
ಯಾರು ಬದಲಾಗಬೇಕು ?
ಭಾರತಮಾತೆ ಎಂದೇ ನಮ್ಮ ದೇಶವನ್ನು ಸಂಭೋದಿಸುವ ಈ ನೆಲದಲ್ಲಿ ಬರ್ಬರ ಕೃತ್ಯವೊಂದು ನಡೆದುಹೋಯಿತು. ಭರತಭೂಮಿಯಲ್ಲಿ ಮಗಳೊಬ್ಬಳು ಹೋರಾಡಿ ಕೊನೆಗೂ ಸಾವನಪ್ಪಿದಳು.ಇದರ ಬಗ್ಗೆ ಸಾಕಷ್ಟು ಲೇಖನಗಳು ಈಗಾಗಲೇ ಬಂದಿವೆ,ಚರ್ಚೆಗಳು ನಡೀತಾ ಇವೆ.ಮೊನ್ನೆ ಟಿವಿಯ ಯಾವುದೋ ಖಾಸಗಿ ಚಾನೆಲ್ನಲ್ಲಿ ಅವತ್ತು ಆ ಹುಡುಗಿಯೊಂದಿಗೆ ಇದ್ದ ಸ್ನೇಹಿತ ಕಿಂಚಿತ್ತು ಹೆದರದೆ ಎಳೆ ಎಳೆಯಾಗಿ ಸತ್ಯವನ್ನೆಲ್ಲ ಬಿಚ್ಚಿಟ್ಟಾಗ ಎಲ್ಲರು ಯಾರ ತಪ್ಪು ,ಅಪರಾಧಿಗಳಿಗೆ ಯಾವ ಶಿಕ್ಷೆ ಆಗಬೇಕು,ಪೋಲಿಸ್ ಲೇಟಾಗಿ ಬಂದರಂತೆ ಹಾಗೆ ಹೀಗೆ ಅಂತ ನಾವೆಲ್ಲಾ ಎಷ್ಟು ಚರ್ಚೆ ಮಾಡಿದ್ವಿ.
ಅಬ್ಬಾ ನಾವೆಲ್ಲಾ ಅದೆಷ್ಟು ಉಚಿತ ಸಲಹೆಗಳನ್ನ ಕೊಡುತ್ತಿವಿ,ಅದೆಷ್ಟು ತೀಕ್ಷ್ಣವಾಗಿ ಟಿಕಿಸುತ್ತಿವಿ.ಶಭಾಶ್ ನಾವೆಲ್ಲಾ ಅಂದು ಮೊಂಬತ್ತಿ ಹಿಡಿದುಕೊಂಡು ಪ್ರತಿಭಟಿಸದಿದ್ದರೆ ಅವಳಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿರಲಿಲ್ಲ ಎಂದು ನಮ್ಮ ಬೆನ್ನು ನಾವೇ ಚಪ್ಪರಿಸಿಕೊಂಡೆವು ,ನಿರ್ಭಯಾ,ದಾಮಿನಿಯ ಆತ್ಮಕ್ಕೆ ಶಾಂತಿ ಸಿಗಲೆಂದು ಏನೇನೋ ಮಾಡಿದ್ವಿ.ಅಶ್ರುವಾಯುವಿಗೆ ಎದೆಯೊಡ್ಡಿ,ಜಲಧಾರೆ ಲೆಕ್ಕಿಸದೆ,ಪೋಲೀಸರ ಬೆತ್ತದ ದಾಳಿಗೂ ಹೆದರದೆ ಪ್ರತಿಭಟಿಸಿದೆವು .ಕೊನೆಗೆ ಎಲ್ಲರ ಕೂಗು ಒಂದೇ ಆಗಿತ್ತು..ಬದಲಾಗಬೇಕು......ಹೌದು ಬದಲಾಗಬೇಕು ..ಆದರೆ ಯಾರು ಸರ್ಕಾರವೇ ?,ವ್ಯವಸ್ಥೆಯೇ?,ಪೋಲಿಸ್ ಸಂಸ್ಥೆಯೇ,?ಅಥವಾ ನಾವೇ ?.
