Skip to main content

ಪ್ಯಾಟೆ ಐಕ್ಳಿಗೆ ಯಿಲೆಕ್ಸನ್ನು ಕ್ಯಾಂಡಿಡೇಟು ನಮುಸ್ಕಾರ

ಇಂದ hdrevanna
ಬರೆದಿದ್ದುApril 21, 2013
noಅನಿಸಿಕೆ

ನಮುಸ್ಕಾರ.

ಕರ್ನಾಟಕ ದೇಸ್ದಾಗೆ ಯಮ್ಮೆಲ್ಲೆ ಯಿಲೆಕ್ಸನ್ನು ಬಂದೈತೆ.ನಿಮುಗೆಲ್ಲ ವೋಟೈತೆ.ಕಂಪ್ಯೂಟರಾಗೆ ದಿನಾಯಿಡಿ ಫೇಸ್ಬುಕ್ಕು ವತ್ಕಂಡು ಕುಂತ್ಕಳದು ಸಾಕಾಗಾಣಿಲ್ಲ ಅಂತ್ಕಂಡು ಎಂಡ್ರೇಡು ಅಂತ ಸೆಲ್ಫೋನು ಬ್ಯಾರೆ ಅದುಮಿಕ್ಕಂಡು ಕುಂತಿರ್ತೀರ. ಲೈಫೇ ಇಂಪಾರ್ಟಂಟು ಆಗಿಬುಟ್ಟು ನಿಮುಗೆಲ್ಲ ಬದುಕಕ್ಕೆ ಟೈಮೆ ಇರಾಕಿಲ್ಲ. ಅದುರ ಮಧ್ಯದಾಗೆ ಟೈಮು ಮಾಡಿಕ್ಕಂಡು ನಮ್ ಪಕ್ಸುಕ್ಕೆ ವಂದು ವೋಟು ವತ್ತಿದ್ರೆ, ಗೆದ್ದು ಬಂದೋ ಅಂತಿಟ್ಕೋ... ನಿಮ್ಮೆಸ್ರು ಯೇಳಿಕಂಡೆ ಇನ್ನೈದು ವರ್ಸ ವಸಿ ಕಾಸು ಯಣಿಸ್ಕತೀವಿ.

ಇನ್ನ ಬೆಂಗಳೂರಲ್ಲಿ ಯಿದ್ಕಂಡು "ಮ್ಯಾನ್ ಹೈ ಕಾಂಟ್ ಟೇಕ್ ಧಿಸ್ ಯಿಲೇಜ್ ಫೋಕ್ಸ್ ಯಾಂಡ್ ದ್ಯಾರ್ ಯಿಲೆಕ್ಸನ್ " ಅಂತಾಗಿ ವೋಟು ಆಕಕ್ಕೆ ಆಗದೇಯಿಲ್ಲ ಅಂತ ಆದ್ರೆ ಕೆಳುಗೆ ನಂ ಬಾಲಕ್ರುಸ್ಣಂದು, ಸಾಬಿ ಜಮೀರಂದು, ಅಗ್ನಿ ಶ್ರೂಧರಂದು ನಂಬರು ಕೊಟ್ಟೀವ್ನಿ. ಒಂದು ಲೈಟಾಗಿ ಯಸ್ರು, ವಾರ್ಡು ಮತ್ತೆ " ಕಾಂಟ್ ವೋಟ್ " ಅಂತ ಯಸ್ಸೆಮ್ಮೆಸ್ಸು ಮಾಡಿದ್ರೆ ನಿಮ್ಮೆಸ್ರಾಗ್ನಾಗೇ ಆದ್ರೆ ನಾವಾರೂ ವಂದು ವೋಟು ಮಾಡಂವಾ ಅಂತ ಡಿಸೈಡು ಮಾಡಿಕ್ಯಂಡಿದೀವಿ. ಯಂಗಾರೂ ನೀವಾರೂ ಯಿಲೆಕ್ಸನ್ನಿಗೆ ಬರ್ಬೇಕು ಇಲ್ಲಂದ್ರೆ ನಾವಾರೂ ನಿಂ ಸೈಡಿಂದ ವಂದು ವೋಟು ವತ್ತ್ಲೇ ಬೇಕು. ಆಮೇಲೆ ನೀವ್ಗೋಳೆಲ್ಲ ' ಅಣ್ಣಾ ಅಜಾರೆ ಸಿಂದಾಬಾದ್,... ಯಡ್ಯೂರಪ್ಪ ಮುರುದಾಬಾದ್ " ಅಂತ ಗಲಾಟೆ ಮಾಡ್ತಿದ್ರೆ ಅಲಲಲ ಎರಡು ಲೀಟ್ರು ನಂದಿವ್ನಿ ಆಲು ಕುಡಿದಂಗಾಯ್ತದೆ.

