Skip to main content

ದಿನಕ್ಕೊಂದು ಹಿತನುಡಿಗಳು..

ಬರೆದಿದ್ದುMarch 27, 2008
1ಅನಿಸಿಕೆ

[b]ಕತ್ತಲೆಯಿಂದ ದೂರವಾಗಿ ಜ್ನ್ಯಾನಜ್ಯೋತಿಯನ್ನು ಆರಿಸಿಕೋ.[/b]

ಮಾನವ ಜೀವನಕ್ಕೆ ಸಂಬಂಧಿಸಿದಂತೆ, ಅಜ್ನಾನವೇ ಕತ್ತಲು, ಜ್ನಾನವೇ ಬೆಳಕು! ಮಾನವ ಇತರ ಜೀವಿಗಳಿಂದ ಬೇರೆಯಾಗಿರುವುದೇ ಈ ಜ್ನ್ಯಾನದ ದೆಸೆಯಿಂದ. ಇತರ ಪ್ರಾಣಿಗಳ ಜ್ನ್ಯಾನ ಸ್ವಾಭಾವಿಕವಾದರೆ, ಮಾನವನ ಜ್ನ್ಯಾನ ಸ್ವಾಭಾವಿಕವೂ ಹೌದು, ನೈಮಿತ್ತಿಕವೂ ಹೌದು! ಏನು? ಏಕೆ? ಹೇಗೆ? ಮುಂತಾಗಿ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಜ್ನ್ಯಾನವನ್ನು ಪಡೆಯುವ ಸಾಮರ್ಥ್ಯ ಮಾನವನಿಗಿದೆ. ಬಳಸಿಕೊಂಡು ಮಾನವ, ಶ್ರೇಷ್ಟಮಾನವನಾಗಬಹುದು. ಅಜ್ನ್ಯಾನದಲ್ಲೇ ಮುಳುಗಿ, ಪಶು ಮತ್ತು ಅದಕ್ಕಿಂತ ಕೀಳುದಾನವನು ಆಗಬಹುದು. ಆನಂದ, ಸುಖ, ಶಾಂತಿಗಳು ಮಾನವರ, ಶ್ರೇಷ್ಠಮಾನವರ ಸ್ವತ್ತು! ಯಾವುದೀ ಜ್ನ್ಯಾನ? ತನ್ನಂತೆಯೇ ಇತರರು; ಒಳಗೂ ಹೊರಗೂ ಒಂದೇ ಇದ್ದಲ್ಲಿ ನಿರಾಳ; ಕಂಡವರ ಒಡವೆ ನನಗೆ ಬೇಡ; ಇಂದ್ರಿಯಗಳನ್ನು ಸಿಕ್ಕಾಪಟ್ಟೆ ಬಳಸಿದರೆ ರೋಗ; ಅನಗತ್ಯವಾಗಿ ಪದಾರ್ಥಗಳನ್ನು ಕೂಡಿಡುವುದಿಲ್ಲ; ಒಳಗೂ ಹೊರಗೂ ಶುದ್ಧವಾಗಿದ್ದಲ್ಲಿ ಮಾತ್ರ ಆನಂದಾನುಭವ; ತೃಪ್ತಿ. ಜೀವನದ ಏಳುಬೀಳುಗಳಿಗೆ ಸಮದೃಷ್ಟಿ. ಸತ್ಯವನ್ನು ಹುಡುಕುವ ಶ್ರದ್ದೆ; ಭಗವಂತ ಕೊಟ್ಟಿರುವುದಕ್ಕೆ ಕೃತಜ್ನ್ಯತೆ.

ಲೇಖಕರು

ಯೋಗೇಶ್

ನಿನಗೇಳದ ಮಾತೊಂದು ಮನದ(ನ)ಲ್ಲೆ ಉಳಿದಿದೆ.

ಅನಿಸಿಕೆಗಳು

_V_K_ ಗುರು, 06/19/2008 - 13:35

ಇದರ ಟೈಟಲ್ಲು "ದಿನಕ್ಕೊಂದು ಹಿತನುಡಿ" ಅಂತಾಗಿದ್ದರೆ ಸೂಕ್ತವಾಗಿರುತ್ತಿತ್ತು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.