Skip to main content

ದಿನಕ್ಕೊಂದು ಹಿತನುಡಿಗಳು.

ಬರೆದಿದ್ದುMarch 28, 2008
2ಅನಿಸಿಕೆಗಳು

[b]ಮಂಗಳಕರವಾದ ವಿಚಾರಗಳು ಎಲ್ಲೆಡೆಯಿಂದಲೂ ಬರಲಿ.[/b]

ಪ್ರತಿಯೊಬ್ಬರೂ ನಾವು ಹುಟ್ಟಿ, ಬೆಳೆದ ಪರಿಸರದಿಂದ ಬಹಳಷ್ಟು ವಿಚಾರಗಳನ್ನು ಗ್ರಹಿಸಿರುತ್ತೇವೆ. ಆ ಪರಿಸರದಲ್ಲಿಯ ಹಿರಯರ ನಡೆ, ನುಡಿಗಳನ್ನು ನಮಗೇ ತಿಳಿಯದಂತೆ ಅನುಕರಿಸುತ್ತೇವೆ. ಸಂಪ್ರದಾಯದ, ಮತದ, ಮಠದ, ಜಾತಿಯ ಬಂಧನಗಳಿಗೆ ಸಿಕ್ಕಿರುತ್ತೇವೆ. ಗುರುಗಳ, ಆಚಾರ್ಯರ, ಸಂಘ, ಸಂಸ್ಥೆಗಳ ವಿಚಾರಧಾರೆ, ಸಿದ್ಧಾಂತಗಳಿಗೆ ನೇತುಹಾಕಿಕೊಂಡಿರುತ್ತೇವೆ. ನಮ್ಮದೊಂದೇ ನಿಲುವು. ನಾವು ಬಿದ್ದಿರುವ ಕೂಪದಿಂದ ಆಚೆ ಇರುವುದೆಲ್ಲಾ ಸುಳ್ಳು!! ಈ ಮನೋಭಾವ ನಮಗೂ ಜಗತ್ತಿಗೂ. ಅತ್ಯಂತ ಅಪಾಯಕಾರಿ. ಮೇಲಿನವುಗಳ ಹೆಸರಿನಲ್ಲಿ ಎಷ್ಟೆಲ್ಲ ರಕ್ತಪಾತಗಳು ನಡೆಯುತ್ತಿರುವುದು ಚರಿತ್ರೆಯನ್ನು ಕೆಂಪಾಗಿಸುತ್ತಲೇ ಇದೆ. ಈ ಗ್ರಹಿಕೆಗಳಿಂದ, ಅನುಕರಣೆಗಳಿಂದ, ಬಂಧನಗಳಿಂದ, ನೇತುಹಾಕಿಕೊಂಡಿರುವುದರಿಂದ ಹೊರಬರಲೇಬೇಕು. ’ನಾನು ನಂಬಿರುವುದೇ ನಿಜ’ ಎಂಬುದರ ಬದಲಾಗಿ ’ನಿಜವನ್ನೇ ನಾನು ನಂಬುತ್ತೇನೆ’ ಎಂದಾಗ ಮನಸ್ಸು ತೆರೆಯುತ್ತದೆ. ಮಂಗಳಕರವಾದ ಸತ್ಯ ಎತ್ತಲಿಂದ ಬಂದರೂ ಸ್ವೀಕರಿಸುತ್ತೇವೆ.

ಲೇಖಕರು

ಯೋಗೇಶ್

ನಿನಗೇಳದ ಮಾತೊಂದು ಮನದ(ನ)ಲ್ಲೆ ಉಳಿದಿದೆ.

ಅನಿಸಿಕೆಗಳು

ನಿಮ್ಮ ದಿನಕ್ಕೊಂದು ಹಿತನುಡಿಗಳು ಪ್ರತೀ ದಿನ ಬರುವದೆಂದು ನಿರೀಕ್ಷೆಯಲ್ಲಿದ್ದೆ. ಆದರೆ ನೀವು ಬರೆಯುತ್ತಿಲ್ಲವಲ್ಲಾ ಕಾರಣ?

ಯೋಗೇಶ್ ಶುಕ್ರ, 04/18/2008 - 16:59

ಯೋಗೇಶ್

ಸಮಯದ ಅಭಾವ ಮತ್ತು ಕಾರಣಾಂತರಗಳಿಂದ ಸ್ವಲ್ಪ ತಡವಾಗಿದೆ.. ಬಹಳಷ್ಟು ನುಡಿಗಳು ನನ್ನ ಬಳಿ ಇವೆ.. ಸಮಯ ನೋಡಿ ಕಂಡಿತವಾಗಿಯು ಪ್ರಕಟಿಸುತ್ತೇನೆ..

ಧನ್ಯವಾದಗಳು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.