Skip to main content

ಸಹೋದರಿ ನಿರ್ಭಯ ದಾಮಿನಿಗೆ ಶ್ರದ್ಧಾಂಜಲಿ

ಬರೆದಿದ್ದುDecember 30, 2012
4ಅನಿಸಿಕೆಗಳು

ಕೊನೆಗೂ ಆ ಹುಡುಗಿ ಬದುಕಲೇ ಇಲ್ಲ, ದೆಹಲಿಯಲ್ಲಿ ಅತ್ಯಾಚಾರಕ್ಕೊಳಗಾದ ನಿರ್ಭಯ ದಾಮಿನಿ ಕೊನೆಗೂ ಸಾವನ್ನಪ್ಪಿದ್ದಾಳೆ. ಆದರೆ ಆಕೆಯನ್ನು ಬರ್ಭರವಾಗಿ ಅತ್ಯಾಚಾರವೆಸಗಿ ವಿಕೃತ ಆನಂದ ಪಟ್ಟ ಕದೀಮರು ಜೈಲಲ್ಲಿ ಆರಾಮಾಗಿದ್ದಾರೆ. ಇನ್ನು ನ್ಯಾಯಾಲಯದ ವಿಚಾರಣೆ ಅದೆಷ್ಟು ದಿನ ಎಳೆದಾಡುತ್ತೋ ? ಎಷ್ಟು ಜನರಿಗೆ ಘನ ನ್ಯಾಯಾಲಯ ಜಾಮೀನು ಕೊಟ್ಟು ಕಳಿಸುತ್ತೋ ? ಶಿಕ್ಷೆಯಾದರೂ ಅದೆಷ್ಟು ವರ್ಷ ಜೈಲಲ್ಲಿದ್ದಾರು ? ಈಗ ಭಾರತದ ಜೈಲಲ್ಲಿರುವುದು ಶಿಕ್ಷೆ ಅಂತ ಯಾರು ಹೇಳುತ್ತಾರೆ ? ಹೆಚ್ಚೆಂದರೆ ಜೀವಾವಧಿ ಶಿಕ್ಷೆಯಾಗಬಹುದು. ಎಂಟತ್ತು ವರ್ಷ ಜೈಲಲ್ಲಿದ್ದು ಹೊರ ಬಂದರೆ ಮುಗಿಯಿತು. ಮತ್ತೆ ಆರಾಮಾಗಿ ಜೀವನ ಕಳೆಯಬಹುದು. ಸತ್ತವಳು ಹೋದಳು ಅಷ್ಟೇ ಎಂದು ನಾವೂ ಸುಮ್ಮನಾಗುತ್ತೇವೆ.

ಇದು ಮೊದಲಲ್ಲ, ಎಲ್ಲಾ ಕೆಟ್ಟ ಘಟನೆಗಳಂತೆಯೇ ಇದು ಕೊನೆಯಾಗುವುದೂ ಇಲ್ಲ. ಮತ್ತೆ ಮತ್ತೆ ಅತ್ಯಾಚಾರಗಳು, ಕೊಲೆಗಳು ನಡೆಯುತ್ತಲೇ ಇರುತ್ತವೆ. ನಾವು ಟಿವಿಯಲ್ಲಿ, ಪತ್ರಿಕೆಯಲ್ಲಿ ಸುದ್ದಿ ನೋಡಿ ಸುಮ್ಮನಗುತ್ತೇವೆ. ಬಿಡು, ನಮ್ಮೆನೆ ಹುಡುಗಿ ಅಲ್ಲವಲ್ಲ ಅಂದುಕೊಳ್ಳುವವರೆ ಹೆಚ್ಚು. ಆದರೆ ಇದೇ ಘಟನೆ ಸೌದಿ ಅರೇಬಿಯಾದಲ್ಲಿ ನಡೆದಿದ್ದರೆ ? ಅಪರಾಧಿಗಳನ್ನು ಇಷ್ಟರಲ್ಲೇ ಬೀದಿಯಲ್ಲಿ ನಿಲ್ಲಿಸಿ ಕಲ್ಲು ಹೊಡೆದು ಸಾಯಿಸಿರುತ್ತಿದ್ದರು... ಆದರೆ ಇದು ಭಾರತ... ನಾವು ಎಲ್ಲವನ್ನೂ ಸಹಿಸಿಕೊಳ್ಳುವಂತಹವರು. ನಮ್ಮಲ್ಲಿ ಶಿಕ್ಷೆ ಆಗುವುದಾದರೂ ಹೇಗೆ ? ನಮ್ಮ ರಾಜಕಾರಣಿಗಳೇ ಹಲವರು ಅತ್ಯಾಚಾರವೆಸಗಿ ಅಧಿಕಾರದಲ್ಲಿರುವಾಗ ?

