ಕನ್ನಡ ಹಾಸ್ಯಗಳು 2
ಅಭ್ಯಾಸಬಲ
ಬಿಟಿಎಸ್ ಬಸ್ ಡ್ರೈವರ್ ಆಗಿದ್ದ ಗುಂಡ, ಕಷ್ಟ ಪಟ್ಟು ಟ್ರೈನಿಂಗ್ ಮಾಡಿ ಫೈಲಟ್ ಆಗೇ ಬಿಟ್ಟ. ಒಂದು ದಿನ ವಿಮಾನ ಓಡಿಸುತ್ತಿರುವ ಇದ್ದಕ್ಕಿದ್ದ ಹಾಗೆ ವಿಮಾನದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿತು.ಕೂಡಲೇ ಅಭ್ಯಾಸ ಬಲದಂತೆ ಗುಂಡ ಹೇಳ್ದ, ರೀ ಎಲ್ಲ ಕೆಳಗೆ ಇಳಿದು ಸ್ವಲ್ಪ ದೂರ ತಳ್ಳಿ.. ಎಂಜಿನ್ ಆಫ್ ಆಗಿದೆ
ನೆಂಟಸ್ಥನ
ಕನಕ ಕೇಳಿದ್ಲು. ಆ ಕೊನೆ ಮನೆಗೆ ಹೊಸದಾಗಿ ಬಂದಿದ್ದಾರಲ್ಲ ಅವರು ನಿಮಗೆ ನೆಂಟ್ರಾಗಬೇಕಂತೆ ಹೇಗೆ? ಮೀನಾ ಹೇಳಿದ್ಲು... ಓ ಅದ. ಅವರ ಮನೆ ನಾಯಿ ಟಾಮೀನೂ, ನಮ್ಮನೆ ನಾಯಿ ಬ್ರೌನಿನೂ ಅವಳಿ ಜವಳಿ.
ನಾಲ್ಕು ಕೂದಲು
ಎಪ್ಪತ್ತು ವರ್ಷದ ಬೊಕ್ಕುತಲೆಯ ಬೋಡ ತೈಲ ಕಂಪನಿಯೊಂದರ ಹೊಸ ಕೇಶತೈಲ ಬಳಸಿದ. ಆತನ ತಲೆಯಲ್ಲಿ ನಾಲ್ಕು ಬಿಳಿ ಕೂದಲು ಮೊಳೆತೇ ಬಿಟ್ಟವು. ಬಹಳ ಸಂತೋಷದಿಂದ ನಾಲ್ಕು ಕೂದಲಿನ ಬೋಡ.. ಕಟ್ಟಿಂಗ್‌ಷಾಪ್‌ಗೆ ಹೋದ. ಈ ಬೋಡನ ನೋಡಿ ನಗು ತಡೆಯಲಾರದ ಕಟಿಂಗ್‌ಷಾಪ್ ಮಾಲಿಕ ಕೇಳ್ದ. ಏನ್ ತಾತಾ ನಾನು ಕೂದಲು ಎಣಿಸಬೇಕೋ ಅಥವಾ ಹೇರ್ ಸೆಟ್ಟಿಂಗ್ ಮಾಡಬೇಕೋ... ತಾತ ಹೇಳಿದ... ಎರಡೂ ಬೇಡ.. ನನ್ನ ಕೂದಲಿಗೆ ಡೈ ಮಾಡು.
ಸಾಲುಗಳು
- 3833 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