ವಿಧಿ ನೀನು ಬರಬೇಡ ಸನಿಹ
ವಿಧಿ ನೀನು ಬರಬೇಡ
ಇನ್ನೊಮ್ಮೆ ಸನಿಹ
ಗತಿ ಯಾರು ಇನ್ನಿಲ್ಲಿ
ನೀ ಹೋದ ಬಳಿಕ
ಜೀವದಾಸೆ ನಿನಗಿದೆ
ಅರಿವಾಯಿತು ನನಗೆ
ಆದರೇನು ಮಾಡಿತ್ತು
ಆ ಜೀವ ನಿನಗೆ
ನೀ ಹೋದ ಮರು ಕ್ಷಣವೆ
ಕುರುಡಾಯಿತು ಬಾಳು
ತಿಳಿಯುವುದೆ ನಿನಗಿಂದು
ಅವರಿವರ ಗೋಳು
ಕೊಟ್ಟವರಾರು ನಿನಗೆ ಲೇಖನಿಯ
ಬರೆಯಲು ವಿಧಿ ಬರಹ
ಅಳಿಸಲಾಗದು ಯಾರಿಂದ
ಯಾರ ಹಣೆ ಬರಹ
ಒಂದೊಮ್ಮೆ ನಿನಗಿಲ್ಲಿ
ಏನಿತ್ತು ಕೆಲಸ
ಬಂದೋಗು ನೀ ಒಮ್ಮೆ
ಕೆಡಿಸದಿರು ಮನಸ
ನೋವಿನಲು ನಲಿವಿನಲು
ಉಣಿಸದಿರು ವಿಷವ
ಯಾರ್ಯಾರ ಬಾಳಿನಲಿ
ಎಸೆಯದಿರು ಪಾಶವ
ಸಾಲುಗಳು
- 662 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