ಈ ರಾಜಕೀಯ " ಗಂಡ-ಹೆಂಡಿರ ಜಗಳ ಊಂಡು ಮಲಗುವವರೆಗೆ" ಇದ್ದ ಹಾಗೇ
ಏಕೆಂದರೆ ಅದಿಕಾರಕ್ಕೆ ಬರುಲು ಏನೆಲ್ಲಾ ವಿವಾದ ಸೃಷ್ಠಿಸಿ ನಂತರ ಅದಿಕಾರಕ್ಕೆ ಬಂದಮೇಲೆ ತಾನು ಮೊದಲು ಏನು ಮಾತನಾಡಿದೇ ಏನ್ನೋದು ಮರೆತು ತಮ್ಮ ಸ್ವಾರ್ಥಗೋಸ್ಕರ್ ಅವರೊಂದಿಗೆ ಅದಿಕಾರ ಮಾಡುತ್ತಾರೆ. ಇದು ನಮ್ಮ ದೇಶದ ರಾಜಕೀಯ.
ಇದಕ್ಕೆ ಪ್ರಸ್ತುತ ಉದಾರಣೆ ನಮ್ಮ ರಾಜ್ಯ ರಾಜಕೀಯ ಮತ್ತು ಉತ್ತರ ಪ್ರದೇಶ ಮುಖ್ಯ ಮಂತ್ರಿ ಶ್ರೀ ನಿತಿಶ ಕುಮಾರ, ಶ್ರೀ ಲಾಲು ಪ್ರಸಾದ್ ಯಾದವ್, ಶ್ರೀ ಹೆಚ್.ಡಿ. ದೇವೆಗೌಡ, ಶ್ರೀ ಕುಮಾರಿ ಮಾಯಾವತಿ, ಆಂದ್ರ ಸರ್ಕಾರ, ಶ್ರೀ ಮುಲಯಂಸಿಂಗ್ ಯಾದವ್, ಮುಂತಾದ ಕಮ್ಯುನಿಷ್ಟ ನಾಯಕರು
ಜಾತಿ ರಾಜಕೀಯ ಉದಯಿಸಿದ್ದು ಮೊದಲು ಪ್ರಾಚೀನ ಕಾಲದಲ್ಲಿ ವರ್ಗ ಆಧಾರಿತ ಆ ಕಾಲದಲ್ಲಿ ನ್ಯಾಯ ದರ್ಮದ ತತ್ವದ ಮೇಲೆ ರಾಜಕೀಯ ಮಾಡುತ್ತಿದರು ನಂತರ ಮದ್ಯ ಕಾಲದಲ್ಲಿ ವಿವಿದ ರಾಜ ಮನೆತನ ಉದಯಿಸಿ ಪ್ರಾಂತೀಯ ರಾಜಕೀಯ ಪ್ರಾರಂಭ ಪ್ರಾಂತೀಯ ರಾಜರ ಒಗಟ್ಟು ಇರದ ಕಾರಣ ಬ್ರಿಟೀಷರು ತಮ್ಮ ವ್ಯಾಪಾರ ಉದ್ದೇಶದಿಂದ ಭಾರತಕ್ಕೆ ಆಗಮನ . ನಂತರ ಅವರು ತಮ್ಮ ವ್ಯಾಪಾರ ದೃಷ್ಠಿಯಿಂದ ಪ್ರಾಂತೀಯ ರಾಜರ ಉಪಯೋಗ ಹೀಗೆ ಬ್ರಿಟಿಷರು ಒಡೆದು ಆಳುವ ನೀತಿ ಪಾರಂಭದಿಂದ ಉದಯಿಸಿದ ರಾಜಕೀಯ ಈಗ ಪ್ರಸ್ತುತ ಯಾವ ಹಂತ ತಲುಪಿದೆ ಎಂದರೆ, ರಾಜಕೀಯದಲ್ಲಿ ಬರಲು ಒಂದು ಜಾತಿ ಬಲ ಮತ್ತು ಹಣ ಬಲ ಇರಬೇಕಾದ ಅನಿವಾರ್ಯತೆ ಆಗಿದೆ.
- ಪ್ರಮುಖ ಅಂಶಗಳು
- ಶ್ರೀ ಮಹಾತ್ಮಾ ಗಾಂಧಿ ಪೂನಾ ಒಪ್ಪಂದದಲ್ಲಿ ಕ್ರಾಂತಿಕಾರಿಗಳ ಬಗ್ಗೆ ಪ್ರಸ್ತಾಪಿಸದೆ ಅವರನ್ನು ಗಲ್ಲಿಗೇರುವುದನ್ನು ತಪ್ಪಿಸಲಿಲ್ಲ.
