Skip to main content

ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆದ ತಕ್ಷಣ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸುವ ದೃಷ್ಟಿಯಿಂದ ೧ರೂಗೆ ೩೦ ಕೆಜಿ ಅಕ್ಕಿ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ನೀಡಲು ಮನಸ್ಸು ಮಾಡಿದ್ದಾರೆ. ಹೆಚ್ಚಿನ ಪ್ರಮಾಣದ ಅಕ್ಕಿ ಕಾಳಸಂತೆಯಲ್ಲಿ ತಿರುಗಿ ಮಾರಾಟವಾಗಲಿದೆ. ಈ ಕ್ರಮ ಕರ್ನಾಟಕದಲ್ಲಿ ಸೋಮಾರಿತನ ಹೆಚ್ಚಿಸಬಹುದೇ? ಇದು ತೂಕಡಿಸುತ್ತಾ ಇರುವವನಿಗೆ ಹಾಸಿಗೆ ಕೊಟ್ಟಂತಲ್ಲವೇ?


ನಿಮ್ಮ ಅನಿಸಿಕೆ ತಿಳಿಸಿ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

K.M.Vishwanath ಶುಕ್ರ, 05/17/2013 - 12:07

ಸಾದ್ಯವು ಇದೆ ಅಸಾದ್ಯವು ಇದೆ ಇದೆಲ್ಲ ಚುನಾವಣೆ ಗಿಮಿಕ್ ಅನಿಸುತ್ತೆ

prasadbshetty ಶುಕ್ರ, 05/17/2013 - 16:03

ಸಾಧ್ಯ..ಇಲ್ಲ.."

ರಾಜೇಶ ಹೆಗಡೆ ಶನಿ, 05/18/2013 - 08:26

ಅನಿಸಿಕೆಗೆ ಧನ್ಯವಾದಗಳು ವಿಶ್ವನಾಥ್ ಹಾಗೂ ಪ್ರಸಾದ್ ಅವರೇ,

ಇದು ಖಂಡಿತ ಚುನಾವಣೆ ಗಿಮಿಕ್ ಸಂಶಯವಿಲ್ಲ. ಅಧಿಕಾರ ಇಲ್ಲದಿದ್ದಾಗ ಕಪ್ಪು ಹಣ ಬಳಸಿ ಹಣ, ಹೆಂಡದ ಹೊಳೆ ಹರಿಸಿದರೆ ಅಧಿಕಾರಕ್ಕೆ ಬಂದಾಗ ಈ ರೀತಿ ಮತದಾರನನ್ನು ಆಸೆ ತೋರಿಸಿ ಮೂರ್ಖನನ್ನಾಗಿ ಮಾಡುವದು ರಾಜಕಾರಣಿಗಳ ಹುಟ್ಟುಗುಣ.

prasadbshetty ಶನಿ, 05/18/2013 - 10:13

ಆದರೂ ಬದವರ ಪಾಲಿಗೆ ವರದಾನ...ಅನ್ನಿಸುವುದಿಲ್ಲವೇ...?

d d jogur ಶುಕ್ರ, 05/24/2013 - 11:33

ಅಸ್ಟಕ್ಕೂ ಬಿಪಿಎಲ್ ಕಾರ್ಡ್ ಹೊಂದಿರುವವರು ಯಾರು ? ಅವರು ನಿಜಕ್ಕೂ ಬಡವರೇ ?

prabhu ಧ, 06/05/2013 - 20:56

ನಿಜ ರಾಜೇಶ್ ಅವ್ರೆ,ಬರಿ ಸೋಮಾರಿತನ ಅಷ್ಟೇ ಅಲ್ಲ..ಕೂಲಿಗೆ ಆಳಿಲ್ಲದೆ ಹೊಲದ ಒಡೆಯರು ಬಾಯ್ ಬಾಯ್ ಬಡ್ಕೋಬೇಕು!,ಹೊಲ ಒಕ್ಕಲಾಗಿಸಲು ಸಾಧ್ಯವಾಗ್ದೆ ಹಾಳಾಗಿ ಬೀದಿಗೆ ಬೀಳ್ಬೇಕು.ಇಲ್ಲ ಸರಕಾರಿ ಅಕ್ಕಿ ಸಿಗೋವಷ್ಟ ಕಾಲ ತಿಂದು ಸೋಮಾರಿಯಾಗ್ ಬದುಕ್ಬೇಕು.ಇನ್ನೂ ಏನಾಗುತ್ತೋ ಗೊತ್ತಿಲ್ಲ.

