Skip to main content

ನನ್ನ ಪ್ರಪಂಚ, ನನ್ನಿಷ್ಟ - ಆತನ ಕಥೆ ಭಾಗ - ೩

ಬರೆದಿದ್ದುMay 27, 2012
5ಅನಿಸಿಕೆಗಳು

ನನ್ನ ಪ್ರಪಂಚ, ನನ್ನಿಷ್ಟ - ಆತನ ಕಥೆ ಭಾಗ - ೧

ನನ್ನ ಪ್ರಪಂಚ, ನನ್ನಿಷ್ಟ - ಆತನ ಕಥೆ ಭಾಗ - ೨

 

ನಮ್ಮ ಕಥಾ ನಾಯಕ ಮೌನವನ್ನೊಡೆದು ಹೊರಬರಲೇಬೇಕಾದ ಸಂದರ್ಭ ಬಂದಿತ್ತು ಅಂದಿದ್ದ್ನಲ್ವ ಹಿಂದಿನ

ಸಂಚಿಕೆಯಲ್ಲಿ...ಮೌನ ಮುರಿಯಲು ಕಾರಣ ೩ ಹೊತ್ತೂ ವಟವಟ ಅಂತ ಮಾತಾಡ್ತಾ ಇದ್ದ, ಸುಮ್ ಸುಮ್ನೆಯಾದ್ರೂ

ಅವನಿಗೆ ಮೆಸೇಜ್ ಕಳಿಸ್ತಾ ಘಳಿಗೆ ಕೂಡ ಬಿಟ್ಟಿರಲಾರದಂತಿದ್ದ 'ಅವಳ' ಮಾತಿನ ಮಳೆ ಅದೇಕೋ ನಿಂತುಹೋಗಿತ್ತು.

ಎರಡು ದಿನಗಳಿಂದ ಒಂದೇ ಸವನೆ ನಿನಗೇನಾಯ್ತೋ, ಮಾತಾಡೋಲ್ವ?, ಕೋಪಾನಾ? ಬೇಜಾರಾ?

ಯಾರ ಮೇಲೆ?? ಊಟ ಆಯ್ತಾ? ಆಗಿದ್ರೆ ಏನು ಊಟ ಮಾಡಿದೆ ಆಗಿಲ್ಲ ಅಂದ್ರೆ ಯಾಕೆ ಊಟ ಮಾಡಿಲ್ಲ?

ಇತ್ಯಾದಿ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳುತ್ತಿದ್ದವಳು, ಕೊನೆಗೂ ತಾನಾಕೆಯನ್ನು ಆಕೆಯ ಪ್ರೀತಿಯನ್ನು

ತಿರಸ್ಕರಿಸಿಬಿಟ್ಟಿದ್ದೇನೆ ಅಂತ ಮನವರಿಕೆ ಆಗತೊಡಗಿದಂತೆ ಮೌನವಹಿಸತೊಡಗಿದಳು.. ಅದೇಕೋ ತನ್ನ ಮೌನಕ್ಕಿಂತ

ಆಕೆಯ ಮೌನ ಅವನಿಗೆ ಅಸಹನೀಯ ಅನಿಸತೊಡಗಿತ್ತು..

ಕೊನೆಯದಾಗಿ ಕೇಳಿದ್ದಳವಳು..ನಿಜ್ಜ ಹೇಳೋ...ಪ್ರೀತಿಸ್ತಿಲ್ವಾ?? ಹಾಗಿದ್ರೆ ಬೆನ್ನ ಹಿಂದೆ ಬಿದ್ದು ಪ್ರೀತಿ ಅನ್ನೋ 

ಹುಚ್ಚು ನನಗ್ಯಾಕೆ ಹಿಡಿಸಿದೆ? ನನ್ನ ಒಂಟಿತನದಲ್ಲೇ ಸುಖ ಕಾಣುತ್ತಿದ್ದವಳನ್ನ ಪ್ರೀತಿಯ ಕಡೆಗೇಕೆ ಸೆಳೆದೆ?? ಆವತ್ತು

