Skip to main content
Forums

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ರಾಜೇಶ ಹೆಗಡೆ ಮಂಗಳ, 08/13/2013 - 23:07

ಹಲವು ಕಡೆ ಭಾಷಾ ಮಾಧ್ಯಮದ ವಿಚಾರ ಬಂದಾಗ ನಾವು ಸರಕಾರಿ ಶಾಲೆಯ ಮೇಲೆ ದೂರುತ್ತೇವೆ, ಆದರೆ ಖಾಸಗಿ ಶಾಲೆಯ ಬಗ್ಗೆ ಯಾಕೆ ದೂರುವದಿಲ್ಲ?


ಅಲ್ಲಿ ಕನ್ನಡಕ್ಕೆ ಯಾಕೆ ಮಹತ್ವ ನೀಡುವದಿಲ್ಲ ಎಂದು ಪ್ರಶ್ನಿಸುವದಿಲ್ಲ? ಸರಕಾರ ಕನ್ನಡ ಮಾಧ್ಯಮವನ್ನು ನಾಲ್ಕನೆಯ ತರಗತಿಯ ವರೆಗೆ ಕಡ್ಡಾಯ ಮಾಡ ಹೊರಟಾಗ ಖಾಸಗಿ ಶಾಲೆಗಳು, ಪಾಲಕರು ಕೋರ್ಟ್ ಮೆಟ್ಟಲೇರಿದರು. ಆಗ ಯಾಕೆ ಜನ ದ್ವನಿ ಎತ್ತಲಿಲ್ಲ? ಸರಕಾರವನ್ನು ಬೆಂಬಲಿಸಲಿಲ್ಲ. ಹೀಗೆ ಹಲವು ಪ್ರಶ್ನೆಗಳು ನನ್ನ ತಲೆ ತಿನ್ನುತ್ತವೆ.


ಇಂದು ಇಂಗ್ಲೀಷ್ ಕರ್ನಾಟಕದಲ್ಲಿ ಅನಿವಾರ್ಯ ಭಾಷೆಯಾಗಿದೆ. ಈ ಮುಂದಿನ ಕೆಲಸ ಇಂಗ್ಲೀಷ್ ಜ್ಞಾನ ಇಲ್ಲದೇ ಕರ್ನಾಟಕದಲ್ಲಿ ಮಾಡಬಹುದೇ? ವಿಚಾರ ಮಾಡಿ.



  • ಉನ್ನತ ಶಿಕ್ಷಣ

  • ಬ್ಯಾಂಕ್, ವಿಮೆ ಕೆಲಸ

  • ಅಂಚೆ ಕಚೇರಿ ಕೆಲಸ

  • ದೊಡ್ಡ ಆಸ್ಪತ್ರೆ, ಕಂಪನಿಗಳಲ್ಲಿ ಕೆಲಸ

  • ಅಕೌಂಟ್ ಕೆಲ್ಸ, ಹೊಟೆಲ್ ಮೆನು,

  • ಎಟಿಎಂ, ಮೊಬೈಲ್, ಸ್ಮಾರ್ಟ್ ಫೋನು, ಟ್ಯಾಬ್ಲೆಟ್, ಕಂಪ್ಯೂಟರ್ ಬಳಕೆ

  • ಹಲವು ವಿಷಯಗಳಲ್ಲಿ ಆಳವಾದ ಪ್ರಾಪಂಚಿಕ ಜ್ಞಾನ

  • ಹೊಟ್ಟೆ ಪಾಡು

ಹಣ ಇರುವವರು ಆರಾಮವಾಗಿ ಖಾಸಗಿ ಶಾಲೆಗೆ ಕಳುಹಿಸಿ ಇಂಗ್ಲೀಷ್ ಜ್ಞಾನಿಯನ್ನಾಗಿ ಮಕ್ಕಳನ್ನು ಮಾಡುತ್ತಾರೆ. ಬಡವರು? ಸರಕಾರಿ ಶಾಲೆಯಲ್ಲಿ ಇಂಗ್ಲೀಷ್ ಸರಿಯಾಗಿ ಕಲಿಸದೇ ಹೋದರೆ ಮೇಲೆ ತಿಳಿಸಿದ ಯಾವುದೇ ರಂಗದಲ್ಲಿ ತಿಳುವಳಿಕೆ ಇಲ್ಲದೇ ಹೊಟ್ಟೆ ಪಾಡಿಗಾಗಿ ಒದ್ದಾಡುತ್ತಾ ಇರುತ್ತಾರೆ. ಕಾಲಕ್ರಮೇಣ ಇಂಗ್ಲೀಷ್ ಸರಿಯಾಗಿ ಬಲ್ಲವರಿಂದ ಮತ್ತಷ್ಟು ತುಳಿತಕ್ಕೂ ಒಳಗಾದ್ರೂ ಆಶ್ಚರ್ಯ ಇಲ್ಲ.


ಕನ್ನಡವನ್ನು ಈ ಮೇಲೆ ತಿಳಿಸಿದ ರಂಗದಲ್ಲಿ ಬೆಳೆಯುವಂತೆ ಮಾಡಿ ಹೊಟ್ಟೆ ಪಾಡಿನ ಭಾಷೆ ಮಾಡಿದರೂ ಈ ಸಮಸ್ಯೆಗೆ ಪರಿಹಾರ ಸಿಗಬಹುದು. ಆದರೆ ಕನ್ನಡದಲ್ಲಿ ಸಾಹಿತ್ಯಕ್ಕೆ ಹೊರತು ಪಡಿಸಿ ಉಳಿದ ರಂಗದ ಪ್ರಯತ್ನಕ್ಕೆ ಬೆಂಬಲ ಸಿಗುವದು ಅನುಮಾನ. ಅದು ನಮ್ಮ ದುರ್ದೈವ.


