ಅಮ್ಮಾ ನೀ ಕ್ಶಮಿಸಿಬಿಡು
ಮತ್ತೊಮ್ಮೆ ಮಗದೊಮ್ಮೆ ನೀನೆನಗೆ ನೆನಪಾದೆ,
ಮೊದಲ ವೇತನದ ದಿನ , ವಧುವಾಗಿ ಹೊರಟ ಕ್ಶಣ
ಹೆರಿಗೆನೋವಲಿ ,ಪುಟ್ಟ ಹಸುಕಂದ ಅಳುತಿರಲು
ಮತ್ತೆ ಬಾಣಂತನದಿ ನಿದ್ದೆ ಇರದಿಹ ರಾತ್ರಿ
ವಾತ್ಸಲ್ಯದೊರತೆ ನೀನಿಲ್ಲದಿರುವುದೇ ಕೊರತೆ.
ನನಗೂ ಹಾಡಿರಬಹುದು ನೀ ಮಧುರ ಜೊಗುಳವ
ನಿದ್ದೆಗೆಟ್ಟಿರಬಹುದು , ಊಟ ಬಿಟ್ಟಿರಬಹುದು
ತಲೆದಡವಿ ಕಣ್ಣೊರಸಿ ಮುದ್ದು ಮಾಡಿರಬಹುದು.
ತಲೆಬಾಚಿ ಸಿಂಗರಿಸಿ ಚೆಂದ ನೋಡಿರಬಹುದು.
ಎಲ್ಲಿರುವೆ ಅಲ್ಲಿಂದ ಮನ ತುಂಬಿ ಹರಸಿಬಿಡು
ಎದೆಗೊತ್ತಿಕೊಂಡೆನ್ನ ಹಣೆಗೆ ಹೂಮುತ್ತನಿಡು
ತಿಳಿದೋ ತಿಳಿಯದೇ ಗೆಯ್ದ ನೂರು ಅಪರಾಧವನೂ
ತಾಯಿಯಲ್ಲವೇ ನೀನು, ಕ್ಶಮಿಸಿಬಿಡು ಎಲ್ಲವನೂ...
ಸಾಲುಗಳು
- 252 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