Skip to main content

ಹಿಂಗೆ ಆದ್ರೆ ಮುಂದ ಹೆಂಗ?

ಬರೆದಿದ್ದುMay 11, 2012
17ಅನಿಸಿಕೆಗಳು

ಮೊನ್ನೆ ಗೆಳೆಯನ ಮದುವೆಗೆ ಗುಲಬರ್ಗಾಕ್ಕೆ ಹೋಗಿದ್ದೆ.ಅಲ್ಲೊಬ್ಬ ಹಳೆಯ ಗೆಳೆಯ ಸಿಕ್ಕಿದ್ದ.ಅದು ಇದು ಮಾತಾಡಿ ನಮ್ಮಿಬ್ಬರ ಮಾತುಕತೆ ಮದುವೆ ವಿಷಯಕ್ಕೆ ತಿರುಗಿತು.ಅವನು ನನಗಿಂತ ಸ್ವಲ್ಪ ದೊಡ್ಡವನೇ ಆದ್ದರಿಂದ ಸಹಜವಾಗಿ ನಾ ಕೇಳಿದೆ ಮದುವೆ ಯಾವಾಗಾಯ್ತು ಅಂತ...ಅವನು ಮುಖ ಸಪ್ಪೆ ಮಾಡ್ಕೊಂಡು ನಮಗ್ಯಾರು ಮದುವೆ ಆಗ್ತಾರೆ ಪ್ರವೀಣ್... ನಿಂಗೊತ್ತಲ್ಲ ನಾನು ಮಾಡೋದು ವ್ಯವಸಾಯ ಅಂತಾ...ಇವತ್ತಿನ ಹುಡುಗಿರು ನಮ್ಮ ಕಡೆ ತಿರುಗಿಯೂ ನೋಡಲ್ಲ ಮದುವೆ ವಿಷಯ ತುಂಬಾ ದೂರದ ಮಾತು ಅಂದ.ಅವನ ಮಾತು ಕೇಳಿ ನಾನು ಅವಕ್ಕಾದೆ.ಏಕೆಂದರೆ ಅವನಿಗೆ ಇದ್ದಿದ್ದು ಬರೋಬ್ಬರಿ ಹನ್ನೆರಡು ಎಕರೆ ಹೊಲ.ಏನಿಲ್ಲ ಅಂದರು ಒಂದು ಎಕರೆಗೆ ತಲಾ ಆರೇಳು ಲಕ್ಷ ಬರುತ್ತೆ .ಹಾಗಾದರೆ ಅವನು ಲಕ್ಷಾಧಿಪತಿ.
ನೋಡಲು ಸುರಸುಂದರಾಂಗ..ದೊಡ್ಡವರು ಗುರುತು ಹಾಗು ಬಂಗಾರದಂಥ ಬೆಳೆ ಕೊಡುವ ಭೂಮಿಯಾಗಿದ್ದರಿಂದ ಅವನು ಡಿಗ್ರಿ ಮಾಡಿದರೂ ವ್ಯವಸಾಯದ ಕಡೆ ತಿರುಗಿದ..ಆದರೆ ಇಂದು ವಯಸ್ಸು ಮೂವತ್ತು ದಾಟಿದರು ಯಾವ ಕನ್ಯೆಯು ಕಣ್ಣೆತ್ತಿ ನೋಡುತ್ತಿಲ್ಲ..ಯಾಕಂದ್ರೆ ನಮಗೆಲ್ಲ ಸಿಟಿಯಲ್ಲಿ ಇರೋ ಹುಡುಗರೇ ಬೇಕಲ್ವಾ. ಬ್ಯಾಂಕ್ ಸಾಲದಲ್ಲಿ ತಗೊಂಡಿರೋ ಫ್ಲಾಟು,ಅದರೊಳಗಡೆ ಕ್ರೆಡಿಟ್ ಕಾರ್ಡಿಂದ ತಗೊಂಡಿರೋ ಸೋಫಾ ಸೆಟ್ ,ಟಿವಿ ಇತ್ಯಾದಿ ಇತ್ಯಾದಿ ಇವೆಲ್ಲ ನೋಡಿನೇ ನಾವು ನಮ್ಮ ಹೆಣ್ಣುಮಕ್ಕಳನ್ನು ಧಾರಾಳವಾಗಿ ಧಾರೆಯೆರೆದು ಕೊಡೋದು.ಹೂ ಅಂತಿರಾ..ರೀ ನಮ್ಮ ಹೆಣ್ಣುಮಕ್ಕಳಿಗೆ ತಿಂಗಳಾದ್ರೆ ಬರೋ EMI ,ಹದಿನೈದು ವರ್ಷ ಆದರು ಮುಗಿಯದ ಲೋನ್ ಗೋಳು ಬೇಕಾ ಅಥವಾ ಹೊಲ ಗದ್ದೆ ನೋಡ್ಕೊಳ್ಳೋ ಗಂಡ ಇದ್ದು ಸುತ್ತ ಹತ್ತುರಲ್ಲೂ ಸಾಹುಕಾರತಿ,ಗೌಡತಿ ಅಂತ ಕರೆಯಿಸಿಕೊಳ್ಳಬೇಕಾ?
ಹಳ್ಳಿಯಲ್ಲಿ ಮೂಲಭೂತ ಸೌಕರ್ಯಗಳು ಇರಲ್ಲ ಅನ್ನೋದು ನಮ್ಮ ಹುಡುಗಿರ ಮೊದಲ ಕಂಪ್ಲೈಂಟು..ಚೆನ್ನಾಗಿ ಓದುಕೊಂಡಿರೋ ನೀವೇ ಯಾಕೆ ಒಂದು ಒಳ್ಳೆ ಶಾಲೇನೋ ಕಾಲೆಜೋ ಶುರು ಮಾಡಬಾರದ?ಹುಡುಗಿರು ಮನಸು ಮಾಡಿದ್ರೆ ಏನೇನೊ ಆಗುತ್ತಂತೆ ಇದು ತುಂಬಾ ಕಷ್ಟಾನ ?..
