Skip to main content

ಮಹಾಭಾರತ ಹಾಗೂ ಕನ್ನಡ

ಬರೆದಿದ್ದುAugust 17, 2014
1ಅನಿಸಿಕೆ

ನಿನ್ನೆ ತಾನೆ ಕಿರುತೆರೆಯ ಒಂದು ಮಹಾನ್ ಧಾರಾವಾಹಿ ಆದ ಮಹಾಭಾರತ ಹಿಂದಿಯಲ್ಲಿ ಸ್ಟಾರ್ ಪ್ಲಸ್ ಚಾನೆಲ್ ಅಲ್ಲಿ ಮುಗಿಯಿತು. ಇದು ಆರಂಭವಾದಾಗಿನಿಂದ ನನಗೆ ಪ್ರತಿದಿನ ಕಛೇರಿಯಿಂದ ಬಂದು ಈ ಧಾರಾವಾಹಿ ನೋಡುವ ಕಾತುರ. ಎಷ್ಟೋ ದಿನ ಮಿಸ್ ಆಗಿದ್ದು ಇದೆ. ಆದಾಗ ಯೂ ಟ್ಯೂಬ್ ಅಲ್ಲಿ ವೀಕ್ಷಣೆ.

ಅತ್ಯದ್ಭುತ ಸೆಟ್ಟಿಂಗ್, ಆಡಂಭರದ ಅಲಂಕಾರ, ಕಣ್ಣು ಕೋರೈಸುವ ಗ್ರಾಫಿಕ್ಸ್, ಅತ್ಯುತ್ತಮ ಪಾತ್ರದ ಆಯ್ಕೆ ಅದರ ಜೊತೆಗೆ ಒಬ್ಬರಿಗಿಂತ ಇನ್ನೊಬ್ಬರ ವಾವ್ ಎನ್ನಿಸುವ ನಟನೆ. ಇದೆಲ್ಲರ ಜೊತೆಗೆ ಅಮೋಘ ಸಂಭಾಷಣೆ. ಇದು ಉತ್ಪ್ರೇಕ್ಷೆ ಖಂಡಿತ ಅಲ್ಲ. ಮಹಾಭಾರತ ಕಥೆಯನ್ನು ಇಷ್ಟು ಸುಂದರವಾಗಿ ಹೇಳಿದ ಟಿವಿ ಧಾರಾವಾಹಿ ಇನ್ನೊಂದಿಲ್ಲ!

ಯೂಟ್ಯೂಬ್ ಅಲ್ಲಿ ಈ ಧಾರಾವಾಹಿಯ ಎಲ್ಲ ಸಂಚಿಕೆ ಲಭ್ಯವಿದೆ. ಸಮಯ ಇದ್ದಾಗ ನೋಡಿ.

https://www.youtube.com/playlist?list=PLAM7IOZnvD2EP06JwMTbV5QMKNe032K6C

ಇದೇ ರೀತಿ ನನ್ನ ಮನಸ್ಸಿಗೆ ಮುದ ಕೊಡುವದು ಅಮರ ಚಿತ್ರ ಕಥೆಯ ಮಹಾಭಾರತ ಪುಸ್ತಕ.ನಾನು ಚಿಕ್ಕವನಿದ್ದಾಗ ಕನ್ನಡದಲ್ಲಿ ಕೆಲವು ಭಾಗ ಓದಿದ ನೆನಪು. ಆದರೆ ಈಗ ಇಂಗ್ಲೀಷ್ ಅಲ್ಲಿ ಓದುವ ಭಾಗ್ಯ.

ಈ ಮೇಲಿನ ಎರಡೂ ಮಹಾಭಾರತಕ್ಕೆ ಒಂದು ಸಾಮ್ಯತೆ ಇದೆ. ಎರಡೂ ಕನ್ನಡದಲ್ಲಿ ಲಭ್ಯವಿಲ್ಲ. ಟಿವಿ ಧಾರಾವಾಹಿ ನನ್ನ ತಮಿಳು, ಮಲೆಯಾಳಂ ಗೆಳೆಯರು ಅವರದೇ ಭಾಷೆಯಲ್ಲಿ ನೋಡುತ್ತಿದ್ದರೆ ನನಗೆ ಇದನ್ನು ಹಿಂದಿಯಲ್ಲಿ ನೋಡಬೇಕಾದ ಅನಿವಾರ್ಯತೆ.

