಮತಿ ಇಂದಿರಾ ಗಾಂಧಿಯವರ ಕೊಲೆ ಆಯಿತು. ಆಗ ಚಿತ್ರದುರ್ಗದ ಸುಜಾತ ಟೀಚರ್ ಬಾಯ್ತುಂಬಾ ಅತ್ತಿದ್ದರು.
ಹತ್ತು ವರುಷಗಳ ಕೆಳಗೆ ನನ್ನ ಊರನ್ನು ತ್ಯಜಿಸಿ
ಸತಿಸುತರ ಪ್ರೀತ್ಯರ್ಥಂ ನವಗ್ರಾಮಾಗಮನ ಮಾಡಿ
ನಾಯಿಯಂತೆ ವರ್ಕ್ ಮಾಡುತ್ತಾ ಜಾಯಿಂಟ್ ಪೆಯಿನ್ ಬ್ಯಾಕ್ ಪೆಯಿನ್ ಸ್ಕಿನ್ ಪ್ರಾಬ್ಲೆಮ್ ಇತ್ಯಾದಿ ಪ್ರಶಸ್ತಿ ಪಡೆಯುತ್ತಾ
ಫೇಸ್ಬುಕ್ ವಿಸ್ಮಯನಗರಿ ಗಳಲ್ಲಿ ಮಿಂಚುತ್ತಾ ಅಥವಾ ಹಾಗೆಂದು ಭ್ರಮಿಸುತ್ತಾ!
ಶ್ರೀಯುತ ಮೋಧೀಜಿಯವರ ಆಡಳಿತ ವೈಖರಿ ಏನೆಂದು ಅರಿಯಲಾರದೆ ಅರ್ಥೈಸಲಾರದೆ ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಟ್ಟುಕೊಂಡು ...
ತುಂಬಾ ದಿನದಿಂದ ಆಲೋಚಿಸುತ್ತಾ ಇರುವ ಕನ್ನಡದ ಕಂದ ನಾನು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.