ಹಾಸ್ಯ:
ಗುಂಡ: 2012ರಲ್ಲಿ ಪ್ರಳಯ ಆಗುತ್ತೆ ಅಂತಾ ನನ್ನ ಫ್ರೆಂಡ್ 2011ರಲ್ಲೇ ಮದುವೆ ಮಾಡ್ಕೊಂಡಾ
ತಿಮ್ಮ: ಆಮೇಲೆ ಏನಾಯಿತು?
ಗುಂಡ: ಈಗ ಪ್ರಳಯ ಯಾವಾಗ ಆಗುತ್ತೆ ಅಂತಾ ಕಾಯ್ತಾ ಇದ್ದಾನೆ
ನೂತನವಾಗಿ ಕೆಲಸಕ್ಕೆ ಸೇರಿಕೊಂಡ ಸಂತಾ ಬೆಳಗ್ಗಿನಿಂದ ಸಂಜೆತನಕ ಕಷ್ಟಪಟ್ಟು ದುಡಿದ ಅದನ್ನು ಗಮನಿಸಿದ ಬಾಸ್, ತುಂಬಾ ಕೆಲಸ ಮಾಡಿದ್ದೀರಾ ಸರಿ ಏನೇನೂ ಮಾಡಿದಿರಿ ಎಂದು ಪ್ರಶ್ನಿಸಿದರು.
ಸಂತಾ: ಕಂಪ್ಯೂಟರ್ ಕೀ ಬೋರ್ಡ್‌ನಲ್ಲಿ ಅಕ್ಷರಗಳು ಚೆಲ್ಲಾಪಿಲ್ಲಿಯಾಗಿತ್ತು. ಅದನ್ನೆಲ್ಲ ಸರಿಪಡಿಸಿಕೊಂಡೆ ಎಂದು ಉತ್ತರ ಕೊಟ್ಟ.
ಗುಂಡ: ಅಮ್ಮ, ನಮ್ಮ ಟೀಚರ್‌ಗೆ ತುಂಬಾ ಮರೆವು.
ಅಮ್ಮ: ಯಾಕೋ ಗುಂಡ?
ಗುಂಡ: ನಮ್ ಟೀಚರ್ ಬೋರ್ಡಲ್ಲಿ "ಮಹಾಭಾರತ" ಎಂದು ಬರೆದು ತಿರುಗಿ ನಿಂತು ಕೇಳ್ತಾರೆ, ’ಮಹಾಭಾರತ ಬರೆದಿದ್ದು ಯಾರು?’ ಅಂತ!
ಡಾಕ್ಟರ್: ಒಂದೇ ಸಲ ನಾಲ್ಕು ಹಲ್ಲು ಏಕೆ ಹೋಯ್ತು?
ಗುಂಡ: ನನ್ನ ಹೆಂಡತಿ ಚಕ್ಕುಲಿ ಮಾಡಿದ್ಲು.....
ಡಾಕ್ಟರ್: ಬೇಡಾ ಅನ್ಬೇಕಿತ್ತು ಅಲ್ವಾ?
ಗುಂಡ:ಆಯ್ಯೋ ತಿಂದಿದ್ದಕ್ಕೆ ಒಂದು ಹೋಯ್ತು,ಬೇಡಾ ಅಂದದ್ದಕ್ಕೆ ಇನ್ನೂ ಮೂರು ಹೋಯ್ತು
ಗೆಳೆಯ : ಕವಿತೆಗೂ ಪ್ರಬಂಧಕ್ಕೂ ಏನು ವ್ಯತ್ಯಾಸ?
ಗುಂಡ : ಗೆಳತಿಯರ ಬಗ್ಗೆ ಮಾತನಾಡಿದರೆ ಕವಿತೆ,
ಹೆಂಡತಿಯರ ಬಗ್ಗೆ ಮಾತನಾಡಿದರೆ ಪ್ರಬಂಧ..
ಸಾಲುಗಳು
- Add new comment
- 678 views
ಅನಿಸಿಕೆಗಳು
ತು೦ಬಾ ಚನ್ನಾಗಿದೆ ಚ೦ದ್ರು ಅಣ್ಣಾ
ತು೦ಬಾ ಚನ್ನಾಗಿದೆ ಚ೦ದ್ರು ಅಣ್ಣಾ