ಬೇಕಾಗಿದ್ದ ನಾನು ಈಗ ಯಾಕೆ ಬೇಡವಾದೆ?? ಹಾಗಾದ್ರೆ ನಿನ್ನ ಪ್ರೀತಿ ನಾಟಕ ಆಗಿತ್ತಾ? ಕಾಲ ಕಳೆಯೋಕೆ 

ನಾನು ಬೇಕಿತ್ತಾ?? ನಿನ್ಗೆ ಖಂಡಿತವಾಗ್ಯೂ ನಾನು ಬೇಡವಾಗಿದ್ರೆ, ಸರಿ..ಇನ್ನು ಮುಂದೆ ನಿನ್ನ ಜೀವನದಲ್ಲಿ

ನಾನ್ಯಾವತ್ತೂ ಬರೋದಿಲ್ಲ.. ಮೆಸೇಜ್, ಮಾತು, ಭೇಟಿ, ಏನೂ ಬೇಡ.. ಹಾಗಾದ್ರೂ ನೆಮ್ಮದಿಯಾಗಿರು ಅಂತ 

ಸುದೀರ್ಘ ಮೆಸೇಜ್ ಒಂದು ಕಳುಹಿಸಿದ ಬಳಿಕ ನೀರವ ಮೌನ.. ಜೋರಾದ ಮಳೆ ಸುರಿದು ನಿಂತಾಗ ಅನುಭವಕ್ಕೆ

ಬರುವ ಮೌನ, ಅಲ್ಲೊಂದು ಇಲ್ಲೊಂದು ತೊಟ್ಟಿಕ್ಕುವ ಮಳೆಹನಿಯಂತೆ ಆಕೆಯ ನೆನಪುಗಳು...ಅಸಹನೀಯತೆ

ತಡೆಯಲಾರೆ ಅನಿಸಿದೊಡನೆ ತಾನೇ ಕರೆ ಮಾಡಿದ್ದ.. ಆದರೆ ಅಲ್ಲಿಂದ ಮಾರುತ್ತರವಿರಲಿಲ್ಲ... ಅದೇಕೋ

ಕಸಿವಿಸಿ ಆಗತೊಡಗಿತ್ತು.. "ಛೇ, ಕೋಪದಲ್ಲಿ ಆವತ್ತು ಅದೆಷ್ಟು ಮಾತಾಡಿಬಿಟ್ಟೆ... ಅದೆಷ್ಟು ನೊಂದುಕೊಂಡಳೋ..

ನೀನು ನನ್ನ ಜೀವನದಲ್ಲಿ ಬರುವ ಮುನ್ನ ಸುಖವಾಗಿದ್ದೆ, ನನ್ನ ವ್ಯಾಪಾರ ವ್ಯವಹಾರ ಕೂಡ ಉತ್ತಮವಾಗಿತ್ತು, 

ಯಾವುದೇ ಕೊರತೆಯಿರಲಿಲ್ಲ...ನೀನ್ನನ್ನು ಪ್ರೀತಿಸಲಾರಂಭಿಸಿದ ಮೇಲೆ ಎಲ್ಲಾ ತೊಂದರೆಗಳೂ ಶುರುವಾಗಿದ್ದು.. 

ನನ್ನ ವ್ಯಾಪಾರದಲ್ಲಿ ನಷ್ಟ, ಸಾಲದ ಚಿಂತೆ, ಮನಸ್ಸಿನ ಶಾಂತಿ, ನೆಮ್ಮದಿ ಎಲ್ಲಾ ಕಳಕೊಂಡೆ.."  ಪರೋಕ್ಷವಾಗಿ ನೀನು 

ಅನಿಷ್ಟ ಎಂದೇ ಹೇಳಿಬಿಟ್ಟಿದ್ದೆನಲ್ಲ..." ಅವನ ಮಾತುಗಳು ಆ ಘಳಿಗೆಗೆ ಅವನ ಅರಿವಿಗೆ

ಬಂದಿರಲಿಲ್ಲ.. ಆದರೆ ದಿನಗಳೆದಂತೆ ಕಾರಣವಿಲ್ಲದೆ ಹೊರಿಸಿದ ಆರೋಪ, ದೂಷಣೆಗಳು ಮುಳ್ಳಿನಂತೆ

ಚುಚ್ಚತೊಡಗಿದ್ದವು.  ಸ್ಸಾರಿ... ಅಂತ ಮೆಸೇಜ್ ಕಳುಹಿಸಿದ... ಉತ್ತರವಿಲ್ಲ..... 

