Skip to main content

ರಾಜಕೀಯ ಯಾವನಿಗೊತ್ತು

ಇಂದ nimma.gelathi
ಬರೆದಿದ್ದುJuly 8, 2012
noಅನಿಸಿಕೆ

HI  friends  I M BACK  :)

 

ನಾನು ಇಲ್ಲಿ "ಪರಮಾತ್ಮ " ಚಿತ್ರದ " ಯಾವನಿಗೊತ್ತು " ಅನ್ನೊ ಹಾಡಿಗೆ   ಇತ್ತೀಚಿನ ದಿನಗಳಿಗೆ ಅನ್ವಯವಾಗುವ ರಾಜಕಿಯದ     ಸಾಹಿತ್ಯ ಬೆರೆದಿದ್ದೆನೆ.

 

ಎಲ್ಲರೂ ಓದಿ ಹೇಗಿದೆ ಏಂದು ತಿಳಿಸಿ.

 

ಸದಾನಂದ ನ ,ಯಡಿಯೂರಪ್ಪ ನ ,ಜಗಧೀಶ್  ಶೆಟ್ಟರ್ ಆ 

ಯಾವನಿಗೊತ್ತು
ಏನು ಮಾಡೋದು ಇಂಥ ಪಕ್ಷವು ಆರಿಸಿಬಂತು , ಆರಿಸಿಬಂತು 
ಏನು ಹೇಳೋದು ಇಂಥ ಟೈಮ್ ಲ್ಲಿ ಯಾವನಿಗೊತ್ತು ಯಾವನಿಗೊತ್ತು 
ಬಿಜೆಪ ಎಂಬ ಪಕ್ಷದಲ್ಲಿ ಇಂದು ಮನಸ್ತಾಪ ಶುರುವಾಗೊಯ್ತು
ಜಗಳ ಯಾತಕ್ಕೆ ಮಾಡ್ತಾರೆ ಇವರು  ಯಾವನಿಗೊತ್ತು ಯಾವನಿಗೊತ್ತು 
ಜಗಳ ನಿಲ್ಲುತ್ತಾ ಬೋರ್ ಹೊಡೆಯುತ್ತ  ಯಾವನಿಗೊತ್ತು ಯಾವನಿಗೊತ್ತು

**********

 

 

 

ಅದ್ಯಾವ್ದೋ ಒಂದು Tv  ಚಾನೆಲ್ ನ್ನ 
ನೋಡುತ್ತಾ ಮಲ್ಕೊಂಡಿದ್ದೆ    ಮದ್ಯಾಹ್ನ 
ಬ್ರೇಕಿಂಗ್ ನ್ಯೂಸೊಂದು   ಬಂತಯ್ಯ 
ಕಲಹ  bjp ಯಲ್ಲಿ  ಅಂತಯ್ಯ  
ಕುರ್ಚಿಗಾಗಿ ಕದನ ಸ್ಟಾರ್ಟ್ ಆಗೊಯ್ತು ಕಣ್ರೀ 
ನೋಡಿ ದೊರಿಗೆಲ್ಲ  ಸುಸ್ತಾಗೊಯ್ತು ಕಣ್ರಿ
ಜನತೆಯ ಮೇಲೆ ಹೈ ಹೀಲ್ದು ಹಾಕಿ ರಾಜಕಾರಣಿ ನಿಂತಂಗಾಯ್ತು 
ಇಂಥ ಟೈಮ್ ಲ್ಲಿ  ಜಗಳ ಬೇಕಿತ್ತಾ  ಯಾವನಿಗೊತ್ತು ಯಾವನಿಗೊತ್ತು
ಲಕ್ ಇದ್ದೊರ್ಗೆ ಕುರ್ಚಿ ಸಿಗುತ್ತಾ ಯಾವನಿಗೊತ್ತು   ಯಾವನಿಗೊತ್ತು 
*************

 

 

 

 ಮಂತ್ರಿಗ್ ಯಾಕೋ ಯಾವ್ದೂ ಸಾಲಲ್ಲ     
 ಇವರ ಜಗಳನ  ನಿಲ್ಸಕ್ಕಾಗಲ್ಲ        
  ಇವ್ರೆಲ್ಲಿಂದ ಉಕ್ಕಿ  ಬಂದ್ರಯ್ಯ                                    
ನಿಮಗೆ ಗೊತ್ತಲ್ಲ ಇವ್ರು mutthalaru 
ಮತ್ತೆ ಮತ್ತೆ ಕದನ ಆಗ್ತಾ ಇತ್ತು  ಕಣ್ರೀ
 ಒಳ್ಳೆ ಕೋಳಿ  ಜಗಳ ನೋಡೇ ಬಿಟ್ಟೆ ಕಣ್ರೀ 
ಮೂಗು ಮುರಿತ ಒಬ್ಬರಿಗೊಬ್ರು ನೋಡ್ತಾ ಇದ್ರು ,ಇದು ಬೇಕಿತ್ತಾ ?
ನಮ್ಮ ರಾಜ್ಯ ಕ್ಕೂ ಭವಿಷ್ಯ ಇರ್ಬೋದ  ಯಾವನಿಗೊತ್ತು ಯಾವನಿಗೊತ್ತು
ಮುಂದೆ ಒಂದಿನ  ಉತ್ತರ ಸಿಗ್ಬೋದು   ಯಾವನಿಗೊತ್ತು ಯಾವನಿಗೊತ್ತು

 

 

ಲೇಖಕರು

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.