ನಮ್ಮಿಂದಲೇ ಶುರು ಮಾಡೋಣಾ.ನಾವು ಬದಲಾಗಬೇಕು.ಅಂದು ಅವರಿಬ್ಬರನ್ನು ರಸ್ತೆಯ ಬದಿ ಬಿಸಾಕಿ ಹೋದ ಮೇಲೆ ನಾವೆಲ್ಲಾ ನಮ್ಮ ಟೂ ವೀಲರ್ ಹಾಗು ಫೋರ್ ವೀಲರ್ ಸ್ಲೋ ಮಾಡಿಏನಾಗಿದೆ ಅಂತ ನೋಡಿ ಹೋದೆವು ಹೊರತು ನಾವ್ಯಾರು ಕೆಳಗಿಳಿಯಲೇ ಇಲ್ಲ,ಹೆಣ್ಣೊಬ್ಬಳು ಮೈ ಮೇಲೆ ಬಟ್ಟೆ ಇಲ್ಲದ ಕೊರೆಯುವ ಚಳಿಯಲ್ಲಿ ರಕ್ತದ ಮಡುವಲ್ಲಿ ಬಿದ್ದಿದ್ದಾಗ ನಾವು ಹೆದರಿ ಮುಖ ತಿರುವಿ ಕಣ್ಣುಮುಚ್ಚಿಕೊಂಡೆವು ಹೊರತು ಕೆಳಗಿಳಿಯಲಿಲ್ಲ,ಯಾರಾದ್ರೂ ಸಮೀಪದ ಆಸ್ಪತ್ರೆಗೆ ದಾಖಲು ಮಾಡಿ ಎಂದು ಅವರು ಅಂಗಲಾಚಿದರು ನಾವು ಇಲ್ಲದ ಉಸಾಬರಿ ನಮಗ್ಯಾಕೆ ಅಂತ ಮುಂದೆ ಸಾಗಿದೇವೆ ಹೊರತು ಕೆಳಗಿಳಿಯಲೇ ಇಲ್ಲಾ.ಹಾಗಾದ್ರೆ ನಮಗೆಲ್ಲ ಮೊಂಬತ್ತಿ ಹಿಡಿದು ಪ್ರತಿಭಟಿಸುವ ಹಕ್ಕಿದೆಯಾ ? ನಾವ್ಯಾಕೆ ಎಲ್ಲ ಮುಗಿದ ನಂತರ ರಸ್ತೆಗಿಳಿಯುತ್ತಿವಿ.ನಮ್ಮಲ್ಲೇ ಯಾರಾದರೂ ಅವರನ್ನು ಬೇಗನೆ ಆಸ್ಪತ್ರೆಗೆ ಸಾಗಿಸಿದ್ದರೇ ಅವಳು ಬದುಕುಳಿಯುತಿದ್ದಳೋ ಏನೋ..ನಾವು ಹಾಗು ನಮ್ಮ ಯೋಚನಾಶಕ್ತಿ ಬದಲಾಗಬೇಕಿದೆ.
ಹಾಗಾದರೆ ನಾವು ಹೇಗೆ ಬದಲಾಗಬೇಕು.
- ಧೈರ್ಯದಿಂದ ಕೆಳಗಿಳಿದು ಏನಾಗಿದೆ ಎಂದು ನೋಡಿ..ಕಾನೂನಿನ ತೊಡಕು ಎದುರಿಸುವ ತೊಂದರೆ ಬಂದರು ಪರವಾಗಿಲ್ಲ ಎನ್ನುವ ಯೋಚನೆಯಿಂದ ಮುನ್ನುಗ್ಗಿ(ಹೀಗೆ ಮುನ್ನುಗ್ಗಿದಲ್ಲಿ ಮಾತ್ರ ನಮ್ಮಂತೆ ಇತರರು ಅನುಕರಿಸುವರು).
- ಮೊದಲು ಅವರ ಮನೆಯವರ ಅಥವಾ ಬಂಧುಗಳ,ಗೆಳೆಯರ ಫೋನ್ ನಂಬರ್ ಗೆ ಕರೆ ಮಾಡಿ ಸುದ್ದಿ ತಿಳಿಸಿ.
- 100 ಗೆ ಕರೆ ಮಾಡಿ ಸೂಕ್ತ ಮಾಹಿತಿ ನೀಡಿ(ಉದಾಹರಣೆಗೆ ರಕ್ತಸ್ರಾವ ಜಾಸ್ತಿಯಾದಲ್ಲಿ ಅವರಿಗೆ ಅದರ ಬಗ್ಗೆ ತಿಳಿಸಿ).
