
ಹೇಗೆ ಹೇಳಲಿ
******ಹೇಗೆ ಹೇಳಲಿ ******
ಬಿಡದೆ ದಿನಾ ರಾತ್ರಿ ಕಾಡುವ ನಿನ್ನ ಕನಸುಗಳಿಗೆ ಏನು ಸಂತೈಸಲಿ
ಹೇಗೆ ಹೇಳಲಿ ನೀ ಕೊಂದಿರುವೆ ಅದಾಗಲೇ ನನ್ನ ಕನಸುಗಳನ್ನೆಂದು
ಸದ್ದು ಮಾಡದೆ ಮೆಲ್ಲನೆ ನುಸುಳುವ ನಿನ್ನ ನೆನಪುಗಳಿಗೆ ಏನು ತಿಳಿಸಲಿ
ಹೇಗೆ ಹೇಳಲಿ ನೀ ನಾಶ ಮಾಡಿರುವೆ ಅದಾಗಲೇ ನನ್ನ ನೆನಪುಗಳನ್ನೆಂದು
ತಿಳುವಳಿಕೆ ಇಲ್ಲದ ಕಂಗಳು ನನ್ನವು ಕಾಣದೂರಿನ ಒಡತಿಯ ಕಾದು ಕುಳಿತಿವೆ
ಹೇಗೆ ಹೇಳಲಿ ನಿನಗೆ ಪಟ್ಟಾಭಿಷೇಕವಾಗಿದೆ ನೀ ಇನ್ನೂ ಮೊಸದೂರಿನ ಒಡತಿ ಎಂದು
ಅಟ್ಟಾಡಿಸಿ ಪೀಡಿಸುತಿವೆ ಪ್ರೀತಿಸಿದ ಕ್ಷಣಗಳು ನಿನ್ನಲ್ಲಿ ಕಾರಣ ಕೇಳೆಂದು ನನ್ನ ತೊರೆಯಲು
ಹೇಳು ಹೇಗೆ ಹೇಳಲಿ ಈ ಲೋಕದಲಿ ಪ್ರೀತಿಸಲು ಮಾತ್ರವೇ ಕಾರಣಗಳಿವೆ ತೊರೆಯಲಲ್ಲವೆಂದು
-ಪ್ರವೀಣ ಎಸ್ ಕುಲಕರ್ಣಿ(ಚಿತ್ತಾಪೂರ)
ಸಾಲುಗಳು
- 682 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