
ನೋಕಿಯಾ ಲುಮಿಯಾ ೯೨೦ ಹಾಗೂ ೮೨೦ ಜನವರಿ ೧೦ರಂದು ಭಾರತದಲ್ಲಿ?!!
ನೋಕಿಯಾ ಲುಮಿಯಾ ೯೨೦ ಹಾಗೂ ೮೨೦ ಸ್ಮಾರ್ಟ್ ಫೋನುಗಳು ಜನವರಿ ೧೦ರಂದು ಭಾರತದಲ್ಲಿ ಬಿಡುಗಡೆ ಆಗಲಿದೆಯೇ? ಹೌದು ಅನ್ನುತ್ತಿದೆ ಕೆಲವು ಮೂಲಗಳು. ಜನವರಿ ೧೦ರಂದು ನೋಕಿಯಾ ಡೆಲ್ಲಿಯಲ್ಲಿ ಪತ್ರಿಕಾ ಗೋಷ್ಟಿ ಆಯೋಜಿಸಿದೆ. ಅಲ್ಲಿ ಈ ಎರಡು ಫೋನುಗಳನ್ನು ಬಿಡುಗಡೆ ನೋಕಿಯಾ ಮಾಡಲಿದೆ ಎನ್ನಲಾಗಿದೆ.
ನೋಕಿಯಾದ ಈ ವಿಂಡೋಸ್ ಫೋನ್ ೮ ಆಧಾರಿತ ಸ್ಮಾರ್ಟ್ ಫೋನುಗಳು ಬಿಡುಗಡೆ ಆದ ಕಡೆ ಎಲ್ಲ ಬೇಡಿಕೆಯಲ್ಲಿದೆ. ಆಪಲ್ ನ ಐ ಫೋನು ೨೦೦೭ರಲ್ಲಿ ಬಿಡುಗಡೆ ಆದ ನಂತರ ಅದು ಬ್ಲಾಕ್ ಬೆರ್ರಿ ಹಾಗೂ ನೋಕಿಯಾದ ಸಿಂಬಿಯನ್ ಆಧಾರಿತ ಸ್ಮಾರ್ಟ್ ಫೋನುಗಳನ್ನು ಹಿಂದೆ ಹಾಕಿ ಸ್ಮಾರ್ಟ್ ಫೋನ್ ಮಾರುಕಟ್ಟೆಯನ್ನೇ ಬದಲಾಯಿಸಿತು. ಇಂದೂ ಕೂಡಾ ಆಪಲ್ ನ ಐಫೋನಿಗೆ ಸರಿ ಸಾಟಿಯಾದ ಫೋನು ಇನ್ನೊಂದಿಲ್ಲ. ಅದಕ್ಕೆ ಲಭ್ಯವಿರುವ ಉತ್ತಮ ಗುಣಮಟ್ಟದ ಅಪ್ಲಿಕೇಶನ್ ಗಳು ಹಾಗೂ ಎಕ್ಸೆಸ್ಸರೀಸ್ ಇನ್ನಾವ್ ಫೋನಿಗೂ ಲಭ್ಯವಿಲ್ಲ. ಗೂಗಲ್ ನ ಅಂಡ್ರಾಯಿಡ್ ಆಪರೇಟಿಂಗ್ ಸಿಸ್ಟೆಮ್ ಆಪಲ್ ನ ಐಒಎಸ್ ಅನುಕರಿಸಿ ಸ್ವಲ್ಪ ಮಟ್ಟಿಗೆ ಯಶಸ್ವಿಯಾಯ್ತು. ಇಂದು ಗೂಗಲ್ ನ ಅಂಡ್ರಾಯಿಡ್ ಹೆಚ್ಚು ಸ್ಮಾರ್ಟ್ ಫೋನು ಮಾರುಕಟ್ಟೆ ಹೊಂದಿದ್ದರೂ ಎಲ್ಲಾ ಫೋನುಗಳು ಉತ್ತಮ ಗುಣಮಟ್ಟದವಲ್ಲ. ಅಂಡ್ರಾಯಿಡ್ ನ ಹಲವು ಆವೃತ್ತಿ ಮಾರುಕಟ್ಟೆಯಲ್ಲಿದ್ದು ಅವು ಗೊಂದಲಕಾರಿಯಾಗಿದೆ. ಹಾಗೇ ಮಾಲ್ವೇರ್ ಹಾಗೂ ವೈರಸ್ ಪ್ರಾಬ್ಲಂ ಕೂಡಾ.