ಈಗ ಒಂದು ವೇಳೆ ಹಳ್ಳಿಯಲ್ಲಿ ಇರೋರೆಲ್ಲ ಸಿಟಿಗೆ ಬಂದರೆ ಏನು ಗತಿ ಅಂತ.ಯಾರು ಬೆಳೆ ಬೇಳಿದೆ ಇದ್ದರೆ?ಊಹಿಸೋದೆ ಕಷ್ಟ ಅಲ್ವಾ.. ಇವತ್ತು ಧಾನ್ಯ ಬೆಳೆಯೋ ರೈತರನ್ನ ತುಂಬಾ ಕೀಳಾಗಿ ನೋಡ್ತಾ ಇದ್ದಿವಿ,ಇದರಿಂದ ಮುಂದಿನ ಮಕ್ಕಳು ಯಾರು ರೈತರು ಆಗೋ ಒಲವು ತೋರದೆ ಇದ್ದರೆ ಮುಂದೆ ನಾವು ತಿನ್ನೋ ಅನ್ನಕ್ಕೆನು ಮಾಡುವುದು.ಈಗಾಗಲೇ ವ್ಯವಸಾಯ ಮಾಡೋರನ್ನು ಕಂಡರೆ ಹುಡಗಿರು ಮೂಗು ಮುರಿತಾ ಇದಾರೆ.ಇದು ಹಿಂಗೆ ಮುಂದುವರೆದರೆ ನಮ್ಮ ರೈತರು ಮದುವೆ ಆಗೋದು ಯಾರನ್ನ,ಅಥವಾ ಮದುವೆಗೋಸ್ಕರ ವ್ಯವಸಾಯ ಬಿಟ್ಟು ಬಂದ್ರೆ ರೈತರೆಲ್ಲಿ,ಹೊಳಗಳೇಲ್ಲಿ ಸಿಗೋದು.ಇದರ ಬಗ್ಗೆ ಯಾವತ್ತಾದರೂ ನಾವು ಯೋಚನೆ ಮಾಡಿದ್ದಿವಾ ? ನಮ್ಮ ದೇಶ ರೈತ ಪ್ರಧಾನ ದೇಶ ಅಂತೆ.ಅಲ್ಲ್ಯಾರೋ ರೈತರ ಹೆಸರಲ್ಲಿ ಪ್ರಮಾಣವಚನ ತಗೋತಾರೆ.ಮತ್ತೊಬರು ಯಾರೋ ಮಣ್ಣಿನ ಮಗನಂತೆ. ಅದು ನಿಜಾನೆ ಆಗಿದ್ರೆ ನನ್ನ ಗೆಳೆಯ ಇವತ್ತು ಆ ಮಾತನಾಡುತ್ತಿರಲಿಲ್ಲ.
ಇಂದು ನಾವು ರೈತರನ್ನ ಪ್ರೋತ್ಸಾಹಿಸೋದನ್ನ ಬಿಟ್ಟು ಅವರ ಬಗ್ಗೆ ಕೀಳರಿಮೆ ಬೆಳೆಸಿಕೊಂಡಿದಿವಿ.ಸಗಣಿ ವಾಸನೆ,ದನ ಕರು,ಆಕಳು ಇದೆಲ್ಲ ಇಂದಿನ dude(ಡ್ಯೂಡ್) ,babe (ಬೇಬ್)ಗಳಿಗೆಲ್ಲ ಗಲೀಜು,ಎಜುಕೇಶನ್ ಇಲ್ಲದೆ ಇರೋ ಜನ ಮಾಡೋ ಕೆಲಸ ಅನಿಸಿದೆ.ದುಡ್ಡಿನಿಂದ ಏನಾದರೂ ಖರಿದಿಸಬಹುದೇ ಹೊರತು ಅದನ್ನೇ ತಿನ್ನೋಕಾಗುತ್ತಾ? ಹಣದ ವ್ಯಾಮೋಹದಿಂದ ಈಚೆ ಬಂದು ನೋಡಬೇಕಾಗಿದೆ. ಅರೇ ಇರೋ ರೈತರೆಲ್ಲ ಇಂಜಿನಿಯರ್/ಡಾಕ್ಟರೆ ಆದ್ರೆ ಹೊಟ್ಟೆಗೆ ಬರಿ tablets /microchips (ಟ್ಯಾಬ್ಲೆಟ್ಸ್/ ಮೈಕ್ರೊಚಿಪ್ಸ್) ತಿನ್ನಬೇಕಾ?ಅಯ್ಯೋ ತರಕಾರಿ ತುಂಬಾ ಕಾಸ್ಟ್ಲಿ ಕಣ್ರೀ,ಹತ್ತು ರೂಪಾಯಿ ಕೆಳಗೆ ಏನು ಬರೋದೆ ಇಲ್ಲ ಅಂತಾರೆ ನಮ್ಮ ಹೆಂಗಸರು.ಪುಣ್ಯಕ್ಕೆ ಅಷ್ಟಾದರೂ ಸಿಗ್ತಾ ಇದೆ,ಮುಂದೆ ಅದನ್ನು ಕ್ರೆಡಿಟ್ ಕಾರ್ಡ್ ಬಳಸಿ ಖರಿದಿಸೋ ಪರಿಸ್ಥಿತಿ ಬಂದರು ಬರಬಹುದು.
ನಾವೆಲ್ಲಾ ನಮ್ಮ ಭೂಮಿನ ಮಾರದೆ ನಮ್ಮ ಮಕ್ಕಳಲ್ಲಿ ಒಬ್ಬರಿಗಾದ್ರು ರೈತರನ್ನಾಗಿ ಮಾಡಬೇಕು,ಅದರ ಮಹತ್ವ ತಿಳಿಸಿ ಕೊಡಬೇಕು.ರೈತ ದೇವರಿಗೆ ಸಮಾನ,ಆತ ಅನ್ನ ಕೊಡೊ ದೇವರು.ಅವರನ್ನ ಕೀಳಾಗಿ ಕಾಣೋದು ಬಿಟ್ಟು ನಮ್ಮ ಮಕ್ಕಳನ್ನು ರೈತರನ್ನಾಗಿ ಮಾಡೋ ಕನಸು ಹೆತ್ತವರು ಕಾಣಬೇಕಾಗಿದೆ.ಸರ್ಕಾರ ಈ ಕುರಿತು ಸರ್ಕಾರ ಹಾಗು ಇತರೆ ಸಂಘ ಸಂಸ್ಥೆಗಳು ಎಲ್ಲರಿಗೂ ಪ್ರಾಕ್ಟಿಕಲ್ ಆಗಿ ತಿಳಿಸಿಕೊಡಬೇಕು. ಇವತ್ತಿಗೆ ನನ್ನ ಮಾತು ಬಾಲಿಶ ಅನ್ನಿಸಬಹುದು ಆದರೆ ಮುಂದೆ ಈ ಪರಿಸ್ಥಿತಿ ಬಂದಾಗ ಸರ್ಕಾರವೆ ಮನೆಗೊಬ್ಬ ರೈತ ಕಡ್ಡಾಯ ಅಂದರೂ ಆಶ್ಚರ್ಯವಿಲ್ಲ.
ಪ್ರವೀಣ್.ಎಸ್ .ಕುಲಕರ್ಣಿ(ಚುಕ್ಕಿ)

