Skip to main content

ಹಲವು ಪ್ರಥಮಗಳನ್ನು ಸೃಷ್ಠಿಸಿದ ಅಧಮ ಸರ್ಕಾರ !!!

ಇಂದ K.M.Vishwanath
ಬರೆದಿದ್ದುJanuary 22, 2013
noಅನಿಸಿಕೆ

ನಮ್ಮ ಪೂರ್ವಜರು ಹೇಳಿರುವಂತೆ "ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು " ಎಂಬ ಗಾದೆ ಮಾತು ಇದೆ ಇನ್ನು ಮಾತಾಡುವದಕ್ಕು ಕೆಲಸ ಮಾಡುವದಕ್ಕು ಬಹಳ ಅಂತರವಿದೆ ಎಲ್ಲರು ಮಾತಾಡಬಹುದು ಆದರೆ ಆಡಿದಂತೆ ಮಾಡಿ ತೋರಿಸುವ ಕಾರ್ಯವಿದೆಯಲ್ಲಾ ಅದು ತುಂಬಾ ಜಠಿಲವಾದ ವಿಷಯವಾಗಿದೆ.

ನಮ್ಮ ಶರಣರು "ನುಡಿದಂತೆ ನಡೆ''ಎಂದರು ಆದರೆ ವಿಪರ್ಯಾಸ ನೋಡಿ ನಮ್ಮನ್ನು ಆಳುವ ಸರ್ಕಾರ ಮಾತ್ರ ಕಳೆದ ಐದು ವರ್ಷದಿಂದ ಯಾವ ಮಾತು ಆಡಿದಂತೆ ಮಾಡದೆ ನಡೆದಿದ್ದಾರೆ. ಇವರಿಗೆ ಯಾವ ಪದಗಳಿಂದ ಬಣ್ಣಿಸಬೇಕು ತಿಳಿಯದು ಯಾವ ನಾಣ್ನುಡಿಗೆ ಹೋಲಿಸಬೇಕು ತಿಳಿಯದು.ಇವರು ಮಾಡಿದ ಕೆಲವು ಮುಖ್ಯ ಸಾಧನೆಗಳನ್ನು ಜನರ ಮುಂದೆ ಬಿತ್ತರಿಸುವುದು ಹೇಗೆ ಎಂದು ವಿಷಯ ಕಲೆ ಹಾಕುತ್ತಾ ಹೋದೆ ಇದಕ್ಕೆ ಇಂದಿನ ತಾಂತ್ರಿಕ ಯುಗ ಸ್ವಲ್ಪ ಸಾಥ ನೀಡಿತು ಅದರ ಪರಿಣಾಮವೆ ಈ ಬರಹ.
 
ಉತ್ತರ ಭಾತರವು ಅನೇಕ ಮಾಹಾನ್ ವ್ಯಕ್ತಿಗಳ ತಾಣವಾಗಿದೆ , ಅನೇಕ ಯೋಧರಿಗೆ ಜನ್ಮ ನೀಡಿದೆ , ಬಸವಾದಿ ಶರಣರು ಹುಟ್ಟಿ ಬೆಳೆದ ಈ ನಾಡಿನಲ್ಲಿ ಬಹಳ ದಿನಗಳಿಂದ ಅಧಿಕಾರಕೆ ಬಾರದೆ ಬರಿ ವಿರೋಧ ಪಕ್ಷ್ಯದಲ್ಲೆ ತಮ್ಮನ್ನು ಗುರುತಿಸಿಕೊಂಡಭಾರತೀಯ ಜನತಾ ಪಕ್ಷ್ಯಕ್ಕೆ ಮತದಾರ ನಮ್ಮಲ್ಲಿಯು ಒಂದು ಬದಲಾವಣೆ ಬರಲಿ ಎನ್ನುವ ನಿಟ್ಟಿನಲ್ಲಿ ಈ ಪಕ್ಷ್ಯಕ್ಕೆ ಅಧಿಕಾರ ನೀಡಿದರು. ಅವಕಾಶದ ಸುರಿಮಳೆ ಹರಿಸಿದರು ಯಾವಾಗ ಈ ಸದವಕಾಶ ಸಿಕ್ಕಿತೊ ಅವಾಗಿನಿಂದ ಪ್ರಾರಂಭವಾಯಿತು ಈ ಬಿ.ಜೆ.ಪಿ. ಸರ್ಕಾರದ ಪ್ರಲಾಪ ಅವರ ಕಾರ್ಯವೈಖರಿಗೆ ಎಲ್ಲರು ನಾಚುವಂತೆ ಮಾಡಿತು. ಒಂದು ಕಾಲದಲ್ಲಿ ಬಿ.ಜೆ.ಪಿ. ಸರ್ಕಾರ ಎಷ್ಟು ಮೂಲೆಯಲ್ಲಿತ್ತೊ ಅಷ್ಟೆ ಸರಿಯಾಗಿ ಕರ್ನಾಟಕದಲ್ಲಿ ಬೆಳಕಿಗೆ ಬಂತು ಎಲ್ಲರ ಬಾಯಲ್ಲಿ ಅಲ್ಲಾ ಹಲ್ಲಿನಲ್ಲಿ ಉಳಿಯಿತು.

