Skip to main content
Submitted by ashmya on ಧ, 02/13/2008 - 15:41

ನಾವೇ ಆರಿಸಿದ ಬಾಳಸಂಗಾತಿಯನ್ನು ತಂದೆ ತಾಯಿ ಒಪ್ಪುವಂತೆ ಹೇಗೆ ಮಾಡುವುದು?ಯಾಕಂದ್ರೆ ಹೆಚ್ಚಿನ ಸಂದರ್ಭಗಳಲ್ಲಿ,ನಾವು ಆರಿಸಿದ ಹುಡುಗ/ಹುಡುಗಿ ಎಲ್ಲಾ ರೀತಿಯಿಂದಲೂ ಸೂಕ್ತ ಜೋಡಿಯಾಗಿದ್ದರೂ ಸಹ, ತಂದೆ ತಾಯಿ ಸಮಾಜಕ್ಕೆ ಅಂಜಿ ಮದುವೆಗೆ ಒಪಲ್ಲ..ತಿಳಿದವರು ತಿಳಿಸಿ..

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ರಾಮಸ್ವಾಮಿ (ಪ್ರಮಾಣಿಸಲ್ಪಟ್ಟಿಲ್ಲ.) ಧ, 02/13/2008 - 18:03

ಓಪ್ಪಿಸೊ ಪ್ರಯತ್ನ ಮಾಡಬಹುದು. ನಿಮ್ಮ ಸ0ಗಾತಿಯ ವ್ಯಕ್ತಿತ್ವದ ಉತ್ತಮ ಅ0ಶಗಳನ್ನ ಮಾತ್ರ ನಿಮ್ಮ ತ0ದೆ -ತಾಯಿಗೆ ಪರಿಚಯಿಸಿ. ನಿಮ್ಮ ಸ0ಗಾತಿ ನಿಮ್ಮ ಬದುಕಿನಲ್ಲಿ ಹೊ0ದಿರೊ ಮಹತ್ವವನ್ನ ವಿವರಿಸಿ.
ಇಶ್ಟಾದರೂ ಒಪ್ಪದಿದ್ದರೆ ನಿಮ್ಮ ಸ್ವ0ತ ನಿರ್ಣ ಯ ಕೈಗೊಳ್ಳುವುದು ಒಳ್ಳೆಯದು.
( ಬಹಳಶ್ಟು ಸಲ ಬುದ್ದಿಗಿ0ತ ಹೃದಯದ ಮಾತೇ ಕೆಳೋದು ಒಳೇದು. ಅದ್ರೆ ನಿಮ್ಮ ನಿರ್ದಾರ ವಾಸ್ತವಿಕ ಆಗಿರಬೇಕು ಅಶ್ಟೆ - ಇದು ನನ್ನ ಅನುಭವ )

ರಾಮಸ್ವಾಮಿ

ತಂದೆ ತಾಯಿಯವರ ಒಪ್ಪಿಗೆ ಬಯಸುವವರು ತಮ್ಮ ಬಾಳ ಸಂಗಾತಿಯನ್ನು ತಾವೇ ಆರಿಸಬಾರದು. ಆರಿಸಿದ ಮೇಲೆ ಅವರ ಒಪ್ಪಿಗೆಗೆ ಕಾಯುವುದು ಮೂರ್ತತನ. ಅವರ ಅಭಿಪ್ರಾಯ ನಿಮ್ಮ ಅಭಿಪ್ರಾಯ ಒಂದೇ ಆಗಿದ್ದರೆ ತೊಂದರೆ ಇಲ್ಲ.

ashmya ಗುರು, 02/14/2008 - 17:14

ಅಂದ್ರೆ,ಪ್ರೀತಿಸಿದವರಿಗೆ ಮನೆ ಬಿಟ್ಟು ಹೋಗುವುದೊಂದೆ ದಾರಿ ಅಂತೀರ?