ಲೇಖಕರು

praveen.kulkarni

ಚಿತ್ತಾಪುರ ಚುಕ್ಕೀಸ್

ನಾನು ಬಿಸಿಲ ನಗರಿ ಗುಲಬರ್ಗಾದ ಚಿತ್ತಾಪುರದವನಾದರು ಎಲ್ಲರಿಗೂ ತಂಪೆರೆಯುವ ಸ್ವಭಾವದವನು.ಬರೆಯೋ ಹುಚ್ಚು ಹತ್ತಿ ಹತ್ತು ಹನ್ನೆರಡು ವರ್ಷವಾಯಿತು.ವಿಜಯ ಕರ್ನಾಟಕ ಹಾಗು ರಾಯಚೂರ ವಾಣಿ ಪತ್ರಿಕೆಯಲ್ಲಿ ನಾ ಬರೆದ ಕೆಲವು ಕವನಗಳು ಪ್ರಕಟವಾಗಿವೆ. ರಾಯಚೂರ ಆಕಾಶವಾಣಿಯಲ್ಲಿ ಹಲವು ಬಾರಿ ಕವನವಾಚನ,ನಾಟಕಗಳನ್ನು ಮಾಡಿದ್ದೇನೆ.ಹರಿದಾಸ ಹವ್ಯಾಸಿ ಕಲಾವಿದರ ನಾಟಕ ಸಂಘದವರಲ್ಲಿ ನಾನು ಒಬ್ಬ.ವಿಜಯದಾಸರು,ಗೋಪಾಲದಾಸರು,ಪ್ರಾಣೇಶದಾಸರು ಹೀಗೆ ಹಲವು ದಾಸರ ನಾಟಕಗಳನ್ನು ರಾಯಚೂರ ಜಿಲ್ಲೆಯ ಹಲವು ಕಡೆ ಮಾಡಿದ್ದೇವೆ.ಒಂದೆರಡು ಕನ್ನಡ ಆಲ್ಬಮ್ ಗೆ ಹಾಡು ಬರೆದಿದ್ದೇನೆ.
ತುಂಬಾ ಭಾವ ಜೀವಿ.ಕನಸುಗಳೆಂದರೆ ತುಂಬಾ ಪ್ರೀತಿ.ಕನ್ನಡವೆಂದರೆ ಅಚ್ಚುಮೆಚ್ಚು.ಆತ್ಮೀಯ ಸ್ನೇಹಿತರೊಂದಿಗೆ ಮಾತ್ರ ಜಾಸ್ತಿ ಮಾತಾಡ್ತೀನಿ,ಮಾತು ಕಮ್ಮಿ ಮೌನ ಜಾಸ್ತಿ.ದೇವರನ್ನು ಅತಿಯಾಗಿ ನಂಬುವೆ.ಮಳೆಹನಿ,ರಾತ್ರಿ .ಚುಕ್ಕಿಗಳು ನನಗೆ ಇಷ್ಟ .ನನಗೆ ಬರೆಯೋವಾಗ ಈ ಇರುಳು ತುಂಬಾ ಪ್ರಶಸ್ತವೆನಿಸುತ್ತದೆ.ಇನ್ನು ಚುಕ್ಕಿ ಎಂಬುದು ನನಗೆ ಅತಿ ಇಷ್ಟವಾದುದು.ಅದು ನನ್ನ ಹೆಸರಿನೊಂದಿಗೆ ಸದಾ ಇರಬೇಕು.ಪ್ರತಾಪ್ ಸಿಂಹ,ಸುಧಾ ಮೂರ್ತಿ,ಬರಗೂರು ಮುಂತಾದವರ ಬರವಣಿಗೆ ಇಷ್ಟ.ಯಾವುದೇ ಕವನ ಲೇಖನ ಇಷ್ಟವಾದಲ್ಲಿ ಅದನ್ನು ಮನಸಾರೆ ಹೊಗಳಲು ತುಂಬಾ ಇಷ್ಟ.ಇನ್ನೂ ನನ್ನ ಬಗ್ಗೆ ತಿಳಿದುಕೊಳ್ಳಲು ನನ್ನೊಂದಿಗೆ ಸ್ನೇಹಿತರಾಗಿ.ಜಗತ್ತಲ್ಲಿ ಸ್ನೇಹ ಎಂದೆಂದೂ ಅಮರ.......ನಿಮ್ಮ
..ಚುಕ್ಕಿ

ಅನಿಸಿಕೆಗಳು

pavu ಶುಕ್ರ, 05/11/2012 - 12:07

ಪ್ರವೀಣ್ ರವರೇ ನಿಮ್ಮ ಸ್ನೇಹಿತನಿಗೆ ಹುಡುಗಿ ಸಿಗಲಿಲ್ಲ ಎಂಬುದಕ್ಕೆ ನೀವು ನೀಡಿರುವ ಕಾರಣ ಅಷ್ಟು ಸಮಂಜಸ ವಲ್ಲ ಎಂಬುದು ನನ್ನ ಭಾವನೆ. ತಪ್ಪು ತಿಳಿಯಬೇಡಿ
ಇವತ್ತಿನ ಜನಗಣತಿಯ ಪ್ರಕಾರ 1000 ಹುಡುಗರಿಗೆ 970 ಹುಡುಗಿಯರು ಎಂದು ನನಗೆ ತಿಳಿದಿದೆ. ಹುಡುಗಿಯರ ಅಭಾವ ಇದಕ್ಕೆ ಕಾರಣ ಇರಬಹುದು ಅಲ್ಲವೇ??? ಹುಡುಗಿಯರ ಅಭಾವಕ್ಕೆ ಯಾರು ಕಾರಣ ಎಂದು ಒಮ್ಮೆ ಯೋಚಿಸಿ.
ಹೈಟೆಕ್ ಸಿಟಿ ಇಷ್ಟ ಪಡುವ ಹುಡುಗಿಯರ ಮದ್ಯೆ ಹಳ್ಳಿಯ ವಾತವರಣ ಇಷ್ಟ ಪಡುವವರು ಇದ್ದಾರೆ ಮರೆಯ ಬೇಡಿ.

