Skip to main content

ಹಣ -ಭಾಗ1

ಬರೆದಿದ್ದುApril 25, 2015
noಅನಿಸಿಕೆ

ಹಣ ಎಂದರೆ ಅದು ನಮ್ಮ ಶ್ರಮದ ಬೆಲೆಯೇ ಹೊರತು ಬೇರಾವುದೇ ಮಾಯಾಲೋಕದಿಂದ ಇಳಿದು ಬಂದ ಮಾಯಾಮೃಗವಲ್ಲ. ವಸ್ತು ವಿನಿಮಯದ ಮದ್ಯವರ್ತಿಯಾಗಿ, ಕೊಡುಕೊಳ್ಳುವಿಕೆಯ ಕೊಂಡಿಯಾಗಿ, ಮಾನವ ಶ್ರಮದ ಪ್ರತಿಫಲವಾಗಿ, ಆಸ್ತಿಯ ಮೌಲ್ಯವಾಗಿ
ಹೀಗೆ ಬರುರೂಪದಲ್ಲಿ ಈ ಹಣವು ಚಲಾವಣೆಗೊಳ್ಳುತ್ತಿದೆ.
ಆದರೆ ರಾಷ್ಟ್ರದ ಅಭಿವೃದ್ಧಿಯಲ್ಲಿ ಮಹತ್ತರ ಸ್ಥಾನಮಾನ ಪಡೆದಿರುವ 'ಹಣ'ವು ಇಂದಿನ ತಂತ್ರಜ್ಞಾನದ ಉನ್ನತ ಶಿಖರದಲ್ಲು ಕೇವಲ ಪೇಪರ್ ನೋಟಾಗಿಯೆ ಉಳಿದಿರುವುದು ಬಲು ವಿಚಿತ್ರ.
ನೀವು ನಿಮ್ಮ ಮೊಬಯಿಲ್ ರಿಚಾರ್ಜ್ ಮಾಡಬೇಕಾದರೆ ನೀವು ಬಳಸುವ ಕರೆನ್ಸಿ ಡಿಜಿಟಲ್ ಕರೆನ್ಸಿ.
50 ರುಪಾಯಿ ಕೊಟ್ಟರೆ ಅಷ್ಟೇ ಮೌಲ್ಯದ ಕಾರ್ಡನ್ನು ಅಂಗಡಿಯಾತ ನೀಡುತ್ತಾನೆ. ಅದರಲ್ಲಿನ ನಂಬರ್ಗಳನ್ನು ತುಂಬಿ ಕೋರಿಕೆ ಕಲಿಸಿದರೆ ಐವತ್ತು ರುಪಾಯಿ ರಿಚಾರ್ಜಾಯಿತು! ಇನ್ನು ಮುಂದೆ ನೀವು ಮೊಬಯಿಲ್ನಲ್ಲಿ ವಿನಿಯೋಗಿಸುವ ಪ್ರತಿ ಪೈಸೆಯೂ ಡಿಜಿಟಲ್ ಹಣ! ಯಾರಲ್ಲಿ ಮಾತಾಡಿದಿರಿ? ಯಾರಿಗೆ ಸಂದೇಶ ಕಲಿಸಿದಿರಿ! ಅಂತರ್ಜಾಲದ ಹುಡುಕಾಟಕ್ಕೆ ಎಷ್ಟು ವಿನಿಯೋಗಿಸಿದಿರಿ, ಎಲ್ಲದಕ್ಕು ಪಕ್ಕಾ ಲೆಕ್ಕಾಚಾರವಿದೆ. ಪೈಟುಪೈ ದಾಖಲೆಯಿದೆ!
ನಾನೀಗ ಕೇಳುವ ಪ್ರಶ್ನೆ
ಇದೇ ರೀತಿಯಲ್ಲಿ ನಾವು ಇತರ ವ್ಯವಹಾರಗಳಿಗು ಡಿಜಿಟಲ್ ಹಣವನ್ನು ಯಾಕೆ ಉಪಯೋಗಿಸಬಾರದು?
ಇದು ಹೇಗೆ ಎಂಬುದನ್ನು ನನ್ನದೇ ಆದ ರೀತಿಯಲ್ಲಿ ವಿವರಿಸಲು ಪ್ರಯತ್ನಿಸುತ್ತೇನೆ ಭಾಗ ಎರಡರಲ್ಲಿ. ತಪ್ಪದೆ ಇದರ ಸಾಧಕ ಬಾಧಕಗಳ ಬಗ್ಗೆ ಬರೆಯುತ್ತೀರಲ್ಲ ಗೆಳೆಯರೇ?

