Skip to main content

ನಾಗ ನೆರಳು(ಭಾಗ 1)

ಬರೆದಿದ್ದುMay 22, 2015
noಅನಿಸಿಕೆ

॥ನಾಗ ನೆರಳು॥ಭಾಗ-1
XXXXX
''ಸನ್ಮಾನ್ಯ ಶಾಸಕರಾದ ಕೆಎಂಪಿಯವರಿಗೆ,
ಸ್ವಾಮೀ ನನಗೆ ಯಾರನ್ನೇ ಆಗಲಿ ಸುಮ್ಮನೆ ಹೊಗಳಿ ಅಭ್ಯಾಸವಿಲ್ಲ.
ಆದರೆ ನಿಮ್ಮನ್ನು ಎಲ್ಲ ಕಡೆ ಹೊಗಳುತ್ತಾ ಇದ್ದೇನೆ. ನನ್ನಂತಹ ಸಾಮಾನ್ಯನಿಗು ನೀವು
ತೋರುವ ಅಕ್ಕರೆ, ಪ್ರೀತಿ ಅದಕ್ಕೆ ಕಾರಣವಾಗಿದೆ.
ಕಳೆದ ಇಲೆಕ್ಷನ್ನಲ್ಲಿ ನಿಮ್ಮ ಪರವಾಗಿ ಸಾಕಷ್ಟು ಶ್ರಮಿಸಿದ್ದೆ.
ಆದರೆ ಕಳೆದ ಚುನಾವಣೆಯಲ್ಲಿ ನೀವು ಕೇವಲ ಒಂದು ಸಾವಿರದ ಎಂಟುನೂರು ಓಟುಗಳ ಅಂತರದಿಂದ ಜಯಿಸಿದಿರಿ.
ಅದು ಜಯವಲ್ಲ. ಕೇವಲ ಗೆಲುವಷ್ಟೇ.
ಅದು ತುಂಬಾ ಬೇಜಾರಿನ ವಿಷಯ.
ಸ್ವಾಮೀ,
ನಾನು ನಿಮ್ಮ ಪರಮ ನಿಷ್ಠ ಅಭಿಮಾನಿ. ನೀವಲ್ಲದೆ ಇಲ್ಲಿ ಇನ್ಯಾರು ನಿಂತು ಗೆದ್ದರು
ನಮಗಂತೂ ತುಂಬಾ ತೊಂದರೆ ಖಂಡಿತಾ ಇದೆ ಅಂತ ನನಗೆ ಚೆನ್ನಾಗಿ ಗೊತ್ತು.
ನಮ್ಮ ಊರಿನ ಜನ ತುಂಬಾ ಬದಲಾಗಿದ್ದಾರೆ! ಶ್ರೀಯುತರಾದ ಡೋಂಗ್ಯಪ್ಪಾ ಮೋಸಪ್ಪಾ
ನುಂಗಪ್ಪನವರ್ ಅಂತ ನಿಮಗೆ ಗೊತ್ತಿರಬಹುದು. ಅವರು ಉತ್ತರ ಕರ್ನಾಟಕದ ಕಡೆಯವರು.
ನಿಮ್ಮ ಕೃಪಾ ಕಟಾಕ್ಷದಿಂದಲೇ ಈ ಊರಲ್ಲಿ ಬೃಹದ್ ಉದ್ದಿಮೆ ಒಂದನ್ನು ಸ್ಥಾಪಿಸಿದವರು
ಅವರು..
ಅವರನ್ನು ಇಲ್ಲಿನ ಜನ ಬಹಳಾ ಬಹಳಾ ನಂಬಿ ಬಿಟ್ಟಿದ್ದಾರೆ!
ಎಲ್ಲರ ಬಾಯಲ್ಲೂ 'ಎಂಡಿ ನುಂಗಪ್ಪನವರ್' ಎಂದರೆ ಸಕ್ಕರೆ ಸುರಿಯುತಿದೆ. ಕೋಟ್ಯಾಧೀಶರಾದ
ನುಂಗಪ್ಪನವರ್.
ಮುಂದಿನ ಇಲೆಕ್ಷನ್ಗೆ ಖಂಡಿತವಾಗಿಯೂ ನಿಲ್ಲುತ್ತಾರೆ ಎಂಬ ಸುದ್ಧಿ ನನಗೆ ಭಯ