venkatb83 ಶುಕ್ರ, 05/11/2012 - 13:54

ಪವಿತ್ರ ಮತ್ತು ಪ್ರವೀಣ್ ಅವ್ರೆ-

ಒಮ್ಮೆ ಈ ಭಾರತದ ಜನಸಂಖ್ಯಾ ಗಣತಿ- ಗಮನಿಸಿ...

www.mapsofindia.com/census2011/female-sex-ratio.html

ww.mapsofindia.com/census2011/india-female-sex-ratio-map.jpg

ನಮ್ಮ ರಾಜ್ಯದಲ್ಲಿ :

೧೦೦೦ ಹುಡುಗರಿಗೆ-

೨೦೦೧ ರಲ್ಲಿ -೯೬೫

೨೦೧೧ ರಲ್ಲಿ -೯೬೮

ಲಿಂಗಾನುಪಾತದ ಹೆಚ್ಛ್ಚು ಆದ ಪ್ರಮಾಣ : ೦.೩೧% ಅಸ್ಟೆ...!!

ಶುಭವಾಗಲಿ..

praveen.kulkarni ಮಂಗಳ, 05/15/2012 - 08:45

ಪವಿತ್ರ ಅವರಿಗೆ ನಮನಗಳು ,
ನನ್ನ ಸ್ನೇಹಿತನಿಗೆ ಹುಡುಗಿ ಸಿಗಲಿಲಿಲ್ಲ ಅನ್ನೋದಕ್ಕೆ ಕಾರಣ ಹುಡುಗಿಯರು ಕಮ್ಮಿ ಎಂದಾಗಿರಲ್ಲಿಲ್ಲ, ನಮ್ಮ ಹುಡುಗಿಯರು ಹಾಗು ನಮ್ಮ ಕುಟುಂಬದವರು ಹಳ್ಳಿ ಕುಟುಂಬದ ಕಡೆ ಒಲವು ತೋರುತ್ತಿಲ್ಲ ಅನ್ನೋದಾಗಿತ್ತು.ಖಂಡಿತವಾಗಿಯೂ ಹುಡುಗಿಯರ ಅಭಾವಕ್ಕೆ ನಮ್ಮ ಸಮಾಜ ಹಾಗು ನಾವೆಲ್ಲಾ ಕಾರಣರು..ಆದರೆ ನಾ ಹೇಳಹೊರಟಿದ್ದು ರೈತರ ಬಗ್ಗೆ ನಾವು ಕಾಳಜಿ ಅಥವಾ ಒಲವು ತೋರದೆ ಹೋದರೆ ಏನಾಗಬಹುದು ಅಂತ ಮಾತ್ರ. ಹೆಣ್ಣು ಮಗು  ಅಂತ ತಿಳಿದೊಡನೆ ಏಕೆ ಎಲ್ಲರು ಭ್ರೂಣಹತ್ಯೆ ಅಂತ ನೀಚ ಕೆಲಸ ಮಾಡುತಿದ್ದಾರೆ ಅನ್ನೋದರ ಬಗ್ಗೆ ಶೀಘ್ರದಲ್ಲೇ ಇನ್ನೊಂದು ಲೇಖನ ಬರೆಯುವೆ ಅಲ್ಲೂ ನಿಮ್ಮ ಅನಿಸಿಕೆ ಹಾಗು  ಚರ್ಚೆ ಬಯಸುವೆ.

venkatb83 ಶುಕ್ರ, 05/11/2012 - 13:57

  ಮೇಲೆ ಕೊಟ್ಟ ಚಿತ್ರದ ಲಿಂಕ್ ನಲ್ಲಿ ಒಂದು ಡಬ್ಲ್ಯೂ ಬಿಟ್ಟು ಹೋಗಿದೆ..ಸರಿಯಾದ ಲಿಂಕ್ ಇಲ್ಲಿದೆಇದನ್ನು ಕ್ಲಿಕ್ಕಿಸ್ದರೆ ನಮ್ಮ ದೇಶದಲ್ಲಿ ಗಂಡು ಹೆಣ್ಣು ನಡುವಿನ ಲಿಂಗಾನುಪಾತದ ವಿವರ ಅದನ್ನು ವಿವಿಧ ಬಣ್ಣಗಳಲ್ಲಿ ವರ್ಗೀಕರಣ ಮಾಡಿರುವುದು ತಿಳಿಯುವುದು...

 www.mapsofindia.com/census2011/india-female-sex-ratio-map.jpg  

venkatb83 ಶುಕ್ರ, 05/11/2012 - 13:58

  ಮೇಲೆ ಕೊಟ್ಟ ಚಿತ್ರದ ಲಿಂಕ್ ನಲ್ಲಿ ಒಂದು ಡಬ್ಲ್ಯೂ ಬಿಟ್ಟು ಹೋಗಿದೆ..ಸರಿಯಾದ ಲಿಂಕ್ ಇಲ್ಲಿದೆಇದನ್ನು ಕ್ಲಿಕ್ಕಿಸ್ದರೆ ನಮ್ಮ ದೇಶದಲ್ಲಿ ಗಂಡು ಹೆಣ್ಣು ನಡುವಿನ ಲಿಂಗಾನುಪಾತದ ವಿವರ ಅದನ್ನು ವಿವಿಧ ಬಣ್ಣಗಳಲ್ಲಿ ವರ್ಗೀಕರಣ ಮಾಡಿರುವುದು ತಿಳಿಯುವುದು...