ಅತ್ಯಾಚಾರಗಳು ಭಾರತದಲ್ಲಿ ಸರಾಸರಿ ನಿಮಿಷಕ್ಕೊಂದರಂತೆ ನಡೆಯುತ್ತವೆ ಎನ್ನುತ್ತಾರೆ. ಹಳ್ಳಿಗಳಲ್ಲಿ ನಡೆಯುವ ಇಂತಹ ಸಾವಿರಾರು ಘಟನೆಗಲು ಹೊರ ಜಗತ್ತಿಗೆ ಗೊತ್ತಾಗುವುದೇ ಇಲ್ಲ. ಕರ್ನಾಟಕದಲ್ಲೇ ಅತ್ಯಂತ ಹೀನಾಯ ಎನ್ನುವಂತಹ ಘಟನೆಗಳು ನಡೆದಿವೆ. ಉಹುಂ, ಯಾರಿಗೂ ಶಿಕ್ಷೆಯಿಲ್ಲ (ನಾನು ಮೊದಲೇ ಹೇಳಿದಂತೆ ಜೈಲುವಾಸ ಶಿಕ್ಷೆಯಾಗಿ ಉಳಿದಿಲ್ಲ!). ಇಂತಹ ದುರುಳರಿಗೆ ಕಠಿಣ ಶಿಕ್ಷೆ ದೊರೆಯುವುದೆ ಅಪರೂಪ. ಹಾಗೆ ಅಪರೂಪದಲ್ಲಿ ಅಪರೂಪವಾಗಿ ನ್ಯಾಯಾಲಯ ಯಾರಿಗಾದರೂ ಕಠಿಣ ಶಿಕ್ಷೆಯಾಗಿ ನೇಣಿಗೇರಿಸುವಂತೆ ಹೆಳಿದರೂ ನಮ್ಮ ಸರ್ಕಾರಕ್ಕೆ ಅದು ಸಾಧ್ಯವಾಗುವುದಿಲ್ಲ. ಉಮೇಶ್‌ ರೆಡ್ಡಿ ಎಂಬ ಕಾಮುಕನಿಗೆ ನೇಣುಗಂಬ ಶಿಕ್ಷೆ ವಿಧಿಸಿ ಬಹಳ ವರ್ಷಗಳಾದವು. ಅವನು ಬಳ್ಳಾರಿ ಜೈಲಿನಲ್ಲಿ ಹಾಯಾಗಿದ್ದಾನೆ. ಅಂತಹ ಎಷ್ಟೊ ಅತ್ಯಾಚಾರಿಗಳು ಏಳೆಂಟು ವರ್ಷಗಳ ತಮ್ಮ ಸೆರೆವಾಸವನ್ನು ಮುಗಿಸಿ ಸಮಾಜದಲ್ಲಿ ನೆಮ್ಮದಿಯಿಂದ ಓಡಾಡಿಕೊಂಡಿದ್ದಾರೆ. ಆದರೆ ಅತ್ಯಾಚಾರಕ್ಕೊಳಗಾದ ಹೆಣ್ಣು ಮಾತ್ರ ಒಂದೋ ಆಗಲೇ ಸತ್ತಿರುತ್ತಾಳೆ, ಅಥವಾ ಪದೇ ಪದೇ ಜನರ ಕಣ್ಣಿಂದಾಗಿ ಸಾಯುತ್ತಿರುತ್ತಾಳೆ. ಅತ್ಯಾಚಾರಗಳು ಹೆಚ್ಚುತ್ತಲೇ ಇರುತ್ತವೆ. 