ಯಿನ್ನ ನಂ ಕ್ಸೇತ್ರುಕ್ಕೆ ಬಂದ್ರೆ "ಇವುಂಗೆ ಲೇಡೀಜು ಆಗಿ ಬರಾಂಗಿಲ್ಲ!" ಅಂತ ಅಂದ್ಕಂಡು ಯಣ್ಣು ಮಕ್ಕುಳ್ನ ತಗಂಬಂದು ತಗಂಬಂದು ನಿಲ್ಲುಸವ್ರೆ. ಅಲ್ಲಲೇ ಲೇಡೀಜು ನನುಕೆ ಆಗಿ ಬರಾಂಗಿಲ್ಲ ಅಂದ್ರೆ ಯಟ್ಲೀಸ್ಟ್ ನಮ್ ಪಕ್ಸುದ್ದು ಚಿನ್ನೆ "ಲೇಡೀಜ್ ಕ್ಯಾರಿಯಿಂಗ್ ಗ್ರಾಜ್ " ಅಂಗೇ ಬಿಡುತಿದ್ನೇನಪ? ಯಿನ್ನು ನನ್ ಜೀವ್ಮಾನಾ ಪೂರ್ತಿ ನಮ್ಮವ್ವ (ಲೇಡೀಜ್) ನನ್ನುನ್ನ ಯತ್ತಿ ನಮ್ಮಪ್ಪುನ್ನ ಮುಂದೆ ನಿಲ್ಲುಸ್ದೇಯಿದ್ರೆ ನಾನೆಲ್ಲಿ ಯಿರ್ತಿದ್ನಪ? ಲೇಡಿಜು ನಂ ಕುಮ್ಮಿಗೆ ಸ್ವಲ್ಪಾನೇ ಕ್ಲೋಜು ಇರಬೈದು. ಆದ್ರೆ ನಂಗೂನು ಮಿಡಲ್ ಸ್ಕೂಲಲ್ಲಿ ಲೇಡೀಜ್ ಅತ್ರ ಮಾತಾಡಿ ಗೊತ್ತೈತೆ ಬುಧ್ಧಿ. ನನ್ನ ಅಂಗೆ ಗಮಾರ ಅಂತ ತಿಳುಕೊಂಡ್ರೋ ಢಮಾರ್.