 www.mapsofindia.com/census2011/india-female-sex-ratio-map.jpg  

venkatb83 ಶುಕ್ರ, 05/11/2012 - 14:15

 ಇರೋ ರೈತರೆಲ್ಲ ಇಂಜಿನಿಯರ್/ಡಾಕ್ಟರೆ  ಆದ್ರೆ ಹೊಟ್ಟೆಗೆ ಬರಿ tablets /microchips ತಿನ್ನಬೇಕಾ?ಅಯ್ಯೋ ತರಕಾರಿ ತುಂಬಾ ಕಾಸ್ಟ್ಲಿ ಕಣ್ರೀ,ಹತ್ತು ರೂಪಾಯಿ ಕೆಳಗೆ ಏನು ಬರೋದೆ ಇಲ್ಲ ಅಂತಾರೆ ನಮ್ಮ ಹೆಂಗಸರು.ಪುಣ್ಯಕ್ಕೆ ಅಷ್ಟಾದರೂ ಸಿಗ್ತಾ ಇದೆ,ಮುಂದೆ ಅದನ್ನು ಕ್ರೆಡಿಟ್ ಕಾರ್ಡ್  ಬಳಸಿ ಖರಿದಿಸೋ ಪರಿಸ್ಥಿತಿ ಬಂದರು ಬರಬಹುದು. ನಾವೆಲ್ಲಾ ನಮ್ಮ ಭೂಮಿನ ಮಾರದೆ ನಮ್ಮ ಮಕ್ಕಳಲ್ಲಿ ಒಬ್ಬರಿಗಾದ್ರು ರೈತರನ್ನಾಗಿ ಮಾಡಬೇಕು,ಅದರ ಮಹತ್ವ ತಿಳಿಸಿ ಕೊಡಬೇಕು.ರೈತ ದೇವರಿಗೆ ಸಮಾನ,ಆತ ಅನ್ನ ಕೊಡೊ ದೇವರು.ಅವರನ್ನ ಕೀಳಾಗಿ ಕಾಣೋದು ಬಿಟ್ಟು ನಮ್ಮ ಮಕ್ಕಳನ್ನು ರೈತರನ್ನಾಗಿ ಮಾಡೋ ಕನಸು ಹೆತ್ತವರು ಕಾಣಬೇಕಾಗಿದೆ. +೧     ಮುಂದೆ ಈ ಪರಿಸ್ಥಿತಿ ಬಂದಾಗ ಸರ್ಕಾರವೆ ಮನೆಗೊಬ್ಬ ರೈತ  ಕಡ್ಡಾಯ ಅಂದರೂ ಆಶ್ಚರ್ಯವಿಲ್ಲ.   >>> ಅದು ಆಗದ್ದೇನಲ್ಲ....!!----------------------------------------------------------------------------  ಪ್ರವೀಣ್ ಬರಹ ಓದಿದೆ,ನೀವ್ ಹೇಳಿದ್ದು ಸತ್ಯ-ಈಗೀಗ ಹಾಗೆ ಆಗುತ್ತಿದೆ- ಮತ್ತುಇದು ಈಗಸ್ಟೆ ಶುರು ಆಗಿದ್ದಲ್ಲ ಮೊದಲಿಂದಲೂ ಇರುವುದೇ...!!
ರೈತರ ಬಗೆಗಿನ ನಿಮ್ಮ ಕಾಳಜಿ ಮೆಚ್ಚಿದೆ..ನೀವ್ ಅರಿತಿರುವ ಹಾಗೆ ಗಮನಿಸಿದ ಹಾಗೆ ನಮಗೆ ಹಲವು ಆಶೆಗಳು (ಮದುವೆ- ಹೆಣ್ಣು ಬಗ್ಗೆ) ಹುಡುಗಿಯರಿಗೂ ಹಲವು ಆಶೆಗಳು ನಿರೀಕ್ಷೆಗಳು ಇರಬಹುದು, ಹೀಗಾಗಿ ಅವರ್ದು ತಪ್ಪು ಎನ್ನಲು ಆಗೋಲ್ಲ..ಅಲ್ಲದೇ ಈ ವಿಷ್ಯವಾಗಿ(ರೈತನ ಮದುವೆಯಾಗೊದು) ಬರೀ ಹೆಣ್ಣು ಒಬ್ಬಳೇ ತೀರ್ಮಾನ ತೆಗೆದುಕೊಳ್ಳಲು ಆಗೊಲ್ಲವಲ, ಅವಳ ತಂದೆ ತಾಯಿ ಸಂಬಂಧಿಗಳು ಸಹಾ ಏನೇನೋ ಹೇಳುವರಲ್ಲ..:())  ಮದುವೆ ಋಣಾನುಬಂಧ ಅನ್ನುವರು..ಆದೆಸ್ಟು ನಿಜವೋ? ನನಗೆ ಕುತೂಹಲವಿದೆ...!! ನಿಮಗಾಗಿ ಸಂಪದದಲ್ಲಿ (www.sampada.net) ಬಂದಿದ್ದ ಮದುವೆ ಬಗೆಗಿನ ಲೇಖನಗಳನ್ನ ಅವುಗಳ ಲಿಂಕ್ ಇಲ್ಲಿ ಹಾಕಿರುವೆ, ಹುಡುಕಾಟ-(ಮದುವೆ ಯಾವಾಗ -೨) | ಸಂಪದ - Sampadahttp://sampada.net/blog/%E0%B2%B9%E0%B3%81%E0%B2%A1%E0%B3%81%E0%B2%95%E0%B2%BE%E0%B2%9F-%E0%B2%AE%E0%B2%A6%E0%B3%81%E0%B2%B5%E0%B3%86-%E0%B2%AF%E0%B2%BE%E0%B2%B5%E0%B2%BE%E0%B2%97-%E0%B3%A8/03/05/2012/36581 ಇಲ್ಲಿಯೇ ಒಂದು ಬರಹ ಸಿಕ್ಕಿದೆಅದು ನೀವ್ ಬರೆದ ಈ ಬರಹದ ಕೆಲಗಡೆಎ ಇದ್ದುದು ವಿಶೇಷ(ಈ ಲೇಖನ ಹೋಲುವ ಬರಹಗಳು ಎಂದು ಇರುವುದಲ್ಲ ಅದೇ)ಅದರ ಲಿಂಕ್ ಹಾಕಿರುವೆ ಓದಿ..http://www.vismayanagari.com/vismaya11/node/4532
ಭವಿಷ್ಯದಲ್ಲಿ ಈ ಬಗೆಗಿನ ದ್ರುಸ್ಟಿಕೋನ ಬದಲಾಗಲಿದೆ-ಬದಲಾಗಿಸಲು ಪ್ರಯತ್ನ ಪಡೋಣ...