ಬಿ.ಜೆ.ಪಿ.ಸರ್ಕಾರ ಮಾಡಿದ ಕೆಲವು ಪ್ರಸಿದ್ಧ ಕಾರ್ಯಗಳ ಪಟ್ಟಿ

 • ಕರ್ನಾಟಕದಲ್ಲಿ ಬಿ.ಜೆ.ಪಿ. ಸರ್ಕಾರ ರಚನೆಯಾಗಿದ್ದು 60 ವರ್ಷದಲ್ಲೇ ಪ್ರಥಮ.
 • ಸಂವಿಧಾನದಲ್ಲೆ ಪ್ರಥಮ ಎರಡು ಉಪ ಮುಖ್ಯಮಂತ್ರಿ ಸ್ಥಾನಗಳು.
 • ಸಧನದ ಕಲಾಪ ವೇಳೆಯಲ್ಲೆ ಜಗದ ಜನತೆಯ ಚಿಂತೆ ಮರೆತು ಬ್ಲೂಫಿಲ್ಮ ನೋಡಿದ ಸರ್ದಾರರು 60 ವರ್ಷದಲ್ಲೇ ಪ್ರಥಮ.
 • ರೈತನ ಮೇಲೆ ಆಣೆಮಾಡಿ ಅಧಿಕಾರ ಹಿಡಿದು ಕೊನೆಗೆ ರೈತರನ್ನೆ ಗುಂಡಿಕ್ಕಿ ಕೊಂದಿದ್ದು 60 ವರ್ಷದಲ್ಲೇ ಪ್ರಥಮ.
 • ಒಬ್ಬ ಮುಖ್ಯಮಂತ್ರಿ ಸ್ವತ: ಸರ್ಕಾರ ಇರುವಾಗಲೆ ಭೂಕಬಳಿಕೆ ಹಗರಣದಲ್ಲಿ ಸಿಕ್ಕು ಜೈಲು ಸೇರಿದ್ದು 60 ವರ್ಷದಲ್ಲೇ ಪ್ರಥಮ. ಉದಾಹರಣೆ ಗೊತ್ತೆಯಿದೆಯಲ್ಲಾ ಸರ್.
 • ತಮ್ಮದೆ ಆದ ಶಾಸಕರು ಸರ್ಕಾರವನ್ನು ಉರುಳಿಸುವ ಪ್ರಯತ್ನದಲ್ಲಿ ರಾಜ್ಯ ಬಿಟ್ಟು ಬೇರೆ ರಾಜ್ಯ ಸೇರಿದ್ದು 60 ವರ್ಷದಲ್ಲೇ ಪ್ರಥಮ.
 • ಒಬ್ಬ ದಿಟ್ಟ, ಜನಮೆಚ್ಚಿದ, ಭ್ರಷ್ಟಾಚಾರ ವಿರೋಧಿ, ಮುಖ್ಯಮಂತ್ರಿಯನ್ನು ಕಾರಣವಿಲ್ಲದೆ ಕಿತ್ತೆಸೆದ ಬಿ.ಜೆ.ಪಿ. ಹೈಕಮಾಂಡ 60 ವರ್ಷದಲ್ಲೇ ಪ್ರಥಮ.
 • ರಾಷ್ಟ್ರೀಯಾ ಸೇವಾಸಂಘದ ಕೈಯಲ್ಲಿ ರಿಮೋಟ್ಕಂಟ್ರೋಲ್ಕೊಟ್ಟ ಬಿ.ಜೆ.ಪಿ. ಸರ್ಕಾರ 60 ವರ್ಷದಲ್ಲೇ ಪ್ರಥಮ.
 • ಕೇಂದ್ರದ ಬಿ.ಜೆ.ಪಿ. ವರಿಷ್ಠರನ್ನು ನಡುಗಿಸಿ ರಾಜ್ಯದ ರಾಜಕೀಯ ಚುಕ್ಕಾಣಿ ಹಿಡಿದ ಒಬ್ಬ ವ್ಯಕ್ತಿ 60 ವರ್ಷದಲ್ಲೇ ಪ್ರಥಮ ಹೆಸರು ಗೊತ್ತೆಯಿದೆ.
 • ತನ್ನ ಆರು ಅಂಗ ಸಂಸ್ಥೆಗಳು ಮತ್ತು ಏಳು ಮಂದಿ ನಾಯಕರಿಗೆ ಯಡಿಯೂರಪ್ಪಾ ಸರ್ಕಾರ ಅಂದಾಜು 50 ಕೋಟಿ ರೂಪಾಯಿ ಬೆಲೆ ಬಾಳುವ ಜಮೀನನ್ನು ನೀಡಿದ್ದು 60 ವರ್ಷದಲ್ಲೇ ಪ್ರಥಮ.
 • ಚೆಲ್ಲಾಪಿಲ್ಲೆಯಾಗಿ ಹರಡಿರುವ ಭ್ರಷ್ಠಾಚಾರ 60 ವರ್ಷದಲ್ಲೇ ಪ್ರಥಮ.
 • ದೇಶದ ಎದುರು ರಾಜ್ಯದ ಜನತೆ ತಲೆತಗ್ಗಿಸುವಂತೆ ಹೊರತಂದಿರುವ ಆಪರೇಷನ್ಕಮಲ 60 ವರ್ಷದಲ್ಲೇ ಪ್ರಥಮ.
 • ವಿಧಾನಸೌಧದ ಸಚಿವರೊಬ್ಬರು ಸ್ನೇಹಿತನ ಹೆಂಡತಿಯೊಂದಿಗೆ ಅನೈತಿಕ ಚಟುವಟಿಕೆ 60 ವರ್ಷದಲ್ಲೇ ಪ್ರಥಮ.
 • ಸರ್ಕಾರದಲ್ಲಿದ್ದ ಸಚಿವರೊಬ್ಬರು ನರ್ಸ್ಜೊತೆಗೆ ಓಪನ್ಕಿಸ್ 60 ವರ್ಷದಲ್ಲೇ ಪ್ರಥಮ.