ತರಿಸುತ್ತಿದೆ. ಸಾವಿರಾರು ಜನಕ್ಕೆ ಕೆಲಸ ಕೊಡಿಸಿದ್ದಾರೆ. ಬಡವರೆಂದರೆ ಅತೀ ಪ್ರೀತಿ.
ಆದರೆ ನಾನು ಗಮನಿಸಿದ ಒಂದು ಭಯಪಡುವಂತ ವಿಷಯ ಏನೆಂದರೆ ಅವರು ನಿಮ್ಮ ವ್ಯಾಪ್ತಿಗೆ
ಬರುವ ಎಲ್ಲ ಗ್ರಾಮಗಳಿಗೂ ಬೇಟಿ ಕೊಡುತ್ತಾ ಇದ್ದಾರೆ! ಬಡವರನ್ನು ಹುಡುಕಿ ಹುಡುಕಿ
ಕರೆದು ಕರೆದು ಸಹಾಯ ಮಾಡ್ತಾ ಇದ್ದಾರೆ! ಅವರು ಓಟಿಗೆ ನಿಂತರೆ ಗೆಲ್ಲುವುದು ಖಂಡಿತಾ.
ನೀವು ರಾತ್ರಿಯ ಸಮಯ ಕೊಡುವ ಕ್ವಾಟ್ರ್ ಅಥವಾ ಸೀರೆ ಪಂಚೆಗಳು ಈ ಸಲ ವರ್ಕೌಟಾಗೋದು
ಡೌಟ್. ಆ ಸಂಸ್ಕೃತಿಯನ್ನು ಬಿಟ್ಟು ಬಿಡಿ. ಅದು ನಿಮ್ಮಂತವರಿಗೆ ಶೋಭೆ
ತರುವಂತದ್ದಲ್ಲ. ನನಗಿರುವ ಭಯ ಇಷ್ಟೇ ನುಂಗಪ್ಪನವರ್ ನಿಂತು ಗೆದ್ದರೆ ನಮ್ಮ ಊರಿನ
ಇನ್ನಷ್ಟು ಭೂಮಿಯನ್ನು ನುಂಗುತ್ತಾರೆ! ಕಡೆಯದಾಗಿ ಹೇಳ್ತಾ ಇದ್ದೇನೆ, ಮತ್ತೆ ಓಟು
ಹತ್ತಿರ ಬರ್ತಾ ಇದೆ. ನೀವು 'ಕೋರ್ದಟ್ಟ' 'ಜುಗಾರಿ' ಅಂತ ಸಮಯ ಕಳೆದರೆ
ಆಗ್ಲಿಕ್ಕಿಲ್ಲ. ನಮಗಾಗಿ, ನಮ್ಮನ್ನು ಉಳಿಸಲಿಕ್ಕಾಗಿ
ನೀವು ಓಟ್ನಲ್ಲಿ ಗೆಲ್ಲಲೇಬೇಕು. ಇದು ಅನಿವಾರ್ಯ...
ಇತಿ, ನಿಮ್ಮ ನಿಷ್ಟಾವಂತ
@ಮನಮೋಹನ..@
ಈ ಸುದೀರ್ಘ ಪತ್ರ!
ಅದೂ ಬೇರೆ ಯಾರಿಗೂ ಸಿಗಬಾರದೆಂದು ರಿಜಿಸ್ಟರ್ಡ್ ಪೊಸ್ಟ್ ನಲ್ಲಿ ಬಂದ ಪತ್ರ! ಶಾಸಕರಾದ
'ಕೊರಗಪ್ಪ ಮರ್ಲ್ ಪದವು' ಪೂರ್ತಿಯಾಗಿ ಓದಿ ಮುಗಿಸಿದರು..
ಪಿಎ ಕುಂಟ ಪಕ್ಕದಲ್ಲೇ ಕಸದ ಡಬ್ಬ ಹಿಡಿದು ನಿಂತಿದ್ದ.
ಮುದ್ದೆ ಮಾಡಿ ಕಸದ ಬಾಕ್ಸ್ ಗೆ ಹಾಕಲೆಂದು ಯೋಚಿಸಿದ ಶಾಸಕರು ಮತ್ತೆ ಮನಸ್ಸು
ಬದಲಾಯಿಸಿ ಆ ಪತ್ರವನ್ನು ಫೈಲ್ ನ ಒಳಗಿಟ್ಟರು.
ಪಿಎ ಕುಂಟ ಪ್ರಪಂಚದ ಹದಿನಾರನೆಯ ಅದ್ಭುತವನ್ನು ಕಂಡಂತೆ ಆಶ್ಚರ್ಯದಿಂದ ಶಾಸಕರನ್ನೇ ನೋಡಿದ!

