Skip to main content

ಶಿಕ್ಷಕರು ಮತ್ತು ವಿದ್ಯಾರ್ಥಿಗಳು

ಇಂದ pavu
ಬರೆದಿದ್ದುMay 26, 2012
noಅನಿಸಿಕೆ

 


ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮಕುತಿ ಎಂದು ನಮ್ಮ ಡಿ.ವಿ.ಜಿ ಯವರು ತಮ್ಮ ಕಗ್ಗದಲ್ಲಿ ಹೇಳಿದ್ದಾರೆ. ಶಿಕ್ಷಕ ಎಂಬ ಪದವು ಬಹಳ ಮಹತ್ತರವಾದ ಕಾರ್ಯವನ್ನು ಎಲ್ಲಾರ ಜೀವನದಲ್ಲೂ ನಿರ್ವಹಿಸುತ್ತದೆ.


ಶಿಕ್ಷಕ ಅಂದರೆ


ಶಿ - ಶಿವ ಸ್ವರೂಪಿಯಾಗಿ  (ಶಿಕ್ಷಿಸಿ)


ಕ್ಷ - ಕ್ಷ ಕೀರಣ ಬೀರುವಂತಹ (ಕ್ಷಮಿಸಿ)


ಕ – ಕರ್ಮವೆಸಗತಕ್ಕವ   (ಕಲಿಸುವವ)


ಇಂತಹ ಅರ್ಥವನ್ನು ನೀಡುವ ಶಿಕ್ಷಕ ಎನಿಸಿಕೊಳ್ಳುವವನಿಗೆ ಇಂದಿನ ಜಗತ್ತಿನಲ್ಲಿ ಬೆಲೆ ಇಲ್ಲದಿರುವುದು ನಿಜಕ್ಕೂ ವಿಷಾದನೀಯ.


ಅಂದಿನ ಕಾಲದಲ್ಲಿನ ಗುರುವಿಗೆ ನೀಡುತ್ತದ್ದ ಗೌರವ ಇಂದು ಕಣ್ಮರೆಯಾಗುತ್ತಿದೆ  ಏಕಲವ್ಯ ತಮ್ಮ ಗುರುಗಳಾದ ದ್ರೋಣಾಚಾರ್ಯರು ಕೇಳಿದ ಗುರುದಕ್ಷಿಣೆಯನ್ನು ಒಂದು ನಿಮಿಷವು ಯೋಚಿಸದೇ ತನ್ನ ಹೆಬ್ಬೆಟ್ಟನ್ನೇ ಕತ್ತರಿಸಿ ಕೊಟ್ಟ ಇಂದಿನ ವಿದ್ಯಾರ್ಥಿಗಳು ಗುರುದಕ್ಷಿಣೆ ಕೊಡುವುದಿರಲ್ಲಿ ಗುರುಗಳಿಗೆ ಗೌರವವನ್ನು ಕೂಡ ಕೊಡುವುದಿಲ್ಲ. ಶಿಕ್ಷಕನು ಸೂಕ್ತ ಪ್ರತಿಭೆಗಳನ್ನು ಹೊರ ತರುವುದು ಶಿಕ್ಷಕನ ಕೆಲಸವಾಗಿರುತ್ತದೆ.


ವಿದ್ಯಾರ್ಥಿಗಳ ಜೀವನವನ್ನು ರೂಪಿಸುವ ಶಿಕ್ಷಕನಿಗೆ ವಿದ್ಯಾರ್ಥಿಗಳು ರುಣಿಯಾಗಿರಬೇಕು ಎಂಬುದು ನನ್ನ ಹಂಬಲ.


ಅಂದು                                                               ಇಂದು


ಗುರುವೇನಮಃ                                   ****                              ಗುರುವು ಏನು ಮಹಾ


ಈ ರೀತಿಯಾಗಿ ನಮ್ಮ ಜಗತ್ತಿನ ವಿದ್ಯಾರ್ಥಿಗಳು ಬದಲಾಗುತ್ತೀದ್ದಾರೆ.


               ******************************************************************


ಇನ್ನು ವಿದ್ಯಾರ್ಥಿಗಳ ಜೀವನದಲ್ಲೂ ಕೆಲವು ಶಿಕ್ಷಕರು ಆಟ ಆಡುವುದುಂಟು, ಕೆಲವು ಶಿಕ್ಷಕರು ಶಾಲೆಯ ವಿರಾಮದ ವೇಳೆಯಲ್ಲಿ  ದೂಮಪಾನ ಸೇವನೆ (smoke)  ಮಾಡುವುದನ್ನು ನೋಡಿದರೆ ಲೋ ಮಗ ಗಣಿತ ಮೇಷ್ಟ್ರು ಸಿಗರೇಟ್ ಹೊಡಿತ್ತಾ ಇದ್ದರೂ ಕಂಡಲಾ ನಾವು ಒಂದು ಸಲ ಹೊಡೆದು ನೋಡಬೇಕು ಕಣಲಾ ಅಂದುಕೊಂಡು ಒಂದು ದಿನ ಗುಂಪಾಗಿ ಸೇರಿ ಸಿಗರೇಟ್ ಹೊಡೆದೇ ಬಿಡುತ್ತಾರೆ ಇದೇ ಅಭ್ಯಾಸವನ್ನು ಬೆಳೆಸಿಕೊಳ್ಳುವುದುಂಟು . ಇತ್ತಿಚಿನ ದಿನಗಳಲ್ಲಿ ಶಿಕ್ಷಕನಿಂದಲೇ ವಿದ್ಯಾರ್ಥಿಯ ಅತ್ಯಚಾರ ಈ ರೀತಿಯ ನ್ಯೂಸ್ ಗಳನ್ನು  ಕೂಡ ನಾನು ನೋಡಿರುವೆ  ಹಾಗೂ ಕೇಳಿರುವೆ .


