Skip to main content

“ಹೇಗಿದೆ ನಮ್ಮೂರು ಹೇಗಿದ್ದಾರೆ ನಮ್ಮೂರೊರು”

ಬರೆದಿದ್ದುJanuary 15, 2013
noಅನಿಸಿಕೆ

ಹಲೋ ಪೂರ್ಣಿಮಾ.........
ಹೇಗಿದೆ ನಮ್ಮೂರು ಹೇಗಿದ್ದಾರೆ ನಮ್ಮೂರೊರು
ಈಗ ಏಗಿದ್ದಾರೆ ನಮ್ಮೂರ ಜನ ಕುದೂರ ಜನ "ಪ"
ಊರಿನುದ್ದಾರಕ್ಕಾಗಿ ಶ್ರಮ ಪಡೊರಿದ್ದಾರಾ !
ಶಾಲೆ,ಕಾಲೇಜು,ಆಸ್ಪತ್ರೆ,ಬ್ಯಾಂಕು ಹೈಟೆಕ್ ಮಾಡವರ "ಹೇಗಿದೆ"
ತುಮಕೂರ್ ರಸ್ತೆ,ಶಿವಗಂಗೆ ರಸ್ತೆ.ಮರೂರ್ ರಸ್ತೆ
ಬಿಸ್ಕೂರ್ ರಸ್ತೆ,ಸೋಲೂರ್ ರಸ್ತೆ ಸರಿಯಾಗಿ ಮಾಡವರ "ಹೇಗಿದೆ"
ಲಕ್ಷ್ಮಮ್ಮ,ಕನ್ನಿಕಾ ಪರಮೇಶ್ವರಿ,ಆಂಜನೇಯ,ಲಕ್ಷ್ಮಿನರಸಿಂಹ ಸ್ವಾಮಿ
ಜಾತ್ರೆ ವೈಬವ ದಿಂದ ಮಾಡ್ತಾರ ಶ್ರೀರಕ್ಷೆ ಬಿಡದೆ ಪಡೆದವರ "ಹೇಗಿದೆ"
ರಾಜ್ಯೋತ್ಸವ,ಸ್ವಾತಂತ್ರ ನಾಡಹಬ್ಬ ಮಾಡ್ತಾರ
ಆ ಪಕ್ಷ ಈ ಪಕ್ಷ ಅನ್ಕೋಂಡು ಕಿತ್ತಾಡೊದ ಮರೆತವರ "ಹೇಗಿದೆ"
ಈ ಮೇಲು ಇಂಟರ್ ನೆಟ್ಟು ಬ್ರಾಡ್ ಬ್ಯಾಂಡು ಕಂಪ್ಯೂಟರು
ತಾಂತ್ರಿಕ ಶಿಕ್ಷಣದ ಅನುಕೂಲ ಮಾಡವರ ಓದುವಂತ
ಹುಡುಗರಿಗೆ ಅವಕಾಶ ಕೊಟ್ಟವರ "ಹೇಗಿದೆ"
ದಾಕ್ಷಾಯಣಮ್ಮ ಯತಿರಾಜು ಬಾಲರಾಜು ಹನುಮಂತಪ್ಪ
ನಂತವರು ಒಟ್ಟಾಗಿ ಕುದೂರಿನೇಳ್ಗೆಗಾಗಿ ದುಡಿತಾವರ "ಹೇಗಿದೆ"
ಸರ್ಕಾರಿ ಶಾಲಾ ಕಾಲೇಜಿನ ಫಲಿತಾಂಶ ಹೇಗಿದೆ
ಖಾಸಗಿ ಶಾಲಾ ಕಾಲೇಜಿನ ಫಲಿತಾಂಶ ಹೇಗಿದೆ "ಹೇಗಿದೆ"
ಚಿತ್ರ ಮಂದಿರಗಳ ಹೈಟೆಕ್ ಮಾಡವರ ಹೊಟೆಲ್ ಗಳ ಶುಚಿಯಾಗಿ ಇಟ್ತವರ
ಆರೋಗ್ಯ ಕೇಂದ್ರ ಹೇಗಿದೆ ಖಾಸಗಿ ಕ್ಲಿನಿಕ್ ನಲ್ಲಿ ಟ್ರೀಟ್ ಮೆಂಟು ಎಲ್ಲಿ ಸುಲಬದಲ್ಲಿ ಸಿಗ್ತದೆ "ಹೇಗಿದೆ"
ವಿವೇಕಾನಂದ ಸಂಘದವರು ಸಾಂಸ್ಕೃತಿಕ,ಸಾಮಾಜಿಕ ಕಾರ್ಯಕ್ರಮ ಬಿಡದಂತೆ ಮಾಡ್ತಾರ
ಶಾರದಾ ಮಹಿಳಾ ಸಮಾಜದವರು ತರಬೇತಿ ನಿಲ್ಲಿಸ್ ದೇ ಮಾಡ್ತಾರ
ಬ್ರಂಹ ಕುಮಾರೀಸ್ ಕಾರ್ಯ ವೈಖರಿ ಹ್ಯಾಗಿದೆ "ಹೇಗಿದೆ"
ಕೊನೆದಾಗಿ ನನದೊಂದು ರಿಕ್ವೆಸ್ಟು ತಗೊಳಿ
ವೈ ಎನ್ ವಿ ಸಿಕ್ಕಿದ್ರೆ ನನ್ನ ವಂದನೆ ಹೇಳ್ಬಿಡಿ
ರಘು ಡಾಕ್ಟರ್ ಸಿಕ್ಕಿದ್ರೆ ನಿಮ್ಮ ಶಿಷ್ಯ ನಿಮ್ಮ ಕೇಳಿದ ಅಂದ್ ಬಿಡಿ
ನಮ್ಮೂರ ದೇವಾನು ದೇವತೆಗಳಿಗೆಲ್ಲ ನೀವು ಅಲ್ಲಿಗೋದಾಗ
ನನ್ನ ಭಕ್ತಿಪೂರ್ವಕ ನಮನಗಳ ಹೇಳ್ಬಿಡಿ ನಿಮ್ಮ ಅನಿಸಿಕೆ
ಮರೀದೆ ಬರೆದ್ ಬಿಡಿ

ಲೇಖಕರು

ವಿ ಕೃಷ್ಣಮೂರ್ತಿ…

ಕೃಷ್ಣಾಂತರಂಗ

ನನ್ನ ಬಗ್ಗೆ ಹೇಳಿಕೊಳ್ಳುವಂತದ್ದೇನಿಲ್ಲ ನಾನೊಬ್ಬ ಕವನ ಪ್ರಿಯ,ಕನ್ನಡಪ್ರೇಮಿ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.