Skip to main content

ಸ್ನೇಹ

ಇಂದ pavu
ಬರೆದಿದ್ದುApril 18, 2013
noಅನಿಸಿಕೆ

 

ಸುಮಾರು ಮೂರು ವರ್ಷಗಳ ಸ್ನೇಹದ ಕಥೆ
ಕೊನೆಗೆ ವ್ಯಥೆಯಾದ ಸಂದರ್ಭ ಇದು.  ಒಂದು ಹುಡುಗ ಒಂದು
ಹುಡುಗಿ ಸ್ನೇಹದಿಂದ ಸಲಗೆಯಿಂದ  ಇದ್ದರೆ ಅದಕ್ಕೆ ಸಾವಿರಾರು
ಜನ ನೂರಾರು ರೀತಿ ಕಥೆ ಕಟ್ಟುತ್ತಾರೆ.ಆತ ನನ್ನ ಆತ್ಮೀಯ ಸ್ನೆಹಿತ ಎಲ್ಲಾ ಸುಖ ದುಖಃಗಳಲ್ಲೂ ಭಾಗಿಯಾಗಿದವನು
ಆತ ಒಳ್ಳೇಯ ಸ್ನೇಹಿತ ಕೂಡ. ನಾನು ಅಂದು ಕೊಂಡದ್ದು ಅವನು ಎಲ್ಲಾ ವಿಷಯಗಳನ್ನು ನಂನ್ನೋಂದಿಗೆ ಹಂಚಿಕೊಳ್ಳುತ್ತಾನೆ
ಎಂದು ಆದರೆ ಅವನು ಹಂಚಿಕೊಳ್ಳದೇ ಇರುವ ವಿಷಯಗಳು ಇವೆ ಎಂಬುದು ನನಗೆ ತಿಳಿದಿರಲಿಲ್ಲ . ನಮ್ಮ ಮೂರು
ವರ್ಷದ ಸ್ನೇಹವನ್ನು ನೋಡಿ ಇನ್ನಿತರ ನಮ್ಮ ಸ್ನೇಹಿತರು ಹೊಟ್ಟೆಹುರಿ ಪಟ್ಟುಕೊಳ್ಲುವಷ್ಟು ನಾವು ಆತ್ಮೀಯರಾಗಿದ್ದೇವು.
ಈ ಆತ್ಮೀಯತೆಯಲ್ಲೂ ಸುಳ್ಳು ಇರುತ್ತದೆ .ಏನೆಂದರೆ   ಆತ ಒಂದು
ಹುಡುಗಿಯನ್ನು ಪ್ರೀತಿಸುತ್ತಿದ ವಿಷಯವನ್ನು ಬಚ್ಚಿಟ್ಟ. ನನ್ನ ಸ್ನೇಹ ಬೇರೆಯವರಿಗೆ ಏನು ಅನಿಸಿತ್ತೋ
ಗೊತ್ತಿಲ್ಲ ಆದರೆ ಆತ  ನನ್ನ ಸ್ನೇಹಿತ ಎನ್ನುವ ಬದಲು
ನನ್ನ ಸಹೋದರ ಎಂದು ನಾನು ಅಂದು ಕೊಂಡಿದೆ. ಆತನು ಕೂಡ ನನ್ನನ್ನು ಸ್ನೇಹಿತೆ ಎನ್ನದೆ ನನ್ನ ಪ್ರೀತಿಯ
ತಂಗಿ ಎಂದು ಮುದ್ದು ಮುದ್ದಾಗಿ ಕರೆಯುತ್ತಿದ್ದ.