- ನಿಮಗೆ ಗೊತ್ತಿದ್ದ್ದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿ.ಹತ್ತಿರದ ಆಸ್ಪತ್ರೆಗೆ ಸಾಗಿಸಿ.
- ಮಾಧ್ಯಮದವರ ನಂಬರ್ ಇದ್ದಲ್ಲಿ ಅವರಿಗೂ ತಿಳಿಸಿ (ಇತ್ತಿಚಿಗೆ ಮಾಧ್ಯಮದ ಹೆದರಿಕೆಯಿಂದ ಕೆಲಸಗಳು ಬೇಗ ಆಗುತ್ತಿವೆ).
- ಹೆಣ್ಣು ಬರಿ ಭೋಗದ ವಸ್ತುವಲ್ಲ ಗೆಳೆಯರೇ.ಅದು ಒಂದು ಜೀವ.ಅದಕ್ಕೂ ನೋವಾಗುತ್ತದೆ.ಹೆಣ್ಣನ್ನು ಮನೆಗೆಲಸಕ್ಕೆ ಮಾತ್ರವಲ್ಲದೆ ಎಲ್ಲೆಡೆ ನಮ್ಮೊಂದಿಗೆ ಧೈರ್ಯವಾಗಿ ಮುನ್ನುಗ್ಗುವ ವಾತಾವರಣ ಕಲ್ಪಿಸಿ.
- ತಾಯಂದಿರೆ,ಅಕ್ಕಂದಿರೆ,ತಂಗಿಯರೇ,ಸ್ನೇಹಿತರೆ ನಿಮ್ಮನ್ನು ನೀವು ರಕ್ಷಿಸುಕೊಳ್ಳಲು ಸದಾ ಸಿದ್ಧರಿರಿ.ಮಾರುಕಟ್ಟೆಯಲ್ಲಿ ಹಲವು ಸ್ಪ್ರೇಗಳು ಇವೆಯಂತೆ.ನಿಮ್ಮೊಂದಿಗೆ ಯಾವಾಗಲು ಇಟ್ಟುಕೊಂಡು ದುಷ್ಕರ್ಮಿಗಳ ಮೇಲೆ ಸ್ಪ್ರೇ ಮಾಡಿ.
ಪೋಲಿಸ್ ಸಂಸ್ಥೆ ಹೇಗೆ ಬದಲಾಗಬೇಕು
- ಕೇಸು ಯಾವ ಇಲಾಖೆಗೆ ಸೇರುತ್ತದೆ ಎನ್ನುವ ವಿಚಾರ ಮಾಡದೆ ಮೊದಲು ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಪ್ರಾರಂಭಿಸಲು ಸಹಾಯ ಮಾಡಿ.
- ಗಾಯಾಳುಗಳನ್ನು ಮೊದಲು ಸಹಾಯ ಮಾಡಿದವರಿಗೆ ವಿಶ್ವಾಸದಿಂದ ಮಾತನಾಡಿ ಅವರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎನ್ನುವ ಭರವಸೆ ಕೊಡಿ(ಈ ನಿಮ್ಮ ಮಾತುಗಳು ಅವರಿಗೆ ಖಂಡಿತ ಮುಂದೆ ಕೂಡ ಯಾರಿಗಾದರು ಸಹಾಯ ಮಾಡಲು ಪ್ರೇರೇಪಿಸುತ್ತದೆ).
- ಮನೆಯವರು ಅಥವಾ ಬಂದು ಮಿತ್ರರು ಬಂದ ಮೇಲೆ ಅವರನ್ನು(ಸಹಾಯ ಮಾಡಿದವರನ್ನು)ಕಾಯಿಸದೇ ಕಳುಹಿಸಿಕೊಡಿ
- ಶಾಲೆಗಳಲ್ಲಿ ಕಾಲೇಜುಗಳಲ್ಲಿ ಇಂಥಾ ಸಮಯದಲ್ಲಿ ಹೇಗೆ ಜನರು ನಡೆದುಕೊಳ್ಳಬೇಕು,ಸಹಾಯ ಮಾಡಬೇಕು ಎನ್ನುವುದರ ಬಗ್ಗೆ ಜಾಗೃತಿ ಮೂಡಿಸಿ(ಏಕೆಂದರೆ ನಾವೆಲ್ಲಾ ಹೆದರುವುದೇ ಪೋಲಿಸಿನವರು ನಮಗೇನು ಕೆಳುತ್ತಾರೆಂದು).
