Skip to main content
ಇದು ಸರಿನಾ

ಶ್ಯಾಧಿ ಭಾಗ್ಯ ಸರಿನಾ ತಪ್ಪ ನನಗೆ ತಿಳಿದಂತೆ ನಾನು ಹೇಳಿದೀನಿ ನೀವುಗಳು ಎನ್ ಹೇಳುತ್ತೀರ ಸ್ನೇಹಿತರೆ.

ಇಂದ PraveenGowda
ಬರೆದಿದ್ದುNovember 28, 2013
noಅನಿಸಿಕೆ
ಶಾದಿ ಭಾಗ್ಯ - ಕಲ್ಯಾಣ ಭಾಗ್ಯ
ಇದೆಲ್ಲಾ ಬೇಕಿತ್ತಾ ?

ಜನರು ತೆರಿಗೆ ನೀಡುವುದರ ಮೂಲಕ, ಸರ್ಕಾರದ ಖಜಾನೆ ತುಂಬಿಸಿ,
ರಾಜಕಾರಣಿಗಳ ಮತ್ತು ಸರ್ಕಾರಿ ನೌಕರರ ಹೊಟ್ಟೆ ತುಂಬಿಸುತ್ತಿದ್ದಾರೆ.
ನಮ್ಮ ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಒಪ್ಪಿಕೊಂಡಿರುವುದರಿಂದ
ನಮ್ಮನ್ನು ಆಳುವ ರಾಜಕಾರಣಿಗಳನ್ನು ನಂಬಲೇಬೇಕು.
ಕೋಟಿಗಟ್ಟಲೇ ಹಣ ಸೋರಿಕೆ ಯಾಗುತ್ತಿದ್ದರೂ ಕಂಡು ಕಾಣದಂತೆ ಜಾನ ಕುರುಡರಂತೆ ಕಣ್ಮುಚ್ಚಿ ಕುಳಿತಿರಬೇಕಾದ ಪರಿಸ್ಥಿತಿ ನಿರ್ಮಿಸಿಕೊಂಡಿದ್ದೇವೆ.

ಹೋಗಲಿ ಜಾಣ ಕುರುಡರಿಗಾದ್ರೂ ಸ್ವಲ್ಪನಾದ್ರೂ ದಾರಿ ತೋರಿಸುತ್ತಿದ್ದರಾ ?
ಅಂದ್ರೆ
ಅದೂ ಇಲ್ಲ. ಚುನಾವಣೆಯಲ್ಲಿ ಓಟಿಗಾಗಿ ಆಸೆ ತೋರಿಸಿ, "1ರೂ. ಗೆ ಅಕ್ಕಿ ಕೊಟ್ಟೆ" ಅಂದ್ರೆ, ಹೋಗಲೀ


ಕರ್ನಾಟಕ ರಾಜ್ಯದಲ್ಲಿ ಎಲ್ಲರೂ ಒಂದೇ ಎಂಬ ಭಾವನೆಯಿಂದ ಸಹಬಾಳ್ವೆಯಿಂದ ಇದ್ದವರ
ಮನಸ್ಸುಗಳಲ್ಲಿ ಅಲ್ಪಸಂಖ್ಯಾತರಿಗಾಗಿ "ಶಾದಿ ಭಾಗ್ಯ" ಅನ್ನೋ ಯೋಜನೆಯನ್ನು ಜಾರಿಗೆ ತಂದು
ವೈಮನಸ್ಸು ಮೂಡಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ.

ಹುಮ್ಮಸ್ಸಿನಿಂದ ಘೋಷಿಸಿ, ಮತಬ್ಯಾಂಕ್ ಗಟ್ಟಿಮಾಡಿಕೊಳ್ಳುವ ಕನಸನ್ನು ಕಾಣುತ್ತಿದ್ದವರಿಗೆ
"ಶಾದಿಭಾಗ್ಯ" ಎಲ್ಲರಿಗೂ "ಕಲ್ಯಾಣ ಭಾಗ್ಯ"ವಾಗಲೀ ಅಂತ ಆಹೋರಾತ್ರಿ ಧರಣಿ ನಡೆಸುವವರು ಮಾಜಿ ಮುಖ್ಯಮಂತ್ರಿಗಳು.

ಯಾರ ಹಣ ಸ್ವಾಮಿ,
ಜನರು ಜಾಣ ಕುರುಡರಾಗಿದ್ದಾರೆ ನಿಜ. ಯಾರದ್ದೋ ಕಣ್ಣು ಒರೆಸಲು ಹೋಗಿ, ಇನ್ಯಾರೋ ರಾಜಕೀಯ ಲಾಭ ಪಡೆಯಲು, ರಾಜ್ಯವನ್ನು ಭಿಕಾರಿ ಮಾಡಲು ಹೊರಟಿರುವಂತಿದೆ.

