Skip to main content

ಮೈಕ್ರೋಸಾಫ್ಟ್ ಸರ್ಫೇಸ್ ಪ್ರೋ : ಲ್ಯಾಪ್ ಟಾಪ್ ಸಾಮರ್ಥ್ಯದ ಟ್ಯಾಬ್ಲೆಟ್ ಪಿಸಿ

ಬರೆದಿದ್ದುFebruary 5, 2013
noಅನಿಸಿಕೆ

ಫೆಬ್ರವರಿ ೯ ರಂದು ಸಾಫ್ಟವೇರ್ ದೈತ್ಯ ಮೈಕ್ರೋಸಾಫ್ಟ್ ಜಗತ್ತಿನ ಅತಿ ಶಕ್ತಿಶಾಲಿಯಾದ ಟ್ಯಾಬ್ಲೆಟ್ ಪಿಸಿ (ಈಗಿನ ಮಟ್ಟಿಗೆ) ಸರ್ಫೇಸ್ ಪ್ರೋ ಬಿಡುಗಡೆ ಮಾಡಲಿದೆ. ಕೇವಲ ೨ಪೌಂಡ್ ಭಾರವಿರುವ ೧೦.೬ ಇಂಚಿನ ಫುಲ್ ಎಚ್ ಡಿ (೧೯೨೦ * ೧೦೮೦) ಟಚ್ ಪರದೆ ಹೊಂದಿರುವ ಇಂಟೆಲ್ ಐ೫ ಐವಿ ಬ್ರಿಡ್ಜ್ ಪ್ರಾಸೆಸರ್, ೪ ಜಿಬಿ ರಾಮ್, ೬೪ಜಿಬಿ ಅಥವಾ ೧೨೮ಜಿಬಿ ಸ್ಟೋರೇಜ್ ಹೊಂದಿರುವ ಈ ಟ್ಯಾಬ್ಲೆಟ್ ಫುಲ್ ವಿಂಡೋಸ್ ೮ ಪ್ರೋ ಆಪರೇಟಿಂಗ್ ಸಿಸ್ಟೆಮ್ ಹೊಂದಲಿದೆ. ಇದರ ಜೊತೆಗೆ ಟಚ್ ಹಾಗೂ ಟೈಪ್ ಕೀಲಿಮಣೆ ಹೊಂದಿರುವ ಎರಡು ಬಗೆಯ ಕವರ್ ಸಹ ಸಿಗಲಿದೆ. ಜೊತೆಗೆ ಬರೆಯಲು ಡಿಜಿಟಲ್ ಪೆನ್ನು ಸಹ ಕೊಡಲಿದ್ದಾರೆ.

ಈ ಹೊಸ ಟ್ಯಾಬ್ಲೆಟ್ ಆಪಲ್ ನ ಐಪ್ಯಾಡ್ ಗೆ ಸ್ಪರ್ಧೆ ನೀಡಬಹುದೇ? ಹಲವು ಎಂಟರ್ ಪ್ರೈಸ್ ಗಳು ಇಂತಹ ವಿಂಡೋಸ್ ಟ್ಯಾಬ್ಲೆಟ್ ಗಳನ್ನು ಬಳಸಲಿವೆ. ಅದರಲ್ಲಿ ಸರ್ಫೇಸ್ ಎಷ್ಟು ಪಾಲನ್ನು ಪಡೆಯಬಹುದು? ಇಂತಹ ಕುತೂಹಲಕರ ಪ್ರಶ್ನೆಗಳಿಗೆ ಕಾಲವೇ ಉತ್ತರ ಹೇಳಲಿದೆ.

ಹೆಚ್ಚಿನ ವಿವರಗಳಿಗೆ ಈ ತಾಣಕ್ಕೆ ಭೇಟಿ ಕೊಡಿ.

ಇದೇ ರೀತಿ ಸ್ಯಾಮ ಸಂಗ್ ಕೂಡಾ ವಿಂಡೋಸ್ ೮  ಟ್ಯಾಬ್ಲೆಟ್ ಕಂ ಲ್ಯಾಪ್ ಟಾಪ್ ಬಿಡುಗಡೆ ಮಾಡಿದೆ. ಅದು ಸ್ಯಾಮಸಂಗ್ ೭೦೦ಟಿ೧ಸಿ ಅಟಿವ್ ಪ್ರೋ.

ಏಸರ್ ಐಕಾನಿಯಾ ಡಬ್ಲ್ಯೂ ೭೦೦ ಕೂಡಾ ಇದೇ ರೀತಿಯ ಟ್ಯಾಬ್ಲೆಟ್.

ಇನ್ನೂ ಹಲವು ಕಂಪನಿಗಳು ಕೆಲವೇ ತಿಂಗಳಲ್ಲಿ ಇನ್ನೂ ಕಡಿಮೆ ದರದಲ್ಲಿ ವಿಂಡೋಸ್ ೮ ಟ್ಯಾಬ್ಲೆಟ್ ಬಿಡುಗಡೆ ಮಾಡಲಿವೆ. ಅವನ್ನು ಬೇಕಾದಾಗ ಲ್ಯಾಪ್ ಟಾಪ್ ಅಂತೆ ಇಲ್ಲಾಂದ್ರೆ ಟ್ಯಾಬ್ಲೆಟ್ ತರಾ ಬಳಸಬಹುದು! ಬಹುಶಃ ಇದೇ ಟ್ರೆಂಡ್ ಮುಂದುವರಿದರೆ ಹೆಚ್ಚು ಹೆಚ್ಚು ಗ್ರಾಹಕರು ಈ ತರಹದ ಟ್ಯಾಬ್ಲೆಟ್ ಬಳಸುವ ದಿನ ದೂರ ಇಲ್ಲ.

ಲೇಖಕರು

ರಾಜೇಶ ಹೆಗಡೆ

ಕಂಡದ್ದು ಕಂಡ ಹಾಗೆ

ಸಾಫ್ಟವೇರ್ ಇಂಜನಿಯರ್. ಕನ್ನಡದಲ್ಲಿ ಸಾಫ್ಟವೇರ್ ತಯಾರಿಸುವದು ನನ್ನ ಹವ್ಯಾಸ. ಆಗಾಗ ಲೇಖನ ಬರೀತಿನಿ ಆದ್ರೆ ಅದರಲ್ಲಿ ಪಳಗಿದವನಲ್ಲ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.