Kumar R ಶುಕ್ರ, 02/15/2008 - 18:16

ಹೌದು, ತ0ದೆ- ತಾಯಿ ಒಪ್ಪಲೇ ಇಲ್ಲ ಅ0ದ್ರೆ ಬೇರೆ ದಾರಿ ಇಲ್ಲ. ಆದ್ರೆ ದುಡುಕದೆ , ಸಾಕಷ್ಟು ಸಮಯ ತೆಗೆದು ಕೊ0ಡು ನಿರ್ದರಿಸ ಬಹುದು. ( ಕೆಲವೊಮ್ಮೆ ತ0ದೆ -ತಾಯಿ ಮೊದಲು ನಿರಾಕರಿಸಿದರೂ, ನಿದಾನ ವಾಗಿ ಒಪ್ಪೊ ಸಾದ್ಯತೆ ಇದೆ )

ನನ್ನ ಪ್ರಕಾರ ಕೇವಲ ಅನುಕೂಲತೆಗಳನ್ನ ನೋಡಿ ತ0ದೆ- ತಾಯಿ ನಿರ್ದರಿಸೊ ಸ0ಗಾತಿಗಿ0ತ, ನಮಗೆ ಚೆನ್ನಾಗಿ ಗೊತ್ತಿರುವರನ್ನ ಮದುವೆಯಾಗೊದು ಒಳ್ಳೆದು. ( ಅದೇನೊ ಗೊತ್ತಿಲ್ಲದ ದೇವರಿಗಿ0ತ ಗೊತ್ತಿರೊ ದೆವ್ವ ವಾಸಿ ಅ0ತರಲ್ಲ ಹಾಗೆ )

ಅದ್ರೆ ನಿಮ್ಮ ಪ್ರೀತಿ ಕೇವಲ ಆಕರ್ಷಣೆ ಆಗಿರದೆ , ಜವಾಬ್ದಾರಿಯುತವಾಗಿ ತಗೋ0ಡ ನಿರ್ದಾರ ಆಗಿರಬೇಕು.
ಆರ್ಥಿಕವಾಗಿ ಸ್ವತ0ತ್ರ ರಾಗಿರಬೇಕು.

ಎರಡು Case ನಲ್ಲೂ , ಒಮ್ಮೆ ಮದುವೆ ಮುಗೀತು ಅ0ದ್ರೆ, ನಿಮಗೂ - ನಿಮ್ಮ ತ0ದೆ- ತಾಯಿಗೂ ಸ0ಭ0ದ ಮುಗೀತು. ಒಟ್ಟಿನಲ್ಲಿ ನಿಮ್ಮ life ಗೆ ನೀವೆ ಜವಾಬ್ದಾರರು.

ರಾಮಸ್ವಾಮಿ

ashmya ಸೋಮ, 02/18/2008 - 14:08

ಒಪ್ಪಿಸುವುದು ಹೇಗೆ ಅನ್ನುವುದೆ ನನ್ನ ಪ್ರಶ್ನೆ

Ganesha (ಪ್ರಮಾಣಿಸಲ್ಪಟ್ಟಿಲ್ಲ.) ಧ, 03/16/2011 - 14:18

ಒಪ್ಪಿಸೊಕ್ಕೆ ನಾನು ಸಹಾಯ ಮಾಡಬಹುದಾ!!!!!!!!!!

ರಾಜೇಶ ಹೆಗಡೆ ಭಾನು, 02/24/2008 - 23:26

ನಿಜ ಹೇಳಬೇಕೆಂದರೆ ತಂದೆ-ತಾಯಿಗಳಿಗೆ ಅಂಜುವವರು ಪ್ರೀತಿಯನ್ನು ಮಾಡಲೇ ಬಾರದು. ಯಾರನ್ನೋ ಪ್ರೀತಿ ಮಾಡಿ (ಅವರು ಬೇರೆ ಕುಲ, ಜಾತಿ, ಅಂತಸ್ತು ಅಂತಾ ಗೊತ್ತಿದ್ದೂ) ಅವರೊಡನೆ ತಿರುಗಾಡಿ, ಸರಸ ಸಲ್ಲಾಪ ನಡೆಸಿ ನಂತರ ತಂದೆ ತಾಯಿ ಬಳಿ ಹೋಗಿ ಮದುವೆಯ ಒಪ್ಪಿಗೆ ಕೇಳುವದು ಸರಿಯಲ್ಲ.