ಈ ಬಾರಿಯಂತೂ ರಾಜಕೀಯ ಕಾರಣಕ್ಕಾಗಿಯಾದರೂ ಹೋರಾಟ ಜೋರಾಗಿದೆ. ಈ ಬರಿಯಾದರೂ ಕೇಂದ್ರ ಸರ್ಕಾರ ಕಾನೂನಿನಲ್ಲಿ ಮಾಪಾಡು ತಂದು ಅತ್ಯಾಚಾರಿಗಳಿಗಾದರೂ ತಕ್ಷಣದ ಗಲ್ಲು ಶಿಕ್ಷೆ ವಿಧಿಸುವಂತೆ ಏರ್ಪಾಡು ಮಾಡಲಿ ಎಂಬುದೆ ಎಲ್ಲರ ಕೋರಿಕೆ. ಇದರಿಂದಾದರೂ ಅತ್ಯಾಚಾರಗಳಂತಹ ಹೀನ ಕಾರ್ಯಗಳು ಕಡಿಮೆಯಾಗಬಹುದು.

 

ಲೇಖಕರು

ಪಿಸುಮಾತು

ಕಾದಂಬರಿಗಳು : ಜೀವನ ಪಥ, ಅವಿರತ ಹೋರಾಟ, ಅಜ್ಞಾತ ಕವಿಯ ಮೃತ್ಯು ಗೀತೆ

ಮಿನಿ ಕಾದಂಬರಿಗಳು : ಒಲವಿಂದಲೇ ಗೆಲ್ಲುವೆ, ಮಿ.ಪ್ರೇಮಿ, ಅಂಡಮಾನ್, ಸಾವೇ ಸಾವೇ ಟೈಂ ಪ್ಲೀಸ್ ಇತ್ಯಾದಿ ಒಟ್ಟು ೬.

ಕಥೆಗಳು : ಸುಮಾರು 25. ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಕಥಾ ಸಂಕಲನ : ಸವಿ ನೆನಪುಗಳು ಬೇಕು

ಹಲವರು ಕವನಗಳು ಅನೇಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಬ್ಲಾಗ್ : http://pisumathu4u.blogspot.in
ಟ್ವಿಟರ‍್ : http://twitter.com/pisumathu
ಫೇಸ್‌ಬುಕ್ : http://www.facebook.com/profile.php?id%3D100000728343733
ಉದ್ಯೋಗ : Web Design & Hosting (http://www.pisumathu.com)

ಅನಿಸಿಕೆಗಳು

ರಾಜೇಶ ಹೆಗಡೆ ಭಾನು, 12/30/2012 - 21:48

ತುಂಬಾ ಉತ್ತಮ ಲೇಖನ. ದಾಮಿನಿಯ ಸಾವು ನಿಜಕ್ಕೂ ಬೇಸರ ತರಿಸಿತು. ಆಕೆ ಉಳಿಯುತ್ತಾಳೆಂಬ ನಂಬಿಕೆ ಕೊನೆಯವರೆಗೂ ಇತ್ತು.


ನನ್ನ ಪ್ರಕಾರ ಅತ್ಯಾಚಾರಕ್ಕೆ ಕಠಿಣ ಶಿಕ್ಷೆ ವಿಧಿಸ ಬೇಕು. ಅದರ ಜೊತೆಗೆ ಸಿನಿಮಾ, ಟಿವಿ ಮಾಧ್ಯಮಗಳಲ್ಲಿ ಹೆಣ್ಣನ್ನು ಒಂದು ಭೋಗದ ವಸ್ತುವನ್ನಾಗಿ ತೋರಿಸುವದನ್ನು ನಿಲ್ಲಿಸಬೇಕು. ಬಹುಶಃ ಅದೂ ಸಹ ಸಮಾಜದ ಮೇಲೆ ತನ್ನ ಕೆಟ್ಟ ಪರಿಣಾಮ ಬೀರುತ್ತಿರಬಹುದು. ಇಂತಹ ಹೀನ ಕೃತ್ಯಕ್ಕೆ ಪ್ರಚೋದಿಸುತ್ತಿರಬಹುದು.

