ಹೆಣ್ಣು-ಗಂಡಿನ ಪ್ರೀತಿ ಅಂದ ಮೇಲೆ
ಅದರಲ್ಲಿ ಪ್ರೇಮ ಮತ್ತು ಕಾಮ ಎರಡೂ ಇರುತ್ತದೆ. ಪ್ರೀತಿಯಲ್ಲಿ ಅವರೆರಡು ಒಂದೇ ನಾಣ್ಯದ
ಎರಡು ಮುಖಗಳು ಇದ್ದಂತೆ. ಕೆಲವೊಂದು ಸಂಬಂಧದಲ್ಲಿ ಪ್ರೀತಿಯ ಹೆಸರಿನಲ್ಲಿ ತಮ್ಮ ದೈಹಿಕ
ಬಯಕೆಗಳನ್ನು ತೀರಿಸಿಕೊಂಡು ನಂತರ ಕೈಕೊಡುತ್ತಾರೆ. ಆ ರೀತಿ ಮೊಸ ಹೋದವರಿಗೆ ಪ್ರೀತಿ
ಅನ್ನುವುದು ಕಪಟ ನಾಟಕದಂತೆ ಭಾಸವಾಗಲಾರಂಭಿಸುತ್ತದೆ.
ಇನ್ನು ಕೆಲವು ಸಂಬಂಧಗಳು
ತಮ್ಮ ದೈಹಿಕ ಆಸೆಗಳನ್ನು ಪೂರೈಸಲು ಒಂದು ಸಂಬಂಧವನ್ನು ಕಂಡುಕೊಳ್ಳುತ್ತಾರೆ ಅಂತಹ
ಸಂಬಂಧದಲ್ಲಿ ಪ್ರೀತಿಯ ಅಂಶವಿಲ್ಲದೆ ಬರೀ ದೈಹಿಕ ಬಯಕೆಗಳಿಗೆ ಮಾತ್ರ ಬೆಲೆ ಇರುತ್ತದೆ.
ಇಂತಹ ಸಂಬಂಧದಲ್ಲಿ ಜವಬ್ದಾರಿ ಹೊರಬೇಕಾಗಿಲ್ಲ, ಇನ್ನೊಬ್ಬರ ಕಷ್ಟಕ್ಕೆ
ಸ್ಪಂದಿಸಬೇಕಾಗಿಲ್ಲ, ತಾನು ಇಷ್ಟ ಬಂದಂತೆ ಇರಬಹುದು. ಆದರೆ ಈ ಬದುಕಿನಲ್ಲಿ ಬದುಕಿಗೆ
ಪೂರ್ಣ ಅರ್ಥ ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ.
ಪ್ರೀತಿ ಮುಖ್ಯನಾ, ದೈಹಿಕ
ಭಾವನೆ ಮುಖ್ಯನಾ ಎಂದು ಕೇಳಿದರೆ ಎಲ್ಲರೂ ಪ್ರೀತಿ ಮುಖ್ಯ ಎಂದು ಹೇಳುತ್ತಾರೆ.
ಪ್ರೀತಿಯಲ್ಲಿ ಗುಣಕ್ಕೆ ಮಹತ್ವ ಕೊಟ್ಟರೆ ದೈಹಿಕ ಆಸೆಯಲ್ಲಿ ವ್ಯಕ್ತಿಯ ದೇಹವನ್ನು
ಪ್ರೀತಿಸುತ್ತಾರೆ ಹೊರತು ಭಾವನೆಗಳೆನೆಲ್ಲಾ.
ಪ್ರೀತಿಯಲ್ಲಿ ತಮ್ಮ ಭಾವನೆಗಳನ್ನು
ಮತ್ತು ದೇಹವನ್ನು ಹಂಚಿಕೊಳ್ಳುತ್ತರೆ. ಒಬ್ಬರ ಕಷ್ಟ ಸುಖಗಳಿಗೆ ಮತ್ತೊಬ್ಬರು
ಸ್ಪಂದಿಸುತ್ತಾರೆ. ಆದರೆ ಕೇವಲ ದೈಹಿಕ ಆಕರ್ಷಣೆ ಇದ್ದರೆ ಇನ್ನೊಬ್ಬರ ಕಷ್ಟದಲ್ಲಿ
ಹಂಚಿಕೊಳ್ಳುವುದಿಲ್ಲ, ಅವರ ನೋವುಗಳನ್ನು ಕೇಳಿಸಿಕೊಳ್ಳುವುದಿಲ್ಲ.
