ಭಾರತ-ನೇಪಾಳ ಗಳ ನಡುವೆ...!
ನಮ್ಮ ಭಾರತ ದೇಶದ ನೆರೆಯ ಮಿತ್ರ ರಾಷ್ಟ್ರಗಳಲ್ಲಿ ಒಂದಾದ ನೇಪಾಳ ಒಂದು ಸಣ್ಣ ಸುಂದರ ದೇಶ. ನೇಪಾಳ ನಮ್ಮ ಮಿತ್ರ ರಾಷ್ಟ್ರ ವಾಗಿದ್ದರೂ ಅಲ್ಲಿನ ಬಹಳ ಬೇಗ ಬದಲಾಗುವ ಪ್ರವರ್ತಮಾನ ರಾಜಕೀಯ ಸ್ಥಿತಿಗಳಿಂದಾಗಿ ಮತ್ತು ಶತೃ ರಾಷ್ಟ್ರಗಳಲ್ಲದಿದ್ದರೂ ನಂಬಲರ್ಹವಲ್ಲದ ಟಿಬೆಟ್ ಹಾಗೂ ಚೀನಾ ದೇಶಗಳ ಗಡಿಗೆ ಅಂಟಿಕೊಂಡಿರುವುದರಿಂದ ಸ್ನೇಹ ಮತ್ತು ಸೌಹಾರ್ಧತೆಯ ಮೂಲಕ ಶಾಂತಿಯನ್ನು ಕಾಪಾಡಿಕೊಳ್ಳುವುದು ನಮ್ಮ ದೇಶಕ್ಕೆ ರಾಜ ತಾಂತ್ರಿಕ ಮತ್ತು ಗಡಿ ರಕ್ಷಣಾ ಹಿತದೃಷ್ಠಿಯಿಂದ ಬಹಳ ಪ್ರಾಮುಖ್ಯತೆ ಹೊಂದಿದೆ. ಹಾಗಾಗಿ ಆ ದೇಶದ ಅಭಿವೃದ್ಧಿ ವ್ಯಾಪಾರ ಇತ್ಯಾದಿಗಳಿಗಾಗಿ ಪರಸ್ಪರ ಸಹಕಾರ ನೀಡುವುದೆಂದು ಓಡಂಬಡಿಕೆ ಸಹಿ ಹಾಕಲಾಗಿದ್ದು ಪರಸ್ಪರ ದೇಶಗಳ ಗಡಿ ಮೂಲಕ ಬಂದು ಹೋಗಲು ಪಾಸ್ ಪೋರ್ಟ್ ಅವಶ್ಯಕತೆಯಿರುವುದಿಲ್ಲ. ಇಂತಹಾ ಗಡಿ ಬಾಗಗಳಲ್ಲಿ ಸಾಮಾನ್ಯವಾಗಿ ಅಲ್ಲಿನ ಜನರು ಈ ಕಡೆಗೂ ಇಲ್ಲಿನ ಜನರು ಆ ಕಡೆಗೂ ಪ್ರವೇಶ ಪಡೆದು ಅಂಗಡಿಗಳಲ್ಲಿ ದೊರೆಯುವ ವಸ್ತುಗಳನ್ನು ಖರೀದಿಸಿ ಅದೇದಿನ ವಾಪಸ್ಸಾಗಬೇಕು ಅಲ್ಲೇ ಉಳಿಯುವಂತಿಲ್ಲ.