ಸರ್ಕಾರ ಹೇಗೆ ಬದಲಾಗಬೇಕು
- ಪೋಲಿಸ್ ಪಡೆಯನ್ನು ಇನ್ನು ಸಶಕ್ತರನ್ನಾಗಿ ಮಾಡಿ(ಯುವಕರನ್ನು ಯುವತಿಯರನ್ನು ಹೆಚ್ಚಾಗಿ ಸೇರಿಸಿಕೊಳ್ಳಿ).ಎಲ್ಲೆಂದರಲ್ಲಿ ಪೋಲಿಸ್ ಪಡೆಯ ಕಾವಲಿರಲಿ.
- ಜನರೊಂದಿಗೆ ಮುಖಾಮುಖಿ ಭೇಟಿ ಆಗಿ ಕಾನೂನಿನ ಬಗ್ಗೆ ಜಾಗೃತಿ ಮೂಡಿಸಿ(ಟಿವಿ ಮಾತ್ರವಲ್ಲ).
- ಗಾಯಾಳುಗಳನ್ನ ಸರಕಾರಿ ಆಸ್ಪತ್ರೆಯಲ್ಲದೆ ಖಾಸಗಿ ಆಸ್ಪತ್ರೆ ಹತ್ತಿರವಿದ್ದಲ್ಲಿ ಗಾಯಾಳುಗಳನ್ನು ದಾಖಲಿಸಲೇ ಬೇಕು ಎನ್ನುವ ಹಾಗು ಚಿಕಿತ್ಸೆ ಪ್ರಾರಂಭಿಸಲು ಆದೇಶ ಹೊರಡಿಸಿ.
- ಆದಷ್ಟು ನಮ್ಮ ಶಾಸಕರು ,ಚುನಾಯಿತ ಪ್ರತಿನಿಧಿಗಳು ಪ್ರತಿಭಟನೆ ನಡೆಯುವಾಗ ಸ್ಥಳಕ್ಕೆ ಖುದ್ದಾಗಿ ಬಂದು ಮಾತನಾಡಲಿ ಹೊರತು ಪೋಲೀಸರ ಬೆತ್ತ ,ಜಲದಾಳಿ,ಅಶ್ರುವಾಯುಗಳು ಮಾತನಾಡುವುದು ಬೇಡ.ಇದರಿಂದಾ ಪರಿಸ್ಥಿತಿ ಹತೋಟಿಗೆ ಬರದ ಹೊರತು ಇನ್ನಷ್ಟು ಅನಾಹುತಗಳು ಆಗಲು ಎಡೆ ಮಾಡಿಕೊಡುತ್ತವೆ.
- ಬಹಳಷ್ಟು ಈ ತರಹದ ಘಟನೆಗಳು ಮಧ್ಯದ ಅಮಲಿನಲ್ಲೇ ಆಗುತ್ತಿರುವುದರಿಂದ ದಯಮಾಡಿ ಮಧ್ಯಪಾನವನ್ನ ಸಂಪೂರ್ಣ ನಿಷೇಧಿಸಿ.ಸರ್ಕಾರದ ಬೊಕ್ಕಸಕ್ಕೆ ಇದರಿಂದ ನಷ್ಟವಾದರೂ ಪರವಾಗಿಲ್ಲ.ಈ ದರಿದ್ರ ಮಧ್ಯಪಾನದಿಂದ ಆಗುವ ಸರಕಾರದ ನಷ್ಟ ನಮ್ಮ ಅಕ್ಕತಂಗಿಯರ ಮಾನಕ್ಕಿಂತ ಹೆಚ್ಚಲ್ಲವಲ್ಲಾ.
- ಸೆನ್ಸಾರ ಮಂಡಳಿಯನ್ನು ಇನ್ನಷ್ಟು ಬಲಪಡಿಸಿ ಯಾವುದೇ ಜಾಹಿರಾತಿನಲ್ಲಿ,ಚಲನಚಿತ್ರಗಳಲ್ಲಿ,ಧಾರಾವಾಹಿಗಳಲ್ಲಿ ಹೆಣ್ಣನ್ನು ಭೋಗದ ವಸ್ತುವನ್ನಾಗಿ ತೋರಿಸುವುದನ್ನ ಖಡಕ್ಕಾಗಿ ನಿಲ್ಲಿಸಲಿ.
