Skip to main content

ಕನಸಲೂ ಮೋದಿ ಮನಸಲೂ ಮೋದಿ

ಬರೆದಿದ್ದುApril 30, 2015
noಅನಿಸಿಕೆ

ಕೆಲ್ಸನೂ ಇಲ್ಲ ಕಾರ್ಯನೂ ಇಲ್ಲ..
ಒಂದಿಸ್ಟು ನಿದ್ದೆ ಮಾಡೋಣಾಂತ ಒರಗಿದ್ದೆ.
'ಜೋಂಪು' ಹತ್ತಿತೋ ಇಲ್ಲೋ ಅನ್ನೋವಾಗ್ಲೇ ಕಾಲ್..
ಚೇ ಯಾರಪ್ಪಾ ಇದು? ಅನ್ಕೊಂಡೇ ರಿಸೀವ್ ಮಾಡ್ದೇ ..
ನರೇಂದ್ರ ಮೋದೀಜಿ!!!!
ನನ್ ಕಿವಿ ನಂಗೇ ನಂಬಕ್ಕಾಗಲ್ಲ!!
"ಸರ್,, ನಿಮ್ಗೆ ಕನ್ನಡ ಬರುತ್ತಾ?!"
"ನಂಗೇ ಎಲ್ಲಾ ಬರ್ತೈತ್ರೀ."
"ಇದು 'ಅಖಿಲ ಕನ್ನಡಿಗರ ಭಾಗ್ಯ' ಅಂತ ಊದಲಾರೆ ಸರ್!
ಆದ್ರೆ ನನ್ನ ಅದೃಷ್ಟ. ಕನ್ನಡ ತುಳು ಬಿಟ್ಟು ಇನ್ಯಾವ ಭಾಷೆನೂ ಬರಲ್ಲ ಸರ್ ನಂಗೆ"
"ನಾನ್ ನಿಮ್ ಫೇಸ್ ಬುಕ್ಕೆಲ್ಲ ನೋಡ್ದೇ.. ನಿಮ್ ಚಿತ್ರದಲ್ಲಿ ನಾಯಿ, ಬೆಕ್ಕು, ಕೋಳಿಗಳೂ ಕತೆ ಹೇಳ್ತಾವಲ್ರೀ!?"
"ಓದಿದ್ರಾ ಸರ್?"
"ಹೂಂ"
"ಲೈಕ್ ಕೊಡಿ ಸರ್, ಪ್ಲೀಸ್"
"ರೀ ನಂಗೆ ಅದ್ಕೆಲ್ಲಾ ಟೈಮಿಲ್ರೀ, ನೀವೀಗ ಕೂಡ್ಲೇ ದೆಹಲಿಗೆ ಬರಬೇಕು"
"ನಾನೇನು ತೆಪ್ ಮಾಡಿವ್ನಿ ಸರ್?
ನಿಮ್ ಮ್ಯಾಕೆ ಹೊಗಳಿಕೆಯ ಅತಿವೃಷ್ಟಿನೇ ಸುರಿಸಿವ್ನಲ್ಲಾ ಸರ್??"
"ನೋಡ್ರೀ, ನಿಮ್ಗೆ 'ಸಾಮಾಜಿಕ ಕಳಕಳಿ' ಇದೆ ಅಂತ ಗೊತ್ತಾಯಿತು..."
"ಸರ್ ಅದೂ..... ಕೊಂಚ 'ಕಳಕಳಿ' ಕೊಂಚ 'ಚಿಳಿಪಿಳಿ' ಸರ್..
ನಂಗೂ ಬದುಕ್ಬೇಕಲ್ಲ ಸರ್? ಬಡವ ಸರ್ ನಾನೂ.."
"ಆಯಕಟ್ಟಿನ ಜಾಗದಲ್ಲಿ ಆಯಕಟ್ಟಿನ ಹುದ್ದೆ ಕೊಟ್ರೆ ನೀವೇನ್ ಸುಧಾರಣೆ ಮಾಡಬಲ್ಲಿರಿ?"
"ಕರ್ನಾಟಕದಲ್ಲಿ ಎಂತೆಂತಾ ಘಟಾನುಘಟಿಗಳಿರೋವಾಗ ಈ ಒಂಭತ್ತನೇ ಕ್ಲಾಸ್ ನ ಮ್ಯಾಗೆ ಯಾಕ್ ಸರ್ ಕಣ್ಣೂ?"
"ಹಾಂ.! ಅದೇರೀ.. ಅವೊಂದೂ ಸರಿಯಿಲ್ಲ.. ಎಲ್ಲಾ ಕೋಟಿ ಕೋಟಿ ನುಂಗಿ ನೊಣೆದವೇ.. ನಿಮ್ ಮ್ಯಾಕೆ ಯಾವ ಹಗರಣನೂ ಇಲ್ಲ"
