ಶುಭವ ಪಸರಿಸು ಬೆಳಕೇ
ಗಾಢ ತಿಮಿರವ ನೀಗಿ ಶುಭವ ಪಸರಿಸು ಬೆಳಕೇ
ನಮ್ಮ ಮನೆಯಂಗಳದಿ ನಿತ್ಯ ಬೆಳಗುತಿರು
ಮನಸುಗಳ ಆಳದಲಿ ಸಮತೆಯಾಗುತ ಬೆಳಗು
ಬುದ್ಧಿಗಳ ಆಳದಲಿ ಜ್ನಾನ ಜ್ಯೋತಿಯೆ ಹರಸು
ಮಾತು ಕೃತಿಗಳಲೆಲ್ಲ ಸಹನೆ, ಪ್ರೀತಿಯನಿರಿಸು
ಹೃದಯಗಳ ಒಳಗೆಲ್ಲ ಕರುಣೆಯೊರತೆಯ ಹರಿಸು
ದ್ವೇಷ , ಕ್ರೌಯ್ರವ ನೀಗಿ ಶಾಂತಿ ನೀಡಿರು ಮನಕೆ
ನಮ್ಮ ಮನದಂಗಳದಿ ನಿತ್ಯ ಬೆಳಗುತಿರು
ನಿನಗಿಲ್ಲ ಸೀಮೆಗಳು ದೇಶಗಳ ದಾಟುತಲಿ
ಮಧುರ ಬಾಂಧವ್ಯಗಳ ನಡುವೆ ಬೆಸೆಯುತಿರು
ಸಾಲುಗಳು
- 197 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