ಇದೇ ನನ್ನ ಕೊನೆ ಚುನಾವಣೆ ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಎಂದು ಘೋಷಣೆ
ಮಾಡಿಕೊಂಡಿರುವ ಮುಖ್ಯಮಂತ್ರಿಗಳಿಗೆ ಮುಖ್ಯಮಂತ್ರಿಯ ಸ್ಥಾನ ಸಿಕ್ಕಿದೆ. ನಿರ್ಧಾರ
ಮಾಡಿಕೊಂಡ ಮೇಲೆ ಅಧಿಕಾರದಲ್ಲಿ ಇರುವಷ್ಟು ದಿನಗಳು ಕಠಿಣ ನಿರ್ಧಾರಗಳನ್ನು ಮಾಡಿ,

ರಾಜ್ಯದ ಬೊಕ್ಕಸ ತುಂಬಿಸಿ, ಸಾಲದಿಂದ ನರಳುತ್ತಿರುವ ಸರ್ಕಾರವನ್ನು ಸಾಲಮುಕ್ತವನ್ನಾಗಿಸಿ,
* ದಿನೇ ದಿನೇ ಆಹಾರ ಪದಾರ್ಥಗಳ ಬೆಲೆಯಿಂದ ತತ್ತರಿಸುತ್ತಿರುವ ಜನರಿಗೆ ಹೆಗಲು ನೀಡಿ,
* ತಾ ಬೆಳೆದ ಬೆಳೆಗೆ ಯೋಗ್ಯ ಬೆಲೆ ಸಿಗುತ್ತಿಲ್ಲ ಅಂತ ಬೀದಿಗೆ ಬಂದಿರುವ ಕೃಷಿಕನಿಗೆ ನೆರವಾಗಿ,
* ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಮಂದಗತಿಯಲ್ಲಿ ಸಾಗುತ್ತಿರುವ ವ್ಯಾಪಾರಿಗೆ ಜೀವ ನೀಡಿ,
* ನೀರಾವರಿ ಸೌಲಭ್ಯಗಳಿಗೆ ಒತ್ತು ನೀಡಿ, ಜೀವ ಜಲ ರಕ್ಷಿಸುವ ರಕ್ಷಕರಾಗಿ,
* ಸಾಮಾನ್ಯ ಜನ ಓಡಾಡುವ ರಸ್ತೆಗಳ ಬಗ್ಗೆ ಗಮನ ಹರಿಸಿ,

ಜನ ನೆಮ್ಮದಿಯಿಂದ ಜೀವನ ನಡೆಸಲು ಬೇಕಾದ ಮೂಲಭೂತ ಸೌಕರ್ಯಗಳನ್ನು ಪೂರೈಸುವ
ಮಹತ್ಕಾರ್ಯಗಳನ್ನು ಮಾಡಿ ಶಾಶ್ವತವಾಗಿ ಹೆಸರು ಗಳಿಸಬೇಕಾದುದು ಈಗಿನ ಮುಖ್ಯಮಂತ್ರಿಗಳ ಕರ್ತವ್ಯ.

ಅನ್ನ ಭಾಗ್ಯದಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗಿ, ಅಭಿವೃದ್ಧಿ ಕುಂಠಿತವಾಗುತ್ತಿದೆ.

(ಅನ್ನ ಭಾಗ್ಯ ಬರುವುದಕ್ಕೂ ಮುಂಚೆನೂ ಜನ ಜೀವನ ಮಾಡುತ್ತಿದ್ದರು. ಈಗಲೂ
ಜೀವಿಸುತ್ತಿದ್ದಾರೆ. ಅನ್ನ ಭಾಗ್ಯದಿಂದ ಪ್ರಯೋಜನ ಪಡೆಯುವವರು ಮೂರನೆಯವರು ಅದು
ಎಲ್ಲರಿಗೂ ತಿಳಿದಿರುವ ಸತ್ಯ)

ಶಾದಿ ಭಾಗ್ಯ ಯೋಜನೆ ಜಾರಿಗೆ ತರುವುದರಿಂದ
ಸರ್ಕಾರ ಹಾಸಿಗೆ ಮಂಚ ಬೀರು ಕೊಡಲಿಲ್ಲ ಅಂದ್ರೆ ಮದುವೆ ನಿಲ್ಲುವುದಿಲ್ಲ. ಅವರವರ ಹೊಟ್ಟೆ
ಪಾಡಿನ ಹೋರಾಟ ನಡದೇ ನಡೆಯುತ್ತದೆ.
ಯಾರಿಗೆ ನಷ್ಟ ?

