ಭಾರತದ ದಿನಗೂಲಿ ನೌಕರರು
ಸರ್ಕಾರ ಏನೆಲ್ಲಾ ಯೋಜನೆಗಳನ್ನು ರೂಪಿಸಿದ್ದರೂ ಎಷ್ಟೇ ಹಣವನ್ನು ದೇಶದ ಅಭಿವೃದ್ದಿಗಾಗಿ ವ್ಯಯಿಸಿದರೂ ನಮ್ಮ ಇಲಾಖೆಗಳಲ್ಲಿ ದುಡಿಯುತ್ತಿರುವ ದಿನಗೂಲಿ ನೌಕರರಿಗೆ ಒದಗಿಸಬೇಕಾದ ಸೌಲಭ್ಯಗಳನ್ನು ಒದಗಿಸದೇ ಇರುವುದು ವಿಷಾದನೀಯ.
ನಾನು ಹೇಳಬಯಸುವುದೇನೆಂದರೆ ನಮ್ಮ ರಾಜ್ಯದ ಗ್ರಾಮ ಪಂಚಾಯಿತಿ ಗಣಕಯಂತ್ರನಿರ್ವಾಹಕರಾಗಿ ದುಡಿಯುತ್ತಿರುವ ನೌಕರರನ್ನು ಹೇಗೆ ನೇಮಿಸಿಕೊಳ್ಳಬೇಕು ಎನ್ನುವ ವಿಷಯದಲ್ಲಿ ಪಂಚಾಯಿತಿಯ ಅಧಿಕಾರಿಗಳು ತಪ್ಪು ಮಾಡಿದ್ದರೇ ಅದರ ಪ್ರತಿಫಲ ಅನುಭವಿಸುತ್ತಿರುವವರು ಮಾತ್ರ ಗಣಕಯಂತ್ರ ನಿರ್ವಾಹಕರು.
ಪಂಚಾಯಿತಿಯಲ್ಲಿ ಗಣಕಯಂತ್ರ ನಿರ್ವಾಹಕರಿಗೆ ಪಂಚತಂತ್ರ,ನರೇಗಾ,ಆಶ್ರಯ,ಸಕಾಲ,ರೇಷನ್ ಕಾರ್ಡ್ ಇದೇ ರೀತಿಯಾಗಿ ಈ ಎಲ್ಲಾ ಮಾಹಿತಿಗಳನ್ನು ನಿರ್ವಹಿಸುತ್ತಿರುವ ನೌಕರರಿಗೆ ಈ ದಿನ ನಮ್ಮ ಸರ್ಕಾರ ಅಡಕತ್ತರಿಯಲ್ಲಿ ಸಿಕ್ಕಿಸಿದೆ.
ನಮ್ಮ ಪಂಚಾಯತ್ ರಾಜ್ ಇಲಾಖೆಯು 30-06/2012 ರಂದು ಒಂದು ಆರ್ಡರ್ ಕಳುಹಿಸಿದ್ದು ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುವವರಿಗೆ ಒಂದು ಪರೀಕ್ಷೆಯನ್ನು ಇಡಲಾಗಿದೆ ಈ ಪರೀಕ್ಷೆ ಯಾಕೆಂದರೆ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಕಾರಣ ನೀಡಿದೆ. ಆದರೆ ಇಲ್ಲಿ ಸ್ಮರಿಸಬೇಕಾದ ವಿಷಯವೆಂದರೆ ನಮ್ಮ ರಾಜ್ಯದ ಗಣಕಯಂತ್ರ ನಿರ್ವಾಹಕರು ಶ್ರಮ ವಹಿಸಿ ಕೆಲಸವನ್ನು ಮಾಡಿದಕ್ಕಾಗಿ ಪಂಚತಂತ್ರಕ್ಕೆ ಚಿನ್ನದ ಪದಕ (national awards on e- governance-2011) ಬಂದಿದೆ ಎಂಬುದನ್ನು ಸರ್ಕಾರ ಮರೆತಿದೆ. ಎನಿಸುತ್ತದೆ. ಕೆ.ಪಿ.ಎಸ್.ಸಿ ಯಲ್ಲಿ ಒಂದು ಪರೀಕ್ಷೆಯನ್ನು ನಡೆಸಬೇಕಾದರೆ 6 ತಿಂಗಳು ಅವಧಿಯನ್ನು ಕೊಡುವ ಸರ್ಕಾರ ಗಣಕಯಂತ್ರ ನಿರ್ವಾಹಕರಿಗೆ ಪರೀಕ್ಷೆ ಇದೆ ಎಂಬ ಮಾಹಿತಿಯನ್ನು ತಿಳಿಸಿರುವುದು ಪರೀಕ್ಷೆಯು 2-3 ದಿನ ಇದೆ ಎನ್ನುವಾಗ.
