ಜೂನ್ ತಿಂಗಳ ಅದೃಷ್ಟಶಾಲಿ ವಿಸ್ಮಯ ಪ್ರಜೆ ಸ್ಪರ್ಧೆ ಬಹುಮಾನ ಘೋಷಣೆ
ಜೂನ್ ತಿಂಗಳಲ್ಲಿ ವಿಸ್ಮಯ ನಗರಿಯಲ್ಲಿ ಒಂದು ಲೇಖನ ಪಿಸುಮಾತು, ಮಾಹಿತಿ, ವಿಮರ್ಶೆ, ಸಮಾಚಾರ ಯಾವುದೇ ಒಂದು ವಿಭಾಗದಲ್ಲಿ ಬರೆಯಿರಿ ಅಥವಾ ಐದು ಅನಿಸಿಕೆಗಳನ್ನು ಬರೆಯಿರಿ ಅಥವಾ ವಿಸ್ಮಯ ನಗರಿಯ ಫೇಸ್ ಬುಕ್ ಪುಟ ವನ್ನು ಲೈಕ್ ಮಾಡಿ ಎಂದು ಕೇಳಿಕೊಳ್ಳಲಾಗಿತ್ತು. ರವಿಬೆಳಗೆರೆ ಅವರ "ಹೇಳಿ ಹೋಗು ಕಾರಣ" ಪುಸ್ತಕ ಗೆಲ್ಲುವ ಅವಕಾಶ ಇತ್ತು.
ಈ ಸ್ಪರ್ಧೆಯ ಉದ್ದೇಶ ಹೆಚ್ಚು ಹೆಚ್ಚು ಕನ್ನಡಿಗರು ಕನ್ನಡವನ್ನು ಅಂತರ್ಜಾಲದಲ್ಲಿ ಬಳಸಲು ಪ್ರೋತ್ಸಾಹಿಸುವದು. ಇಂದು ಕನ್ನಡ ಲಿಪಿಯ ದಿನಬಳಕೆ ಹೊಸ ಪೀಳಿಗೆಯಲ್ಲಿ ಕಡಿಮೆ ಆಗುತ್ತಿದೆ. ಒಂದು ಕಡೆ ಅನ್ನಕೊಡುವ ಭಾಷೆಯಾಗಲು ಕನ್ನಡ ಒದ್ದಾಡುತ್ತಿದ್ದರೆ ಇನ್ನೊಂದು ಕಡೆ ಹೊಸ ತಂತ್ರಜ್ಞಾನಗಳಲ್ಲಿ ಸೂಕ್ತ ಸ್ಥಾನ ಕಂಡು ಕೊಳ್ಳುವಲ್ಲಿ ಕನ್ನಡ ವಿಫಲವಾಗುತ್ತಿದೆ. ಅದು ಸ್ಮಾರ್ಟ್ ಫೋನು ಇರಬಹುದು, ಟ್ಯಾಬ್ಲೆಟ್ ಇರಬಹುದು ಅಂತರ್ಜಾಲ ತಾಣಗಳೇ ಇರಬಹುದು. ಆಂಗ್ಲ ಭಾಷೆಯಷ್ಟು ಸಮರ್ಥವಾಗಿ ಕನ್ನಡದಲ್ಲಿ ಸೌಲಭ್ಯಗಳು ಬಂದು ಅವು ವ್ಯವಹಾರಿಕವಾಗಿ ಸಫಲವಾಗಲು ಸೋತಿವೆ. ಇದೇ ಪರಿಸ್ಥಿತಿ ಮುಂದುವರಿದರೆ ಕನ್ನಡ ಅಂಕೆಗೆ ಆದ ಗತಿ ಕನ್ನಡ ಲಿಪಿಗೂ ಬಂದೀತು ಅಂದರೆ ಅದು ಅತಿಶಯೋಕ್ತಿ ಅಲ್ಲ.
ಇಂತಹ ವಿಷಮ ಪರಿಸ್ಥಿತಿಯಲ್ಲಿ ಕನ್ನಡದ ಬಳಕೆಯನ್ನು ಅಂತರ್ಜಾಲದಲ್ಲಿ ಹೆಚ್ಚಿಸಬೇಕು ಎಂಬ ಗುರಿಯೊಂದಿಗೆ ಹುಟ್ಟಿದ್ದು ಈ ವಿಸ್ಮಯ ನಗರಿ.
ಜೂನ್ ತಿಂಗಳ ಅದೃಷ್ಟಶಾಲಿ ವಿಸ್ಮಯ ಪ್ರಜೆ ಸ್ಪರ್ಧೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಒಟ್ಟೂ ಹದಿನೆಂಟು ಜನ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಈ ಹದಿನೆಂಟು ಜನರಿಗೆ ಒಂದೊಂದು ಅಂಕೆ ನೀಡಿ ೧ ರಿಂದ ೧೮ರವರೆಗಿನ ಅಂಕೆಯ ನಡುವೆ ಒಂದು ರೆಂಡಮ್ ನಂಬರ್ ಆಯ್ಕೆ ಮಾಡಲಾಯ್ತು. ಆಗ ಬಂದ ಸಂಖ್ಯೆ ೧೧. ಆ ಪಟ್ಟಿಯಲ್ಲಿ ೧೧ ನೇ ಸಂಖ್ಯೆಯಲ್ಲಿದ್ದ ಚಾಮರಾಜ ಸವಡಿ ಅವರು ಈ ಬಹುಮಾನ ಗೆದ್ದರು. ಚಾಮರಾಜ ಸವಡಿಯವರಿಗೆ ವಿಸ್ಮಯ ನಗರಿಯಿಂದ ಹಾರ್ದಿಕ ಶುಭಾಶಯಗಳು.
ಬಹುಮಾನದ ನಿಯಮಾನುಸಾರ ರವಿಬೆಳಗೆರೆ ಅವರ "ಹೇಳಿ ಹೋಗು ಕಾರಣ" ಪುಸ್ತಕವನ್ನು ಬಹುಮಾನ ವಿಜೇತರಾದ ಚಾಮರಾಜ ಸವಡಿಯವರಿಗೆ ಕಳುಹಿಸಲಾಗುವದು. ಅಕಸ್ಮಾತ್ ಅವರು ಬಯಸಿದರೆ ಪುಸ್ತಕದ ಬದಲಾಗಿ ನೂರು ರುಪಾಯಿ ಮೌಲ್ಯದ ಮೊಬೈಲ್ ರಿಚಾರ್ಜ್ ಅವಕಾಶವನ್ನು ಆಯ್ಕೆ ಮಾಡಿಕೊಳ್ಳಬಹುದು.
ಬೆಂಬಲಿಸಿದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು.
ಸಾಲುಗಳು
- Add new comment
- 537 views
ಅನಿಸಿಕೆಗಳು
ಚಾಮರಾಜ ಸವಡಿಯವರಿಗೆ
ಚಾಮರಾಜ ಸವಡಿಯವರಿಗೆ ಅಭಿನಂದನೆಗಳು.