[img_assist|nid=22547|title=ಭಾರತ-ನೇಪಾಳ ನಡುವೆ-೧|desc=ಭಾರತ ನೇಪಾಳ ದ ರಸ್ತೆಯಲ್ಲಿನ ಪ್ರಕೃತಿ ಸೌಂಧರ್ಯ|link=node|align=center|width=624|height=468]
[img_assist|nid=22548|title=ಭಾರತ-ನೇಪಾಳ ನಡುವೆ-೨|desc=ಭಾರತ ನೇಪಾಳ ನಡುವೆ ಹಿಮಾಲಯದ ಪ್ರಕೃತಿ ಚಿತ್ರ|link=node|align=center|width=624|height=468]
[img_assist|nid=22549|title=ಭಾರತ-ನೇಪಾಳ ನಡುವೆ-೩|desc=ಮೋಡಗಳಿಂದಾವೃತ ಒಂದು ಗ್ರಾಮ|link=node|align=center|width=624|height=468]
ಆದರೆ ಈ ಮಿತ್ರತ್ವವನ್ನು ತಮ್ಮ ಅನುಕೂಲಕ್ಕಾಗಿ ಬಳಸಿಕೊಂಡು ಅಲ್ಲಿನ ಮತ್ತು ಇಲ್ಲಿನ ಸರ್ಕಾರೀ ನಿಯಮಗಳಿಗೆ ವಿರುದ್ಧವಾದ ಕೆಲವು ಕಾನೂನು ಬಾಹಿರ ಚಟುವಟಿಕೆಗಳು ನಿರಂತರ ನಡೆಯುತ್ತಲೇ ಇವೆ. ಸಾಮಾನ್ಯವಾಗಿ ಮಹಾನಗರಗಳಾದ ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತಾ ಇತ್ಯಾದಿ ನಗರಗಳಲ್ಲಿ ಬಹಳಷ್ಟು ಹೋಟೆಲ್, ಸೆಕ್ಯೂರಿಟೀ ಏಜೆನ್ಸೀ ಮತ್ತಿತರ ಕೂಲಿ ಕೆಲಸಗಾರರು ನೇಪಾಳೀ ಮೂಲದವರಾಗಿದ್ದು ಅದರಲ್ಲಿ ಕೆಲವರು ಹಲವಾರು ಕೊಲೆ ಸುಲಿಗೆ ದರೋಡೆ ಲೂಟಿ ಇತ್ಯಾದಿಗಳಲ್ಲಿ ಭಾಗಿಯಾಗಿರುವುದು ನಮ್ಮ ಪೋಲೀಸ್ ಇಲಾಖೆಗೆ ತಿಳಿದ ವಿಷಯವೇ. ಹಿಂದೊಮ್ಮೆ ಚಿಕ್ಕಪೇಟೆ ಬ್ಯಾಂಕ್ ಮತ್ತು ಆಭರಣ ಅಂಗಡಿಗಳ ದರೋಡೆ ಪ್ರಕರಣದಲ್ಲಿ ಮುಖ್ಯ ಆರೋಪಿಗಳು ನೇಪಾಳೀ ಮೂಲದವರಾಗಿದ್ದುದು ಎಲ್ಲರಿಗೂ ತಿಳಿದ ವಿಷಯ.
ಭಾರತ ಮತ್ತು ನೇಪಾಳ ಗಡಿಗೆ ಹೊಂದಿಕೊಂಡಿರುವ ಉತ್ತರಖಂಡ್, ಉತ್ತರ ಪ್ರದೇಶ, ಬಿಹಾರ್, ಪಶ್ಚಿಮ ಬಂಗಾಳ, ಸಿಕ್ಕಿಂ ರಾಜ್ಯಗಳಲ್ಲಿ ಕೆಲವುಕಡೆ ಎರಡೂ ಕಡೆ ಹೋಗಿ ಬರಲು ವ್ಯವಸ್ಥಿತವಾದ ತಪಾಸಣಾ ಕೇಂದ್ರಗಳನ್ನು ನಿರ್ಮಿಸಲಾಗಿದ್ದು ಅವುಗಳ ಮುಖಾಂತರವೇ ಹೋಗಿ ಬರಬೇಕಾಗಿದೆ. ಇವೆಲ್ಲಾ ಮಾರ್ಗಗಳು ಸಾಮಾನ್ಯ ಜನತೆಗಾಗಿ ಮಾತ್ರ ಆದರೆ ಮೇಲೆ ತಿಳಿಸಿದಂತೆ ಕಾನೂನು ಬಾಹಿರ ರೀತಿಯಲ್ಲಿ ಪ್ರವೇಶ ಮಾಡುವವರಿಗೆ ಕಳ್ಳ ದಾರಿಗಳು ಬಹಳಷ್ಟಿವೆ. ಅಂತಹಾ ಅಧಿಕೃತ ಮತ್ತು ಅನಧಿಕೃತ ಮಾರ್ಗಗಳ ಚಿತ್ರಗಳನ್ನು ಈ ಕೆಳಗೆ ಹಾಕಿರುತ್ತೇನೆ. ಈ ಅಧಿಕೃತ ಮಾರ್ಗ ಉತ್ತರಾಖಂಡ್ ರಾಜ್ಯದ ಧಾರ್ಚುಲಾ ಎಂಬ ಸ್ಥಳದಲ್ಲಿ ನಿರ್ಮಿಸಲಾಗಿದೆ. ಅದಲ್ಲದೇ ಒಂದು ಅನಧಿಕೃತ ಮಾರ್ಗದಲ್ಲಿ ಜನರು ನದಿಯನ್ನು ದಾಟಿ ಆಕಡೆಯ ನೇಪಾಳಕ್ಕೆ ತಲುಪುವ ಹಾಗೂ ಸಾಮಾನು ಸರಂಜಾಮುಗಳನ್ನು ತಲುಪಿಸುವ ಒಂದು ವ್ಯವಸ್ಥೆಯ ನಾನೇ ಸ್ವತಃ ಚಿತ್ರೀಕರಿಸಿದ ವಿಡಿಯೋ ಕೂಡಾ ಹಾಕಿದ್ದೇನೆ.
