ಕನ್ನಡ ಹಾಸ್ಯಗಳು
ರೋಗಿಗಳ ಬಳಿಯೆಲ್ಲಾ ಒಂದೇ ಕಾದಂಬರಿ..
ಸಾಹಿತಿಯೊಬ್ಬರು ತೀವ್ರ ಅನಾರೋಗ್ಯದಿಂದ ಆಸ್ಪತ್ರೆ ಸೇರಿದರು. ವಾರ್ಡಿನಲ್ಲಿ ಎಲ್ಲ ರೋಗಿಗಳ ಪಕ್ಕದಲ್ಲೂ ಇವರು ಬರೆದ ಕಾದಂಬರಿ ಇತ್ತು. ಇದನ್ನು ನೋಡಿ, ತೀವ್ರ ಆನಂದಗೊಂಡ ಸಾಹಿತಿ ವೈದ್ಯರನ್ನು ಕೇಳಿದರು. ಏನ್ಸಾರ್ ಈ ಆಸ್ಪತ್ರೇಲಿ ಎಲ್ಲರಿಗೂ ಇದೇ ಕಾದಂಬರಿ ಕೊಟ್ಟಿದ್ದೀರಲ್ಲ. ಇದು ಅಷ್ಟು ಚೆನ್ನಾಗಿದೆಯೇ.. ವೈದ್ಯರು ಹೇಳಿದರು. ಅದರ ಗುಟ್ಟೇ ಬೇರೆ. ಇವರೆಲ್ಲಾ ನಿದ್ದೇ ಬಾರದಿರೋ ರೋಗಿಗಳು. ಎಷ್ಟೇ ಸ್ಲೀಪಿಂಗ್ ಟ್ಯಾಬ್ಲೆಟ್ ಕೊಟ್ರು ಇವರಿಗೆ ನಿದ್ದೇನೆ ಬರ್ತಿರಲಿಲ್ಲ. ಈ ಕಾದಂಬರಿ ಕೊಟ್ವಿ ನೋಡಿ ಎಲ್ಲರೂ ಐದೇ ನಿಮಿಷಕ್ಕೆ ನಿದ್ದೇ ಮಾಡ್ತಾರೆ
ಎಲ್ಲಾ ಬಿಡ್ತೀನಿ
ಗುಂಡಾ ಒಂದೇ ಹುಡುಗೀನ ೫ ವರ್ಷದಿಂದ ಪ್ರೀತಿಸ್ತಾ ಇದ್ದ. ಕೊನೆಗೂ ಇಬ್ರೂ ಮದುವೆ ಆಗೋ ನಿರ್ಧಾರ ಮಾಡಿದ್ರು. ಆ ಹುಡುಗಿ ಕೇಳಿದ್ಲು. ನಾನು ನಿನ್ನ ಮದುವೆ ಆಗಕ್ಕೆ ಸಿದ್ಧ ಆದರೆ ನೀನು ಸಿಗರೇಟ್ ಸೇದೋದು ಬಿಡ್ತೀಯಾ? ಗುಂಡ ಓಕೆ ಎಂದ. ಕುಡಿಯೋದೂ ಬಿಡ್ತಾಯಾ ? ಗುಂಡ ವಿ ಇಲ್ಲದೆ ಸರಿ ಎಂದ. ಇಸ್ಪೀಟ್ ಆಡೋದು? ಖಂಡಿತಾ ಬಿಡ್ತೀನಿ ಅಂದ ಗುಂಡ. ಹುಡುಗಿ ಮತ್ತೆ ಕೇಳಿದ್ಲು ನನ್ನ ಮದುವೆ ಆಗಕ್ಕೆ ನೀನು ಇನ್ನೂ ಏನೇನು ಬಿಡ್ತೀಯಾ ? ಗುಂಡ ಹೇಳ್ದ ಮದ್ವೆ ಆಗೋ ಯೋಚನೇನೇ ಬಿಟ್ಟು ಬಡ್ತೀನಿ.
ಅಮ್ಮನಿಗೆ ಮಗಳ ಸಜೆಷನ್
ಖ್ಯಾತ ಚಿತ್ರನಟಿಯೊಬ್ಬಳು ಸತತ ಹದಿನೆಂಟನೇ ಬಾರಿ ತನ್ನ ೧೮ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡಳು. ಈ ಶುಭ ಸಂದರ್ಭದಲ್ಲಿ ಆಕೆಯ ೧೮ ವರ್ಷದ ಮಗಳೊಂದು ಸಜೆಷನ್ ಕೊಟ್ಲು. ಮಮ್ಮಿ ಆಟ್ಲೀಸ್ಟ್ ನನಗಿಂತ ಒಂಬತ್ತು ತಿಂಗಳಾದ್ರೂ ನಿನ್ನ ವಯಸ್ಸು ಜಾಸ್ತಿ ಹೇಳು..
ಸಾಲುಗಳು
- 1658 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