ಈ ಮೂರು(ನಾವು+ಪೊಲೀಸರು+ಸರಕಾರ)ಬದಲಾದಲ್ಲಿ ವ್ಯವಸ್ಥೆ ಅದಾಗೇ ಬದಲಾಗುತ್ತೆ.ಹಮ್ ಬದಲೆಂಗೆ ತೋ ದೇಶ್ ಬದಲೇಗಾ...
------ಪ್ರವೀಣ್.ಎಸ್.ಕುಲಕರ್ಣಿ
ಸಾಲುಗಳು
- Add new comment
- 2676 views
ಅನಿಸಿಕೆಗಳು
ಮೆಲಾಧಿಕಾರಿಗಳೇ ದಯವಿಟ್ಟು ನನ್ನ
ಮೆಲಾಧಿಕಾರಿಗಳೇ ದಯವಿಟ್ಟು ನನ್ನ ಬರಹವನ್ನ ಸರಿಯಾಗಿ ಪ್ಯಾರಾಗ್ರಾಫ್ ಮಾಡಲು ಸಹಕರಿಸಿ.
ನಮಸ್ಕಾರ ಪ್ರವೀಣ್ ಅವರೇ,
ನಮಸ್ಕಾರ ಪ್ರವೀಣ್ ಅವರೇ,
ಸರಿ ಪಡಿಸಲಾಗಿದೆ. ಇನ್ನೂ ಏನಾದ್ರೂ ಸಮಸ್ಯೆ ಇದ್ದರೆ ತಿಳಿಸಿ.
ವಂದನೆಗಳೊಂದಿಗೆ
--ಮೇಲಧಿಕಾರಿ
ವಿಸ್ಮಯನಗರಿ.ಕಾಂ
ನಮಸ್ತೆ ಮೆಲಾಧಿಕಾರಿಗಳೇ,
ನಮಸ್ತೆ ಮೆಲಾಧಿಕಾರಿಗಳೇ,
ತುಂಬಾ ಧನ್ಯಾವದಗಳು ನಿಮ್ಮ ಸಹಾಯಕ್ಕೆ.
ಪ್ರವೀಣ್ ಅವ್ರೆ -ಈ ಘಟನೆ ಮತ್ತು ಆಇಲ್ಲಿ ಮೂಲ ಸಮಸ್ಯೆ ಅದ್ಕೆ ಪರಿಹಾರ ದೊರಕದೆ ಸಮಸ್ಯೆ ಇನ್ನಸ್ಟು ಜಟಿಲ ಆಗುತ್ತಿದೆ..
ಸಹಾಯ ಬೇಡುವುದು ಮಾಡುವುದು ನೀಡುವುದು ಮನುಷ್ಯರ ಅದ್ಯ ಕರ್ತವ್ಯ...
ಅದು ಮಾಡದೆ ಸಿಗದೇ ಹೋದರೆ ಮುಂದೊಮ್ಮೆ ನಾವ್ ಮಾಡಿದ್ದು ತಪ್ಪು ಎಂದು ನಮಗೆ ಅನ್ನಿಸದೆ ಇರದು..
ಆ ಅಪರಾಧಿ ಪ್ರಜ್ಞೆಯಿಂದ ನರಳುವ -ಹೆಣಗಳ ರೀತಿ ಬದುಕುವ ಮೊದಲು ಈ ತರಹದ ಸನ್ನಿವೇಶಗಳಲ್ಲಿ ಸಹಾಯ ಹಸ್ತ ಚಾಚಬೇಕು...
ಇಂದು ಅವರಿಗಾಗಿದ್ದು ನಾಳೆ ನಮಗಾಗದೆ ಇರದೇ...?
ನಿಮಂ ಬರಹ ಸಕಾಲಿಕ
ಮಾತು ಸಲಹೆಗಳಿಗೆ ನನ್ನ ಸಹಮತ ಇದೆ...
ಬನ್ನಿ ನಾವ್ ಬದಲಾಗಲು ಇದೆ ಸಕಾಲ...
ಸಹಾಯ ಹಸ್ತ ಚಾಚೋಣ...ಜವಾಬ್ಧಾರಿಯುತ ನಾಗರಿಕರಾಗೋಣ..
ಶುಭವಾಗಲಿ...