ನಂಗೆಲ್ಲ ಗೊತ್ತು. ಇವೆಲ್ಲ ನ್ಯೂಜು ಯಲ್ಲಿಂದ ಬತ್ತೈತೆ ಅಂತ. "ಕುಮ್ಮಿ ರಾಜಿಕಾನ ಮದುವ್ಯಾದ್ನಲ್ಲೋ ಸೀಯೆಮ್ಮಾಗ್ಬಿಟ್ಟ. ನಾನೂ ಸೀಯೆಮ್ಮಾಗ್ಬೇಕು ಅಂದ್ರೆ ಯಾರ್ನಾರೂ ಸಿಲೀಮದವುರನ್ನ ಎರುಡ್ನೇ ಮದುವ್ಯಾಗ್ಬೇಕ ? " ಅಂತ ನಂ ದತ್ತುನ್ನ ಯಿಂಗೇ ಸಜೆಶನ್ನು ಕೇಳಿದ್ನಪ. ಆ ಬಡ್ಡೆತ್ತು ವೋಗಿ ನಮ್ಮೆಂಡ್ರು, ನಮ್ಮವ್ವಂಗೆ ಯೋಳಿಬಿಡೋದ? ಆ ಮ್ಯಾಕೆ ಅವ್ರಿಬ್ರು ರೂಮಲ್ಲಾಕ್ಕಂಡು ನನ್ನ ವಡುದ್ರು ಅಂತ ಬ್ಯಾರೆ ಅಸೀಸುಳು ಯೋಳವ್ನೆ. ಉದ್ದಾರಾಗಾನಾ ಯಿವ್ನು? ಅಲಲೇ ಬಾಗ್ಲು ಜಪ್ಕಂಡು ಮೂತಿ ಊದ್ಕಂಡಿದ್ರೆ, "ಯಂಡ್ರು ಬಾರ್ಸಿದ್ದು ನೋಡ್ಲ!!" ಅನ್ನೋವ್ರಗೆಲ್ಲ ಯೋನಪ್ಪ ಮಾಡ್ಲಿ ನಾನು? ಕ್ವಾಪಾ ನ್ಯತ್ತಿಗೇರಿ ದತ್ತುನ್ನ ಯಿಡ್ದು ಯರಡು ಬಿಡಾಣಾ ಅಂತ ವೋದ್ರೆ "ಲೋ ಯಸ್ಸೆಲ್ಸಿ ಫೇಲ್! ಮುಟ್ಟಿದ್ರೆ ಸರಿಯಿರಲ್ಲ ನೋಡು. ಮತ್ತೆ ಯೋಳ್ಬೇಕ ಯಂಡ್ರು ಅವ್ವುಂಗೆ?" ಅಂತ ಯದ್ರುಸ್ತವ್ನೆ !!!! " "ಬ್ರಾಮಿನ್ಸು... ಯಲ್ಲಕ್ಕೂ ಇವ್ನೇ ಬೇಕು. ನಮ್ಮಪ್ಪುಂಗೆ ಕಿಡ್ನಿ ಫೇಲಾದ್ರುನೂವೆ ಇವ್ನೇ ಕ್ವಡ್ಬೇಕು ... ಅಲ್ಲಿ ತಂಕ ಬದಿಕ್ಕಂಡಿರಲಿ ಬಿಡು" ಅಂತ ಸುಮ್ನಾದೆ.