venkatb83 ಮಂಗಳ, 01/01/2013 - 16:22

"ನನ್ನ ಪ್ರಕಾರ ಅತ್ಯಾಚಾರಕ್ಕೆ ಕಠಿಣ ಶಿಕ್ಷೆ ವಿಧಿಸ ಬೇಕು. ಅದರ ಜೊತೆಗೆ ಸಿನಿಮಾ, ಟಿವಿ ಮಾಧ್ಯಮಗಳಲ್ಲಿ ಹೆಣ್ಣನ್ನು ಒಂದು ಭೋಗದ ವಸ್ತುವನ್ನಾಗಿ ತೋರಿಸುವದನ್ನು ನಿಲ್ಲಿಸಬೇಕು. ಬಹುಶಃ ಅದೂ ಸಹ ಸಮಾಜದ ಮೇಲೆ ತನ್ನ ಕೆಟ್ಟ ಪರಿಣಾಮ ಬೀರುತ್ತಿರಬಹುದು. ಇಂತಹ ಹೀನ ಕೃತ್ಯಕ್ಕೆ ಪ್ರಚೋದಿಸುತ್ತಿರಬಹುದು"
+1
ಇದು ನಿಜವಾಗಿಯೂ ಮನುಕುಲ  ಅದರಲ್ಲೂ ನಾವ್  ನವ ಭಾರತದ -ನವ ತರುಣರು -ಹುಡುಗರು  ತಲೆ ತಗ್ಗಿಸಬೇಕಾದ  ವಿಚಾರ..
ಇದನ್ನು ಯಾರೋ ಮಾಡಿದ್ದರೂ  ಅದ್ಕೆ ನಾವೂ ಒಂದಲ್ಲ ಒಂದು ವಿಧದಲ್ಲಿ ಕಾರಣರು ಎಂಬ ಅಪರಾಧಿ ಭಾವ ಮನದಲ್ಲಿ ಮೂಡುತಿದೆ..
ಈ ವಯಸಿನ ತರುಣರು  ಅಂದು ಸ್ವಾತಂತ್ರ್ಯಕ್ಕಾಗಿ  ನಗು ನಗುತ್ತ ಗಲ್ಲಿಗೇರಿದರು -ಅದು ಸ್ವಾತಂತ್ರ್ಯಕ್ಕಾಗಿ.
ಅಂದು ಅವರು ಮಾಡಿದ ತ್ಯಾಗ-ಬಲಿದಾನ-ಸಶಕ್ತ-ಸುಂದರ -ಸದೃಢ -ಭಾರತಕ್ಕಾಗಿ 
ಆದರೆ ಇಂದು  ಟೀ  ವಿ-ಮುದ್ರಣ-ದೃಶ್ಯ ಮಾಧ್ಯಮಗಳಿಂದ  ಅವುಗಳ ಕಾಮ ಪ್ರಚೋದಕ  ದೃಶ್ಯಗಳು -ಕಾರ್ಯಕ್ರಮಗಳು-ಮೊಬೈಲ್ ನೆಟ್ ಕಾರಣವಾಗಿ  ಹದಿಹರೆಯದವರು ಹಾದಿ ತಪ್ಪಿ ಅಡ್ಡ ದಾರಿ ಹಿಡಿದು  ಮಾಡುತ್ತಿರುವ  ಈ ಕೆಟ್ಟ ಕೆಲಸಗಳು  ಖಂಡನೀಯ -ಅಂಥವರಿಗೆ ಅತ್ಯುಗ್ರ  ಶಿಕ್ಷೆ ಕೊಡಬೇಕು..
ಈಗಿರುವ ದುರ್ಬಲ  ಕಾನೂನುಗಳು-ಪ್ರಕರಣಗಳ ಆಮೆ ವೇಗದ ವಿಚಾರಣೆ -ವಿಚಾರಣ ನೆಪದಲ್ಲಿ ಹಿಂಸೆ (ಮಾನಸಿಕ)-ಕೇಸ್ ಮುಂದಕ್ಕೆ ಹಾಕುವುದು  ಇತ್ಯಾದಿ  ತೊಡಕುಗಳು ನಿವಾರಿಸಿ  ಆತಿ ತ್ವರಿತ ನ್ಯಾಯ ಸಿಕ್ಕು  ಅಪರಾಧಿಗಳಿಗೆ ಶಿಕ್ಷೆ ಆಗಬೇಕು..