ಶುಭವಾಗಲಿ..  

praveen.kulkarni ಧ, 05/16/2012 - 10:09

ನಮಸ್ಕಾರ ವೆಂಕಟ ಅವರೇ, ನೀವ್ ಅರಿತಿರುವ ಹಾಗೆ ಗಮನಿಸಿದ ಹಾಗೆ ನಮಗೆ ಹಲವು ಆಶೆಗಳು (ಮದುವೆ- ಹೆಣ್ಣು ಬಗ್ಗೆ) ಹುಡುಗಿಯರಿಗೂ ಹಲವು ಆಶೆಗಳು ನಿರೀಕ್ಷೆಗಳು ಇರಬಹುದು, ಹೀಗಾಗಿ ಅವರ್ದು ತಪ್ಪು ಎನ್ನಲು ಆಗೋಲ್ಲ.. ಅಲ್ಲದೇ ಈ ವಿಷ್ಯವಾಗಿ(ರೈತನ ಮದುವೆಯಾಗೊದು) ಬರೀ ಹೆಣ್ಣು ಒಬ್ಬಳೇ ತೀರ್ಮಾನ ತೆಗೆದುಕೊಳ್ಳಲು ಆಗೊಲ್ಲವಲ, ಅವಳ ತಂದೆ ತಾಯಿ ಸಂಬಂಧಿಗಳು ಸಹಾ ಏನೇನೋ ಹೇಳುವರಲ್ಲ..Sad)) ನಾನು ಹೇಳೋದು ಇದೆ,ಹುಡುಗಿಯರ ಹಲವು ಆಸೆಗಳು ನಿರೀಕ್ಷೆಗಳು ಏಕೆ ನಗರ ಜೀವನ ಬಿಟ್ಟು ಹಳ್ಳಿ ಕಡೆ ತಿರುಗಬಾರದು ಅಂತ . ಖಂಡಿತಾ ನೀವು ಹೇಳಿದ ಹಾಗೆ ತಂದೆ ತಾಯಿ ಸಂಬಂಧಿಗಳು ಇದಕ್ಕೆ ಅಡ್ಡಿಬರಬಹುದು,ಏಕೆಂದರೆ ಅವರೆಲ್ಲ ಇತ್ತೀಚಿನ ತಂದೆತಾಯಿಗಳು.ಈಗಲೂ ನೋಡಿ ಮನೆಯಲ್ಲಿ ಹಿರಿಯಜ್ಜಿ ಅಥವಾ ಅಜ್ಜ ಇದ್ದರೆ ವರ ಅಂದ ಕೂಡಲೇ ಜಮೀನು ಎಷ್ಟಿದೆ ಅಂತಾನೆ ಕೇಳ್ತಾರೆ ಹೊರತು ಸಂಬಳ ಎಷ್ಟು ಅಂತಲ್ಲ . ಭವಿಷ್ಯದಲ್ಲಿ ಈ ಬಗೆಗಿನ ದ್ರುಸ್ಟಿಕೋನ ಬದಲಾಗಲಿದೆ- ಬದಲಾಗಿಸಲು ಪ್ರಯತ್ನ ಪಡೋಣ.. +೧ ನೀವು ಕೊಟ್ಟ ಲಿಂಕುಗಳನ್ನ ಓದಿದೆ..ಧನ್ಯವಾದ

ರಾಜೇಶ ಹೆಗಡೆ ಮಂಗಳ, 05/15/2012 - 06:50

ನಮ್ಮ ಹವ್ಯಕ ಸಮುದಾಯದಲ್ಲಿ ಮಾತ್ರ ಹೀಗೆ ಅಂದು ಕೊಂಡಿದ್ದೆ. ಆದರೆ ಇದು ಹಳ್ಳಿಯಲ್ಲಿರುವ ಎಲ್ಲರ ಪಾಡು ಎಂದು ಗೊತ್ತಿರಲಿಲ್ಲ.ನನ್ನ ಪ್ರಕಾರ ಇದಕ್ಕೆ ವೆಂಕಟ್ ಅವರು ಹೇಳಿದಂತೆ ಗಂಡು ಹೆಣ್ಣು ನಡುವಿನ ಲಿಂಗಾನುಪಾತ ಒಂದು ಕಾರಣವಾದರೆ ಇನ್ನೊಂದು ಕಾರಣ ಐಶಾರಾಮ ಜೀವನದ ಬಯಕೆ.  ಇಂದಿನ ಪೀಳಿಗೆ ಹಳ್ಳಿಯಲ್ಲಿ ಕೊಟ್ಟಿಗೆಯಲ್ಲಿ ಸಗಣಿ ತೆಗೆಯುತ್ತಾ ಹಾಲು ಕರೆಯುತ್ತಾ ಕರೆಂಟು, ಫೋನು, ಮೊಬೈಲು, ಶಾಲೆ ಮೊದಲಾದ ಮೂಲಭೂತ ಸೌಲಭ್ಯಗಳ ಕೊರತೆಯ ನಡುವೆ ಬದುಕಲು ಬಯಸುತ್ತಿಲ್ಲ. ಅತ್ತೆ, ಮಾವ ಬೇಡ. ಕಾರು ಬಂಗ್ಲೆ ಬೇಕು. ಆದರೂ ಇವುಗಳ ಮಧ್ಯೆ ಎಲ್ಲವನ್ನೂ ಒಪ್ಪಿಕೊಂಡು ಮದುವೆಯಾಗುವ ಹೃದಯವಂತ ಹೆಣ್ಣುಗಳು ಇದ್ದಾರೆ. ಕಡಿಮೆ ಅಷ್ಟೇ.   

