ಮೊದಲು ಮೂನ್ ಬರುತ್ತೆ
ಟೀಚರ್: ಭೂಮಿಗೆ ಮೊದಲು ಸನ್ ಬರುತ್ತಾ ಅಥವಾ ಮೂನ್ ಬರುತ್ತಾ?
ಮರಿಗುಂಡ: ಮೊದಲು ಮೂನ್ ಬರುತ್ತೆ
ಟೀಚರ್: ಅದು ಹೇಗೆ?
ಮರಿಗುಂಡ: ಹನಿ'ಮೂನ್' ಆದಮೇಲೆ ತಾನೇ ಭೂಮಿಗೆ 'ಸನ್' ಬರುವುದು
***
ಟೀಚರ್: ಬ್ರಿಟಿಷರೆ ಭಾರತ ಬಿಟ್ಟು ತೊಲಗಿ ಅಂದ್ರೂ ಸಹ ಬ್ರಿಟಿಷರು ಯಾಕೆ ದೇಶ ಬಿಟ್ಟು ಹೋಗಿರಲಿಲ್ಲ?
ಮರಿಗುಂಡ: ಅವರು ಹೋಗಿರಲಿಲ್ಲ ಮೇಡಂ
ಟೀಚರ್: ಅದೇ ಯಾಕೆ?
ಮರಿಗುಂಡ: ಯಾಕೆಂದ್ರೆ ಅವರಿಗೆ ಕನ್ನಡ ಬರ್ತಾ ಇರಲಿಲ್ಲ ಮೇಡಂ
***
ಗುಂಡ: 2012ರಲ್ಲಿ ಪ್ರಳಯ ಆಗುತ್ತೆ ಅಂತಾ ನನ್ನ ಫ್ರೆಂಡ್ 2011ರಲ್ಲೇ ಮದುವೆ ಮಾಡ್ಕೊಂಡಾ
ತಿಮ್ಮ: ಆಮೇಲೆ ಏನಾಯಿತು?
ಗುಂಡ: ಈಗ ಪ್ರಳಯ ಯಾವಾಗ ಆಗುತ್ತೆ ಅಂತಾ ಕಾಯ್ತಾ ಇದ್ದಾನೆ.
ಸಾಲುಗಳು
- Add new comment
- 543 views
ಅನಿಸಿಕೆಗಳು
ಸೂಪರ್
ಸೂಪರ್