Skip to main content

ಮಳೆ

ಇಂದ nimma.gelathi
ಬರೆದಿದ್ದುJuly 14, 2012
2ಅನಿಸಿಕೆಗಳು

ಮಳೆ ಬರುವ ಹೊತ್ತು   


ತಿನ್ನಬೇಕು ಬಜ್ಜಿ ,ಕೇಸರಿ ಬಾತು 

ಅಮ್ಮನ ಕೈಯಿಂದ ತಿಂದರೆ ತುತ್ತು 

ಸಖನೆ ಕೊಟ್ಟಂತೆ ಇರುತ್ತೆ ಮುತ್ತು 

********
ಮಳೆ ಬರುವ ಹೊತ್ತು  

ರೈತನಿಗೆ ಖುಷಿ ತಂತು 

ದುಃಖ ದುಮ್ಮಾನಗಳೆಲ್ಲ  ಕಿತ್ತು 

ಬೆಳೆ ಬೆಳೆಯುವ ಸಂತಸ ಮೂಡಿತು 

ವರ್ಷದ ಚಿಂತೆ ನೀಗಿತು .

*******

ಮಳೆ ಬರುವ ವೇಳೆ 

ವಿದ್ಯಾರ್ಥಿಗಿಲ್ಲ ಶಾಲೆ 

ಅಬ್ಬ ಇವತ್ತೊಂದಿನ ಇರಬಹುದು ಮನೆಯಲ್ಲೇ 

ನಿಲ್ಲದೆ ಇನ್ನೂ ಜೋರಾಗಿ ಬರಲಪ್ಪ ಮಳೆ

*******

ಮಳೆ ಬಂದರೆ ಎಲ್ಲರಿಗೂ ಖುಷಿ

ಆದರೆ ಮಳೆಯಲ್ಲಿ ಸಿಲುಕಿದವರಿಗೆ ಕಸಿ-ವಿಸಿ

ಅಯ್ಯೋ ಮಳೆರಾಯ ನಿಲ್ಲಯ್ಯ ,

ಛತ್ರಿಯ ತರಲು ಮರೆತೆನಯ್ಯ 

ನಾ ಮನೆಯ ಸೇರಿದ ಮೇಲೆ ಜೋರಾಗಿ ಸುರಿಯಯ್ಯ.

ಲೇಖಕರು

ಅನಿಸಿಕೆಗಳು

K.M.Vishwanath ಶನಿ, 07/14/2012 - 18:41

ಕವನಗಳು 

ಬಹಳ ಸುಂದರವಾಗಿ ಮೂಡಿ ಬಂದಿವೆ

 

nimma.gelathi ಶನಿ, 07/14/2012 - 18:52

ಧನ್ಯವಾದ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.