[img_assist|nid=22550|title=ಭಾರತ-ನೇಪಾಳ ನಡುವೆ-೪|desc=ಭಾರತ ನೇಪಾಳಗಳ ನಡುವೆ ಧಾರ್ಚುಲಾ ಎಂಬ ಸ್ಥಳದಲ್ಲಿ ನಿರ್ಮಿಸಿರುವ ಅಧಿಕೃತ ಸೇತುವೆ|link=node|align=center|width=624|height=468]
[img_assist|nid=22551|title=ಭಾರತ-ನೇಪಾಳ ನಡುವೆ-೫|desc=ಭಾರತ ನೇಪಾಳಗಳ ನಡುವೆ ಧಾರ್ಚುಲಾ ಎಂಬ ಸ್ಥಳದಲ್ಲಿ ನಿರ್ಮಿಸಿರುವ ಅಧಿಕೃತ ಸೇತುವೆ|link=node|align=center|width=624|height=468]
ಕೆಳಗೆ ತುಂಬಿ ಹರಿಯುತ್ತಿರುವ ಕಾಳೀ ನದಿ ಅದರ ಮೇಲೆ ಈ ಕಡೆಯಿಂದ ಆ ಕಡೆಗೆ ಒಂದು ತಂತಿಯ ಹಗ್ಗ (Wire Rope) ಕಟ್ಟಿ ಅದರ ಮೇಲೆ ಒಂದು ಕೊಕ್ಕೆ ಹಾಗೂ ಗಾಲಿ (Hook & Pulley) ಇವೆರಡರ ಸಹಾಯದಿಂದಲೇ ನದಿಯ ಕಡೆ ಬೆನ್ನು ಮಾಡಿ ಆಕಾಶ ನೋಡುತ್ತಾ ಕೇವಲ ಒಂದೇ ನಿಮಿಷದೊಳಗೆ ಈ ಕಡೆಯಿಂದ ಆಕಡೆಗೆ ತಲುಪುತ್ತಾರೆ, ಸಾಮಾನುಗಳನ್ನೂ ಎಳೆದೊಯ್ಯುತ್ತಾರೆ. ವಿಡಿಯೋದಲ್ಲಿ ಒಬ್ಬರ ಮೇಲೊಬ್ಬರ ಮಲಗಿ ಒಟ್ಟೊಟ್ಟಿಗೇ ಇಬ್ಬರು ವ್ಯಕ್ತಿಗಳು ಸಾಗುವುದನ್ನು ನೀವು ನೋಡಬಹುದು. ಆಕಡೆ ತಲುಪಿದ ನಂತರ ಬೆಟ್ಟ ಗುಡ್ಡಗಳಲ್ಲಿನ ಕಾಲುದಾರಿ ಹಿಡಿದು ತಮ್ಮ ದೇಶ ಸೇರಿಕೊಳ್ಳುತ್ತಾರೆ. ಇಂತಹಾ ಕಳ್ಳ ಮಾರ್ಗಗಳ ಮೂಲಕವೇ ಕೆಲವು ಅಪರಾಧಿಗಳು ನಗರಗಳಲ್ಲಿ ಅಪರಾಧ ಎಸಗಿ ತಲೆಮರೆಸಿಕೊಂಡು ನಂತರ ರಾತ್ರಿ ಹೊತ್ತು ತಮ್ಮ ದೇಶ ಸೇರಿಬಿಡುತ್ತಾರೆ. ಇದು ಕಾನೂನು ಬಾಹಿರ ಎಂದು ಎಲ್ಲರಿಗೂ ತಿಳಿದಿದ್ದರೂ ಅಲ್ಲಿನ ಸಾಮಾನ್ಯ ಜನತೆ ಕಂಡೂ ಕಾಣದಂತೆ ಸುಮ್ಮನಿದ್ದುಬಿಡುತ್ತಾರೆ. ಇದಕ್ಕೇ ಇರಬಹುದು ಪರಸ್ಪರ ಸಹಕಾರ ಮನೋಭಾವನೆ ಎಂದು