
ಬೋಳು ಮರ
ಯಾರೋ ಕಡಿವರೆನ್ನ
ಕೈ ಕಾಲುಗಳನ್ನು
ನನಗಿದೆಯೆ ಬದುಕು?
ನನಗಿದೆಯೆ ಕನಸು?
ಎಂಬಾಸೆ ನನಗಿಲ್ಲ
ಕಾರಣ ನಾನೊಂದು
ಬೋಳು ಮರ
ಹೂವಿಲ್ಲ ಹಣ್ಣಿಲ್ಲ
ಮನುಜನೆ ನಿನಗೆ
ನೆರಳನ್ನು ಕೊಡಲೂ
ಅಶಕ್ತಳು ನಾ...
ನನಗಿಲ್ಲ ಬದುಕು
ನನಗಿಲ್ಲ ನಾಳೆಗಳು
ಕೊನೆಯುಸಿರು ನಿಂತುಬಿಡುವುದು ಇಂದೇ...
ಇರುವುದೊಂದಾಸೆ ನಾ
ಮರುಹುಟ್ಟು ಪಡೆಯಬೇಕು
ಬೆವೆತು ಬಂದವರಿಗೆ
ನೆರಳನ್ನು ಕೊಡಬೇಕು
ಮೃಗ ಪಕ್ಷಿಗಳಿಗೆಲ್ಲಾ
ಆಶ್ರಯವನ್ನೀಯಬೇಕು
ನಾ ಬದುಕಬೇಕು
ನೀ ನಗುವ ನಾಳೆಗಳ
ನೋಡಿ ನೋಡಿಯೇ ನಾ
ಮತ್ತೊಮ್ಮೆ ಸಾಯಬೇಕು
ಮತ್ತೆ ಹುಟ್ಟಿ ಮತ್ತೆ ಸತ್ತು
ನನ್ನಾಸೆ ಈಡೇರಬೇಕು....
-ಲತಾ
ಸಾಲುಗಳು
- Add new comment
- 830 views
ಅನಿಸಿಕೆಗಳು
ಪುನರಪಿ ಜನನಂ ಪುನರಪಿ ಮರಣಂ
ಪುನರಪಿ ಜನನಂ ಪುನರಪಿ ಮರಣಂ ಸೃಷ್ಠಿಯ ನಿಯಮ..., ತುಂಬ ಸೊಗಸಾಗಿ ಬರಿಯುತ್ತೀರಾ, ಮನಸು ಪಕ್ವವಾಗಲು ಅನುಭವ, ಜೊತೆಗೆ ಹೆಚ್ಚಿನ ಅಧ್ಯಾಯನ ಅವಶ್ಯಕ..., ಈ ನಿಟ್ಟಿನಲ್ಲಿ ಮುಂದುವರೆಯಿರಿ,
ಧನ್ಯವಾದಗಳು ಅಂಜಲಿ ಅವರೇ...
ಧನ್ಯವಾದಗಳು ಅಂಜಲಿ ಅವರೇ...