
ಸುಡು ಬಿಸಿಲಲ್ಲಿ ತೆಗೆದ ಫೋಟೋದಲ್ಲಿ ಮಳೆ ತರಿಸುವದು ಹೇಗೆ?
ಸುಡು ಬಿಸಿಲಲ್ಲಿ ತೆಗೆದ ಫೋಟೋದಲ್ಲಿ ಮಳೆ ತರಿಸುವದು ಹೇಗೆ? ಆಶ್ಚರ್ಯ ಆಯ್ತಾ? ಈಗ ನೀವು ಯಾವುದಾದರೂ ಲ್ಯಾಪ್ ಟಾಪ್ ಅಥವಾ ಡೆಸ್ಕ್ ಟಾಪ್ ಅಲ್ಲಿ ಓದುತ್ತಿದ್ದರೆ ಅದರಲ್ಲಿ ಈ ಚಮತ್ಕಾರ ಸಾಧ್ಯವಿದೆ. ಇದನ್ನು ಪೇಂಟ್.ನೆಟ್ ಎಂಬ ಉಚಿತ ಸಾಫ್ಟವೇರ್ ಅನ್ನು ವಿಂಡೋಸ್ ಎಕ್ಸ್ಪಿ ಅಲ್ಲಿ ಮಾಡಲಾಗಿದೆ. ಫೋಟೋ ಶಾಪ್ ಅಲ್ಲೂ ಇದನ್ನು ಮಾಡಬಹುದು. ಪೇಂಟ್.ನೆಟ್ ಬಗ್ಗೆ ನನ್ನ ಹಿಂದಿನ ಲೇಖನ ಓದಿ.
ಈ ಕೆಳಗಿನ ಸೂಚನೆಯನ್ನು ಪೇಂಟ್.ನೆಟ್ ಅಲ್ಲಿ ಪಾಲಿಸಿದಾಗ ಬರುವ ಚಿತ್ರ ಹೆಚ್ಚು ಕಡಿಮೆ ಹೀಗೆ ಇರುತ್ತದೆ. ನೀವು ಯಾವ ಚಿತ್ರ ಬೇಕಾದರೂ ಆಯ್ಕೆ ಮಾಡಿ ಕೊಂಡು ಅದರ ಮೇಲೆ ಇದನ್ನು ಪ್ರಯೋಗಿಸಬಹುದು.
ಇದನ್ನು ಮಾಡುವದು ಹೇಗೆ? ಮುಂದೆ ಓದಿ?
ಸಾಮಾನ್ಯವಾಗಿ ಮಳೆ ಬರುವಾಗ ಮೋಡ ಕವಿದ ಕಾರಣದಿಂದ ಸೂರ್ಯನ ಬೆಳಕು ಕಡಿಮೆ ಇರುತ್ತದೆ. ಮೊದಲು ಚಿತ್ರದ ಬ್ರೈಟ್ನೆಸ್ ಕಡಿಮೆ ಮಾಡಿ.
ಎಡ್ಜಸ್ಟ್ ಮೆಂಟ್ಸ್ > ಬ್ರೈಟ್ನೆಸ್ / ಕಾಂಟ್ರಾಸ್ಟ್ ಗೆ ಹೋಗಿ. ಇಲ್ಲಿ ಬ್ರೈಟ್ನೆಸ್ ಅನ್ನು ಕಡಿಮೆ ಮಾಡಿ.
ಈಗ ಟೂಲ್ಸ್ ಅಲ್ಲಿ ಲಾಸೋ ಸೆಲೆಕ್ಟ್ ಆಯ್ಕೆ ಮಾಡಿ ಈ ಮುಂದಿನ ಚಿತ್ರದಲ್ಲಿರುವಂತೆ ಸೆಲೆಕ್ಟ್ ಮಾಡಿ.
ನಂತರ ಅಡ್ಜಸ್ಟ್ ಮೆಂಟ್ > ಹ್ಯೂ / ಸೆಚುರೇಶನ್ ಆಯ್ಕೆ ಮಾಡಿ. ಸೆಚುರೇಶನ್ ಅನ್ನು ೧೨೫ ಗೆ ಸೆಟ್ ಮಾಡಿ ಒಕೆ ಬಟನ್ ಕ್ಲಿಕ್ ಮಾಡಿ.