praveen.kulkarni ಧ, 05/16/2012 - 10:20

ರಾಜೇಶ್ ಅವರಿಗೆ ಹೇಗಿದ್ದೀರಾ?,

ನಮ್ಮ ಹವ್ಯಕ ಸಮುದಾಯದವರು ಈಗ ಸಧ್ಯಕ್ಕೆ ಒಂದು ಹಳ್ಳಿಯಲ್ಲಿ ಒಬ್ಬರೋ ಇಬ್ಬರೋ ಇದ್ದಾರೆ..ನಗರ ಜೀವನ ಅವರನ್ನು ಸೆಳೆಯದೆ ಬಿಟ್ಟಿಲ್ಲ."ಇಂದಿನ ಪೀಳಿಗೆ ಹಳ್ಳಿಯಲ್ಲಿ ಕೊಟ್ಟಿಗೆಯಲ್ಲಿ ಸಗಣಿ ತೆಗೆಯುತ್ತಾ ಹಾಲು ಕರೆಯುತ್ತಾ ಕರೆಂಟು, ಫೋನು, ಮೊಬೈಲು, ಶಾಲೆ ಮೊದಲಾದ ಮೂಲಭೂತ ಸೌಲಭ್ಯಗಳ ಕೊರತೆಯ ನಡುವೆ ಬದುಕಲು ಬಯಸುತ್ತಿಲ್ಲ."ನಿಜ ಆದರೆ ಅಲ್ಲಿ ಜನ ಕಡಿಮೆ ಇರೋದರಿಂದ ಕರೆಂಟು, ಫೋನು, ಮೊಬೈಲು, ಶಾಲೆ ಮೊದಲಾದ ಮೂಲಭೂತ ಸೌಲಭ್ಯಗಳ ಪೂರೈಕೆ ಆಗ್ತಾ ಇಲ್ಲ.. ಕೆಲವು ಜನರಾದರೂ ಹೈಟೆಕ್ ಸಿಟಿ  ಬಿಟ್ಟು ಹೈಟೆಕ್ ವ್ಯವಸಾಯದಲ್ಲಿ ತೊಡಗಿಸಿಕೊಂಡರೆ ಹಾಲು ಹಣ್ಣು ತರಕಾರಿ ಸಮೃದ್ಧಿಯಾಗಿ ಸಿಕ್ಕು ನಗರದ ಜನ ಕೂಡ ನೆಮ್ಮದಿಯ ಜೀವನ ನಡೆಸಬಹುದು. "ಆದರೂ ಇವುಗಳ ಮಧ್ಯೆ ಎಲ್ಲವನ್ನೂ ಒಪ್ಪಿಕೊಂಡು ಮದುವೆಯಾಗುವ ಹೃದಯವಂತ ಹೆಣ್ಣುಗಳು ಇದ್ದಾರೆ. ಕಡಿಮೆ ಅಷ್ಟೇ." ಅವರಿಗೆ ದೇವರು ಅವರಂಥ ಹೃದಯವಂತ ಮಕ್ಕಳನ್ನೇ ಕೊಡಲಿ..

ರಾಜೇಶ ಹೆಗಡೆ ಧ, 05/16/2012 - 20:31

ನಾನು ಆರಾಮ್ :)ಖಂಡಿತ..  ಒಂದಲ್ಲ ಒಂದು ದಿನ ಆ ಕಾಲ ಬಂದೇ ಬರುತ್ತದೆ.

ಪಿಸುಮಾತು ಮಂಗಳ, 05/15/2012 - 20:44

ಯಾವುದೇ ವಸ್ತು ಕಡಿಮೆ ಆದಾಗ ಅದಕ್ಕೆ ಬೇಡಿಕೆ ಹೆಚ್ಚುತ್ತದೆ. ಬೇಡಿಕೆ ಹೆಚ್ಚಿದಾಗ ಸಹಜವಾಗಿಯೆ ಅದರ ಬೆಲೆ ಹೆಚ್ಚುತ್ತದೆ. ಹುಡುಗಿಯರ ವಿಷಯದಲ್ಲಿ ಇದೇ ಆಗುತ್ತಿರಬೇಕು. ಹುಡುಗಿಯರ ಸಮಖ್ಯೆ ಕಡಿಮೆ ಇರೋದರಿಂದ ಅವರಿಗೆ ಆಯ್ಕೆ ಮಡುವ ಅವಕಾಶ ಜಾಸ್ತಿ ಇದೆ. ಇದನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಬೇಕು.

ರಾಜೇಶ ಹೆಗಡೆ ಧ, 05/16/2012 - 06:26

ಬೆಲೆ ಅಂದಾಗ ನೆನಪು ಬಂತು ನಮ್ಮ ಹವ್ಯಕ ಸಮುದಾಯದಲ್ಲಿ ವಧು ದಕ್ಷಿಣೆ ಎಂಬ ಕೆಟ್ಟ ಪದ್ಧತಿ ನಾಲ್ಕೈದು ವರ್ಷಗಳ ಹಿಂದೆ ಆರಂಭವಾಗಿದೆ.
ಹಳ್ಳಿ ಹುಡುಗರು ಎರಡರಿಂದ ಐದು ಲಕ್ಷ ಹುಡುಗಿಯ ಪಾಲಕರಿಗೆ ಕೊಟ್ಟು ತಾವೇ ಖರ್ಚು ಹಾಕಿಕೊಂಡು ಮದುವೆ ಆಗಬೇಕು.
ಅನೇಕ ಹುಡುಗರು ಪಾಪ ಈ ರೀತಿ ಕೊಟ್ಟು ಮದುವೆ ಆಗಿದ್ದೂ ಉಂಟೂ. ಇನ್ನು ಕೆಲವು ಕಡೆ ಮಗಳನ್ನು ಮದುವೆ ಮಾಡಿ ಕೊಟ್ಟು ಅದೇ ಮನೆಯಿಂದ ಸೊಸೆ ತಂದಿದ್ದಾರೆ ಕೂಡಾ!!!