ಅಂಡ್ರಾಯಿಡ್ ನಲ್ಲಿ ಹೆಚ್ಚು ಯಶಸ್ವಿಯಾಗಿದ್ದು ಸ್ಯಾಮಸಂಗ್ ಮಾತ್ರ. ಇನ್ನುಳಿದ ಎಚ್ ಟಿ ಸಿ, ಹುವೈ, ಎಲ್ ಜಿ ಮೊದಲಾದ ಕಂಪನಿಗಳಿಗೆ ಸ್ಮಾರ್ಟ್ ಫೋನು ವ್ಯಾಪಾರ ಅಷ್ಟು ಲಾಭದಾಯಕವಾಗಿಲ್ಲ. ಗೂಗಲ್ ನ ನೆಕ್ಸಸ್ ೪ ಸೀರಿಸ್ ಕೂಡಾ ಮೆಚ್ಚುಗೆ ಗಳಿಸಿದೆ.
ಆಗ ಸ್ಮಾರ್ಟ್ ಫೋನು ವ್ಯಾಪಾರದಲ್ಲಿ ಬೀಳುತ್ತಿದ್ದ ನೋಕಿಯಾ ತನ್ನ ಸಿಂಬಿಯನ್ ಆಪರೇಟಿಂಗ್ ಸಿಸ್ಟೆಮ್ ಬಿಟ್ಟು ಮೈಕ್ರೋಸಾಫ್ಟ್ ವಿಂಡೋಸ್ ಫೋನು ಬಳಸಲು ನಿರ್ಧರಿಸಿತು. ಅದರ ಪರಿಣಾಮವೇ ನೋಕಿಯಾ ಲುಮಿಯಾ ಸೀರಿಸ್ ಫೋನುಗಳು. ಮೊದಲು ಲುಮಿಯಾ ೯೦೦, ೮೧೦, ೭೧೦ ಬಿಡುಗಡೆ ಆಗಿತ್ತು. ಅವು ಜನಮನ್ನಣೆ ಗಳಿಸಿದರೂ ಸ್ಮಾರ್ಟ್ ಫೋನು ಮಾರುಕಟ್ಟೆಯಲ್ಲಿ ಹೆಚ್ಚು ಪಾಲು ಪಡೆಯಲು ಯಶಸ್ವಿಯಾಗಲಿಲ್ಲ. ಅದಕ್ಕೆ ಮುಖ್ಯ ಕಾರಣ ವಿಭಿನ್ನವಾದ ಇಂಟರಫೇಸ್ ಹಾಗೂ ಕಡಿಮೆ ಅಪ್ಲಿಕೇಶನ್ ಗಳು.
ಆದರೂ ನೋಕಿಯಾದ ಅತ್ಯುತ್ತಮ ಗುಣಮಟ್ಟದ ಹಾರ್ಡವೇರ್ ಹಾಗೂ ಅವರ ಸಪೋರ್ಟ್ ಕಾರಣದಿಂದಾಗಿ ಅವರು ಜಗತ್ತಿನ ಅತಿದೊಡ್ಡ ವಿಂಡೋಸ್ ಫೋನ್ ತಯಾರಕರಾಗಿದ್ದಾರೆ.
ಲುಮಿಯಾ ೯೨೦ ೪.೫ ಇಂಚಿನ ಹೈ ಡೆಫಿನೇಶನ್ ಸ್ಕ್ರೀನ್ ಡ್ಯೂಯಲ್ ಕೋರ್ ೧.೫ ಗಿಗಾ ಹರ್ಟ್ಝ್ ಪ್ರಾಸೆಸರ್, ೧ ಜಿಬಿ ಮೆಮರಿ, ೮.೭ ಮೆಗಾ ಪಿಕ್ಸೆಲ್ ಪ್ಯೂರ್ ವೀವ್ ಕ್ಯಾಮರಾ, ಮುಂದೆ ೧.೨ ಮೆಗಾ ಪಿಕ್ಸೆಲ್ ಕ್ಯಾಮರಾ, ೩೨ ಜಿಬಿ ಸ್ಟೋರೇಜ್, ವೈರ್ ಲೆಸ್ ಚಾರ್ಜಿಂಗ್ ಸೌಲಭ್ಯವಿದೆ. ಇದರ ಸ್ಕ್ರೀನ್ ಹಾಗೂ ಕ್ಯಾಮರಾ ಗುಣಮಟ್ಟ ಮೆಚ್ಚುಗೆಗೆ ಪಾತ್ರವಾಗಿದೆ. ಇದು ಸ್ವಲ್ಪ ಭಾರ ಜಾಸ್ತಿ ಎಂಬುದು ಕೆಲವು ವಿಮರ್ಶಕರ ಅಭಿಪ್ರಾಯ. ಇದರ ವಿಂಡೋಸ್ ಫೋನು ೮ ಆಪರೇಟಿಂಗ್ ಸಿಸ್ಟೆಮ್ ವಿಂಡೋಸ್ ೮ ಡೆಸ್ಕ್ ಟಾಪ್ ಆಪರೇಟಿಂಗ್ ಸಿಸ್ಟೇಮ್ ಎಪಿಐ ಬಳಸುತ್ತದೆ. ಅಂದರೆ ವಿಂಡೋಸ್ ೮ ಗೆ ನಿರ್ಮಿಸಿದ ಅಪ್ಲಿಕೇಶನ್ ಗಳನ್ನು ಇದಕ್ಕೆ ಮೈಗ್ರೇಟ್ ಮಾಡುವದು ಸುಲಭ.