ಲೇಖಕರು

JAYARAM NAVAGRAMA

ಮ್ಯಾಂವ್sss

ನಾನು ಮೂಡಬಿದ್ರಿ ಸಮೀಪದ ಪುಚ್ಚಮೊಗರಿನಲ್ಲಿ 1966 ರಿಂದ 1968 ಈ ಇಸವಿಯ ಮಧ್ಯೆ ಜನಿಸಿರುವ ಬಗ್ಗೆ ದಟ್ಟ ವದಂತಿ ಇದೆ!
ನನ್ನ ತಂದೆ ಮತ್ತು ತಾಯಿ ಇಬ್ಬರೂ ಬಿಲ್ಲವರು.
ನನಗೆ ಈಗ ಸುಮಾರು 48 ವರ್ಷ ಆಗಿರಬಹುದು.
ಒಂದನೇ ತರಗತಿಯಿಂದ 7ನೇ ತರಗತಿ ತನಕ ನಮ್ಮ ಪುಚ್ಚಮೊಗರು ಗ್ರಾಮದ ನಿತ್ಯಾನಂದ ಎಯ್ಡೆಡ್ ಎಲಿಮೆಂಟರಿ ಶಾಲೆ
8 ಮತ್ತು 9ನೇ ತರಗತಿಯನ್ನು ಸರಕಾರಿ ಪ್ರೌಢಶಾಲೆ ಕೊನ್ನೆಪದವು. ಇಲ್ಲಿ ಕಲಿತೆನು.
ನಾನು ಎಂಟನೇ ತರಗತಿಯಲ್ಲಿರುವಾಗ ಶ್ರೀಮತಿ ಇಂದಿರಾ ಗಾಂಧಿಯವರ ಕೊಲೆ ಆಯಿತು. ಆಗ ಚಿತ್ರದುರ್ಗದ ಸುಜಾತ ಟೀಚರ್ ಬಾಯ್ತುಂಬಾ ಅತ್ತಿದ್ದರು.
ಹತ್ತು ವರುಷಗಳ ಕೆಳಗೆ ನನ್ನ ಊರನ್ನು ತ್ಯಜಿಸಿ
ಸತಿಸುತರ ಪ್ರೀತ್ಯರ್ಥಂ ನವಗ್ರಾಮಾಗಮನ ಮಾಡಿ
ನಾಯಿಯಂತೆ ವರ್ಕ್ ಮಾಡುತ್ತಾ ಜಾಯಿಂಟ್ ಪೆಯಿನ್ ಬ್ಯಾಕ್ ಪೆಯಿನ್ ಸ್ಕಿನ್ ಪ್ರಾಬ್ಲೆಮ್ ಇತ್ಯಾದಿ ಪ್ರಶಸ್ತಿ ಪಡೆಯುತ್ತಾ
ಫೇಸ್ಬುಕ್ ವಿಸ್ಮಯನಗರಿ ಗಳಲ್ಲಿ ಮಿಂಚುತ್ತಾ ಅಥವಾ ಹಾಗೆಂದು ಭ್ರಮಿಸುತ್ತಾ!
ಶ್ರೀಯುತ ಮೋಧೀಜಿಯವರ ಆಡಳಿತ ವೈಖರಿ ಏನೆಂದು ಅರಿಯಲಾರದೆ ಅರ್ಥೈಸಲಾರದೆ ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಟ್ಟುಕೊಂಡು ...
ತುಂಬಾ ದಿನದಿಂದ ಆಲೋಚಿಸುತ್ತಾ ಇರುವ ಕನ್ನಡದ ಕಂದ ನಾನು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.