ಇನ್ನು ಹೊರಗುತ್ತಿಗೆ ಆದಾರದಲ್ಲಿ ನೇಮಿಸಿಕೊಳ್ಳದೇ ಇರುವ ನೌಕರರಿಗೂ ಪರೀಕ್ಷೆ ಬರೆಯುವುದು ಕಡ್ಡಾಯ ಎಂದು ಹೇಳಿದ ಮೇಲಿನ ಅಧಿಕಾರಿಗಳಿಗೆ ಗಣಕಯಂತ್ರ ನಿರ್ವಾಹಕರನ್ನು ನೇಮಿಸಿಕೊಳ್ಳುವುದರಲ್ಲಿ ನಾವು ಎಡೆವಿದ್ದೇವೆ ಎಂದು ನಿರ್ವಾಹಕರು ಪರೀಕ್ಷೆ ಬರೆಯುವುದಿಲ್ಲ ಎಂದು ಕೇಳಲು ಹೋದಾಗ ತಿಳಿದಿದೆ. ಅಧಿಕಾರಿಗಳೇ ಈ ರೀತಿ ಮಾಡಿದಾಗ ದಿನಗೂಲಿ ನೌಕರರ ಗತಿ ಏನಾಗಬೇಕು.
ದೊಡ್ಡ ದೊಡ್ಡ ಕಟ್ ಔಟರ್ ಗಳಲ್ಲಿ ನಿಂತು ಜನರಿಗೆ ಬೇಕಾದ ಸಕಾಲ ಯೋಜನೆಗಳನ್ನು ಅನುಷ್ಠಾನ ಮಾಡಿದ್ದೇವೆ ಎಂದು ಪ್ರಷಾರ ಪಡಿಸಿಕೊಳ್ಳುವ ಸರ್ಕಾರ ಈ ಸಕಾಲ ಅರ್ಜಿಗಳನ್ನು ತುಂಬಲು ಅಗತ್ಯವಾಗಿ ಬೇಕಾದ ಗಣಕಯಂತ್ರ ನಿರ್ವಾಹಕರನ್ನು ಮರೆತ್ತದೆಯೇ??
ಗಣಕಯಂತ್ರ ನಿರ್ವಾಹಕರು ನಾವು ಪಂಚಾಯಿತಿಯಿಂದ ನೇಮಕವಾಗಿದ್ದೇವೋ ಅಥವಾ ಹೊರಗಿತ್ತಿಗೆ ಆಧಾರವೋ ಎಂಬುದನ್ನು ತಿಳಿಯದೇ ಸಂಕಷ್ಟಕ್ಕೆ ಸಿಲುಕಿದ್ದಾರೆ ಈ ಸಮಸ್ಯೆಗೆ ಪರಿಹಾರ ಏನು???
ಗಣಕಯಂತ್ರ ನಿರ್ವಾಹಕರದೇ ಅಷ್ಟೆ ಅಲ್ಲ ನಮ್ಮ ಬಾರತದ ದಿನಗೂಲಿ ನೌಕರರೆಲ್ಲಾರದೂ ಇದೆ ಸಮಸ್ಯೆಯಾಗಿದೆ. ಇದನ್ನೇಲ್ಲಾ ಸರ್ಕಾರ ಸರಿಪಡಿಸುವುದು ಯಾವಾಗ ದಿನಗೂಲಿ ನೌಕರರಿಗೆ ನ್ಯಾಯ ದೊರಕುವುದು ಯಾವಾಗ????????