ನಮ್ಮ ಡಬ್ಬಿಂಗ್ ವಿರೋಧ ಉಂಟು ಮಾಡಿರುವ ಕನ್ನಡಿಗರನ್ನು ಕನ್ನಡದಿಂದ ದೂರ ಮಾಡುವ ಪರಿಸ್ಠಿತಿ. ಹೇಗಿದ್ದರೂ ಕನ್ನಡಿಗರು ಬೇಕಿದ್ದರೆ ಹಿಂದಿಯಲ್ಲೇ ನೋಡಲಿ ಅನ್ನುವ ಮನೋಭಾವ.

ಅದೇ ರೀತಿ ಕನ್ನಡ ಬರಹಗಾರ ಶಿವರಾಮ್ ಕಾರಂತ ಅವರು ಹೆಚ್ಚಿನ ಅಮರ ಚಿತ್ರ ಕಥೆಯನ್ನು ಕನ್ನಡಕ್ಕೆ ಅನುವಾದಿಸಿದ್ದರು ಅಂತ ಓದಿದ ನೆನಪು. ಎಷ್ಟು ಸರಳ ಕನ್ನಡ. ಚಿಕ್ಕ ಮಕ್ಕಳಿಗೂ ಕಠಿಣ ಅನ್ನಿಸದ ಪದ ಬಳಕೆ. ಅವರಿಗೆ ನನ್ನ ಸಲಾಂ. ಆದರೆ ಇಂದು ವಿಪರ್ಯಾಸವೆಂದರೆ ಆ ಕನ್ನಡ ಆವೃತ್ತಿಗಳು ಈಗಿನ ಪೀಳಿಗೆ ಮಕ್ಕಳಿಗೆ ಓದಲು ಲಭ್ಯವಿಲ್ಲ.ಬಹುಶಃ ಹೆಚ್ಚಿನ ಆರ್ಥಿಕವಾಗಿ ಸಬಲ ಕನ್ನಡ ಮಕ್ಕಳೆಲ್ಲ ಆಂಗ್ಲ ಮಾಧ್ಯಮದಲ್ಲಿ ಕಲಿಯುತ್ತಿರುವದೂ ಸಹ ಇದಕ್ಕೆ ಕಾರಣ ಇರಬಹುದು. ಕಾಲಾಯ ತಸ್ಮೈ ನಮಃ

 

 

ನಿಮ್ಮ ಅನಿಸಿಕೆ ಏನು? ನೀವೂ ಈ ಮಹಾಭಾರತ ಟಿವಿಯಲ್ಲಿ ನೋಡಿದ್ದೀರಾ?  ಹೇಗನ್ನಿಸಿತು?

 

ಲೇಖಕರು

ರಾಜೇಶ ಹೆಗಡೆ

ಕಂಡದ್ದು ಕಂಡ ಹಾಗೆ

ಸಾಫ್ಟವೇರ್ ಇಂಜನಿಯರ್. ಕನ್ನಡದಲ್ಲಿ ಸಾಫ್ಟವೇರ್ ತಯಾರಿಸುವದು ನನ್ನ ಹವ್ಯಾಸ. ಆಗಾಗ ಲೇಖನ ಬರೀತಿನಿ ಆದ್ರೆ ಅದರಲ್ಲಿ ಪಳಗಿದವನಲ್ಲ.

ಅನಿಸಿಕೆಗಳು

Nanjunda Raju Raju ಶುಕ್ರ, 10/31/2014 - 19:42

ಮಾನ್ಯರೇ, ನೀವು ತಿಳಿಸಿರುವಂತೆ ಮಾಹಾಭಾರತ ನಿಜವಾಗಿಯೂ ಅದ್ಬುತ ಕತೆ. ಆದರೆ ಈ ಮೊದಲು ಡಿ.ಡಿ-೧ ರಲ್ಲಿ ಬರುತ್ತಿದ್ದ ರಮಾಯಣ ಮಹಾಭಾರತ ಈಗಲೂ ಮನಸ್ಸಿನಲ್ಲಿ ಅಚ್ಚೊತ್ತಿದಂತಿದೆ. ಆದರೆ ನೀವು ತಿಳಿಸಿದಂತೆ ನಮ್ಮ ನೆರೆಹೊರೆ ರಾಜ್ಯದವರಂತೆ ನಮ್ಮ ಭಾಷೆಯಲ್ಲಿ ನೋಡುವ ಭಾಗ್ಯ ನಮಗಿಲ್ಲ. ಹೇಗೆ ಹಿಂದಿಯನ್ನೇ ನೋಡಿ ಅಲ್ಪಸ್ವಲ್ಪ ಅರ್ಥಮಾಡಿಕೊಂಡಿದ್ದಾಯಿತು. 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.