Skip to main content

ಒಲವು ಮುಗಿದ ಬಳಿಕ....

ಬರೆದಿದ್ದುApril 11, 2013
6ಅನಿಸಿಕೆಗಳು

ಒಲವು ಮುಗಿದ ಬಳಿಕ 

ಎರಡು ಹೆಜ್ಜೆ ನೀ ನಡೆದೇ ಎರಡು ನಾನು

ನಿನ್ನ ಹೆಜ್ಜೆಗಳು ಸಾಗಿದ್ದು ಹೊಸ ಬಾಳು ರೂಪಿಸುವೆಡೆಗೆ

ನನ್ನವು ನಿನ್ನೊಂದಿಗೆ ಕಳೆದ ಸವಿನೆನಪುಗಳ ಸಂತೆಯೆಡೆಗೆ..... 

 

ಲೇಖಕರು

praveen.kulkarni

ಚಿತ್ತಾಪುರ ಚುಕ್ಕೀಸ್

ನಾನು ಬಿಸಿಲ ನಗರಿ ಗುಲಬರ್ಗಾದ ಚಿತ್ತಾಪುರದವನಾದರು ಎಲ್ಲರಿಗೂ ತಂಪೆರೆಯುವ ಸ್ವಭಾವದವನು.ಬರೆಯೋ ಹುಚ್ಚು ಹತ್ತಿ ಹತ್ತು ಹನ್ನೆರಡು ವರ್ಷವಾಯಿತು.ವಿಜಯ ಕರ್ನಾಟಕ ಹಾಗು ರಾಯಚೂರ ವಾಣಿ ಪತ್ರಿಕೆಯಲ್ಲಿ ನಾ ಬರೆದ ಕೆಲವು ಕವನಗಳು ಪ್ರಕಟವಾಗಿವೆ. ರಾಯಚೂರ ಆಕಾಶವಾಣಿಯಲ್ಲಿ ಹಲವು ಬಾರಿ ಕವನವಾಚನ,ನಾಟಕಗಳನ್ನು ಮಾಡಿದ್ದೇನೆ.ಹರಿದಾಸ ಹವ್ಯಾಸಿ ಕಲಾವಿದರ ನಾಟಕ ಸಂಘದವರಲ್ಲಿ ನಾನು ಒಬ್ಬ.ವಿಜಯದಾಸರು,ಗೋಪಾಲದಾಸರು,ಪ್ರಾಣೇಶದಾಸರು ಹೀಗೆ ಹಲವು ದಾಸರ ನಾಟಕಗಳನ್ನು ರಾಯಚೂರ ಜಿಲ್ಲೆಯ ಹಲವು ಕಡೆ ಮಾಡಿದ್ದೇವೆ.ಒಂದೆರಡು ಕನ್ನಡ ಆಲ್ಬಮ್ ಗೆ ಹಾಡು ಬರೆದಿದ್ದೇನೆ.
ತುಂಬಾ ಭಾವ ಜೀವಿ.ಕನಸುಗಳೆಂದರೆ ತುಂಬಾ ಪ್ರೀತಿ.ಕನ್ನಡವೆಂದರೆ ಅಚ್ಚುಮೆಚ್ಚು.ಆತ್ಮೀಯ ಸ್ನೇಹಿತರೊಂದಿಗೆ ಮಾತ್ರ ಜಾಸ್ತಿ ಮಾತಾಡ್ತೀನಿ,ಮಾತು ಕಮ್ಮಿ ಮೌನ ಜಾಸ್ತಿ.ದೇವರನ್ನು ಅತಿಯಾಗಿ ನಂಬುವೆ.ಮಳೆಹನಿ,ರಾತ್ರಿ .ಚುಕ್ಕಿಗಳು ನನಗೆ ಇಷ್ಟ .ನನಗೆ ಬರೆಯೋವಾಗ ಈ ಇರುಳು ತುಂಬಾ ಪ್ರಶಸ್ತವೆನಿಸುತ್ತದೆ.ಇನ್ನು ಚುಕ್ಕಿ ಎಂಬುದು ನನಗೆ ಅತಿ ಇಷ್ಟವಾದುದು.ಅದು ನನ್ನ ಹೆಸರಿನೊಂದಿಗೆ ಸದಾ ಇರಬೇಕು.ಪ್ರತಾಪ್ ಸಿಂಹ,ಸುಧಾ ಮೂರ್ತಿ,ಬರಗೂರು ಮುಂತಾದವರ ಬರವಣಿಗೆ ಇಷ್ಟ.ಯಾವುದೇ ಕವನ ಲೇಖನ ಇಷ್ಟವಾದಲ್ಲಿ ಅದನ್ನು ಮನಸಾರೆ ಹೊಗಳಲು ತುಂಬಾ ಇಷ್ಟ.ಇನ್ನೂ ನನ್ನ ಬಗ್ಗೆ ತಿಳಿದುಕೊಳ್ಳಲು ನನ್ನೊಂದಿಗೆ ಸ್ನೇಹಿತರಾಗಿ.ಜಗತ್ತಲ್ಲಿ ಸ್ನೇಹ ಎಂದೆಂದೂ ಅಮರ.......ನಿಮ್ಮ
..ಚುಕ್ಕಿ

ಅನಿಸಿಕೆಗಳು

K.M.Vishwanath ಭಾನು, 04/21/2013 - 15:39

ಹೋಗುವಾಗ ಸ್ವಲ್ಪ ಜೋಕೆ ಗೆಳೆಯ

ಉತ್ತಮ ಭಾವನೆ

praveen.kulkarni ಸೋಮ, 04/22/2013 - 15:48

ಒಲವು ಮುಗಿದು ಅವಳು ತನ್ನ ಹೊಸ ಬಾಳು ಕಟ್ಟಿಕೊಳ್ಬೆಕಾದರೆ ಇನ್ನೆತಕೆ ಜೊಕೆ ಅಲ್ಲವೇ.ನೆನಪಿನ ಸಂತೆಯಿದೆಯಲ್ಲಾ ಸಾಕು ಈ ಜನುಮ ಕಳೆಯಲು..

radhakrishna ಸೋಮ, 04/22/2013 - 17:56

super ri ,It will touch some one bosom,

praveen.kulkarni ಸೋಮ, 04/22/2013 - 18:10

ಧನ್ಯವಾದ Radhakrishna ಅವರೆ,

Breakup ನಂತರದ  ಕ್ಷಣಗಳು ಎಷ್ಟು ದಿನ ಕಳೆದರು makeup ಆಗುವುದೇ ಇಲ್ಲಾ..

Jagannatha R N ಶನಿ, 04/27/2013 - 13:26

ಉತ್ತಮ ಸಾಲುಗಳು...

praveen.kulkarni ಸೋಮ, 04/29/2013 - 19:38

ಧನ್ಯವಾದ ಗೆಳೆಯಾ...

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.