ನಿನ್ನಿಂದಲೇ ನಿನ್ನಿಂದಲೇ..!!
ಫೇಸ್ಬುಕ್ ಅಕೌಂಟಲ್ಲಿ
ಜಾಸ್ತಿ ಹುಡುಗಿಯರನ್ನ
ಕಲೆ ಹಾಕಿಕೊಂಡಿದ್ದ ಪತಿ .
ಈ ಗುಟ್ಟು ತಿಳಿದು
ಮುನಿಸಿಕೊಂಡಿದ್ದಳು ಸತಿ .
ನುಣುಚಿಕೊಳ್ಳಲು
ಒಂದೊಂದೇ ಬಾಣ ಬಿಡುತ್ತಾ ,
ಪ್ರಿಯೇ , ನಮ್ಮದು
ಫೇಸ್ಬುಕ್ ನಿಂದ,
ಫೇಸ್ಬುಕ್ ಗಾಗಿ ,
ಫೇಸ್ಬುಕ್ಕಿಗೋಸ್ಕರ
ಹುಟ್ಟಿರುವುದಲ್ಲ ಸಂಬಂಧ,
ಎಲ್ಲರ ಸಮ್ಮುಖದಲ್ಲಿ
ಅಗ್ನಿಸಾಕ್ಷಿಯಾಗಿ ಮಾಡಿಕೊಂಡ
ಏಳೇಳು ಜನ್ಮದ ಅನುಬಂಧ.
ಕೋಪ ಹಾಗೆ ಇರುವುದು ಕಂಡು ,
ಪ್ರಿಯೇ ನಿನಗಿಂತ
ಹೆಚ್ಚಿನದೆನಲ್ಲಾ ನನ್ನ
ಫೇಸ್ಬುಕ್ accountu,
(ಮೆಲ್ಲ ಧ್ವನಿಯಲ್ಲಿ)ಬೇಕಾದರೆ
ನಿನಗೋಸ್ಕರ ಮಾಡುವೆ
fb ಅಕೌಂಟ್ deletu !!
ಹೆಂಡತಿಯ ಕೋಪ
ಹಾವಿನ ದ್ವೇಷಕ್ಕಿಂತ ದೊಡ್ಡದು
ಎಷ್ಟು ಪ್ರಯತ್ನಿಸಿದರೂ
ಅಷ್ಟು ಸುಲಭವಾಗಿ ಕರಗದು.
ಸಲಹೆಗಾಗಿ Google ಅಂಕಲ್
ಮೊರೆ ಹೋದ,
"ಎಲ್ಲರೆದರು ಹೆಂಡತಿಯನ್ನು ಮೆಚ್ಚಬೇಕು "
ಎನ್ನುವ ಸಲಹೆ ಪಡೆದ.
"ಹೆಂಡತಿಯೇ ನನ್ನ ಸರ್ವಸ್ವ "
ಅಂತ fb ಯಲ್ಲಿ status ಹಾಕಿದ
ಮರೆಯದೆ ಹೆಂಡತಿಯನ್ನ Tag ಮಾಡಿದ.
ಹತ್ತು ನಿಮಿಷದಲ್ಲಿ
ಇಪ್ಪತ್ತು LIKE ಆಯ್ತು
ಮೂವತ್ತು comments ಬಂತು
ಕೊನೆಗೆ "Love u so much"
ಅಂತ ಹೆಂಡತಿದೊಂದಿತ್ತು.
ಭಾವುಕನಾಗಿ ಹಾಡಿದ... ,
ಸಮಸ್ಯೆ ನಿನ್ನಿಂದಲೇ
ಪರಿಹಾರವು ನಿನ್ನಿಂದಲೇ
facebook ,
ಅಗಾಧ ನಿನ್ನ ಮಹಿಮೆಯ ಕಡಲು
ಅಗಾಧ ನಿನ್ನ ಮಹಿಮೆಯ ಕಡಲು.
ಖುಷಿತಾಳಲಾರದೆ ...,
"ಪ್ರತಿ ಸಮಸ್ಯೆಗೆ
ಇಲ್ಲಿ ಪರಿಹಾರವಿದೆ,
Google ಸಲಹೆ ಪಡೆಯಿರಿ
ನಿಮ್ಮ ಸಂಸಾರ ಸುಖವಾಗಿರುತ್ತದೆ"
ಅಂತ fb status ಬದಲಾಯಿಸಿದ .
ಮತ್ತೆ ಹತ್ತು ನಿಮಿಷದಲ್ಲಿ
ಇಪ್ಪತ್ತು LIKE ಆಯ್ತು
ಮೂವತ್ತು comments ಬಂತು
ಎಲ್ಲವು Google ನ ಬಣ್ಣಿಸಿದಂತಿತ್ತು
ಸಾಲುಗಳು
- Add new comment
- 475 views
ಅನಿಸಿಕೆಗಳು
Nice
Nice