ಕನ್ನಡಾಭಿಮಾನ
ಈಗಂತೂ 'tv ಇಲ್ಲದ ಮನೆಯಿಲ್ಲ ,ಮೊಬೈಲ್ ಇಲ್ಲದ ಮನುಷ್ಯನಿಲ್ಲ 'ಎಂಬಂತಾಗಿದೆ . ತಾವೆಲ್ಲ ಕನ್ನಡ ಮಧ್ಯಮಗಳಲ್ಲಿ ಪ್ರಸಾರವಾಗುವ ಅಡುಗೆ ಕಾರ್ಯಕ್ರಮ ನೋಡಿರಬಹುದು . ನಾನು ಯಾವುದೇ ಒಂದು ವಾಹಿನಿಯ ಬಗ್ಗೆ ಹೇಳುತ್ತಿಲ್ಲ ,ಇದು ಎಲ್ಲ ವಾಹಿನಿಗಳಿಗೂ ಸಂಬಂಧಿಸಿದ್ದು . ನೋಡದೆ ಇದ್ದವರು ಕನಿಷ್ಠ ಒಂದು ಸಂಚಿಕೆಯದರೂ ನೋಡಿ, ನಿಮಗೆ ನಾನು ಹೇಳಲು ಹೊರಟ ವಿಷಯ ನಿಜ ಎಂದೂ ಗೊತ್ತಾಗುತ್ತದೆ.
ಕನ್ನಡ ವಾಹಿನಿಯ ಅಡುಗೆ ಕಾರ್ಯಕ್ರಮಗಳಲ್ಲಿ ಕನ್ನಡವೇ ಹೆಚ್ಚು ಬಳಸುವುದಿಲ್ಲ ! ಎಂಬುದು ವಿಪರ್ಯಾಸದ ಸಂಗತಿಯಾಗಿದೆ.ಇಲ್ಲಿ ಎಲ್ಲವೂ english ಮಯ. ಫಸ್ಟ್ ಒಂದು ಬೌಲ್ ಗೆ ಹಿಟ್ಟು ಹಾಕಬೇಕು , ಆಮೇಲೆ ಕ್ಯಾಪ್ಸಿಕಂ,ಮಿಂಟ್ leaves, curry leaves,onion ಹಾಕಬೇಕು. ಆಮೇಲೆ stove on ಮಾಡಿ oil ಹಾಕಬೇಕು . ನಂತರ 'ಸೇರ್ವಿಂಗ್ ಬೌಲ್ ಕೊಡಿ ' ಎನ್ನುತ್ತಾರೆ.ಇಲ್ಲಿ ನಿಜಕ್ಕೂ ಕನ್ನಡ ಪದಗಳ ಬಳಕೆ ತುಂಬಾ ಕಡಿಮೆ..
ಕನ್ನಡಕ್ಕಿಂತ ಇಂಗ್ಲಿಷ್ ಪದಗಳೇ ರಾರಾಜಿಸುತ್ತವೆ. ಕನ್ನಡ ಬರದಿರುವವರೂ ಇದನ್ನು ನೋಡಿ ಸಿಲಿಸಾಗಿ ಅಡುಗೆ ಕಲಿಯಬಹುದು.
ವಯಸ್ಸಾದ ಅಜ್ಜಿಯಂದಿರು ,ಇಂಗ್ಲಿಷ್ ಬರದವರು ಇದನ್ನು ನೋಡಿ ಅರ್ಥ ಮಾಡ್ಕೊಳ್ಳೋದು ತುಂಬಾ ಕಷ್ಟ .ಇನ್ನೊಂದು ವಿಷಯ,ಇಂಥ ಕಾರ್ಯಕ್ರಮಗಳೇನಾದರೂ ಚಿಕ್ಕ ಮಕ್ಕಳು ,ಇನ್ನೂ ಕನ್ನಡ ಕಲಿಯುತ್ತಿರುವವರು
ನೋಡಿದರೆ ಅವರಿಗೆ ಆಯಾ ತರಕಾರಿಗಳಿಗೆ ಕನ್ನಡದಲ್ಲಿ ಎನೆನ್ನುತ್ತಾರೆಂದು ತಿಳಿಯುವುದೇ ಇಲ್ಲ.ಹಾಗಾಗಿ ಅವರು ಇಂಗ್ಲಿಷ್ ನ್ನೇ ಕಲಿಯುತ್ತಾರೆ , ಅದನ್ನೇ ಮುಂದುವರೆಸುತ್ತಾರೆ .ಮುಂದೊಂದು ದಿನ ತರಕಾರಿಗಳ ಕನ್ನಡ ಪದಗಳು ಮರೆತೇ ಹೋಗಬಹುದು .
ಕನ್ನಡ ಮಾಧ್ಯಮದವರಿಗೂ ಇಂಗ್ಲಿಷ್ ಮೋಹ ವಿರುವುದು ನಿಜಕ್ಕೂ ವಿಷಾದನೀಯ .
ಕನ್ನಡವನ್ನು ಎಲ್ಲೆಲ್ಲೂ ಪಸರಿಸಬೇಕಾದ ಕನ್ನಡ ಮಾಧ್ಯಮಗಳೇ ಇಂಗ್ಲಿಷ್ ನತ್ತ ಮುಖಮಾಡಿವೆ.
ಸಾಲುಗಳು
- Add new comment
- 346 views
ಅನಿಸಿಕೆಗಳು
ಅಡುಗೆ ಕಾರ್ಯಕ್ರಮವಷ್ಟೆ ಅಲ್ಲ,
ಅಡುಗೆ ಕಾರ್ಯಕ್ರಮವಷ್ಟೆ ಅಲ್ಲ, ಎಲ್ಲ ಕಾರ್ಯಕ್ರಮಗಳಲ್ಲೂ ಕಂಗ್ಲಿಷ್ದೆ ಪಾರುಪತ್ಯ. ನಿರೂಪಕರು ಕೂಡ ತಾವಾಡುವ ಮಾತುಗಳಲ್ಲಿ ಹೆಚ್ಚಿನ ಪಾಲು ಇಂಗ್ಲಿಷ್ ಉಪಯೋಗಿಸುತ್ತಾರೆ. ಹೆಸರಿಗೆ ಹೇಳಿಕೊಳ್ಲಿಕ್ಕೆ ಮಾತ್ರ ಕನ್ನಡ ಛಾನೆಲ್. ಇತ್ತೀಚೆಗೆ ಕನ್ನಡದ ಕೋಟ್ಯಾಧಿಪತಿಯಲ್ಲಿ ಭಾಗವಹಿಸಿದ ಜನಪ್ರಿಯ ಕ್ರಿಕೆಟಿಗರಾದ ಶ್ರೀ ಅನಿಲ್ ಕುಂಬ್ಳೆಯವರು ಸ್ವಚ್ಛ ಕನ್ನಡದಲ್ಲೆ ಮಾತನಾಡಿದರು. ಇವರನ್ನು ನೋಡಿಯಾದರು ಕಲಿಯಬಾರದೆ.