"ಹಗರಣ ಮಾಡೋಕೆ ಅವಕಾಶನೇ ಸಿಕ್ಕಿಲ್ವಲ್ಲಾ ಸರ್? ನಾನ್ ಹೆಚ್ಚಂದ್ರೇ ಪಕ್ಕದ್ ಮನೆಯ ಅಂಗಳದ ಅಡಕೆ ಕದೀಬೋದು. ಅದೇ ದೊಡ್ಡ ಹಗರಣ ಬಡವರಿಗೆ"
"ದೇಶದ ಸುಧಾರಣೆಗಾಗಿ, ಅಲ್ಲಲ್ಲಿ ಬುದ್ದುವಂತರ್ನ ನೇಮಿಸಿ, ಅವರಿಗೊಂದಿಟ್ಟು ಜವಾಬ್ದಾರಿ ಒರಿಸ್ಬೇಕೂಂತ ನನ್ ಯೋಚ್ನೆ ರೀ.. ಅಂತವ್ರಲ್ಲಿ ನೀವೂ ಒಬ್ರು...
ಹೇಳ್ರೀ ನೀವು ಮೊದಲು ಮಾಡೋ ಕೆಲ್ಸ ಏನು?"
"ಅದೇ ಯೋಚನೆ ಮಾಡಕ್ಕತ್ತೀನಿ ಸರ್...
ಮನಿ ಒಂದ್ ಕಟ್ಟುಸ್ಬೇಕೂ ಅಂತ ಆಸೆ ಇತ್ತೂ...
ಆಮ್ಯಾಕೆ... ನಾನು ಕುಡಿಯುತ್ತಿದ್ದಾಗ ಹೆಂನ್ತೀ ತಾಳಿಸರ ಮಾರಿ ಬಿಟ್ಟಿವ್ನೀ ಅದೊಂದು ಮಾಡಿಸ್ಕೊಡ್ಬೇಕೂ..
ಮಗಾ ಇಸ್ಕೋಲ್ಗೆ ಓಗ್ತವ್ನೇ. ಫಸ್ಟ್ ಪಿಯುಸಿ (ಸಯನ್ಸ್) ತಗೊಂಡವ್ನೆ,
ಅವನ ಬಟ್ಟೆ ಬರೆ, ಮತ್ತೊಂದು ಒಳ್ಳೆ ಚೀಲ...
ಮನೆ ಸುತ್ತ ಒಂದ್ ಕಂಪೋಂಡೂ...."
"ಏನ್ರೀ ಹಗರಣ ಮಾಡ್ತೀನೀ ಅಂತ ಬಾಯ್ಬಿಟ್ಟೇ ಹೇಳ್ತೀರಲ್ರೀ?"
" ಊಂ ಸರ್, ಹೇಳ್ಕೊಂಡೇ ಹಗರಣ ಮಾಡ್ಬೇಕೂ.. ಅಭಿಮಾನಿಗಳು ಜಾಸ್ತಿ ಆಗ್ತಾರ ಸರ್"
" ವಾಟ್ ಯೂ ಮೀನ್!!"
" ಮೀನೂ ಇಲ್ಲ ಕೋಳೀನೂ ಇಲ್ಲ. ಹರ್ಷದ್ ಮೆಹ್ತಾ ಸಾಹೆಬ್ರಿಗೆ ಎಷ್ಟೊಂದು ಅಭಿಮಾನಿಗಳಿದ್ರೂ?
ಓದೀಲ್ವಾ ಸರ್?"
"ಮತ್ತೆ ಫೇಸ್ಬುಕ್ನಾಗೆ ಅಟ್ಟೋಂದು ಬರೀತೀರಾ!! ಅದೆಲ್ಲಾ ಭೋಗಸಾ ಅಂಗಾದ್ರೇ?!"
"ಅಯ್ಯೋ ಬೋಗಸಲ್ಲ ಸರ್, ಅಂಗೇನೇ ಬರಿಬೇಕ್ರಾ.. ಇಲ್ಲಾಂದ್ರೆ ಯಾವನೂ 'ಲೈಕ್' ಕೊಡಲ್ಲ ಸರ್.. ಕಾಮೆಂಟೂ ಮಾಡಲ್ಲ..
ಸರ್, ನಂಗೆ ಯಾವ ಹುದ್ದೆ ಕೊಡ್ತೀರಾ ಸರ್?"
"ನಿಮ್ ಮೂತಿಗೆ ಏನ್ ಕೊಡೋದೂಂತ ಯೋಚ್ನೆ ಮಾಡಕ್ಕತ್ತೀನ್ರೀ,
ನಿಮ್ಗೇ ನಾಳೆ 'ಕಾಲ್' ಮಾಡ್ತಿನಿ"
'ಪಟಕ್ಕಂತ' ಕಟ್ ಮಾಡಿದ್ರು ಪಿಎಮ್ ಸಾಯೇಬ್ರೂ...!!

