Skip to main content

a2+b2+2ab

ಇಂದ Sarita
ಬರೆದಿದ್ದುMarch 13, 2013
noಅನಿಸಿಕೆ

ಪಕ್ಕದ ಮನೆ ಹೈಸ್ಕೂಲ್ ಓದುತ್ತಿರುವ ಮನು (a+b)2 ಎಂದು ಸೂತ್ರ ಬಾಯಿಪಾಠ ಮಾಡುತ್ತಿರುವಾಗ ಅದರ ವಿಸ್ತೃತ ರೂಪ a2+b2+2ab ಅಂದು ತಟ್ಟನೆ ಹೊಳೆಯಿತು. ಅರೆ... ಇದು ನಾನು 9ನೇ ಕ್ಲಾಸಿನಲ್ಲಿ ಕಲಿತ ಗಣಿತವಲ್ಲವೇ ಎಂದುಕೊಂಡೆ. 30ನೇ ವಸಂತದಲ್ಲಿರುವ, ಮನೆ ಮಕ್ಕಳು ಎಂಬ ಜಂಜಾಟದಲ್ಲಿ ಮುಳುಗಿರುವ ನನಗೆ ಒಂದೊಂದಾಗಿ ಮತ್ತೆ 12 ಸೂತ್ರಗಳೂ ಕಣ್ಮುಂದೆ ಹಾದು ಹೋದವು. ಕೆಲ ತಿಂಗಳ ಹಿಂದಿನ ದೈನಂದಿನ ವಿಷಯಗಳನ್ನೇ ಮರೆಯುವ ನನಗೆ ಈ ಸೂತ್ರಗಳು ಹೇಗೆ ನೆನಪಾದವು? ತಲೆ ಕೆರೆದುಕೊಂಡೆ. ಒಂದು ಕ್ಷಣ.... ಹೈಸ್ಕೂಲಿನಲ್ಲಿ ಗಣಿತ ಕಲಿಸಿದ ಸವಣೂರ ಮಾಸ್ತರರು ನೆನಪಾದರು. "ನಾನು    ಕಲಿಸಿದ ಸೂತ್ರಗಳನ್ನು ವಿದ್ಯಾಥಿ9ಗಳು ನಿದ್ದೆಯಿಂದ ಎಬ್ಬಿಸಿ ಕೇಳಿದರೂ ಪಟ್ಟನೆ ಉತ್ತರಿಸಬೇಕು" ಎನ್ನುತ್ತಿದ್ದ ಅವರ ನಿಲುವಿಗೆ ನಿಜಕ್ಕೂ ಹೆಮ್ಮೆ ಎನಿಸಿತು.      ಕೊನೆಯುಸಿರು ಇರುವವರೆಗೂ ನೆನಪಿಡುವಂತೆ ಕಲಿಸಿದ ಗುರುಗಳಿಗೆ ನನ್ನ ಸಹಸ್ರ ನಮನಗಳು.

ಲೇಖಕರು

Sarita

Saritanaveen

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.