Skip to main content

ಬದಲಾಗಬೇಕಿದೆ ವ್ಯವಸ್ತೆ..!

ಇಂದ Praveen kumar
ಬರೆದಿದ್ದುApril 25, 2015
noಅನಿಸಿಕೆ

ಆತ್ಮೀಯ ವಿಸ್ಮಯ ನಗರಿಯ ಓದುಗರೆ  ವ್ಯವಸ್ತೆಯ ಬದಲಾವಣೆಯ ಬಗ್ಗೆ  ಹೀಗೊಂದು ಪತ್ರವನ್ನು ನಾನು ನಮ್ಮ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರಿಗೆ ಬರೆದಿರುತ್ತೇನೆ

ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿಯವರಿಗೆ ನಮಸ್ಕಾರಗಳು..ತಮ್ಮ ಆಡಳಿತ ಅದ್ಬುತವಾಗಿದೆ..! ನಿಮಗೆ ನಾವೇನೂ ಸಲಹೆ ಕೊಡಬೇಕಾದ ಅವಶ್ಯಕತೆನೆ ಇಲ್ಲ ಅನ್ಸುತ್ತೆ..! ಜನಸಾಮಾನ್ಯರ ನಾಡಿ ಮಿಡಿತ ನೀವು ಚೆನ್ನಾಗೆ ಅರಿತಿದ್ದಿರಿ..! ಆದರೂ ಭಾರತದ ಸತ್ಪ್ರಜೆಯಾದ ನಾನು ನಿಮಗೆ ಕೆಲವು ಸಲಹೆ ಕೊಡಲು ಬಯಸುತ್ತೇನೆ. ಭಾರತದ ಸಂವಿಧಾನದ ಪ್ರಕಾರ ಲೋಕಸಭೆಯಲ್ಲಿ ಅಥವ ವಿಧಾನಸಭೆಯಲ್ಲಿ ಅರ್ಧದಷ್ಟು ಸಂಖ್ಯಾಬಲವಿದ್ದರೆ (ಬಹುಮತವಿದ್ದರೆ) ಮಾತ್ರ ಸರ್ಕಾರ ರಚಿಸಲು ಸಾಧ್ಯವಿದೆ..! ಒಂದು ವೇಳೆ ಹೆಚ್ಚಿನ ಸಂಖ್ಯಾಬಲ ಹೊಂದಿದ್ದರೂ ಬಹುಮತ ಇಲ್ಲದಿದ್ದರೆ ಸರ್ಕಾರ ರಚಿಸಲು ಸಾಧ್ಯವಾಗುವುದಿಲ್ಲ..! ತಮಾಷೆ ಅಂದರೆ ಈ ಸೂತ್ರ ಯಾವುದೇ ಕ್ಷೇತ್ರದಲ್ಲಿ ಯಾವುದೇ ವಿಜಯಿ ಅಭ್ಯರ್ಥಿ ಪಡೆಯುವ ಓಟುಗಳಿಗೆ ಮಾತ್ರ ಅನ್ವಯವಾಗುವುದಿಲ್ಲ..!ಅಲ್ಲಿ ಮಾತ್ರ ಯಾರು ಹೆಚ್ಚಿನ ಸಂಖ್ಯೆಯಲ್ಲಿ ಮತಗಳನ್ನು ಪಡೆಯುತ್ತಾರೊ ಅವರೆ ಆಯ್ಕೆಯಾಗುತ್ತಾರೆ..! ಯಾಕಿ ತಾರತಮ್ಯ..? ಪ್ರಜಾಪ್ರಭುತ್ವದ ಆಶಯವೇ ಪ್ರತಿಯೊಬ್ಬ ಪ್ರಜೆಗೂ ಮನ್ನಣೆ ಕೊಡುವುದೇ ಆಗಿದೆ..ಆದರೆ ಈಗ ಇಲ್ಲಿ ನಡೆಯುತ್ತಿರುವುದು ಮಾತ್ರ ಅದಕ್ಕೆ ವಿರುದ್ದವಾಗಿದೆ..! ತಮ್ಮ ಸರ್ಕಾರ...... ವ್ಯವಸ್ತೆಯ ಬದಲಾವಣೆಗೆ ಹೆಚ್ಚು ಮಹತ್ವ ಕೊಡುತ್ತಿದೆ..! ಅಂಬೇಡ್ಕರ್ ಅವರು ಆಗಿನ ಕಾಲದಲ್ಲಿ ಸಂವಿಧಾನ ರಚಿಸಿದ್ದು ಸರಿಯೇ..ಆದರೆ ಈಗ ಕಾಲ ಸಾಕಷ್ಟು ಬದಲಾಗಿದೆ..!ಅವರು ಮಾಡಿದ ಕಾನೂನನ್ನು ಈಗ ದುರುಪಯೋಗ ಮಾಡಿಕೊಳ್ಳುವವರೆ ಹೆಚ್ಚಾಗಿದ್ದಾರೆ... ಚುನಾವಣೆಯಲ್ಲಿ ಕೆಲವೇ ಕೆಲವು ಸ್ಥಾನ ಗಳಿಸಿದರೂ ಮುಲಾಯಮ್,ಮಾಯವತಿ,ಪ್ರಕಾಶ್ ಕಾರಟ್,ಲಲ್ಲೂ,ಮಮತ,ಫಾರೂಕ್,ದೇವೇಗೌಡ,ನೀತಿಶ್ ಕುಮಾರ್,ಜಯಲಲಿತ,ಕರುಣಾನಿಧಿ,ಶರದ್ ಯಾದವ್.ಶರದ್ ಪವಾರ್ ಅವರಂತ ಅನಿಷ್ಟಗಳನ್ನೆಲ್ಲಾ ಸಹಿಸಿಕೊಳ್ಳಬೇಕಾದ ದುಸ್ತಿತಿ ನಮ್ಮೆಲ್ಲಾ ಭಾರತಿಯರದ್ದು..! ನೀವೇ ಹೇಳಿ ಇದು ಯಾವ ಕರ್ಮ..? ಆದ್ದರಿಂದ ತಾವು ದಯವಿಟ್ಟು ಭಾರತದ  ಸಂವಿಧಾನದಲ್ಲಿ ತಿದ್ದುಪಡಿ ಮಾಡಿ...ಯಾವ ಪಕ್ಷ ಹೆಚ್ಚು ಸಂಖ್ಯಾಬಲ ಹೊಂದಿರುತ್ತದೊ ಆ ಪಕ್ಷವೇ ಆಧಿಕಾರ ವಹಿಸಿಕೊಳ್ಳುವಂತಹ ಕಾನೂನನ್ನು ಜಾರಿ  ಮಾಡಿ. ಭಾರತದ ಭವಿಷ್ಯದ ಹೀತಾಸಕ್ತಿಯಿಂದ ಹೀಗೊಂದು ಸಂವಿಧಾನ ತಿದ್ದುಪಡಿ ಮಾಡುವುದು ಹೆಚ್ಚಿನ ಅವಶ್ಯವಾಗಿದೆ...ದಯವಿಟ್ಟು ತಾವು ಈ ನಿಟ್ಟಿನಲ್ಲಿ ಯೋಚಿಸಬೇಕಾಗಿ ನಾನು ನಿಮ್ಮನ್ನು ಕೇಳಿಕೊಳ್ಳುತ್ತಿದ್ದೇನೆ..!

ತಮ್ಮ ವಿಶ್ವಾಸಿ ಸಾಮಾನ್ಯ ಪ್ರಜೆ ಪ್ರವೀಣ್ ಕುಮಾರ್.

.

 

ಲೇಖಕರು

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.