ನೋಕಿಯಾ ಲುಮಿಯಾ ೯೨೦ ಬಿಸಿ ದೋಸೆಯಂತೆ ಖರ್ಚಾಗುತ್ತಿದೆ. ಆದರೆ ನೋಕಿಯಾ ಇಷ್ಟರ ಮಟ್ಟಿಗೆ ಬೇಡಿಕೆ ಬರುತ್ತೆ ಅನ್ನುವದನ್ನು ಊಹಿಸಿರಲಿಲ್ಲ. ಅದರಿಂದ ಆ ಬೇಡಿಕೆಯನ್ನು ಕೂಡಲೆ ಪೂರೈಸಲು ವಿಫಲವಾಗಿದೆ. ಅನೇಕ ಕಡೆ ಈ ಫೋನು ಬಿಡುಗಡೆ ಆದ ತಕ್ಷಣ ಸೋಲ್ಡ್ ಔಟ್ ಆಗುವದು ಸಾಮಾನ್ಯ.
ನೋಕಿಯಾ ಲುಮಿಯಾ ಸಿರೀಸ್ ಗಳು ಅಂಡ್ರಾಯಿಡ್, ಐಒಎಸ್ ಗೆ ಸಡ್ಡು ಹೊಡೆಯುವದೇ ಎನ್ನುವದನ್ನು ಕಾದು ನೋಡಬೇಕು. ಸಧ್ಯದಲ್ಲೇ ಬರಲಿರುವ ಬ್ಲ್ಯಾಕ್ ಬೆರ್ರಿ ೧೦ ಸಹ ಸ್ಪರ್ಧೆ ನೀಡಲಿದೆ.
ಆಪಲ್ ಐಫೋನು ಹಾಗೂ ಸ್ಯಾಮಸಂಗ್ ಗ್ಯಾಲಕ್ಸಿ ಗೆ ಸ್ಪರ್ಧೆ ನೀಡಲು ಗೂಗಲ್ ಸಹ ಮೋಟೋರೋಲಾ ಜೊತೆಗೂಡಿ ಎಕ್ಸ್ ಫೋನು ನಿರ್ಮಿಸುತ್ತಿರುವ ಸುದ್ಧಿ ಬಂದಿದೆ. ಒಟ್ಟಿನಲ್ಲಿ ಗ್ರಾಹಕರಿಗೆ ಸುಗ್ಗಿ.
ನಾನು ವಿಮರ್ಶೆಗಳನ್ನು ಓದಿದ ಪ್ರಕಾರ ೨೦೧೨ ರ ಅತ್ಯುತ್ತಮ ಸ್ಮಾರ್ಟ್ ಫೋನುಗಳು ಹೀಗಿವೆ
- ಆಪಲ್ ಐಫೋನು ೫
- ಸ್ಯಾಮಸಂಗ್ ಗ್ಯಾಲಕ್ಸಿ ನೋಟ್ ೨
- ನೋಕಿಯಾ ಲ್ಯುಮಿಯಾ ೯೨೦
- ಸ್ಯಾಮಸಂಗ್ ಗ್ಯಾಲಕ್ಸಿ ಎಸ್
- ಗೂಗಲ್ ನೆಕ್ಸಸ್ ೪
ನೀವು ಯಾವ ಸ್ಮಾರ್ಟ್ ಫೋನು ಬಳಸುತ್ತಿದ್ದೀರಾ? ನಿಮ್ಮ ಅನಿಸಿಕೆ ಏನು ಕಮೆಂಟ್ ಅಲ್ಲಿ ಕೆಳಗೆ ತಿಳಿಸುತ್ತೀರಲ್ವಾ?
