Skip to main content

ದಿನಕ್ಕೊಂದು ಹಿತನುಡಿಗಳು

ಬರೆದಿದ್ದುMarch 26, 2008
noಅನಿಸಿಕೆ

[b]ಮುಪ್ಪಿಗೆ ಮುನ್ನ ಸಾಯದಿರು.[/b]

ಸಾಯುವುದು ಇದ್ದೇ ಇದೆ. ಯಾರೂ ಇಲ್ಲಿಯೇ ಶಾಶ್ವತವಾಗಿ ಇರಲು ಸಾಧ್ಯವಿಲ್ಲ. ಆದರೆ, ಯಾವಾಗ ಸಾಯಬೇಕು, ಸಾವನ್ನು ಹೇಗೆ ಎದುರಿಸಬೇಕು, ಸಾಯುವವರೆಗೂ ಏನು ಮಾಡಬೇಕು ಎಂಬುದೇ ಪ್ರಶ್ನೆ. ಈ ಶರೀರವೆಂಬ ಯಂತ್ರ ಬಳಸಿದಂತೆಲ್ಲ ದುರ್ಬಲವಾಗುತ್ತದೆ, ಕೆಟ್ಟದಾಗಿ ಬಳಸಿದರೆ ಬೇಗ ಹಾಳಾಗುತ್ತದೆ, ಸರಿಯಾಗಿ ಬಳಸಿದರೆ ದೀರ್ಘಕಾಲ ಬಾಳಿಕೆ ಬರುತ್ತದೆ. ಮುರುಕಲು ಯಂತ್ರವನ್ನು ಬಿಟ್ಟು, ಹೊಚ್ಚ ಹೊಸ ಯಂತ್ರವನ್ನು ಪಡೆಯುವುದೇ ಮರುಹುಟ್ಟು. ಇದಕ್ಕೆ ಸಹಾಯ ಸಾವಿನಿಂದ! ಹೆದುರುವುದಕ್ಕೇನಿದೆ?! ಸಾಯುವವರೆಗೂ ಯಂತ್ರವನ್ನು ಸರಿಯಾಗಿ, ದೀರ್ಘಕಾಲ ಬಳಸಿಕೊಂಡಿದ್ದರೆ ಮಾತ್ರ ಈ ಹೆದರಿಕೆ ಇರುವುದಿಲ್ಲ. ಈ ಸರಿ ಯಾವುದು? ಈ ಯಂತ್ರವನ್ನು ಬಳಸಿಕೊಳ್ಳುತ್ತಿರುವುದು ಒಳಗಿರುವ ಆತ್ಮ. ಉದ್ದೇಶ ತನ್ನ ಉದ್ಧಾರ, ಬಲವರ್ಧನೆ. ಆತ್ಮಬಲ ಹೆಚ್ಚಿದರೆ ಹೆದರಿಕೆಗಳು ಹರಿಯುತ್ತವೆ. ಜೀವನವಿರುವುದು ಮಜಾ ಉಡಾಯುಸುವುದಕ್ಕಾಗಿ ಎಂಬಂತೆ ವ್ಯವಹರಿಸಿದರೆ, ರೋಗಗಳು ಬರಬಹುದು, ಅಪಘಾತಗಳಾಗಬಹುದು, ಅಕಾಲ ಮುಪ್ಪೂ ಬರಬಹುದು. ಸಾರ್ಥಕ ಬಾಳು, ಸಕಾಲ ಮುಪ್ಪು, ಧೈರ್ಯದಿಂದ ಸಾವು ಇದು ನಮ್ಮ ಭಾಗ್ಯವಾಗಲಿ.

ಲೇಖಕರು

ಯೋಗೇಶ್

ನಿನಗೇಳದ ಮಾತೊಂದು ಮನದ(ನ)ಲ್ಲೆ ಉಳಿದಿದೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.