ನಂಗೆ ಲೇಡೀಜು ಯೇನೂ ಪ್ರಾಬ್ಲೆಮ್ ಯಿಲ್ಲಪ್ಪಾ.ಅವೆಲ್ಲ ಯೀ ದತ್ತುಂದೆ ಕಿತಾಪತಿ. ಸೆಂಟ್ರಲ್ಲಿ ಮಿನಿಸ್ಟರಾಗ್ಬೇಕು ಅಂತ ನಂ ಕುಮ್ಮಿ ಸೋನಿಯಗಾಂದಿತಾವ ಓಡಾಡ್ಕಂಡಿದ್ನಲ... ಆಗ ನಂ ವಳೇನರಸೀಪುರಕ್ಕೇನಾದ್ರೂ ಮಿನಿಸ್ಟ್ರುಗಿರಿ ಸಿಗ್ಬೋದ ಅಂತ ನೋಡಿಕ್ಕಂಡು ನಂ ಸಿದ್ರಾಮುಣ್ಣನ್ನ ಸ್ಯಕ್ರೆಟರಿ ಅತ್ರ ಯೋಳಿ ಸಿದ್ರಾಮುಣ್ಣಾನೇ ಸೋನಿಯಗಾಂದಿತಾವ ನನ್ನುನ್ನ ಕಳೀಸ್ಕೊಟ್ಟಿದ್ದ. "ಆಯಮ್ಮಂದು ಫಾರಿನ್ನು ಇಂಗ್ಲೀಸು, ಗ್ವತ್ತಾಗಲ್ಲಲೇ" ಅಂತ ಈ ದತ್ತುನ್ನ ಕರಕಂಡೋಗಿದ್ದೆ. ಆ ಸೋನಿಯಮ್ಮನಂತೂ ಕಾಯ್ಸಿ ಕಾಯ್ಸಿ ನಂಗೆ ಅಂಗೇ ನಿದ್ರೆ ಬಂದುಬಿಡ್ತು. ಆಯಮ್ಮ ಬರುತಿದ್ದಂಗೇ ಯದ್ದೆ... ಅದ್ಬಿಡಿ. ಅವುಳು ಬಂದವ್ಳೂ "ಇವೇನ್ಲ ತಲೀಗೆ ಅದ್ಯಾವೆಣ್ಣೆನ್ಲ ಸುರುಕಂಡ್ಬಂದವ್ನೆ?" ಅಂತ ವೋಪನಿಂಗು ಮಾಡಿದ್ಲಪ. ನಂ ದತ್ತ ಅದುನ್ನೇ ಯಿಡಿಕಂಡು "ಯಳೆಣ್ಣೆ, ವೊನ್ನೆಣ್ಣೆ, ಸುರುಗಿಯೆಣ್ಣೆ" ಅಂತ ಸುರು ಅಚ್ಕಂಡ ಕನಪ್ಪ. ಇತ್ಲಾಗೆ "ಯಚ್ಗೆ ಇದ್ರೆ ವಳೇನರಸೀಪುರಕ್ಕೆ ವಂದು ಮಿನಿಸ್ಟರ್ ಕೇಳ್ಲಾ" ಅಂತ ಯಷ್ಟು ತಿವುದ್ರೂನು ಕಿವೀಮೇಲೆ ಆಕ್ಕಂಡಿಲ್ಲ ಕನಪ್ಪ ದತ್ತು. ಯೀ ಯಣ್ಣು ಮಕ್ಕುಳ್ನ ಕಂಡ್ರೆ ಇವುನ್ನ ನಾಲಿಗೀ ಮೂರು ಫೂಟು ಉದ್ದಾಗಿ ಬಿಡ್ತದೆ. "ಆ ಯಣ್ಣೇ ಅಂಗೆ. ಈ ಯಣ್ಣೇ ಇಂಗೆ, ರೇವೆಣ್ಣೆ ವಾಸ್ನೆ.ಇಶ್ಟೇ! ಯಿಂಗೇ ಬಂದಿದ್ವಿ, ಮುಂದೆ ಬರಾಕಿಲ್ಲ" ಅಂತೇಳಿ ಮುಗಿಸ್ಕಂಡು ನನ್ನೂ ಎಳಕ್ಕಂಡು ಎದ್ಬಂದಿಟ್ಟ. "ಲೋ ಯಾಕ್ಲ ವಳೇನರಸೀಪುರದ್ದು ಮಿನಿಶ್ಟ್ರಿ ಯೋಳಿಲ್ಲ " ಅಂತ ಕೇಳಿದ್ರೆ " ಲೋ ಯಸ್ಸೆಲ್ಸಿ ಫೇಲ್, ತಲೆಗ್ಯಾಕ್ಲ ಯಣ್ಣೆ ಸುರುಕ್ಕಂಡು ಬಂದೆ? ದೆಲ್ಲಿ ಚಳೀಗೆ ನೀನು ತಲೆಗಾಕಿದ ಯಣ್ಣೆ ಗಟ್ಟಿಯಾಗಿ ಡಾಲ್ಡ ಆಗೈತೆ. ತಲೇಗ್ಯಾಕಿವ್ನು ಡಾಲ್ಡ ಆಕ್ಕಂಡವ್ನೆ ಅಂತ ಸೋನಿಯಾಗೆ ಎಕ್ಸ್ ಪ್ಲೇನು ಮಾಡಕ್ಕೆ ಸಾಕಾಗಿ ವೋಯ್ತು. ಇನ್ನೇನರ ನಿನುಗೆ ಯೋಳ್ಬೇಕು ಅಂದ್ರೆ ನಿಮ್ಮಪ್ಪುನ್ನ ಕರ್ಕಂಡು ಬಂದು ಯೋಳು. ನನ್ ಪ್ಲೇನು ತಿಕೀಟು ತಾ ಇತ್ಲಗೆ " ಅಂತೇಳಿ ಪ್ಲೇನು ತಿಕೀಟು ಕಿತ್ಕಂಡು ಯದ್ದು ವೋಗಿ ಬಿಡೋದೆ? ಮತ್ತೆ ಆಮ್ಯಾಕೆ ಯಲ್ಲರ್ಗೂ ವೋಗಿ ಯೋಳವ್ನೆ "ಸ್ತ್ರೀದೋಸ ಐತೆ ಎಸ್ಸೆಸ್ಸಿಗೆ. ಸೋನಿಯ ನೋಡನ ಅಂತ ವೋದ್ರೆ ಹಚಾ ಅಂತ ವೋಡ್ಸ್ಬಿಟ್ಲಪ..". "ಸ್ತ್ರೀದೋಸ ಐತೆ ಎಸ್ಸೆಸ್ಸಿಗೆ" ಅಂತನೆ.