ಈಗ ಹೊಸ ಲೇಯರ್ ಅನ್ನು ಸೇರಿಸಿ. ಲೇಯರ್ ಸೇರಿಸಲು ಲೇಯರ್ಸ್ > ಏಡ್ ನ್ಯೂ ಲೇಯರ್ ಅನ್ನು ಆಯ್ಕೆ ಮಾಡಿ.
ಟೂಲ್ಸ್ > ಪೇಂಟ್ ಬಕೆಟ್ ಟೂಲ್ ಆಯ್ಕೆ ಮಾಡಿ ಲೇಯರ್ ಅಲ್ಲಿ ಕಪ್ಪು ಬಣ್ಣ ತುಂಬಿ.
ಈಗ ಇಫೆಕ್ಟ್ಸ್ ಮೆನು > ನೊಯ್ಸ್ > ಎಡ್ ನೊಯ್ಸ್ ಆಯ್ಕೆ ಮಾಡಿ.
ಇಂಟೆನ್ಸಿಟಿ ೬೪, ಕಲರ್ ಸ್ಯಾಚುರೇಶನ್ ೧೦೦ ಹಾಗೂ ಕವರೇಜ್ ೧೦೦ ಸೆಟ್ ಮಾಡಿ ಒಕೆ ಬಟನ್ ಕ್ಲಿಕ್ ಮಾಡಿ.
ನಂತರ ಅಡ್ಜಸ್ಟ್ ಮೆಂಟ್ > ಬ್ಲ್ಯಾಕ್ ಅಂಡ್ ವೈಟ್ ಆಯ್ಕೆ ಮಾಡಿ.
ಆಮೇಲೆ ಇಫೆಕ್ಟ್ಸ್ > ಬ್ಲರ್ಸ್ > ಮೋಶನ್ ಬ್ಲರ್ ಆಯ್ಕೆ ಮಾಡಿ.
ಆಂಗಲ್ ೭೫, ಸೆಂಟರ್ಡ್ ಚೆಕ್ ಬಾಕ್ಸ್ ಆಯ್ಕೆ ಮಾಡಿ, ಡಿಸ್ಟನ್ಸ್ ೨೫ ಸೆಟ್ ಮಾಡಿ ಒಕೆ ಕ್ಲಿಕ್ ಮಾಡಿ.
ಮತ್ತೆ ಇಫೆಕ್ಟ್ಸ್ > ಫೋಟೋ > ಶಾರ್ಪನ್ ಆಯ್ಕೆ ಮಾಡಿ. ಶರ್ಪನ್ ಎಮೌಂಟ್ ೫ ಸೆಟ್ ಮಾಡಿ ಒಕೆ ಬಟನ್ ಕ್ಲಿಕ್ ಮಾಡಿ.
ಈಗ ಹೊಸ ಲೇಯರ್ ಪ್ರಾಪರ್ಟಿಯನ್ನು ಬದಲಾಯಿಸಿ. ಬ್ಲೆಂಡಿಗ್ ಮೋಡ್ ಅನ್ನು ಸ್ಕ್ರೀನ್ ಆಗಿ ಸೆಟ್ ಮಾಡಿ ಒಕೆ ಕ್ಲಿಕ್ ಮಾಡಿ,
ಈಗ ಬೇಕಾದರೆ ನೀವು ಬ್ಯಾಕ್ ಗ್ರೌಂಡ್ ನ ಬ್ರೈಟ್ನೆಸ್ ಹಾಗೂ ಕಾಂಟ್ರಾಸ್ಟ್ ಬದಲಾಯಿಸಬಹುದು.
ಈಗ ನೀವು ಚಿತ್ರವನ್ನು ಪಿಎನ್ ಜಿ ಪಾರ್ಮಾಟ್ ಅಲ್ಲಿ ರಕ್ಷಿಸಬಹುದು.
ನೀವು ಇನ್ನೂ ಅನೇಕ ಇಫೆಕ್ಟ್ಸ್ ಸೇರಿಸುವದರ ಮೂಲಕ ಮಳೆಯ ನೈಜತೆ ಹೆಚ್ಚಿಸಬಹುದು. ಹೇಗಿದೆ ಈ ಜಾದೂ?
ಸಾಲುಗಳು
- 722 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