 

ಬಹಳ ದಿನಗಳ ಬಳಿಕ ಆತನ ಮನಸ್ಸು ಆಕೆಯೊಡನೆ ಮಾತನಾಡಬಯಸಿತ್ತು..ವ್ಯಾಪಾರದಲ್ಲಿ ಉಂಟಾಗತೊಡಗಿದ

ಏಳಿಗೆಯನ್ನು ಹೇಳಿಕೊಂಡು ಬೀಗಬಯಸಿತ್ತು.. ಆದರೆ ಅವನೊಡನೆ ಮಾತನಾಡಲು, ಅವನ ಎಲ್ಲಾ ಸಂತೋಷವನ್ನು

ಹಂಚಿಕೊಳ್ಳಲು 'ಅವಳು' ಇರಲಿಲ್ಲ... ಕಾಲನ ಕರೆಗೆ ಓಗೊಟ್ಟು ಇನ್ಯಾರ ಕರೆಗೂ ಹಿಂತಿರುಗಿ ಬರಲಾರೆನೆಂಬಂತೆ

ಹೋಗಿಬಿಟ್ಟಿದ್ದಳವಳು.. ಕೊನೆಗೂ ಅವನ ಈಗೋ, ಹುಚ್ಚು ಮನ, ದ್ವಂದ್ವ ನಿರ್ಧಾರಗಳು ಅವನನ್ನು ಪುನಃ

ಒಂಟಿಯಾಗಿಸಿ ಗೆಲುವಿನ ನಗೆ ಬೀರಿದ್ದವು... ಅವನಿಗೆ ತಾನೇನು ಪಡಕೊಂಡೆ ಏನನ್ನು ಕಳಕೊಂಡೆ ಎಂಬುದರ

ಅರಿವಾಗಲೂ ಇಲ್ಲ... ಹುಟ್ಟುವಾಗಲೇ ಕಡಿಮೆ ಆಯಸ್ಸು ಪಡೆದಿದ್ದಳೇನೋ ಎಂಬಂತೆ ಅನಾರೋಗ್ಯದಿಂದ ಅಷ್ಟು

ಚಿಕ್ಕ ವಯಸ್ಸಿಗೇ ಇಹ ಲೋಕ ತ್ಯಜಿಸಿದ ಆಕೆ ಸಾಯುವ ಮುನ್ನ ಕೊನೆಗೂ "ಆತನ ಪ್ರಪಂಚದಲ್ಲಿ, ಆತನ ಇಷ್ಟಗಳ"

ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಳ್ಳಲೂ ಇಲ್ಲ............

 

                                 (ಮುಗಿಯಿತು)

ಲೇಖಕರು

Jyothi Subrahmanya

ನೆನಪಿನ ನವಿಲುಗರಿ

ಭಾವನಾ ಜೀವಿ, ಚಿಕ್ಕ ಪುಟ್ಟ ಕನಸು ಕಾಣೋದು ಅಂದ್ರೆ ಇಷ್ಟ. ಮಳೆ, ಇಬ್ಬನಿ, ಹಸಿರು, ಆಕಾಶ, ನಕ್ಷತ್ರ, ರಾತ್ರಿ, ಇವೆಲ್ಲಾ ತುಂಬಾ ಇಷ್ಟ. ನನ್ನ ಬಗ್ಗೆ ಇನ್ನು ಜಾಸ್ತಿ ತಿಳ್ಕೊಳ್ಳೋಕೆ ನನ್ನ ಸ್ನೇಹಿತರಾಗಿ. ನಿಮಗೇ ತಿಳಿಯುತ್ತೆ. ;)

ಅನಿಸಿಕೆಗಳು

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 06/04/2012 - 10:45

ಮಾನ್ಯರೆ,

ಕಥೆಯಲ್ಲಿ ಇನ್ನು ಆಳ ಇರಬೇಕಿತ್ತು ಅಂತ ನನ್ನ ಅನಿಸಿಕೆ

venkatb83 ಸೋಮ, 06/04/2012 - 19:41

ನೀನ್ನನ್ನು ಪ್ರೀತಿಸಲಾರಂಭಿಸಿದ ಮೇಲೆ ಎಲ್ಲಾ ತೊಂದರೆಗಳೂ ಶುರುವಾಗಿದ್ದು.. 