  
ಇಂತಹ ಹಲವು ದಾಖಲೆಗಳನ್ನು ಮಾಡಿದ ಸರ್ಕಾರ ಕಳೆದ ಐದು ವರ್ಷಗಳಿಂದ ನಮ್ಮನ್ನು ಮೋಸಮಾಡುತ್ತಾ ಸುಳ್ಳು ಹೇಳುತ್ತಾ ನಮ್ಮನ್ನು ಆಳುತ್ತಿದೆ. ಹಾಗಾದರೆ ಇಲ್ಲಿ ಒಳ್ಳೆಯ ಕೆಲಸವಾಗಿಲ್ಲಾ ಎಂದರೆ ತಪ್ಪಾದೀತು ಅನೇಕ ಒಳ್ಳೆಯ ಕೆಲಸಗಳು ಆಗಿವೆ ನಿಜಾ ಆದರೆ ಇವರು ಮಾಡಿದ ಅನೇಕ ತಪ್ಪುಗಳಲ್ಲಿ ಎಲ್ಲವು ಮುಚ್ಚಿ ಹೋಗಿದೆ ಈ ಹಿಂದೆ ಯಾವ ಸರ್ಕಾರವು ಮಾಡದೆ ಇರುವ ಅನೇಕ ಒಳ್ಳೆಯ ಕೆಲಸವು ಬಿ.ಜೆ.ಪಿ. ಸರ್ಕಾರ ಮಾಡಿದೆ ಆದರೆ ಮಾಡುವ ಅವರು ನಡೆದುಕೊಳ್ಳವು ರೀತಿನೀತಿಗಳು ಎಲ್ಲರ ಕೆಂಗಣ್ಣಿಗೆ ಗುರಿಯಾದವು.