ಒಂದು ದಿನ ಅವನಿಗೆ ರಸ್ತೆಯಲ್ಲಿ ಅಪಘಾತ
ವಾದಾಗ ನಾನು ಕಣ್ನೀರು ಹಾಕಿದ್ದೇ ಅದಕ್ಕಿಂತ ಹೆಚ್ಚಾಗಿ ಈ ಅಘಾತ ವಾದಾಗ  ನಮ್ಮ ಇನ್ನಿತರ ಸ್ನೇಹಿತರಿಗೆ ಅವನು ಯಾವುದೋ ಹುಡುಗಿಯನ್ನು
ಪ್ರೀತಿಸುತ್ತಿರುವ ವಿಷಯ ಗೊತ್ತಾಗಿತ್ತು. ಅವರೆಲ್ಲಾ ನಿನ್ನ ಆಪ್ತ ಸ್ನೇಹಿತ ಪ್ರೀತಿಸುತ್ತಿರುವ ವಿಷಯ
ನಿನಗೆ ಗೊತ್ತಿದೆ ಎಂದು ನನಗೆ ನಾನಾ ರೀತಿಯಲ್ಲಿ ಕೇಳಲಾರಂಭಿಸಿದರು. ಆದರೆ ಆ ಸತ್ಯವನ್ನು  ನನಗೆ ಆತ ಹೇಳಿರಲಿಲ್ಲ. ಆದರೆ ನನ್ನ ಸ್ನೇಹಿತರು ತಿಳಿದುಕೊಂಡಿದ್ದು
ನಮ್ಮೀಬ್ಬರ ಸ್ನೇಹವನ್ನು ಪ್ರೀತಿಯ ರೂಪಾಂತರವಾಗಿ ಊಹಿಸಿ ಮಾತನಾಡಿಕೊಳ್ಲುತ್ತಿದ್ದರು. ಆತ ಹೇಳದ ಸತ್ಯದ
ಮಾತು ನನ್ನ ಸ್ನೇಹಕ್ಕೆ ಬರ ಸಿಡಿಲು ಒಡೆದಂತೆ ಆಗಿತ್ತು. ಅವರು ಆಡಿಕೊಳ್ಳುತ್ತಿದ್ದ ಮಾತುಗಳನ್ನು
ಕೇಳಿಕೊಂದು ನಾನು ನೋವಿನಿಂದ ಮೂಕಪ್ರೇಕ್ಷಕಳಂತೆ ನಿಂತಿದ್ದೆ. ಆದರೆ ಈಗ ಆತ ಬೇರೊಬ್ಬ ಹುಡುಗಿಯನ್ನು
ಪ್ರೀತಿಸಿತ್ತಿದ್ದ  ಅವನು ಪ್ರಿತಿಸುತ್ತಿದ್ದ ಹುಡುಗಿ
ನಾನು ಅಲ್ಲ ಎಂಬುದು ಈಗ ಎಲ್ಲಾರಿಗೂ ಗೊತ್ತಾಗಿದೆ, ಆದರೆ ಪ್ರಯೋಜನವಿಲ್ಲ ಎಂಬುದು ನನ್ನ ಭಾವನೆ ಯಾಕೆಂದರೆ
ಅವರು ಅಂದು ನನ್ನನ್ನು ನಿಂದಿಸಿ ಮಾತನಾಡಿದ ಮಾತುಗಳು ನನ್ನ ಕಿವಿಯಲ್ಲಿ ಇಂದು ಕೂಡ ಗುಯ್ ಗುಡುತ್ತೀವೆ.
ಎಷ್ಟೆ ಆತ್ಮೀಯ ಸ್ನೇಹಿತರಾಗಿದ್ದರೂ ಎಲ್ಲಾ ವಿಷಯಗಳನ್ನು ಅವರು ಹಂಚಿಕೊಳ್ಲುವುದಿಲ್ಲ ಎನ್ನುವ  ಸತ್ಯ ನನಗೆ ತಿಳಿಯಿತು . ನನ್ನ ಸ್ನೇಹ ಸಂಬಂಧಗಳಿಗಿಂತ ಮಿಗಿಲಾಗಿರಬೇಕು
ಎಂಬುವ ನನ್ನ ಕನಸು ನನಸಾಗದೆ ಕನಸಾಗಿಯೇ ಉಳಿಯಿತು.

ಸ್ನೇಹಿತರು
ಸ್ನೇಹಿತರಾಗೇ ಉಳಿಯಲು ಸಾಧ್ಯವಿದ್ದರೂ ಸಹ ಈ ಪ್ರಪಂಚ ಅವರನ್ನು
ಸ್ನೇಹಿತರಾಗಿ ಉಳಿಯಲು ಬಿಡುತ್ತಿಲ್ಲ.

 

 

 

ಲೇಖಕರು

pavu

ಮೊಗ್ಗಿನ ಮನಸ್ಸು

ನನ್ನ ಬಗ್ಗೆ ನಾವೇ ಹೇಳಿಕೊಳ್ಳೋದು ಅಷ್ಟು ಚೆನ್ನಾಗಿರಲ್ಲ…….ಅಲ್ವಾ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.