ಹೇಳುವುದು...! ಆದರೆ ಪೋಲೀಸ್, ಮಿಲಿಟರಿ ರಕ್ಷಣಾ ಪಡೆ ಇಂತಹಾ ಕಾನೂನು ಮತ್ತು ಗಡಿ ರಕ್ಷಕರ ಕಣ್ಣಿಗೆ ಕಾಣದಂತೆ ಬೆಳ್ಳಂ ಬೆಳಿಗ್ಗೆ ಅಥವಾ ಸಂಜೆಹೊತ್ತು ಇಂತಹಾ ಕೆಲಸಗಳು ನಡೆಯುತ್ತವೆ ಎಂದು ಅಲ್ಲಿನವರಿಂದ ತಿಳಿದೆ. ಕಾನೂನು ಸುವ್ಯವಸ್ತೆ ಕಾಪಾಡುವ ನಿಟ್ಟಿನಲ್ಲಿ ಪರಸ್ಪರ ದೇಶಗಳ ವಿದೇಶಾಂಗ ಸಚಿವಾಲಯಗಳು ಈ ನಿಟ್ಟಿನಲ್ಲಿ ಸರಿಯಾದ ಕಾರ್ಯ ನಿರ್ವಹಿಸಿ ಇಂತಹಾ ಕಳ್ಳಮಾರ್ಗಗಳನ್ನು ನಿರ್ನಾಮಗೊಳಿಸಬೇಕು ಹಾಗೂ ಅಂತಹಾ ಮಾರ್ಗಗಳ ಮೇಲೆ ನಿಗಾ ವಹಿಸಿ ಕಟ್ಟು ನಿಟ್ಟಾದ ನಿಯಮಾವಳಿಗಳನ್ನು ಜಾರಿಗೆ ತಂದು ಅದನ್ನು ಉಪಯೋಗಿಸುವವರನ್ನು ಭಂಧಿಸಿ ವಿಚಾರಣೆಗೆಗೆ ಒಳಪಡಿಸಿದಲ್ಲಿ ಇನ್ನು ಮುಂದೆಯಾದರೂ ಇಂತಹಾ ಅಕ್ರಮ ಹಾಗೂ ಕಾನೂನು ಭಾಹಿರ ಚಟುವಟಿಕೆಗಳು ಕಡಿಮೆಯಾಗಬಹುದು.
ಸಾಲುಗಳು
- Add new comment
- 1495 views
ಅನಿಸಿಕೆಗಳು
ಓಳ್ಫಯ ಮಾಹಿತಿ ಸರ್
ಓಳ್ಫಯ ಮಾಹಿತಿ ಸರ್
ತಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧ
ತಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು. -ಅಗ್ನಿ.
ಈ ಲೇಖನದಲ್ಲಿ ವಿಡಿಯೋ ಚಿತ್ರವನ್ನು
ಈ ಲೇಖನದಲ್ಲಿ ವಿಡಿಯೋ ಚಿತ್ರವನ್ನು ಸೇರಿಸಲು ಮಾನ್ಯ ಮೇಲಧಿಕಾರಿಯವರಿಗೆ ವಿನಂತಿಸಿದ್ದೇನೆ ಅವರು ಅದನ್ನು ಪ್ರಕಟಿಸಿದಮೇಲೊಮ್ಮೆ ನೋಡಿ ಹೇಗೆ ಭಯವಿಲ್ಲದೆ ನದಿ ದಾಟುತ್ತಾರೆಂದು...!
Beautifiul photos Mr. Agni.
Beautifiul photos Mr. Agni. Thanks for the informations.
ಧನ್ಯವಾದಗಳು ಮಿತ್ರರೇ...!
ಧನ್ಯವಾದಗಳು ಮಿತ್ರರೇ...!