ಸಾಲುಗಳು
- Add new comment
- 858 views
ಅನಿಸಿಕೆಗಳು
ಹೌದು ಪವಿಯವರೇ , ನಮ್ಮ ದೇಶ
ಹೌದು ಪವಿಯವರೇ , ನಮ್ಮ ದೇಶ ಮುಂದುವರಿಯುತ್ತಿರುವ ದೇಶ ನಮ್ಮ ದೇಶವನ್ನು ಆರ್ಥಿಕವಾಗಿ ಮುಂದುವರಿಯೋ ಹಾಗೆ ಮಾಡ್ತಿವಿ ಹಾಗೆ ಮಾಡಿದಿವಿ ಹೀಗೆ ಮಾಡಿದಿವಿ ಅಂತ ಹೇಳಿ ಕೊಳ್ಳೋ ಸರ್ಕಾರಕ್ಕೆ ದೇಶ ಮುಂದುವರಿಬೇಕಾದರೆ ಪ್ರತಿ ಜನತೆ ಆರ್ಥಿಕವಾಗಿ ಮುಂದುರೆಯಬೇಕು ಹಾಗೆ ಆಗಬೇಕಾದರೆ ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿ ಮಾಡಬೇಕು ಅನ್ನೋದನ್ನೇ ಮರೆತುಬಿಟ್ಟಿದೆ ಮತ್ತು ಅವರ ದೃಷ್ಟಿಯಲ್ಲಿ ಅಭಿವೃದ್ಧಿ ಅಂದರೆ ಏನು ಅನ್ನೋದೆ ಗೊತ್ತಾಗುತ್ತಿಲ್ಲ. ಅಭಿವೃದ್ಧಿ ಮೂಲ ಮಂತ್ರವೇ ಉದ್ಯೋಗ ಸೃಷ್ಟಿ ಅದನ್ನ ಬಿಟ್ಟು ಇರೋ ಉದ್ಯೋಗನ್ನ ಕಿತ್ತುಕೊಂಡು ಅದನ್ನೇ ನಂಬಿ ಜೀವನ ಮಾಡುತ್ತಿರುವ ಎಷ್ಟೋ ಕುಟುಂಬಗಳನ್ನು ಬೀದಿಗೆ ತಳ್ಳುತ್ತಿದ್ದಾರೆ ಇದು ಎಷ್ಟು ಸರಿ ಹೇಳಿ. ಕೆಲವು ಸಂಘ ಸಂಸ್ಥೆಗಳಲ್ಲಿ ಕೇವಲ 5,10, ವರ್ಷ ಸೇವೆ ಸಲ್ಲಿಸಿದರೆ ಸಾಕು ಆ ವ್ಯಕ್ತಿಗೆ ಮುಂದಿನ ಜೀವನಕ್ಕೆ ಸಾಕಾಗೋ ಅಷ್ಟು ಅನುಕೂಲವನ್ನು ಮಾಡಿಕೊಡೋ ಜವಾಬ್ದಾರಿ ಹೊತ್ತುಕೊಳ್ಳುತ್ತವೆ ಮತ್ತು P.F, E.S.I ಮುಂತಾದ ಅನುಕೂಲವನ್ನು ಮಾಡಿಕೊಡ್ತ್ತವೆ. ಆದರೆ ಅರೆ ಸರ್ಕಾರಿ ನೌಕರರು ಇತ್ತ ಸರ್ಕಾರಿ ನೌಕರರೂ ಅಲ್ಲ ಅತ್ತ ಯಾವ ಅನುಕೂಲತೆನೂ ಇಲ್ಲ , ಕಡಿಮೆ ಸಂಬಳ ಮೈ ತುಂಬಾ ದುಡಿಮೆ ಇಷ್ಟಿದ್ರೂ ಯಾವ ಭದ್ರತೆನೂ ಇಲ್ಲ. ಇವೆಲ್ಲ ಸಾಕಾಗದೆ ಯಾವಾಗ ಬೇಕಾದಾಗ ಮನಸಿಗೆ ಬಂದಾಗ ಕಿತ್ತೋಗೆಯೋ ನೀಚತನ ನಮ್ಮ ದೇಶ ಪ್ರಪಾತಕ್ಕಿಳಿದೋಗುತ್ತಿರುವ ಎಲ್ಲ ಸೂಚನೆನೂ ಕಾಣತಾ ಇದೆ. ಇದು ನಮ್ಮ ಸ್ವತಂತ್ರ ಭಾರತದ ಪ್ರಜೆಗಳ ಅತಂತ್ರ ಪರಿಸ್ಥಿತಿ.