ನನ್ನ ವ್ಯಾಪಾರದಲ್ಲಿ ನಷ್ಟ, ಸಾಲದ ಚಿಂತೆ, ಮನಸ್ಸಿನ ಶಾಂತಿ, ನೆಮ್ಮದಿ ಎಲ್ಲಾ ಕಳಕೊಂಡೆ.."  ಪರೋಕ್ಷವಾಗಿ ನೀನು 

ಅನಿಷ್ಟ 

-----------------------------------------------------------

ಇದು- ಕಾಗೆ ಕಾ ಕಾ ಅಂದ್ರೆ ಲೋಳೆ ಎತ್ತು ನೆಗೆದು ಬಿತ್ತು...!! ಅನ್ನೋ ಹಾಗ್ ಇದೆ.. 

 

 

ಜ್ಯೋತಿ ಅವ್ರೆ

ಈ ಅನಿರೀಕ್ಷಿತ ಅಘಾತಕಾರಿ ಅಂತ್ಯವನ್ನು ನಾ ಮತ್ತು ನಿಮ್ಮ ಕಥಾ ನಾಯಕನೂ ನಿರೀಕ್ಷಿಸಿರಲಿಲ್ಲ...

ನಾವ್ ಯಶಸ್ಸು ಗಳಿಸಿದಾಗ- ಸುಖ ದುಖ ಹಂಚಿಕೊಳ್ಳಲು  ಒಬ್ಬರು ಇಬ್ಬರು ಬೇಕು ನಿಜ... ಅದು ಪ್ರೀತಿಸಿದವಳು /ದವನು ಆದರೆ ಇನ್ನೂ ಚೆನ್ನ..

ಇಲ್ಲಿ ಕಥಾ ನಾಯಕನಿಗೆ ಆ ಭಾಗ್ಯವೂ ಇಲ್ಲದಾಯ್ತು, ಮತ್ತು ಅದಕ್ಕೆ ಅವನೆ ಕಾರಣವಾದ..:((

ಮೂರು ಭಾಗಗಳಲ್ಲಿ ಸಖತ್  ಬರಹ ಒಂದನ್ನು ನಮಗೆ ಓದಲು ಕೊಟ್ಟಿರಿ..

ಭಾವ-ಭಾವನೆಗಳ ಮೆರವಣಿಗೆ ಇಡೀ ಬರಹದ(ಎಲ್ಲ ಭಾಗಗಳಲ್ಲೂ)ಎಲ್ಲೆದೆಯೂ ಕಾಣುತ್ತಿತ್ತು, ಮತ್ತು ಅದು ನನಗೆ ಇಸ್ಟಾ  ಕೂಡ..

ಸಖತ್ ಬರಹಕ್ಕೆ

ನನ್ನಿ


ಶುಭವಾಗಲಿ..


\|/

Jyothi Subrahmanya ಸೋಮ, 06/04/2012 - 22:07

ಧನ್ಯವಾದಗಳು ವೆಂಕಟ್ ಅವರೇ... ಯಾವುದರ, ಯಾರ ಅಂತ್ಯವನ್ನು ಯಾರೂ ಕೂಡ ಊಹಿಸೋಕೆ ಸಾಧ್ಯವಿಲ್ಲ.

ಜೀವನ ಅಂತ್ಯವಾಗುವ ಮೊದಲೇ ಹೊಂದಾಣಿಕೆಯ ಮೂಲಕ ಸಂತೋಷ ಕಂಡುಕೊಳ್ಳಬೇಕು ಅಲ್ವೇ??