ಲೇಖಕರು

JAYARAM NAVAGRAMA

ಮ್ಯಾಂವ್sss

ನಾನು ಮೂಡಬಿದ್ರಿ ಸಮೀಪದ ಪುಚ್ಚಮೊಗರಿನಲ್ಲಿ 1966 ರಿಂದ 1968 ಈ ಇಸವಿಯ ಮಧ್ಯೆ ಜನಿಸಿರುವ ಬಗ್ಗೆ ದಟ್ಟ ವದಂತಿ ಇದೆ!
ನನ್ನ ತಂದೆ ಮತ್ತು ತಾಯಿ ಇಬ್ಬರೂ ಬಿಲ್ಲವರು.
ನನಗೆ ಈಗ ಸುಮಾರು 48 ವರ್ಷ ಆಗಿರಬಹುದು.
ಒಂದನೇ ತರಗತಿಯಿಂದ 7ನೇ ತರಗತಿ ತನಕ ನಮ್ಮ ಪುಚ್ಚಮೊಗರು ಗ್ರಾಮದ ನಿತ್ಯಾನಂದ ಎಯ್ಡೆಡ್ ಎಲಿಮೆಂಟರಿ ಶಾಲೆ
8 ಮತ್ತು 9ನೇ ತರಗತಿಯನ್ನು ಸರಕಾರಿ ಪ್ರೌಢಶಾಲೆ ಕೊನ್ನೆಪದವು. ಇಲ್ಲಿ ಕಲಿತೆನು.
ನಾನು ಎಂಟನೇ ತರಗತಿಯಲ್ಲಿರುವಾಗ ಶ್ರೀಮತಿ ಇಂದಿರಾ ಗಾಂಧಿಯವರ ಕೊಲೆ ಆಯಿತು. ಆಗ ಚಿತ್ರದುರ್ಗದ ಸುಜಾತ ಟೀಚರ್ ಬಾಯ್ತುಂಬಾ ಅತ್ತಿದ್ದರು.
ಹತ್ತು ವರುಷಗಳ ಕೆಳಗೆ ನನ್ನ ಊರನ್ನು ತ್ಯಜಿಸಿ
ಸತಿಸುತರ ಪ್ರೀತ್ಯರ್ಥಂ ನವಗ್ರಾಮಾಗಮನ ಮಾಡಿ
ನಾಯಿಯಂತೆ ವರ್ಕ್ ಮಾಡುತ್ತಾ ಜಾಯಿಂಟ್ ಪೆಯಿನ್ ಬ್ಯಾಕ್ ಪೆಯಿನ್ ಸ್ಕಿನ್ ಪ್ರಾಬ್ಲೆಮ್ ಇತ್ಯಾದಿ ಪ್ರಶಸ್ತಿ ಪಡೆಯುತ್ತಾ
ಫೇಸ್ಬುಕ್ ವಿಸ್ಮಯನಗರಿ ಗಳಲ್ಲಿ ಮಿಂಚುತ್ತಾ ಅಥವಾ ಹಾಗೆಂದು ಭ್ರಮಿಸುತ್ತಾ!
ಶ್ರೀಯುತ ಮೋಧೀಜಿಯವರ ಆಡಳಿತ ವೈಖರಿ ಏನೆಂದು ಅರಿಯಲಾರದೆ ಅರ್ಥೈಸಲಾರದೆ ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಟ್ಟುಕೊಂಡು ...
ತುಂಬಾ ದಿನದಿಂದ ಆಲೋಚಿಸುತ್ತಾ ಇರುವ ಕನ್ನಡದ ಕಂದ ನಾನು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.