ಲೇಖಕರು

JAYARAM NAVAGRAMA

ಮ್ಯಾಂವ್sss

ನಾನು ಮೂಡಬಿದ್ರಿ ಸಮೀಪದ ಪುಚ್ಚಮೊಗರಿನಲ್ಲಿ 1966 ರಿಂದ 1968 ಈ ಇಸವಿಯ ಮಧ್ಯೆ ಜನಿಸಿರುವ ಬಗ್ಗೆ ದಟ್ಟ ವದಂತಿ ಇದೆ!
ನನ್ನ ತಂದೆ ಮತ್ತು ತಾಯಿ ಇಬ್ಬರೂ ಬಿಲ್ಲವರು.
ನನಗೆ ಈಗ ಸುಮಾರು 48 ವರ್ಷ ಆಗಿರಬಹುದು.
ಒಂದನೇ ತರಗತಿಯಿಂದ 7ನೇ ತರಗತಿ ತನಕ ನಮ್ಮ ಪುಚ್ಚಮೊಗರು ಗ್ರಾಮದ ನಿತ್ಯಾನಂದ ಎಯ್ಡೆಡ್ ಎಲಿಮೆಂಟರಿ ಶಾಲೆ
8 ಮತ್ತು 9ನೇ ತರಗತಿಯನ್ನು ಸರಕಾರಿ ಪ್ರೌಢಶಾಲೆ ಕೊನ್ನೆಪದವು. ಇಲ್ಲಿ ಕಲಿತೆನು.
ನಾನು ಎಂಟನೇ ತರಗತಿಯಲ್ಲಿರುವಾಗ ಶ್ರೀಮತಿ ಇಂದಿರಾ ಗಾಂಧಿಯವರ ಕೊಲೆ ಆಯಿತು. ಆಗ ಚಿತ್ರದುರ್ಗದ ಸುಜಾತ ಟೀಚರ್ ಬಾಯ್ತುಂಬಾ ಅತ್ತಿದ್ದರು.
ಹತ್ತು ವರುಷಗಳ ಕೆಳಗೆ ನನ್ನ ಊರನ್ನು ತ್ಯಜಿಸಿ
ಸತಿಸುತರ ಪ್ರೀತ್ಯರ್ಥಂ ನವಗ್ರಾಮಾಗಮನ ಮಾಡಿ
ನಾಯಿಯಂತೆ ವರ್ಕ್ ಮಾಡುತ್ತಾ ಜಾಯಿಂಟ್ ಪೆಯಿನ್ ಬ್ಯಾಕ್ ಪೆಯಿನ್ ಸ್ಕಿನ್ ಪ್ರಾಬ್ಲೆಮ್ ಇತ್ಯಾದಿ ಪ್ರಶಸ್ತಿ ಪಡೆಯುತ್ತಾ
ಫೇಸ್ಬುಕ್ ವಿಸ್ಮಯನಗರಿ ಗಳಲ್ಲಿ ಮಿಂಚುತ್ತಾ ಅಥವಾ ಹಾಗೆಂದು ಭ್ರಮಿಸುತ್ತಾ!
ಶ್ರೀಯುತ ಮೋಧೀಜಿಯವರ ಆಡಳಿತ ವೈಖರಿ ಏನೆಂದು ಅರಿಯಲಾರದೆ ಅರ್ಥೈಸಲಾರದೆ ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಟ್ಟುಕೊಂಡು ...
ತುಂಬಾ ದಿನದಿಂದ ಆಲೋಚಿಸುತ್ತಾ ಇರುವ ಕನ್ನಡದ ಕಂದ ನಾನು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.