ಸಾಲುಗಳು
- Add new comment
- 929 views
ಅನಿಸಿಕೆಗಳು
ರಾಜೇಶ್ ಅವರೇ
ರಾಜೇಶ್ ಅವರೇ
ನೋಕಿಯ ಯಾವ್ದೆಲ್ಲ ಸೆಟ್ ಬಿಟ್ರೂ ಅದು ಮಾರ್ಕೆಟ್ನಲ್ಲಿ ಬಹು ಹಿಂದೆ ಇದೆ...
ಮತ್ತು ಜನರಿಗೆ ಬೇಕಾದ ದರಗಳಲಿ- ವೈವಿದ್ಯಮಯ ಆಕಾರ ವಿನ್ಯಾಸ -ಸೇವೆಯಲಿ ಸ್ಯಾಮ್ಸಂಗ್ ಮುಂಚೂಣಿಯಲ್ಲಿದೆ...
ಮದ್ಯಮ ವರ್ಗಕ್ಕೆ ದಕ್ಕುವ ಬೆಲೆಯಲ್ಲಿ ಅತ್ಯುತ್ತಮ ಸೇವೆಯೊಡನೆ -ಸ್ಯಾಮ್ಸಂಗ್ ಈ ಗ್ರಾಹಕರ ಮನ ಗೆದ್ದಿದೆ..
ಸೊಕ್ಕು -ಏಕಸ್ವಾಮ್ಯದ ಹಮ್ಮುಬಿಮ್ಮಲ್ಲಿದ್ದ ನೋಕಿಯಾ ಈಗ ಮಾರುಕಟ್ಟೆಯಲ್ಲಿ ಮೇಲೆ ಬರಲು ಒದ್ದಾಡುತ್ತಿದೆ..
ಅದೇ ಹಳೆಯ ವಿನ್ಯಾಸ -ಹೆಚ್ಚಿನ ದರ- ಅನಾದರ ಅದಕ್ಕೆ ಹಿನ್ನಡೆ ಆಗಲು ಕಾರಣ -ಸ್ವಯಂಕೃತ ಅಪರಾಧ..!!
ನೋಕಿಯ ಫೋನ್ ಬಗ್ಗೆ ಚೆನ್ನಾಗಿ ಬರೆದಿರುವಿರಿ..
ನಿಮಗೆ ಎಲೆಕ್ಟ್ರಾನಿಕ್ ವಸ್ತುಗಳ ಬಗ್ಗೆ ಹೆಚ್ಚಿನ ಒಲವಿದೆ ಅಸ್ನುತ್ತೆ...
ನನಗೂ....!!
ನಾ ಸ್ಯಾಮ್ಸಂಗ್ ಗ್ರಾಹಕನಾಗುವುದಕ್ಕೆ ಮೊದಲು ಎಲ್ಲರ ಹಾಗೆ ನೋಕಿಯಾದ ಅಭಿಮಾನಿ ಮತ್ತು ಹಲವು ಸೆಟ್ ಖರೀದಿಸಿ ಉಪಯೋಗಿಸಿದೆ ...ಒಂದು ವರ್ಷದ ಹಿಂದೆ ಅವರು ಬಿಟ್ಟ ಯಾವೊಂದು ಮಾಡಲೇ ಇಷ್ಟ ಆಗದೆ ದರ ವಿಪರೀತ ಅನ್ನಿಸಿ ಅದೇ ಆಯ್ಕೆಗಳು-ಕಡಿಮೆ ದರದ ಸ್ಯಾಮ್ಸಂಗ್ ಬಿ 5310 -ಕಾರ್ಬಿ ಪ್ರೊ ಪ್ಲಸ್ ತೆಗೆದುಕೊಂಡೆ...ಈಗೀಗ ಬ್ಯಾಟೆರಿ ಕಡಿಮೆ ಅವಧಿ ಬರುತ್ತಿದೆ..(ಇಂಟರ್ನೆಟ್ ಸರ್ಫಿಂಗ್-ಫೇಸ್ಬುಕ್ ನೋಡುವುದು -ಯೂಟೂಬ್ ಕಾರಣವಾಗಿ)..ಆದರೂ ಬ್ಯಾಟೆರಿ ವಿಷಯದಲ್ಲಿ ನೋಕಿಯ ಬೆಸ್ಟ್..!
ಶುಭವಾಗಲಿ..
\|/