ಇನ್ನು ನಾವು ಮತದಾರರು ಎಂತಹ ಪ್ರಜ್ಞಾವಂತರು ಎಂದು ಅರಿತುಕೊಳ್ಳಲು ಈ ನಡುವೆ ಇಂತಹ ಸಾಧನೆ ಮಾಡಿದ ಸರ್ಕಾರದ ಬಿಸಿ ಆರದೆ ಇರುವಾಗಲೆ ನಡೆದ ಪಧವಿದರರ ಚುನಾವಣೆಯೆ ಇದಕ್ಕೆ ಉತ್ತಮ ಉದಾಹರಣೆ ಎನಿಸುತ್ತದೆ. ಆ ಲೆಕ್ಕಾಚಾರವೆ ಬುಡಮೇಲಾಯಿತು ಮತ್ತೆ ಬಿ.ಜೆ.ಪಿ ಯೆ ಅಧಿಕಾರಕ್ಕೆ ಬಂತು.

ಇನ್ನುಸ್ವಲ್ಪೆದಿನದಲ್ಲಿ ಮತ್ತೆ ಚುನಾವಣೆ ಎದುರಾಗಿ ನಮ್ಮ ಘನವೆತ್ತ ಸರ್ಕಾರವನ್ನೆ ನಾವು ಬಹುಮತದಿಂದ ಆರಿಸಿತಂದರೆ ನಾವೆಂತಹ ಪ್ರಜ್ಞಾವಂತ ನಾಗರಿಕರು ಎಂಬುವುದು ಅರ್ಥವಾಗುತ್ತದೆ. ಈ ಮುಂಬರುವ ಚಿನಾವಣೆಯಲ್ಲಾದರು ನಾವೆಲ್ಲ ಸರಿಯಾಗಿ ಯಾವುದೆ ಆಮಿಷಕ್ಕೆ ಒಳಗಾಗದೆ ನಮ್ಮ ಅಮುಲ್ಯವಾದ ಮತ ಯಾರಿಗೆ ನೀಡಬೇಕು ಎಂಬುವುದು ಅರೆತು ನೀಡಿದರೆ ನಮ್ಮ ಹಲವು ಸಮಸ್ಯೆಗಳು ಬಗೆಹರಿದಾವು ಎಂದೆನಿಸುತ್ತದೆ. ಅದಕ್ಕಾಗಿ ಪ್ರಜ್ಞಾವಂತ ಮತದಾರರೆಲ್ಲಾ ವಿಚಾರಿಸಿ ಹೀಗೊಮ್ಮೆ ಯೋಚಿಸಿ ನಿಮ್ಮ ಅಮುಲ್ಯವಾದ ಮತ ಚಲಾಯಿಸಿ.
 
ಕೆ.ಎಂ.ವಿಶ್ವನಾಥ (ಮಂಕವಿ) ಮರತೂರ.
 
B.Sc.B.Ed.
 
ಹವ್ಯಾಸಿ ಬರಹಗಾರರು.
 
9620633104

ಲೇಖಕರು

K.M.Vishwanath

ಇವು ನಾ ಕಂಡ ಅನುಭವ ಮತ್ತು ಅನಿಸಿಕೆಗಳು

ನನ್ನ ಬಗ್ಗೆ................!