ಇದೆಲ್ಲ ಗಮನಿಸಿದಾಗ ಇಂಗ್ಲೀಷ್ ಅನ್ನು ಸರಕಾರಿ ಶಾಲೆಯಲ್ಲಿ ಮುಖ್ಯವಾದ ಒಂದು ಭಾಷೆಯಾಗಿ ಕಲಿಸುವದೇ ಪರಿಹಾರ.  

ಇಂದು ನಾವುಗಳು ಎಂಬಿಬಿಸ್ ಇಂಜಿಯರಿಂಗ್ ಗಳತಂಹ  ಉನ್ನತ ಶಿಕ್ಷಣವನ್ನು ಸಹ  ಕನ್ನಡ ಮಾದ್ಯಮದಲ್ಲಿ ಮಾಡ ಬಹುದಾಗಿದೆ ಮಾತೃಭಾಷ ಶಿಕ್ಷಣ್ಕ್ಕೆ ಒತ್ತು ಕೊಡವುತ್ತಿಲ್ಲ ನಮ್ಮ ಸರ್ಕಾರ. 

ರಾಜೇಶ ಹೆಗಡೆ ಶನಿ, 08/17/2013 - 07:54

ಮಾತೃ ಭಾಷೆ ಶಿಕ್ಷಣಕ್ಕೆ ಸರಕಾರ ಅಲ್ಲ ಜನ ಒತ್ತು ಕೊಡಬೇಕು! ಸರಕಾರ ಅಲ್ಲ. ಇಂದು ಕನ್ನಡ ಮಾಧ್ಯಮಕ್ಕೆ ಸೇರಿಸಲು ಜನ ಇಷ್ಟಪಡುತ್ತಿಲ್ಲ. ವಸ್ತು ಸ್ಥಿತಿ ಹಾಗಿರುವಾಗ ಕನ್ನಡ ಹೇರಲು ಸರಕಾರದಿಂದ ಸಾಧ್ಯವಿಲ್ಲ.


ಇನ್ನು ಉನ್ನತ ಶಿಕ್ಷಣ ಕನ್ನಡದಲ್ಲಿ ಕಲಿತರೆ ಕೆಲಸ ಸಿಗಬಹುದೇ? ಇದು ಯಕ್ಷ ಪ್ರಶ್ನೆ. ಇಂದು ಬಿ.ಎ, ಕನ್ನಡದಲ್ಲಿ ಬಿ.ಕಾಂ ಕಲಿತವರಿಗೆ ಕೆಲಸ ಸುಲಭವಾಗಿ ಸಿಗುತ್ತದೆಯೇ?


ಹಾಗೆ ಸರಕಾರ ಕನ್ನಡ ಇಂಜನಿಯರಿಂಗ್, ಮೆಡಿಕಲ್ ತೆಗೆದರೆ ನಂತರ ಉತ್ತಮ ಹಣ ಸಿಗುವ ಕೆಲ್ಸ ಸಿಗದಿದ್ದಾಗ ಮತ್ತೆ ಸರಕಾರವನ್ನು ಬಯ್ಯುತ್ತೇವೆ.


ಇಂದು ಕನ್ನಡ ಕಾಲ್ ಸೆಂಟರ್ ಅಲ್ಲಿ ಕೆಲಸಕ್ಕೆ  ೬-೧೦ ಸಾವಿರ ಸಿಕ್ಕರೆ ಇಂಗ್ಲೀಷ್ ಕಾಲ್ ಸೆಂಟರ್ ಗೆ ೧೫-೨೫ ಸಾವಿರ ಸಂಬಳ ಸಿಗುತ್ತದೆ. ಕನ್ನಡವನ್ನು ಬೆಳೆಸಲು ಜನರ ಬಳಿ ಸಾವಿರ ಅವಕಾಶಗಳಿವೆ. ನಾವು ಮಾಡುತ್ತಿಲ್ಲ ಅಷ್ಟೇ.

ಪಿಸುಮಾತು ಮಂಗಳ, 08/27/2013 - 21:35

ಸರ್ಕಾರಿ ಶಾಲೆಗಳಲ್ಲಿ ಒಂದು ವಿಷಯವಾಗಿ ಇಂಗ್ಲೀಷನ್ನು ಕಲಿಸುವುದು ಇಂದಿನ ದಿನಕ್ಕೆ ಅಗತ್ಯವಾಗಿದೆ. ಆದರೆ ಅದನ್ನೇ ಮಾಧ್ಯಮ ಮಾಡುವುದು ಸರಿಯಲ್ಲ. ಹಾಗೆಯೆ ಈಗ ಇರುವ ಹಿಂದಿಯನ್ನು ತೆಗೆದು ಹಾಕಬೇಕು. ಬೇಕಾದಲ್ಲಿ ಪ್ರೌಢಶಾಲೆಯಿಂದ ಒಂದು ಐಚ್ಚಿಕ ವಿಷಯವಾಗಿ ಹಿಂದಿಯನ್ನು ನೀಡಲಿ.

  • 1688 views