- ಶ್ರೀ ಸರ್ದಾರ ವಲ್ಲಭಾಯಿ ಪಟೇಲ ಏಲ್ಲಿ ಭಾರತದ ಮೊದಲು ಪ್ರಧಾನಿಯಾಗುತ್ತಾರೆಂದು ಶ್ರೀ ಮಾಹತ್ಮ ಗಾಂದಿ ಶ್ರೀ ಜವಹರ್ ಲಾಲ್ ನೆಹರು ತಂದೆಯವರಿಗೆ ಋಣಿಯಾಗಿರಲು ಅಂಖಂಡ ಭಾರತಕ್ಕಾಗಿ ಹೋರಾಡಿ ನಂತರ ಸ್ವಾರ್ಧಕ್ಕಾಗಿ ಭಾರತ ಇಬ್ಬಾಗ ಮಾಡಿ ಶ್ರೀ ನೆಹರು ಅವರನ್ನು ಫ್ರಧಾನಿ ಮಾಡಿದರು. ಇದರಿಂದ ಕಾಶ್ಮಿರ ಸಮಸ್ಯೆ ಉದಯ
- ನಂತರ ಯರವಾಡ ಒಪ್ಪಂದದ ಮೂಲಕ ಜಾತಿ ಆದಾರಿತ ವ್ಯವಸ್ದೆಗೆ ಪ್ರಾರಂಭ
- ಸಂವಿದಾನ ರಚನೆಯ ಉದ್ದೇಶ ಒಳ್ಳೇಯದಾದರು ಮೀಸಲಾತಿ ವ್ಯವಸ್ದೆ 10 ವರ್ಷಗಳ ನಂತರ ಮುಂದುವರೆಸಿದ್ದಾರೆ, ವರಿಸಲಿ ಆದರೆ ಕೆನ್ ಪದರ (ಒಮ್ಮೇ ಮೀಸಲಾತಿ ಪಡೆದವರನ್ನು ಹೋರಗಿಟ್ಟು ಊಳಿದವರಿಗೆ ಮೀಸಲಾತಿ} ಮೀಸಲಾತಿ ಮುಂದುವರೆದರೆ ಇತರರಿಗೆ ಉತ್ತಮವಾಗುತ್ತದೆ. ಆದರೆ ಇತ್ತೀಚಿನ ರಾಜಿಕೀಯ ಮೀಸಲಾತಿ ಪಡೆದು ಮುಂದೆ ಬಂದ ನಾಯಕರು ಇದಕ್ಕೆ ಒಪ್ಪುತ್ತಿಲ್ಲ.
- ಇತ್ತೀಚಿಗೆ ಪ್ರತಿಯೊಂದ ರಾಜಕೀಯ ಪಕ್ಷಗಳು ಜಾತಿಯ ಲೆಕ್ಕಾಚಾರ ಮಾಡಿ ಅದಕ್ಕೆ ಸಮನಾದ ಮೀಸಲಾತಿ, ಯೋಜನೆ ತಯಾರಿಸುತ್ತಾರೆ.
- ರಾಜ್ಯಗಳಲ್ಲಿ ಜಾತಿಯ ರಾಜಕೀಯ ಅತಿಯಾಗಿದೆ. ಆ ರಾಜ್ಯದ ಪ್ರಮುಖ ಜಾತಿಯವರು ತಮ್ಮದೆ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ನಂತರ ತಮ್ಮ ಜನಾಂಗದ ಮುಖಂಡರನ್ನು ವಿವಿದ ನಿಗಮ, ಸಂಸ್ದೆಗಳಿಗೆ ನೇಮಕ ಮಾಡುತ್ತಾರೆ.
- ಆಂದ್ರ ಸರ್ಕಾರ ಅಲ್ಪ ಸಂಖ್ಯಾತರಿಗೆ ಮೀಸಲಾತಿ ನೀಡಲು ತಿರ್ಮಾನಿಸಿ ಹೈಕೋರ್ಟನಿಂದ ಅವಮಾನ
- ಉತ್ತರ ಪ್ರದೇಶದ ಸಿ.ಎಮ್. ಅವರಿಗೆ ಗೋದ್ರಾ ರೈಲು ದುರಂತವಾಗಿ ನಂತರ ಗೋದ್ರಾ ಗಲಭೆ ಯಾದಾಗ ತಾವೇ ರೈಲು ಮಂತ್ರಿಯಾಗಿದ್ದು ಅವಾಗ ತನಿಖೆಗೆ ಆದೇಶ ಮಾಡದೆ ಈಗ ನರೆಂದ್ರ ಮೋದಿ ಪ್ರಧಾನ ಮಂತ್ರಿ ಅಭ್ಯರ್ದಿ ಎಂದು ಗೊತ್ತಾದಾಗ ಬಿ.ಜೆ.ಪಿ ಜಾತ್ಯಾತಿತ ಪಕ್ಷವಲ್ಲ ಎನ್ನುತ್ತಿದ್ದಾರೆ.
ಹೀಗೆ ಪ್ರತಿಯೊದು ರಾಜಕೀಯ ನಿರ್ದಾರದ ಹಿಂದೆ ಜಾತೀಯ ಅಂಶ ಒಳಕೊಂಡಿರುತ್ತದೆ.
" ಭಾರತ ಅಭಿವೃದ್ದಿಗೆ ಸಮಗ್ರ ಭಾರತ ಕಲ್ಪನೆ ಇರಬೇಕು ವಿನಹ ಜಾತೀಯ ಕಲ್ಪನೆ ಇರಬಾರದು"
- 969 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