ಅಲ ಎಲ್ಲಾದುಕ್ಕುನೂವೆ "ಸ್ತ್ರೀದೋಸ ಐತೆ" "ಸ್ತ್ರೀದೋಸ ಐತೆ" ಅಂದ್ರೆ ಯೋನು ಮಾಡನ? ಯಡ್ಡೀ ಸೋಭಂಗೆ ನನ್ನ ಕಂಡ್ರೆ ಅಗಾಂಗಿಲ್ಲ. ಅದುಕ್ಕೆ ಯೀಸ್ವರಪ್ಪುನ್ನ ಕಂಡ್ರೂ ಆಗಾಂಗಿಲ್ಲ. ನಮ್ಮವ್ವುನ್ನ ಕಂಡ್ರೂ ಆಗಾಂಗಿಲ್ಲ. ಅಂದ್ರೆ ಎಲ್ಲಾವಕ್ಕೂ ಸ್ತ್ರಿದೋಸ ಐತಾ? ವೋಗ್ಲಪ ಪೂಜ ಗಾಂದಿ ಪಕ್ಸುಕ್ಕೆ ನಾನು ಕರ್ಕಂಡು ಬಂದಿದ್ನ? ಆಗ್ಲೇ ನಂ ಕುಮ್ಮಿಗೆ ಯೋಳಿವ್ನಿ. "ಗಾಂದಿ ಅಂತ ಯಸ್ರಿದ್ರೆ ಸೋನಿಯ ಗಾಂದಿಗೇನರ ರಿಲೇಸನ್ನು ಅಂತ ಯಿರಬೊದು ಕನಪ್ಪ.. ಬ್ಯಾಡಲೇ ರಿಸ್ಕು..." ಅಂತ. ಬ್ಯಾಡಂದ್ರು ವೊಗಿ ಕುಮ್ಮಿ, ಸಾಬಿ ಜಮೀರು ಡ್ಯಾನ್ಸಾಕ್ಕಂಡು ಅವುಳ್ ಜತೇಲಿ ಕುಣಿದ್ರು. ಸಿದ್ರಾಮಣ್ಣ ಟೈಮು ನೋಡಿ ಮೂತಿಗಾಕ್ದ ನೋಡಿ... ಕುಮ್ಮಿ ಅವುಳನ್ನ ವೋಡಿಸಿಹಾಕ್ದ. ಕೇಳಿದ್ರೆ ನಂ ಕುಮ್ಮಿನೂವೆ "ರೇವಣ್ಣಂಗೆ ಸ್ತ್ರಿದೋಸ ಅದುಕ್ಕೆ ವೋಡ್ಸಿದ್ವಿ" ಅಂತನೆ. ಅಲಲೇ ಗಾಂದಿ ಅಂತ ವರಿಜಿನಲ್ ಯಸ್ರಿಟ್ಕಂಡು ಕಾಂಗ್ರೇಸು ಬಿಟ್ಟು ಬ್ಯಾರೆ ಪಾರ್ಟಿಲಿ ಇರಕಾಯ್ತದ?