praveen.kulkarni ಧ, 05/16/2012 - 12:00

ರಾಜೇಶ್ ಅವರೇ ಮಾಧ್ಯಮಗಳ ಬ್ರೆಕಿಂಗ್ ನ್ಯೂಸ್ ನಲ್ಲಿ " ವಧುದಕ್ಷಿಣೆ ಕಿರುಕುಳ ತಾಳದೆ ಯುವಕನೊಬ್ಬ ನೇಣಿಗೆ ಶರಣು " ಅನ್ನೋ ಸುದ್ದಿ ಬರುವ ಸಮಯ ಬಂದಿದೆ ಅನ್ನಿ. ವಧು-ವರ ದಕ್ಷಿಣೆ ಎಂಬ ಎರಡೂ ಕೆಟ್ಟ ಪದ್ದತಿಗಳೇ..ಹೊರ ರಾಜ್ಯಗಳಲ್ಲಿ ಹಳ್ಳಿ ಹುಡುಗರು ಎರಡರಿಂದ ಐದು ಲಕ್ಷ ಹುಡುಗಿಯ ಪಾಲಕರಿಗೆ ಕೊಟ್ಟು ತಾವೇ ಖರ್ಚು ಹಾಕಿಕೊಂಡು ಮದುವೆ ಆಗೋದನ್ನ ನಾನೂ ಕೇಳಿದ್ದೀನಿ. ಇನ್ನೂ ಮಗಳನ್ನು ಮದುವೆ ಮಾಡಿ ಕೊಟ್ಟು ಅದೇ ಮನೆಯಿಂದ ಸೊಸೆ ತರೋದು ರಿಮೋಟ್ ಕಂಟ್ರೋಲ್ನ ಅವರವರ ಬಳಿ ಇಟ್ಟುಕೊಂಡು ಸಮಯ ಬಂದಾಗ ಉಪಯೋಗಿಸೋದಕ್ಕೆ..

ಪಿಸುಮಾತು ಧ, 05/16/2012 - 14:14

@  ರಾಜೇಶ ಹೆಗಡೆ "ಬೆಲೆ ಅಂದಾಗ ನೆನಪು ಬಂತು ನಮ್ಮ ಹವ್ಯಕ ಸಮುದಾಯದಲ್ಲಿ ವಧು ದಕ್ಷಿಣೆ ಎಂಬ ಕೆಟ್ಟ ಪದ್ಧತಿ ನಾಲ್ಕೈದು ವರ್ಷಗಳ ಹಿಂದೆ ಆರಂಭವಾಗಿದೆ." ಅಂದಿದ್ದೀರಿ. ಆದರೆ ವರದಕ್ಷಿಣೆ ನೂರಾರು ವರ್ಷದಿಂದಲೂ ಇತ್ತು. ಅದನ್ನು ಪೋಷಿಸಿದ ಸಮಾಜ ಈಗ ವಧುದಕ್ಷಿಣೆಯನ್ನು ಮಾತ್ರ ದೂಷಿಸುತ್ತಿರುವುದು ಸರಿಯೇ ?

ರಾಜೇಶ ಹೆಗಡೆ ಧ, 05/16/2012 - 20:28

ವರದಕ್ಷಿಣೆ ಕೂಡ ಕೆಟ್ಟ ಪದ್ಧತಿಯೇ. ಎರಡೂ ಇಲ್ಲವಾದರೆ ಉತ್ತಮ. :) 

praveen.kulkarni ಧ, 05/16/2012 - 10:47

ನಮಸ್ತೆ ಶ್ರೀಪತಿ ಅವರೇ ,"ಯಾವುದೇ ವಸ್ತು ಕಡಿಮೆ ಆದಾಗ ಅದಕ್ಕೆ ಬೇಡಿಕೆ ಹೆಚ್ಚುತ್ತದೆ. ಬೇಡಿಕೆ ಹೆಚ್ಚಿದಾಗ ಸಹಜವಾಗಿಯೆ ಅದರ ಬೆಲೆ ಹೆಚ್ಚುತ್ತದೆ. ಹುಡುಗಿಯರ ವಿಷಯದಲ್ಲಿ ಇದೇ ಆಗುತ್ತಿರಬೇಕು. ಹುಡುಗಿಯರ ಸಮಖ್ಯೆ ಕಡಿಮೆ ಇರೋದರಿಂದ ಅವರಿಗೆ ಆಯ್ಕೆ ಮಡುವ ಅವಕಾಶ ಜಾಸ್ತಿ ಇದೆ. ಇದನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಬೇಕು."
ಎಲ್ಲ ಹುಡುಗರು ಇದನ್ನು ಗಂಭಿರವಾಗಿ ಪರಿಗಣಿಸಬೇಕು ಅಂತಿರಾ? ಎಲ್ಲ ಹುಡುಗರು ಕೇಳಿಸಿಕೊಳ್ಳಿ  :)
ಆದರೆ ಒಂದು ಮಾತು..ಹುಡುಗಿಯರಿಗೆ  ಈಗಲಾದರು ಆಯ್ಕೆ ಮಾಡೋ ಅವಕಾಶ ಸಿಕ್ಕಿರೋದು ಒಳ್ಳೆಯ ಬೆಳವಣಿಗೆ . ಖಂಡಿತಾವಾಗಿಯೂ ಹೆಣ್ಣು ಶಿಶುಗಳನ್ನ ಹತ್ಯೆ ಮಾಡಿವರೆಲ್ಲರು ಅವರ ಪುತ್ರರತ್ನನಿಗೆ ಕನ್ಯೆ ಹುಡುಕಲು ಹರಸಾಹಸ ಮಾಡುತಿದ್ದಾರೆ.ಅವರಿಗೆ ಇದು ಆಗಬೇಕಾದದ್ದೆ..

ಪಿಸುಮಾತು ಧ, 05/16/2012 - 14:18

@  praveen.kulkarni

ನೀವು ಹೇಳಿದ್ದು ಸರಿ. ಗಂಡು ಮಗುವಿನಾಸೆಗೆ ಹೆಣ್ಣು ಭ್ರೂಣ ಹತ್ಯೆ ಮಾಡಿದ ಜನರೇ ಇಂದು ತಮ್ಮ ಅದೇ ಗಂಡು ಮಗನಿಗೆ ಹೆಣ್ಣು ಸಿಗದೇ ಒದ್ದಾಡುತ್ತಿದ್ದಾರೆ. ಧೈರ್ಯ ಮಾಡಿ ಹೆಣ್ಣು ಹೆತ್ತವರು ಈಗ ಮೀಸೆ ತಿರುವುತ್ತಿದ್ದಾರೆ. ಕಾಲಾಯ ತಸ್ಮೈ ನಮಃ ;)

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.