Skip to main content

ಸುಮ್ಮನೆ ಹಾರಿಹೋದೆ ಮೇಲೆ !!!

ಬರೆದಿದ್ದುAugust 13, 2013
noಅನಿಸಿಕೆ

 

ನನ್ನ  ಎದೆಯಾಳ

ಪ್ರೀತಿ ತಳಪಾಯ !!!

 

ಉಸಿರು ತುಂಬಿರೋ ರೀತಿ

ಆವರಿಸಿದೆ ಪ್ರೀತಿ !!!

 

ತುಂತುರು ಮಳೆಗಾಲ 

ಕಿಚ್ಚು  ಎಬ್ಬಿಸಿತಲ್ಲಾ ,

ತಣ್ಣನೆ  ಚಳಿಗಾಲ

ಬೆಚ್ಚನೆ  ಹೊದಿಕೆಇಲ್ಲಾ!!!

 

ಒಂದೇ  ಒಂದು  ಕುಡಿನೋಟ

ಮೋಡಿ  ಮಾಡಿತಲ್ಲಾ  , 

ನಿಷ್ಕಲ್ಮಶ ತುಂಟಾಟ

ಹುಚ್ಚು  ಹಿಡಿಸಿತಲ್ಲಾ  !!!

 

ಬದುಕುವುದಾದರೂ ಹೇಗೆ ನಾನು

ಪ್ರೀತಿ ಇಲ್ಲದ ಮೇಲೆ ?

ತರಗೆಲೆಯಂತಾದೆ, ನೀನಿಲ್ಲದೆ ನಾನು

ಸುಮ್ಮನೆ ಹಾರಿಹೋದೆ ಮೇಲೆ !!!

ಲೇಖಕರು

HarshaPrabhakara

ಮಿಂಚುಹುಳ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.