ಸಾಮಾನ್ಯ ಜನರಿಗೆ ತಾನೇ ?
ಆಗ ಎಲ್ಲರಿಗೂ ಶಾದಿ ಭಾಗ್ಯ ವಿಸ್ತರಣೆ ಮಾಡುತ್ತೇವೆ ಅಂತ ಹೇಳುತ್ತಿದ್ದ ಮುಖ್ಯಮಂತ್ರಿಗಳಿಗೆ
ಈಗ ಜ್ಞಾನೋದಯವಾಗಿರುವಂತಿದೆ. ಅಲ್ಪಸಂಖ್ಯಾತರಿಗೆ ಮಾತ್ರವೇ ಅಂತ "ಶಾದಿ ಭಾಗ್ಯ" ಅನ್ನೋ ಉವಾಚ.

ಮಾಜಿ ಮುಖ್ಯಮಂತ್ರಿಗಳಿಗೆ ರಾಜ್ಯದ ಎಲ್ಲಾ ವರ್ಗದವರಿಗೂ "ಶಾದಿ ಭಾಗ್ಯ" ವಿಸ್ತರಣೆ ಯಾಗಲೇ ಬೇಕು ಅನ್ನೋ ಹೋರಾಟ.

ಇವರುಗಳ ಹೋರಾಟ ಸ್ವಪ್ರತಿಷ್ಠೆ ಸ್ವಾರ್ಥಗಳಿಗೆ
ಜನರ ತೆರಿಗೆ ಹಣ ಪೋಲಾಗುವ ಬಗ್ಗೆ ಯೋಚಿಸುತ್ತಿದ್ದಾರೆಯೇ ?

ಅನ್ನ ಭಾಗ್ಯದಿಂದ ಮೂರನೇ, ಮಧ್ಯವರ್ತಿಗಳಿಗೆ ಅನುಕೂಲ ಮಾಡಿಕೊಟ್ಟಂತೆ
"ಶಾದಿ ಭಾಗ್ಯ"ದಿಂದ ಸರ್ಕಾರಿ ಇಲಾಖೆಯ ನೌಕರರಿಗೆ ಲಂಚ (ಭಿಕ್ಷೆ) ಹೆಚ್ಚಿಸುವ ಮಾರ್ಗ.

ಒಂದೊಂದು ಮೊಹಲ್ಲಾಗಳಲ್ಲಿ ಶಾದಿ ಭಾಗ್ಯ ಮಾಡಿಸಿಕೊಡಲು ಮಧ್ಯವರ್ತಿಗಳ ಹುಟ್ಟಾಕುವಿಕೆಗೆ
ದಾರಿ ಮಾಡಿಕೊಡುವುದೇ ವಿನಃ ಇದರಿಂದ ಪೂರ್ಣ ಪ್ರಮಾಣದಲ್ಲಿ ಯಾರಿಗೂ ಲಾಭವಿಲ್ಲ.

ಸರ್ಕಾರ ವಿಶ್ವಬ್ಯಾಂಕಿನಿಂದ ಸಾಲ ತಂದು ಆಡಳಿತ ನಡೆಸುವುದನ್ನು ಬಿಡುವುದೂ ಇಲ್ಲ.

ನಾವು ಸಹ ರಾಜಕಾರಣಿಗಳಿಗೆ ಬಹುಪರಾಕ್ ಹಾಕಿಕೊಂಡು
ಇವರು ನಮ್ಮವರು ಅನ್ನೋ ಅಭಿಮಾನದಿಂದ ತಪ್ಪುಗಳನ್ನು ಸಮರ್ಥಿಸಿಕೊಳ್ಳುತ್ತಲೇ ಇದ್ದೇವೆ.
ಭ್ರಷ್ಟಾಚಾರದ ವಿರುದ್ಧ ದನಿ ಎತ್ತುತ್ತಿರುವ ಶ್ರೀ ಎಸ್. ಆರ್. ಹಿರೇಮಠರ ಕಾರ್ಯ ವೈಖರಿಯ ಬಗ್ಗೆ ಮಾತಾಡುವುದಿಲ್ಲ.

ನಮ್ಮ ತೆರಿಗೆ ಹಣವನ್ನು ಲೂಟಿ ಮಾಡುತ್ತಿದ್ದರೂ ನಮಗೇಕೆ ಅನ್ನೋ ಉಸಾಬರಿಯಿಂದ ದಿನಗಳನ್ನು ದೂಡುತ್ತಿದ್ದೇವೆ.

ಇಂತಹ ಪ್ರಜೆಗಳು ನಾವುಗಳು ಇರುವುದರಿಂದಲೇ ಮಹಾರಾಜರಾಗಿ ಮೆರೆಯುತ್ತಿದ್ದಾರೆ.

ಇದು ಇಂದಿನ ಭಾರತ.

ಲೇಖಕರು

PraveenGowda

-

ನಾನು ಎನು ಹಾಗೂ ಹೇಗೆ ಎಂದು ನೀವು ಹೇಳಬೇಕು ಸ್ನೇಹಿತರೇ......?

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.