ಹಿಂದೂ ನ್ಯಾಯಸಂಹಿತೆ ಹಾಗೂ ಮಿತಾಕ್ಷರ ಎಂಬ ಅಮೋಘ ಗ್ರಂಥಗಳನ್ನು ಈ ಜಗತ್ತಿಗೆ ನೀಡಿದ ವಿಜ್ಞಾನೇಶ್ವರ ಹುಟ್ಟಿದ ಸುಕ್ಷೇತ್ರ, ಭಾರತ ದೇಶದ , ಕರ್ನಾಟಕ ರಾಜ್ಯದ ,ಗುಲಬರ್ಗಾ ಜಿಲ್ಲೆ ಹಾಗೂ ಚಿತ್ತಾಪೂರ ತಾಲೂಕಿನ ಮರತೂರ ಗ್ರಾಮದಲ್ಲಿ ಹುಟ್ಟಿದವನು, ಕವಲಗಾ ಮರೆಪ್ಪಾರವರ ಮೂರನೆ ಸುಪುತ್ರನಾಗಿ ಊರಿನ ಅದಿ ದೇವನಾದ ಶ್ರೀ ಕಾಶಿ ವಿಶ್ವನಾಥ ನ ಹೆಸರು ಇಟ್ಟಿಕೊಂಡವನು.ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸರಕಾರಿ ಹಿರಿಯಾ ಪ್ರಾಥಮಿಕ ಶಾಲೆ ಮರತೂರ ,ಹತ್ತನೆ ತರಗತಿಯನ್ನು ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ನಿಂಬರ್ಗಾ ಇಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿ ಬೆಳ್ಳಿ ಪದಕ ಪಡೆದೆ,ಸರಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಗುಲಬರ್ಗಾ ಇಲ್ಲಿ ಪಿ.ಯು.ಸಿ. ವಿಜ್ಞಾನ ವಿಭಾಗದಲ್ಲಿ ಪಾಸಾದೆ. ಕೀರ್ತಿ ಶಿಕ್ಷಣ ಸಂಸ್ಥೆ ಗುಲಬರ್ಗಾದಲ್ಲಿ ಶಿಕ್ಷಣದಲ್ಲಿ ಡಿಪ್ಲೋಮಾ ಪದವಿ ಪಡೆದೆ. ಸರಕಾರಿ ಪದವಿ ಮಹಾವಿದ್ಯಾಲಯಲ್ಲಿ ಬಿ.ಎಸ್.ಸಿ ಪದವಿ ಭೌತಶಾಸ್ತ್ರ ,ರಸಾಯನ ವಿಜ್ಞಾನ ಹಾಗು ಗಣಿತದಲ್ಲಿ ಮುಗಿಸಿದೆ. ನನ್ನ ಬಿ.ಎಡ್. ಪದವಿಯು ಶ್ರೀ ಹಿಂಗೂಲಾಂಬಿಕಾ ಶಿಕ್ಷಣ ಸಂಸ್ಥೆ ಗುಲಬರ್ಗಾದಲ್ಲಿ ನಡೆದಿದೆ. ನಾನು ಸದಾ ಕ್ರೀಯಾ ಶೀಲನಾಗಿದ್ದು ಆಗಾಗ ಸಮಾಜದ ಕೆಲವು ವಿಷಯಗಳ ಕುರಿತು ಬರವಣಿಗೆ ರೂಪದಲ್ಲಿ ಬರೆದಿದ್ದದೆನೆ. ಒಂದು ಸಿನಿಮಾದಲ್ಲಿ ಸಾಹಿತ್ಯವನ್ನು ಬರೆದಿದ್ದೇನೆ . ಬರೆಯುವದು ನನ್ನ ಮೊದಲ ಹವ್ಯಾಸವಾಗಿ ಪರಿಣಮಿಸಿದೆ. ಕೆಲವು ಪುಸ್ತಕಗಳನ್ನು ಕವನ ಸಂಕಲನಗಳನ್ನು ಬರೆದಿದ್ದೇನೆ ಆದರೆ ಯಾವುದು ಪ್ರಕಟವಾಗಿಲ್ಲಾ ಈಗಲು ಬರೆಯುತ್ತಲೆ ಇದ್ದೇನೆ. ಜೊತೆಗೆ ಸಮಾಜಿಕ ಸೇವೆಯಲ್ಲಿ ನನ್ನನು ತೊಡಗಿಸಿಕೊಂಡಿದ್ದೇನೆ . ಸಮುದಾಯದ,ಸರ್ಕಾರಿ ಶಾಲೆಯ ಶಿಕ್ಷಕರ ,ಮಕ್ಕಳ ಸೇವೆಯನ್ನು ರಾಯಚೂರ ,ಗುಲಬರ್ಗಾ,ಯಾದಗಿರಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ.
ಮೈಸೂರಿನ ಗ್ರಾಮಾಂತರ ಬುದ್ಧಿಜೀವಿಗಳ ಬಳಗ ಕೊಡಮಾಡುವ ರಾಜ್ಯ ರಾಷ್ಟ್ರಕವಿ ಕುವೆಂಪು ಕಾವ್ಯ ಪ್ರಶಸ್ತಿ ಮೊನ್ನೆ ತಾನೆ ಪಡೆದೆ.

ಕೆ.ಎಂ.ವಿಶ್ವನಾಥ
ಹವ್ಯಾಸಿ ಬರಹಗಾರರು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.