ಹೆಚ್ಚಿನದಾಗಿ
ಅನೈತಿಕ ಸಂಬಂಧಗಳು ತಮ್ಮ ದೈಹಿಕ ಆಸೆಯನ್ನು ಪೂರೈಸಿಕೊಳ್ಳಲು ಕಂಡುಕೊಂಡ
ಸಂಬಂಧಗಳಾಗಿರುತ್ತದೆ, ಅಂತಹ ಸಂಬಂಧದಿಂದ ನಿಜವಾದ ಪ್ರೀತಿಯನ್ನು ಕಾಣಲು ಸಾಧ್ಯವಿಲ್ಲ .
ಪ್ರೀತಿಯಲ್ಲಿ
ತಮ್ಮ ಬಾಳಸಂಗಾತಿಯ ತಪ್ಪುಗಳನ್ನು ಸುಲಭದಲ್ಲಿ ಕ್ಷಮಿಸುತ್ತಾರೆ. ಆದರೆ ಪ್ರೀತಿಯಿಲ್ಲದ
ಸಂಬಂಧಗಳು ಬೇಗನೆ ಮುರಿದುಬೀಳುತ್ತದೆ. ಲೀವ್ ಇನ್ ರಿಲೇಷನ್ ಶಿಪ್ ನಂತಹ ಸಂಬಂಧಗಳಲ್ಲಿ
ಹೆಚ್ಚಾಗಿ ಪ್ರೀತಿಗಿಂತ ದೈಹಿಕ ಭಾವನೆಗಳಿಗೆ ಬೆಲೆ ಕೊಡುತ್ತಾರೆ. ಆದ್ದರಿಂದಲೇ ಅಂತಹ
ಸಂಬಂಧಗಳಲ್ಲಿ ಅಭದ್ರತೆ ಕಾಣುವುದು.
ಸಂಬಂಧ ಪ್ರೀತಿಗಾಗಿ ಹುಟ್ಟಬೇಕೆ ಹೊರತು ದೈಹಿಕ ಆಸೆಗಳಿಗಾಗಿ ಅಲ್ಲ.
ನೀವೆನ೦ತೀರಾ ವಿಸ್ಮಯ ಓದುಗರೆ?
-ಸತೀಶ್ ಎಸ್ ಗೌಡ
ಅನಿಸಿಕೆಗಳು
ಪ್ರೆಮ v/s ಕಾಮ
ತು೦ಬಾ ಚೆನ್ನಗಿದೆ, ನೀವು ಹೆಳಿರೊದು ೧೦೦% ನಿಜ ರಿ , ಪ್ರಿತಿನ ಪ್ರಿತಿಯಿ೦ದ ನೆ ಪ್ರಿತಿಸ್ಬೆಕು , ಪ್ರಿತಿ ಬಲವದ್ರೆ ಪ್ರೆಮಿಗಳು ಅವ್ರ ಸ೦ಗಾತಿಗಾಗಿ ಎನು ಬೆಕಾದರು ಮಾಡತಾರೆ.ಇತಿಚಿನ ದಿನಗಳಲ್ಲಿ ಪ್ರಿತಿ ಅ೦ನತನೆ ಅಲ್ಲ ಸ್ನೆಹಿತರು ಅ೦ತ ಹೆಳ್ಕೊ೦ನ್ಡು ದೈಹಿಕ ಸುಕ ಅಪೆಕ್ಶೆ ಪಡೊರು ಇದ್ದಾರೆ.ಅ೦ನತವರಿಗೆ
ಈ ನಿಮ್ಮ ಬರಹ ಸ್ವಲ್ಪ ಬುದ್ದಿ ಕಲಿಸಲಿ.
ತು೦ಬಾ ಚೆನ್ನಗಿದೆ, ನೀವು ಹೆಳಿರೊದು ೧೦೦% ನಿಜ ರಿ , ಪ್ರಿತಿನ ಪ್ರಿತಿಯಿ೦ದ ನೆ ಪ್ರಿತಿಸ್ಬೆಕು , ಪ್ರಿತಿ ಬಲವದ್ರೆ ಪ್ರೆಮಿಗಳು ಅವ್ರ ಸ೦ಗಾತಿಗಾಗಿ ಎನು ಬೆಕಾದರು ಮಾಡತಾರೆ.ಇತಿಚಿನ ದಿನಗಳಲ್ಲಿ ಪ್ರಿತಿ ಅ೦ನತನೆ ಅಲ್ಲ ಸ್ನೆಹಿತರು ಅ೦ತ ಹೆಳ್ಕೊ೦ನ್ಡು ದೈಹಿಕ ಸುಕ ಅಪೆಕ್ಶೆ ಪಡೊರು ಇದ್ದಾರೆ.ಅ೦ನತವರಿಗೆ
ಈ ನಿಮ್ಮ ಬರಹ ಸ್ವಲ್ಪ ಬುದ್ದಿ ಕಲಿಸಲಿ.
- 1792 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