ಸಹೋದರಿ ನಿರ್ಭಯ ರ ಈ ಘಟನೆಯಲ್ಲಿ  ಎಲ್ಲ ಮಾಧ್ಯಮಗಳು  ಸ್ವ ನಿಯಂತ್ರಣ ಹಾಕಿಕೊಂಡು  ವರ್ತಿಸದ ಪರಿ  ಅಭಿನಂದನಾರ್ಹ..
ಈ ಘಟನೆ ನಂತರ  ಯುವ ಜನತೆಯ ವ್ಯಾಪಕ ಪ್ರತಿಭಟನೆ -ಬೀದಿಗಿಳಿದು  ಪ್ರತಿಭಟಿಸಿದ  ಯುವ ಜನತೆಯ ಬಗ್ಗೆ  ಹೆಮ್ಮೆ ಅನಿಸುತ್ತಿದೆ..
ಆ ನಂತರವೂ ಈ ತರಹದ ಅತ್ಯಾಚಾರದ  ಘಟನೆಗಳು ದಿನ ನಿತ್ಯ ನಡೆಯುತ್ತಿರುವುದು- ಅಪರಾಧಿಗಳಿಗೆ  ಭಯ ಇಲ್ಲದಿರುವಿಕೆ  ತೋರಿಸುತ್ತಿದೆ.ಈ ಕಾರಣಕ್ಕಾಗಿಯಾದರೂ  ಈಗಿರುವ ಕಾನೂನು ತೊಡಕು  ನಿವಾರಿಸಿ ಅತ್ಯುಗ್ರ  ಶಿಕ್ಷೆಯನ್ನ  ತ್ವರಿತವಾಗಿ ನೀಡಿ  ಆ ತರಹದ ಅಪರಾಧಗಳಿಗೆ  ಕಡಿವಾಣ ಹಾಕಿ  ಅಪರಾಧ ಎಸಗುವವರು  ಭಯ ಪಡುವ ಹಾಗೆ ಮಾಡುವ ಅವಶ್ಯಕತೆ  ಇದೆ...

ಮುಂದೆಂದೂ  ಈ ತರಹದ ಘಟನೆಗಳು  ಮರುಕಳಿಸದಿರಲಿ  ಎಂದು ಆಶಿಸುವೆ...
ಸಕಾಲಿಕ ಅಶ್ರು  ತರ್ಪಣ  . ಸಂತಾಪಪ ಬರಹ.
ಸಹೋದರಿ ನಿರ್ಭಯ  ಆತ್ಮಕ್ಕೆ  ಶಾಂತಿ ಸಿಗಲಿ- ಆವರ ಅಕಾಲಿಕ ಅಂತ್ಯಕ್ಕೆ  ಕಾರಣರಾದ  ಅಪರಾಧಿಗಳಿಗೆ ತ್ವರಿತವಾಗಿ  ಶಿಕ್ಷೆ ಆಗಲಿ...

\|/
ಕೆ.ಎಂ.ವಿಶ್ವನಾಥ (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 12/31/2012 - 13:35

ಇದು ಸತ್ಯ ಕೊನೆಗೂ ಆ ಹುಡುಗಿ ಬದುಕಲೇ ಇಲ್ಲಾ ಇದು ನಮ್ಮ ಭಾರತದ ವಿಪರ್ಯಾಸ

ನಮ್ಮ ಮಹಿಳೆಯನ್ನು  ಬರಿ ಮಾತಿನಲ್ಲಿ ಬರವಣಿಗೆಯಲ್ಲಿ ರಕ್ಷಣೆ ಆಗುತ್ತಿದೆ. ನಿಜವಾದ ರಿತಿಯಲ್ಲಿ

ಬಹಳ ಉಲ್ಲಂಘನೆಯಾಗುತ್ತಿರುವುದು ವಿಪರ್ಯಾಸ ನಮ್ಮ ಜನ್ಮಕ್ಕೆ ಬೆಂಕಿ ಹಾಕಬೇಕು ಅನಿಸುತ್ತಿದೆ

ಕಾಯುವವರೆ ಕೊಲ್ಲುವ ಸ್ಥಿತಿ ನಿಮಾರ್ಮಾಣವಾಗಿದೆ ಅನ್ನುವ ಸ್ಥಿತಿ ಎದುರಾಗಿದೆ. ಇಂತಹ ಸಂದರ್ಭದಲ್ಲಿ