\|/
ಪ್ರವೀಣ್ ಅವ್ರೆ -ಈ ಘಟನೆ ಮತ್ತು ಆ ನಂತರ ಆ ಘಟನೆ ಕಾರಣವಾಗಿ ಹೆಸರು ಆಸ್ತಿ ಮಾಡಲು ಕೆಲವರು ನೀ ಜೆರ್ಕ್ ರಿಯಾಕ್ಷನ್ ಕೊಡ್ತವ್ರೆ....:((
ಸಪ್ತಗಿರಿಗಳಿಗೆ ನಮಸ್ಕಾರ,
ನನ್ನ ಬರಹಕ್ಕೆ ತಾವು ಸಹಮತ ನೀಡಿದಕ್ಕೆ ಧನ್ಯವಾದಗಳು.
"ಇಲ್ಲಿ ಮೂಲ ಸಮಸ್ಯೆ ಅದ್ಕೆ ಪರಿಹಾರ ದೊರಕದೆ ಸಮಸ್ಯೆ ಇನ್ನಸ್ಟು ಜಟಿಲ ಆಗುತ್ತಿದೆ..
ಸಹಾಯ ಬೇಡುವುದು ಮಾಡುವುದು ನೀಡುವುದು ಮನುಷ್ಯರ ಅದ್ಯ ಕರ್ತವ್ಯ...
ಅದು ಮಾಡದೆ ಸಿಗದೇ ಹೋದರೆ ಮುಂದೊಮ್ಮೆ ನಾವ್ ಮಾಡಿದ್ದು ತಪ್ಪು ಎಂದು ನಮಗೆ ಅನ್ನಿಸದೆ ಇರದು..
ಆ ಅಪರಾಧಿ ಪ್ರಜ್ಞೆಯಿಂದ ನರಳುವ -ಹೆಣಗಳ ರೀತಿ ಬದುಕುವ ಮೊದಲು ಈ ತರಹದ ಸನ್ನಿವೇಶಗಳಲ್ಲಿ ಸಹಾಯ ಹಸ್ತ ಚಾಚಬೇಕು...
ಇಂದು ಅವರಿಗಾಗಿದ್ದು ನಾಳೆ ನಮಗಾಗದೆ ಇರದೇ...?"
ಖಂಡಿತ ಇದು ನೂರಕ್ಕೆ ನೂರರಷ್ಟು ಸತ್ಯ.ಅದಾಗಲೇ ದೆಹಲಿಯ ಆ ಘಟನೆಯ ನಂತರ ಹಲವಾರು ಅದೇ ರೀತಿಯ ಘಟನೆಗಳು ನಡೆದಿದ್ದು ಇನ್ನೂ ನಾವ್ಯಾರು
ಸಪ್ತಗಿರಿಗಳಿಗೆ ನಮಸ್ಕಾರ,
ಎಚ್ಚೆತ್ತಿಲ್ಲಾ ."ಸಹಾಯ ಹಸ್ತ ಚಾಚೋಣ...ಜವಾಬ್ಧಾರಿಯುತ ನಾಗರಿಕರಾಗೋಣ.."ಖಂಡಿತವಾಗಿಯೂ ನಾವೆಲ್ಲರೂ ಒಂದಾಗಿ ಮುನ್ನುಗಲೇಬೇಕು
ಈ ನಿಮ್ಮ ಲೇಖನ ನನಗೆ ತುಂಬಾ
ಈ ನಿಮ್ಮ ಲೇಖನ ನನಗೆ ತುಂಬಾ ಇಷ್ಟವಾಯಿತು ಸರ್
ನಿಜ ಬರಿ ಒಬ್ಬರೆ ಬದಲಾದರೆ ಸಾಲದು ಎಲ್ಲರು ಬದಲಾಗಬೇಕು
" Lets change ourself world change it self"
ಏನಂತೀರಿ?
ಧನ್ಯವಾದಗಳು ವಿಶ್ವ ಅವರೇ,
ಧನ್ಯವಾದಗಳು ವಿಶ್ವ ಅವರೇ,
ಮಾಧ್ಯಮಗಳು ನಡೆಸಿದ ಹಲವಾರು ಸಮೀಕ್ಷೆಗಳನ್ನ ನೋಡಿದೆ.ಯಾವುದರಲ್ಲೂ ನಮ್ಮ ಬಗ್ಗೆ
ನಾಗರಿಕರಾಗಿ ನಾವು ಹೇಗೆ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ತೋರಿಸಲೇ ಇಲ್ಲಾ.