ನಿಮ್ಮ ಪ್ರೋತ್ಸಾಹ, ಅನಿಸಿಕೆಗಳು ಹೀಗೇ ದೊರೆಯುತ್ತಿರಲೆಂಬ ಆಶಯದೊಂದಿಗೆ,

 

ಜ್ಯೋತಿ.

ramakrishna.v ಮಂಗಳ, 06/26/2012 - 22:08

kathe thumba chenngidhe jo avre....jothe jo esht importento ashte importetu..nim kathelilde ero msg kuda...eldhe ero msgna inboxal hudkakkagutha......atha replay madbedi...replay mado msglle nim katheliro msgna hudki replay madi....msgna send mado 2 nimsha munchene yochne madi   jo

ತ್ರಿನೇತ್ರ ಧ, 06/27/2012 - 12:09

ರಾಮಕ್ರಿಷ್ಣ ಅವರೇ... ಹೊಸದಾಗಿ ಈ ವಿಸ್ಮಯನಗರಿಗೆ ಪದಾರ್ಪಣ ಮಾಡಿದ್ದೀರಿ ನಿಮಗೆ ಹಾರ್ಧಿಕ ಸ್ವಾಗತ. ಈ ವಿಸ್ಮಯ ನಗರಿ ಇರುವುದು ಕನ್ನಡ ಓದುಗರು ಉಧಯೋನ್ಮುಖ ಬರಹಗಾರರು ಮತ್ತು ಕನ್ನಡ ಬಾರದವರಿಗೆ ಕನ್ನಡದ ಬಗ್ಗೆ ತಿಳಿಸಿ ಕನ್ನಡ ಉಳಿಸಿ ಬೆಳೆಸಲು ಸಹಕಾರಿಯಾಗುವಂತೆ ಮಾಡಲು ಮಾತ್ರಾ. ದಯಮಾಡಿ ನೀವು ಓದಿದ ಯಾವುದೇ ಕಥೆ ಕವಿತೆ ಲೇಖನಗಳಿಗೆ ಅಭಿಪ್ರಾಯ ಬರೆಯುವಾಗ ಈಗ ಬರೆದಿರುವಂತೆ ಇಂಗ್ಲೀಷ್ ಕನ್ನಡ (ಇನ್ನಡ ಎನ್ನಬಹದೇ..?)ದಲ್ಲಿ ಬರೆಯದೇ ಅದನ್ನೇ ಕನ್ನದದಲ್ಲಿ ಬರೆದು ಪ್ರಕಟಿಸಬೇಕೆಂದು ಕೇಳಿಕೊಳ್ಳುವೆ. ಅದೇ ರೀತಿ ನಿಮ್ಮ ಬಗ್ಗೆ ಯಾವುದೇ ವಿವರ ನೀಡಿಲ್ಲ ಅಲ್ಲೂ ಕೂಡಾ ಎಲ್ಲಾ ಕಡೆ ಕನ್ನಡದಲ್ಲೇ ಬರೆಯಿರಿ. ಈ ವಿಸ್ಮಯ ನಗರಿಯಲ್ಲಿ ಎಲ್ಲಿ ಯಾವುದೇ ಕಡೆ ಬರೆಯುವ ಮೊದಲು F9 ಕೀ ಒತ್ತಿ ಅಥವಾ Drop down menu ನಲ್ಲಿ ಕನ್ನಡ ಆರಿಸಿಕೊಂಡು ನಂತರ ಟೈಪ್ ಮಾಡಿದಲ್ಲಿ ಅದೇ ಕನ್ನಡವಾಗಿ ಬದಲಾಗುತ್ತೆ. ಸಹಾಯಕ್ಕಾಗಿ ವಿಸ್ಮಯ ಕೀಲಿಮಣೆ ಸಹಾಯ ಕೂಡಾ ಕೊಟ್ಟಿದ್ದಾರೆ ಅದನ್ನು ಮೊದಲು ಓದಿ. ಸ್ವಲ್ಪ ಪ್ರಯತ್ನಿಸಿ ನೋಡಿ ಕಂಡಿತಾ ಸಾಧ್ಯವಾಗುತ್ತೆ, ಸಾಧ್ಯವಾಗದಿದ್ದರೆ ತಿಳಿಸಿ ಸಹಾಯ ಮಾಡಲು ಇಲ್ಲಿ ಬೇಕಾದಷ್ಟು ಪರಿಣಿತರಿದ್ದಾರೆ. ಆದರೆ ಇನ್ನು ಮುಂದೆ ಈ ರೀತಿ ದಯಮಾಡಿ 'ಇನ್ನಡ' ದಲ್ಲಿ ಮಾತ್ರ ಬರೀಬೇಡಿ. -ತ್ರಿನೇತ್ರ ಶಿವ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.