Nanjunda Raju Raju ಶುಕ್ರ, 06/07/2013 - 18:45

ಮಾನ್ಯರೇ, ಬಡವರಿಗೆ ಕೂಲಿ ಸಿಗುವುದೇ ಕಷ್ಟವಾಗಿದೆ. ಸಿಕ್ಕಿದರೂ ಈಗಿನ ದುಬಾರಿ ಬೆಲೆಯಲ್ಲಿ ಅಕ್ಕಿ ಇರಲಿ ರಾಗಿ ಅಥವಾ ಗೋಧಿ ಕೊೞುವುದು ಕಷ್ಟವಾಗಿದೆ. ಒಂದು ರೂಪಾಯಿಗೆ ಅಕ್ಕಿ ನೀಡಿದರೆ ಬಡವರು ಶ್ರೀಮಂತರಾಗುವುದಿಲ್ಲ. ಒಂದೊತ್ತಿಗೆ ಊಟವನ್ನಾದರೂ ಮಾಡುತ್ತಾರೆ. ಇಲ್ಲಿ ಮುಖ್ಯವಾಗಿ ಕೇಳುವುದೆಂದರೆ, ಸರಕಾರ ಮನಸ್ಸು ಮಾಡಿ ದುಡಿಯುವ ಕೈಗೆ ಕೆಲಸ ಕೊಡಲಿ. ಬಡವರಿಗೆ ಒಂದೊತ್ತಿಗಾದರೂ ಊಟಸಿಗುವಂತಾಗಲಿ. ಇಲ್ಲವಾದರೆ, ವಯಸ್ಕರು ದುಶ್ಚಟಕ್ಕೆ ಬಲಿಯಾಗುತ್ತಾರೆ. ಯುವಕ ಯುವತಿಯರು ಅಡ್ಡದಾರಿ ಹಿಡಿಯುತ್ತಾರೆ. ಅಲ್ಲವೇ?

ರಾಹುಲ ಧ, 06/19/2013 - 12:47

ಹೌದು. ಖಂಡಿತವಾಗಿ ಸೋಮಾರಿತನ ಹೆಚ್ಚಿಸುತ್ತೆ.

ವಾಸಕ್ಕೆ ಆಶ್ರಯ ಮನೆ ಇರಲು

ನಶೆಗೆ ಅಗ್ಗದ ಮದ್ಯವಿರಲು।

ರೂಪಾಯಿಗೊಂದು ಕೆಜಿ ಅಕ್ಕಿ ಸಿಗುತಿರಲು

ದುಡಿತಕ್ಕೆ ತುಡಿತವೇಕೆಂದ ಸಿದ್ದರಾಮಯ್ಯ॥

 

SHIVARAJ YALIGAR ಸೋಮ, 07/15/2013 - 14:15

ಸರಕಾರವು ಕೌಶಲ್ಯಾಧಾರಿತ ಕಾರ್ಯಕ್ರಮಗಳು, ಯೋಜನೆಗಳನ್ನು ಹಾಗೂ ಗ್ರಾಮೀಣ ನಿರುದ್ಯೋಗಿಗಳಿಗೆ ಉದ್ಯೋಗಾಧಾರಿತ ಕಾರ್ಯಕ್ರಮಗಳನ್ನು ರೂಪಿಸಲಿ.

ಪಿಸುಮಾತು ಮಂಗಳ, 08/27/2013 - 21:42

ಕಡಿಮೆ ದರದಲ್ಲಿ ಅಕ್ಕಿ ಕೊಟ್ಟರೆ ಸೋಮಾರಿತನ ಹೆಚ್ಚುವುದಾದರೆ ಕಡಿಮೆ ದರದಲ್ಲಿ ಅಡುಗೆ ಅನಿಲ, ಕುಡಿವ ನೀರು, ವಿದ್ಯುತ್, ರೈಲ್ವೇ ಟಿಕೇಟು ಹಾಗೇ ಇನ್ನೂ ಕೆಲವನ್ನು ನೀಡುತ್ತಿರುವಾಗ ಮಧ್ಯಮ ವರ್ಗದವರೂ, ಶ್ರೀಮಂತರೂ ಯಾಕೆ ಸೋಮಾರಿಗಳಾಗಿಲ್ಲ ? ಸೋಮಾರಿತನ ಬಡವರಿಗೆ ಮಾತ್ರವೇ ಬರುತ್ತಾ ? ಅವರು ಸೋಮಾರಿಗಳಾಗಳಾಗುತ್ತಾರೆ ಎಂದು ಹಣೆಪಟ್ಟಿ ಕಟ್ಟಲು ನೀವ್ಯಾರು ? ಹಾಗಿದ್ದರೆ ನೀವೆಲ್ಲಾ ಯಾಕೆ ಸರ್ಕಾರದ ಸವಲತ್ತು ಬಳಸುತ್ತಿದ್ದೀರಿ ? ಬಡವರು ದುಡಿದಾಗ ದುಡಿಸಿಕೊಂಡವರಿಗೆ ಲಾಭ ಬಂದರೆ ಅದರಲ್ಲಿ ದುಡಿದವರಿಗೆ ಪಾಲು ಕೊಡುತ್ತೀರಾ ? 

  • 2268 views