ಪ್ರೀತಿ ಮಾಡಿದರೆ ಎಲ್ಲಕ್ಕೂ ಸಿದ್ದರಾಗಿಯೇ ಇರಬೇಕು! ಮೊದಲು ಕೇಳಿಕೊಳ್ಳಬೇಕಾದ ಪ್ರಶ್ನೆ ತಂದೆತಾಯಿ ಯಾಕೆ ಒಪ್ಪುತ್ತಿಲ್ಲ ಅನ್ನೋದು?
ಬೇರೆ ಬೇರೆ ಜಾತಿಯವರೇ? ಹಾಗಿದ್ದರೂ ಈಗಿನ ಕಾಲದಲ್ಲಿ ಅನೇಕ ತಂದೆ ತಾಯಿಗಳು ಜಾತಿಗಿಂತ ಮಕ್ಕಳು ಸಂತೋಷವಾಗಿರಲಿ ಎಂದು ಬಯಸುತ್ತಾರೆ. ನೀವು ಆರಿಸಿದ ಬಾಳಸಂಗಾತಿ ಜೊತೆ ಹೇಗೆ ಆನಂದವಾಗಿ ಇರಬಲ್ಲಿರಿ ಅಂತಾ ಅವರಿಗೆ ವಿವರಿಸಿ. ಆಗ ಒಪ್ಪುವ ಸಾಧ್ಯತೆ ಇದೆ! ಯಾರಾದ್ರೂ ಪರಿಚಯ ಉಳ್ಳ ಸ್ನೇಹಿತರ ಬಳಿ ಹೇಳಿಸಿ ನೋಡಿ.

ಆದ್ರೆ ಇವಳ/ನ ನ್ನೇ ಮನಸ್ಸಲ್ಲಿಟ್ಟು ಕೊಂಡು ತಂದೆ ತಾಯಿ ತೋರಿಸಿದ ಬೇರೆ ಹುಡುಗನನ್ನೋ/ಹುಡುಗಿಯನ್ನೋ ಮದುವೆ ಆಗಿ ಅತ್ತ ನೀವು ಪ್ರೀತಿಸಿದವನ/ಳ ಇತ್ತ ಮದುವೆ ಆಗುತ್ತಿರುವ ಅಮಾಯಕನ/ಳ ಇಬ್ಬರ ಬಾಳನ್ನು ಹಾಳು ಮಾಡಬೇಡಿ. ಎಲ್ಲವನ್ನು ಮರೆತು ಹೊಸಜೀವನ ನಡೆಸಿ. ;-)

ಶುಭವಾಗಲಿ ನಿಮ್ಮ ಪ್ರೀತಿಯ ಸಮರಕ್ಕೆ :)

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 08/15/2008 - 05:50

ಪ್ರೀತಿ ಮಾಡಿ ಮೋಸ ಮಾಡಬಾರದು. ಮೋಸ ಮಾಡೋ ದುರುಧ್ಧೇಶವಿಧ್ಧರೆ ಪ್ರೀತಿ ಮಾಡಬಾರದು.

Ganesha (ಪ್ರಮಾಣಿಸಲ್ಪಟ್ಟಿಲ್ಲ.) ಧ, 03/16/2011 - 15:08

ಮೋಸ ಮಾಡುವ ಹುಡುಗಿಯಾಗ್ಗಿದ್ದ್ರೆ ನಿಮ್ಮನ್ನ ಈ ಪ್ರಶ್ನೆ ಕೇಳ್ತ್ರಲಿಲ್ಲ ಅಲ್ವ.

  • 2781 views