ವೋಡಾಫೋನ್ ಅನ್ನು ಧಿಕ್ಕರಿಸಿ ಕನ್ನಡ ಭಾಷೆಗೆ ಬೆಂಬಲ ನೀಡಿ
ಸರಕಾರ ಜಾರಿಗೆ ತಂದ ಕನ್ನಡ ಭಾಷೆಗೆ ಬೋರ್ಡ್ ಗಳಲ್ಲಿ ಪ್ರಾಮುಖ್ಯತೆ ನೀಡುವ ನಿಯಮದ ವಿರುದ್ಧ ಕೋರ್ಟಿಗೆ ಹೋಗಿ ವೋಡಾಫೋನ್ ಕಂಪನಿ ಗೆದ್ದಿರಬಹುದು. ಆ ಗೆಲುವಿನ ನಗೆ ಕನ್ನಡ ಭಾಷೆಗೆ ಅದರ ಬೆಳವಣಿಗೆಗೆ ಖಂಡಿತವಾಗಿಯೂ ಪೂರಕವಲ್ಲ. ನೀವು ವೋಡಾಫೋನ್ ಸಿಮ್ ಬಳಸುತ್ತಿದ್ದರೆ ಅದನ್ನು ತಕ್ಷಣ ಬೇರೆ ನೆಟ್ ವರ್ಕ್ ಗೆ ಬದಲಾಯಿಸಿ ಕನ್ನಡಮ್ಮನ ಕಣ್ಣಿನಿಂದ ಬೀಳುತ್ತಿರುವ ಹನಿಯನ್ನು ಒರೆಸಲು ನೆರವಾಗಿ!
ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಆಧ್ಯತೆ ನೀಡಬೇಕಾದದ್ದು ಪ್ರತಿ ಕಂಪನಿಯ ಮೂಲ ಕರ್ತವ್ಯ.ಈ ಮಣ್ಣಿನ ಋಣ ತೀರಿಸಲು ಇಲ್ಲಿನ ಸಂಸ್ಕೃತಿ, ಭಾಷೆ ಗೌರವಿಸಬೇಕಾದದ್ದು ಅವುಗಳ ಆಧ್ಯತೆ ಆಗಿರಬೇಕು. ಆದರೆ ಕರ್ನಾಟಕದಲ್ಲಿ ಕನ್ನಡ ಭಾಷೆ ಮೆರೆಯಲು ನೆರವಾಗುವ ಹೊಸ ನಿಯಮದ ವಿರುದ್ಧ ಕೋರ್ಟ್ ಗೆ ಹೋಗಿ ಗೆದ್ದು ವೊಡಾಫೋನ್ ಕನ್ನಡಕ್ಕೆ ಅಪಮಾನಗೊಳಿಸಿದೆ.
ನಾವು ವೋಡಾಫೋನ್ ಮೊಬೈಲ್ ನೆಟವರ್ಕ್ ಬಳಸದೇ ಬಳಸುತ್ತಿದ್ದರೆ ಬೇರೆ ನೆಟ್ ವರ್ಕ್ ಗೆ ಬದಲಾಯಿಸಿ ಕನ್ನಡಕ್ಕೆ ಬೆಂಬಲಿಸೋಣ ಏನಂತೀರಾ? ನಿಮ್ಮ ಅನಿಸಿಕೆ ಏನು? ಕಮೆಂಟ್ ಹಾಕಿ.
ಸಾಲುಗಳು
- Add new comment
- 1004 views
ಅನಿಸಿಕೆಗಳು
ಇಲ್ಲಿನವರೆಗೆ ಇಂಥದೊಂದು ಕೇಸ್
ಇಲ್ಲಿನವರೆಗೆ ಇಂಥದೊಂದು ಕೇಸ್ ದಾಖಲಾಗಿರುವ ವಿಷಯವೇ ಗೊತ್ತಿರಲಿಲ್ಲ. ನಿಮ್ಮ ಲೇಖನ ನೋಡಿ ತಿಳಿಯಿತು. ನನ್ನ ಒಂದು ನಂಬರ್ ಕೂಡ ವೋಡೋಫೋನ್ ಇದೆ ಈ ವಿಷಯ ತಿಳಿದ ಮೇಲೂ ನಾನು ಅದೇ ಕಂಪನಿಯ ಸೇವೆಯನ್ನು ಬಳಸಿದರೆ ನನ್ನ ಹೆತ್ತ ತಾಯಿಗೆ ತಾಯಿನಾಡಿಗೆ ಮತ್ತು ನನ್ನತನಕ್ಕೆ ನಾನೇ ದ್ರೋಹ ಬಗೆದ ಹಾಗಾಗುತ್ತದೆ. ಆದ್ದರಿಂದ ಈ ಕೂಡಲೇ ಆ ನಂಬರನ್ನು ಬೇರೆ ಕಂಪನಿಯ ಸೇವೆಗೆ ಬದಲಾಯಿಸಿಕೊಳ್ಳುತ್ತಿದ್ದೇನೆ.
ವಿಷಯ ತಿಳಿಸಿದ್ದಕ್ಕಾಗಿ ಧನ್ಯವಾದಗಳು .