ನಮ್ಮ ಮಾಧ್ಯಮಗಳು  ಕೊಲೆ ಹೇಗೆ ನಡೀತು ರೇಪ್ ಹೇಗೆ ಮಾಡಿದರು ಅನ್ನೊದು ಬಹಳ ಚೆಂದ ಕಲಿಸುತ್ತಿದ್ದಾರೆ

ಅದು ನಮ್ಮ ಇಂದಿನ ಮಕ್ಕಳು ನೋಡಿ ಕಲಿಯುತ್ತಾರೆ.

ನಮ್ಮ ಮಾಧ್ಯಮಗಳು ಬದಲಾಗಬೇಕು

Jyothi Subrahmanya ಶನಿ, 01/12/2013 - 13:13

ಶ್ರೀಪತಿಯವರೇ,

ನನಗೆ ತಿಳಿದ ಮಟ್ಟಿಗೆ ಈ ಪ್ರಕರಣದಲ್ಲಿ ಅನ್ಯಾಯಕ್ಕೊಳಗಾದ ಹುಡುಗಿಯ ಹೆಸರು ಜ್ಯೋತಿ ಸಿಂಗ್ ಪಾಂಡೆ (ದಿ ಹಿಂದು ದಿನಪತ್ರಿಕೆಯಲ್ಲಿ ಪ್ರಕಟವಾಗಿದೆ).  

ಹಾಗೂ ಆಕೆಯ ಕುಟುಂಬದ ಸದಸ್ಯರು ಆಕೆಯ ಭಾವಚಿತ್ರವನ್ನು ಪ್ರಕಟಿಸಲು ಅನುಮತಿ ನೀಡಿಲ್ಲ.  ಯಾವುದೇ ದೂರದರ್ಶನ ಚಾನಲ್ ಗಳಲ್ಲಿ/ ಪತ್ರಿಕೆಗಳಲ್ಲಿ ಆಕೆಯ

ಭಾವಚಿತ್ರ ಪ್ರಕಟಗೊಂಡಿಲ್ಲ ಎಂದು ಭಾವಿಸುತ್ತೇನೆ.  ನೀವು ಪ್ರಕಟಿಸಿದ ಈ ಭಾವಚಿತ್ರ ಆ ಹುಡುಗಿಯದ್ದೇ ಎಂದು ಖಚಿತ ಪಡಿಸಿಕೊಂಡಿದ್ದೀರಾ?  ತಪ್ಪು ತಿಳಿಯಬೇಡಿ.

ಯಾರೋ ಒಬ್ಬ ಹುಡುಗಿಯ (ಜೀವಂತವಾಗಿರುವ) ಭಾವಚಿತ್ರವನ್ನು ಕೆಲವೆಡೆ ಅತ್ಯಾಚಾರಕ್ಕೊಳಗಾದ ಹುಡುಗಿ ಎಂಬುದಾಗಿ ಪ್ರಚಾರ ಮಾಡಲಾಗುತ್ತಿದೆ ಆದರೆ ನಾವು ಆಕೆಯ

ಭಾವಚಿತ್ರವನ್ನು ಪ್ರಕಟಿಸಲು ಅನುಮತಿಸಿಲ್ಲ ಹಾಗೂ ಆ ಭಾವಚಿತ್ರದಲ್ಲಿರುವ ಹುಡುಗಿ ನಮ್ಮ ಮಗಳಲ್ಲ ಎಂಬುದಾಗಿ ಆಕೆಯ ತಂದೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.  

ಆದುದರಿಂದ ನನಗೆ ಬಂದ ಸಂಶಯವನ್ನು ನಿಮ್ಮ ಮುಂದಿಡುತ್ತಿದ್ದೇನೆ.  

ವಂದನೆಗಳೊಂದಿಗೆ,

ಜ್ಯೋತಿ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.