ಅಲ ಸ್ತ್ರಿದೋಸ ಅಂದ್ರೆ ಅದ್ರಲ್ಲೇ ಆಳಾದವ್ರು ಅಂತ. ಯೀ ಅಯೋಧ್ಯದಾಗೆ ರಾಮ ಇದ್ನಲ ರಗುಪತಿ ಅವ್ನು ಕೈಕೆಯಿ, ಸೀತೆ ಕೈಲಿ ಆಳಾದ. ನಂ ಅಳೇ ಜನತಾ ಪಕ್ಸ ರಗುಪತಿ ಆರತಿ ಕೈಲಿ ಆಳಾದ. ಉಡುಪಿ ಯಮ್ಮೆಲ್ಲೆ ರಗುಪತಿ ಬಟ್ಟ ಅವನೆಂಡ್ರು ಅಂಗೇ ಇನ್ಯರದ್ದೊ ಯಂಡ್ರು ಕೈಲಿ ಆಳಾದ. ನಂಗೇನಾಗೈತೆ? ಗಟ್ಟಿಯಾಗವ್ನಿ. ಯೀಗ ಯಲಕ್ಸನ್ನು. ನನ್ ಸೀಟಾರೂ ಗ್ಯದ್ದೇ ಗ್ಯಲ್ತೀವ್ನಿ. ಸಿದ್ರಾಮಣ್ನ ಯೋಳವ್ನೆ. ಯೋನರ ಮಾಡಿಕೊಡ್ತೀವ್ನಿ ಯಲಕ್ಸನ್ನು ಮುಗಿದಮ್ಯಾಕೆ ಅಂತ. ಆಮ್ಯಾಕೆ ನೋಡ್ಕಣಮಾ.

ಅಂಗೇ ಸಿಟಿ ಹೈಕ್ಳೆಲ ವೋಟಾಕಿ ಬಿಡ್ರಪ. ಇಲ್ಲಂದ್ರೆ ನಂ ಸಾಬಿ ಜಮೀರಂಗೆ ನಾವು ವೋಟಾಕಲ್ಲ ನಂದು ನೀವಾಕಳಿ ಅಂತ ವಂದು ಯಸ್ಸೆಮ್ಮೆಸ್ಸು ಆದ್ರೂ ಕಳಿಸ್ರಪ.

ಇಲೆಕ್ಸನ್ನು ಮುಗಿವರ್ಗೆ ಸಿಗ್ತಿರಣ ಬುದ್ಧಿ.

ಲೇಖಕರು

hdrevanna

ಯಿಂದಿಲ್ಲ, ಮುಂದಿಲ್ಲ, ಅದಲ್ದೇ ಮೂರುಯಿಲ್ಲ. (ನಾ,ಮಾ ಮತ್ತು ಮ)

ಬರೆಯೋರ್ ಕಂಡ್ರೆ ಭಾಳಾ ಪಿರೂತಿ. ಅದುಕ್ಕೆ ಆಗಾಗ ಮಾತಾಡ್ಸಿಕಂಡು ವೋಗದು...

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.