ಶಿಕ್ಷಕರು ಭೋದನಾ ವೃತ್ತಿಗೆ ಬಂದ ಮೇಲೆ ತನ್ನಲ್ಲಿರುವ ದುರ್ಮಾರ್ಗಗಳನ್ನು ಹೋಗಲಾಡಿಸಿ ಒಳ್ಳೇಯ ಗುಣಗಳನ್ನು ಬೆಳೆಸಿಕೊಂಡು ಆದರ್ಶ ವ್ಯಾಕ್ತಿಯಾಗಿರಬೇಕು.


“ಕಲಿಕೆಯ ಕೇಂದ್ರ ಬಿಂದು ಮಕ್ಕಳಾಗಿರುವುದರಿಂದ ಪರ್ಶಿಯಾ ದೇಶದ ಯೋಗಿ ಹಾಗೂ ಕವಿ ಖಲೀಲ್ ಗಿಬ್ರಾನ್ ಎಂಬಾತನು ಈ ರೀತಿ ಹೇಳಿದ್ದಾನೆ ಮಕ್ಕಳು ನಿಮಗೊಬ್ಬರಿಗೆ  ಸೇರಿದ ವ್ಯಕ್ತಿಗಳಲ್ಲ . ಅವರು ಭಾವಿ ಜೀವನದಲ್ಲಿ ಆಶಾಪೂರಿತವಾದ ಗಂಡು ಹೆಣ್ಣುಗಳು ನಿಮ್ಮ ಮೂಲಕ ಅವರು ಪ್ರಪಂಚಕ್ಕೆ ಬಂದರೂ ನಿಮ್ಮಿಂದಲೇ ಬಂದವರೆನ್ನಲಾಗದು. ಪ್ರೀತಿಯನ್ನು ನೀವೂ ನೀಡಬದುದು , ಆದರೆ ನಿಮ್ಮ ಭಾವನೆಗಳನ್ನು ನೀಡಲಾಗುವುದಿಲ್ಲ. ಕಾರಣ ಅವರದೇ ಆದ ಭಾವನೆಗಳು ಅವರಿಗೆ ಇದ್ದೇ ಇರುತ್ತವೆ . ದೇಹ ಪೋಷಣೆಯ ರಕ್ಷಣೆಯನ್ನು ನೀವೂ ಮಾಡುವಿರಿ . ಆದರೆ ಅವರ ಆತ್ಮವನ್ನು ಕಾಪಾಡಲಾರಿರಿ . ಅವರ ಜೀವವೂ ಆಗಲೇ ನಾಳಿನ ಮನೆಯಲ್ಲಿ ನೆಲೆಸಿರುವುದು, ನೀವು ಮಾತ್ರ ಕನಸು ಮನಸ್ಸಿನಲ್ಲಿಯೂ ಅದನ್ನು ಪ್ರವೇಶಿಸಲಾರಿರಿ. ಅವರಂತೆ ಇರಲು ನೀವೂ ಪ್ರಯತ್ನಿಸಬಹುದು. ಆದರೆ ಅವರು ನಿಮ್ಮನ್ನು ಮೆಚ್ಚಲೆಂದು ಪ್ರಯತ್ನಿಸದಿರಿ. ಕಾರಣ ಜೀವನವು ಸತತವಾಗಿ ಚಲಿಸುತ್ತದೆ. ನಿನ್ನೆಯಲ್ಲಿಯೇ ನಿಂತಿರಲಾರದು. ಅದು ಹಿಂದು ಹಿಂದಕ್ಕೆ ಹೋಗಲಾರದು”. ಈ ರೀತಿಯಾಗಿ ಪೋಷಕರಿಗೆ ಕವಿ ಖಲೀಲ್ ಗಿಬ್ರಾನ್ ಹೇಳಿದ್ದಾನೆ ಹಾಗಾಗಿ ಮಕ್ಕಳನ್ನು ಉತ್ತಮ ಪ್ರಜೆಯಾಗಿ ನಮ್ಮ ದೇಶದ ಭವಿಷ್ಯತ್ತಿನ ಶಿಲ್ಪಿಯಾಗಿ ವಿದ್ಯಾರ್ಥಿಗಳನ್ನು  ರೂಪಿಸಬೇಕಾದ ಕರ್ತವ್ಯ ಪ್ರತಿಯೊಬ್ಬ ಶಿಕ್ಷಕನದಾಗಿರುತ್ತದೆ. ಇಲ್ಲವಾದರೆ “ಯಥಾ ಗುರು, ತಥಾ ಶಿಷ್ಯ” ಎಂಬಂತೆ ಆಗುತ್ತದೆ.


 ಅಂದಿನ ಶಿಕ್ಷಕ ಮತ್ತು ವಿದ್ಯಾರ್ಥಿಗಳು ಇಂದು ಇಲ್ಲವಲ್ಲ ಎಂಬುದೇ ನನ್ನ ಅಳಲು.


 


 

ಲೇಖಕರು

pavu

ಮೊಗ್ಗಿನ ಮನಸ್ಸು

ನನ್ನ ಬಗ್ಗೆ ನಾವೇ ಹೇಳಿಕೊಳ್ಳೋದು ಅಷ್ಟು ಚೆನ್ನಾಗಿರಲ್ಲ…….ಅಲ್ವಾ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.