ಪುಸ್ತಕಗಳಲ್ಲ್ಲಿ ಇಂಥಾ ಸನ್ನಿವೇಶಗಳಲ್ಲಿ ಯಾವ ರೀತಿ ನಡೆದುಕೊಳ್ಳಬೇಕು ಎನ್ನುವುದರ ಬಗ್ಗೆ ಪಾಠಗಳಿರಬೇಕು.
ಉತ್ತಮ ಬರಹ...
ಉತ್ತಮ ಬರಹ...
ಧನ್ಯವಾದ ಜಗನ್ನಾಥ್ ಅವರೇ,
ತಾವು ಬರೆದ ಹಲವು ಕವನಗಳನ್ನು ಓದಿರುವೆ.ತಮ್ಮಿಂದಲೂ ಹಲವು ಲೇಖನಗಳನ್ನು ಬಯಸುತ್ತಿರುವೆ
ಧನ್ಯವಾದ ಜಗನ್ನಾಥ್ ಅವರೇ,
ಇಂದಿನ ಸಮಸ್ಯೆ ಎಂದರೆ ಯಾವುದೇ
ಇಂದಿನ ಸಮಸ್ಯೆ ಎಂದರೆ ಯಾವುದೇ ಘಟನೆ ನೆಡೆಯುವಾಗ ನಮ್ಮ ಜನರು ಸುಮ್ಮನೆ ನೋಡುತ್ತಾ ನಿಲ್ಲುವುದು, ಘಟನೆ ಘಟಿಸಿದ ಮೇಲೆ
ದೊಡ್ಡದಾಗಿ ಪ್ರತಿಭಟನೆ ಮಾಡುವುದು,ಮೊಂಬತ್ತಿ ಹಿಡಿದು ಪೋಟೋಗೆ ಪೋಜು ಕೊಡುವುದು ಸಾಮಾನ್ಯವಾಗಿದೆ.. ಅಲ್ಲದೆ ಇಲ್ಲ-ಸಲ್ಲದ
ಮಾತುಗಳನ್ನು ಹೇಳುತ್ತಾ, ಪ್ರಚಾರ ಪಡೆಯುವುದೇ ಅಗಿದೆ. ಕಾನೂನಿಗೆ ಎದುರಿಕೊಂಡು ನಿರ್ಭಯಳಿಗೆ ಸಹಾಯ ಮಾಡದೆ ಹೋದ ಜನ
ಭಾರತೀಯರೆಂದು ಹೇಳಲು ನಾಚಿಕೆಯಾಗುತ್ತದೆ. ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಹೇಳುವ ಜನ ಆ ರೀತೀಯ ಘಟನೆಗಳು
ಮುಂದೆಯಾಗದಂತೆ ನೋಡಿಕೊಳಳ್ ಬೇಕು, ಅಲ್ಲದೆ ಕೇವಲ ನಮ್ಮ ಮೇಲೆಯಾಗುವ ಅಪರಾಧಗಳ ಬಗ್ಗೆ ಮಾತ್ರ ಸ್ಪಂದಿಸದೆ ನೊಂದವ
ರ ನೋವು ತಿಳಿದು ಅವರಿಗೆ ಸಾಂತ್ವನ ನೀಡುವ ಹಾಗೆಯೇ ಅವರಿಗೆ ನ್ಯಾಯ ದೊರಕಿಸಿಕೊಡುವ ಮನೋಭಾವ ಮೂಡಬೇಕು ಅಂದರೆ
ಮೊದಲು ನಮ್ಮ ಜನರ ಮನೋಭಾವ ಬದಲಾಗಬೇಕು.
ನವೀನ ಚಂದ್ರ ಅವರೇ,
ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನನ್ನ ಬರಹಕ್ಕೆ ತಮ್ಮ ಪ್ರತಿಕ್ರಿಯೆ ಪೂರಕವಾಗಿದೆ.ಎಲ್ಲಾ ಆದ ಮೇಲೆ ನಾವೆಲ್ಲಾ ಒಂದಾಗೊದಕ್ಕಿಂತ ನಮಗೆ ಎಲ್ಲೆಲ್ಲಿ ಈ ರೀತಿ ಘಟನೆಗಳು ಕಾಣಿಸುತ್ತವೆಯೋ ಅಲ್ಲೆಲ್ಲಾ ನಾವೆಲ್ಲಾ ಒಂದಾಗಿ ಆ ಘಟನೆಗಳು ಆಗದಂತೆ ತಡೆಯಬೇಕು.